Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ತಂದೆಯ ಅಸ್ಥಿಪಂಜರ ಜತೆಗೆ ಕಲಾವಿದನ ಫೋಟೋ ಶೂಟ್!!
ಭೂಮಿ ಮೇಲೆ ವಿಚಿತ್ರ ಮನೋಭಾವ ಹಾಗೂ ನಡವಳಿಕೆ ವ್ಯಕ್ತಿಗಳು ಇರುವುದು ಸಹಜ. ಅವರ ವರ್ತನೆಯು ಕೆಲವೊಮ್ಮೆ ನಮಗೆ ತುಂಬಾ ಮುಜುಗರ ಉಂಟು ಮಾಡುವುದು. ಇನ್ನು ಕೆಲವರು ಪ್ರಸಿದ್ಧಿಗಾಗಿ ಏನು ಬೇಕಾದರೂ ಮಾಡಲು ತಯಾರಾಗಿರುವರು. ಇಂತಹ ಒಬ್ಬ ಕಲಾವಿದನ ಬಗ್ಗೆ ಈ ಲೇಖನದಲ್ಲಿ ನಾವು ನಿಮಗೆ ತಿಳಿಸಿಕೊಡಲಿದ್ದೇವೆ.

ಈ ಕಲಾವಿದ ತನ್ನ ತಂದೆಯ ಅಸ್ಥಿಪಂಜರದ ಜತೆಗೆ ಫೋಟೊ ತೆಗೆಸಿಕೊಂಡಿದ್ದಾನೆ. ತಂದೆಯ ಅಸ್ಥಿಪಂಜರದ ಜತೆಗೆ ಫೋಟೊ ತೆಗೆಸಿಕೊಳ್ಳುವುದು ತನ್ನ ಬಾಲ್ಯದ ಕನಸಾಗಿತ್ತು ಎಂದು ಆತ ಇದೇ ವೇಳೆ ಹೇಳಿಕೊಂಡಿದ್ದಾನೆ. ಈ ಫೋಟೊ ಆನ್ ಲೈನ್ ನಲ್ಲಿ ಶೇರ್ ಆದ ಬಳಿಕ ಹಲವಾರು ಮಂದಿ ಇದರ ವಿರುದ್ಧವಾಗಿ ಕಮೆಂಟ್ ಮಾಡಿದ್ದಾರೆ. ಈ ಬಗ್ಗೆ ನೀವು ಮುಂದೆ ಓದುತ್ತಾ ಸಾಗಿ...

ತಂದೆ ಜತೆಗೆ ಫೋಟೊ ತೆಗೆಸಿಕೊಳ್ಳುವುದು ಆತನ ಕನಸಾಗಿತ್ತು
33 ಹರೆಯದ ಸಿಯುವಾನ್ ಝುಜಿ ಎಂಬಾತ ತನ್ನ ತಂದೆಯ ಅಸ್ಥಿಪಂಜರ ಜತೆಗೆ ಫೋಟೊ ತೆಗೆಸಿಕೊಳ್ಳುವುದು ತನ್ನ ಬಾಲ್ಯದ ಕನಸಾಗಿತ್ತು ಎಂದು ಹೇಳಿಕೊಂಡಿದ್ದಾನೆ. ಸಿಯುವಾನ್ ವೃತ್ತಿಯಲ್ಲಿ ಒಬ್ಬ ಕಲಾವಿದನಾಗಿದ್ದಾನೆ. ತನಗೆ ಮೂರು ವರ್ಷವಾಗಿದ್ದಾಗಲೇ ತಂದೆ ಲಿವರ್ ಕ್ಯಾನ್ಸರ್ ನಿಂದ ಮೃತಪಟ್ಟಿದ್ದರು ಎಂದು ಸಿಯುವಾನ್ ಹೇಳಿಕೊಂಡಿದ್ದಾರೆ.

ಸಮಾಧಿಯಿಂದ ತಂದೆಯ ಅಸ್ಥಿಪಂಜರ ಹೊರತೆಗೆದ
ಸಮಾಧಿಯಿಂದ ತನ್ನ ತಂದೆಯ ಅಸ್ಥಿಪಂಜರವನ್ನು ಹೊರತೆ ತೆಗೆದ ಚೀನಾದ ಕಲಾವಿದ ಈ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿದ ಬಳಿಕ ದೊಡ್ಡ ಮಟ್ಟದ ವಿವಾದ ಸೃಷ್ಟಿಯಾಗಿದೆ.

ಸಮಾಧಿಯಿಂದ ಮೂಳೆಗಳನ್ನು ತೆಗೆದು ಅದನ್ನು ಜೋಡಿಸಿದ
ಸಿಯುವಾನ್ ಝುಜಿ ತನ್ನ ತಂದೆಯ ಸಮಾಧಿಯಲ್ಲಿದ್ದ ಮೂಳೆಗಳನ್ನು ಹೊರಗೆ ತೆಗೆದು ಅದನ್ನು ಅಸ್ಥಿಪಂಜರದಂತೆ ಜೋಡಿಸಿದ. ಇದರ ಬಳಿಕ ಆತ ನಗ್ನವಾಗಿ ಅದರೊಂದಿಗೆ ಫೋಟೊಶೂಟ್ ಮಾಡಿದೆ. ಈ ಫೋಟೊಶೂಟ್ ನ್ನು ಆತನ ಪತ್ನಿ ಮಾಡಿದ್ದಾಳೆ.

ಚೀನಾದ ವೆಬ್ ಸೈಟ್ ನಲ್ಲಿ ಆತ ಪೋಸ್ಟ್ ಮಾಡಿದ
ಸಿಯುವಾನ್ ಝುಜಿ ತನ್ನ ತಂದೆಯ ಅಸ್ಥಿಪಂಜರದೊಂದಿಗೆ ಇರುವ ಈ ಫೋಟೊವನ್ನು ಚೀನಾದ ವೆಬ್ ಸೈಟ್ ನಲ್ಲಿ ಶೇರ್ ಮಾಡಿದ. ಅದು ಕೂಡ ಸಮಾಧಿ ಗುಡಿಸುವ ದಿನದಂದು ಆತ ಈ ರೀತಿಯಾಗಿ ಫೋಟೊಶೂಟ್ ಮಾಡಿದ್ದ. ಸಮಾಧಿ ಗುಡಿಸುವ ದಿನವನ್ನು ಚೀನಾದಲ್ಲಿ ವಾರ್ಷಿಕ ದಿನವನ್ನಾಗಿ ಆಚರಣೆ ಮಾಡಲಾಗುತ್ತದೆ. ಈ ದಿನ ತಮ್ಮ ಪೂರ್ವಜರಿಗೆ ಅವರು ಗೌರವ ಸಲ್ಲಿಸುವರು.

ಈ ಪೋಸ್ಟ್ ನೋಡಿದ ಬಳಿಕ ನೆಟ್ಟಿಗರ ಪ್ರತಿಕ್ರಿಯೆ
ಈ ಫೋಟೋಗಳನ್ನು ಆತ ಶೇರ್ ಮಾಡಿದ ಬಳಿಕ ನೆಟ್ಟಿಗರು ಆತನ ನಡವಳಿಕೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜನಪ್ರಿಯತೆ ಪಡೆಯಲು ಇಂತಹ ಕೀಳು ಮಟ್ಟಕ್ಕೆ ಇಳಿಯಬಾರದಿತ್ತು ಎಂದು ಕೆಲವು ನೆಟ್ಟಿಗರು ಕಮೆಂಟ್ ಮಾಡಿದ್ದಾರೆ. ಈ ಘಟನೆ ಬಗ್ಗೆ ನಿಮ್ಮ ಅಭಿಪ್ರಾಯವೇನು? ನಿಮ್ಮ ಅನಿಸಿಕೆಗಳನ್ನು ಕಮೆಂಟ್ ಬಾಕ್ಸ್ ನಲ್ಲಿ ಹಾಕಿಬಿಡಿ.



Click it and Unblock the Notifications
