For Quick Alerts
ALLOW NOTIFICATIONS  
For Daily Alerts

2019ರ ಚಂದ್ರ ಹಾಗೂ ಸೂರ್ಯ ಗ್ರಹಣ ರಾಶಿಚಕ್ರದ ಮೇಲೆ ಹೇಗೆ ಪ್ರಭಾವ ಬೀರುವುದು ನೋಡಿ

|
ಸೂರ್ಯ ಹಾಗು ಚಂದ್ರ ಗ್ರಹಣ 2019 | ರಾಶಿಚಕ್ರಗಳ ಮೇಲಾಗುವ ಪರಿಣಾಮ? | Oneindia Kannada

ಚಂದ್ರ ಗ್ರಹಣ ಹಾಗೂ ಸೂರ್ಯ ಗ್ರಹಣ ಎನ್ನುವುದು ಬೌಗೋಳಿಕವಾಗಿ ಒಂದು ವಿದ್ಯಮಾನ ಎನಿಸಿಕೊಂಡರೂ ಧಾರ್ಮಿಕವಾಗಿ ಅವುಗಳನ್ನು ಸೂತಕ ಅಥವಾ ಋಣಾತ್ಮಕ ಎನ್ನುವ ರೀತಿಯಲ್ಲಿ ಪರಿಗಣಿಸಲಾಗುವುದು. ಗ್ರಹಣದ ಸಂದರ್ಭದಲ್ಲಿ ಪರಿಸರವು ಸಾಕಷ್ಟು ಕಲುಷಿತವಾಗುವುದು. ಇದರ ಪ್ರಭಾವ ಎಲ್ಲಾ ಜೀವ ಸಂಕುಲಗಳ ಮೇಲೆ ಪರಿಣಾಮ ಬೀರುವುದು. ಅಂತಹ ಸಂದರ್ಭದಲ್ಲಿ ಮನೆಯಿಂದ ಆಚೆ ಹೋಗ ಬಾರದು. ದೇವರ ನಾಮ ಸ್ಮರಣೆ ಮಾಡುವುದರ ಮೂಲಕ ಪ್ರಕೃತಿಯಲ್ಲಾಗುವ ಅಸಮತೋಲನವನ್ನು ನಿಯಂತ್ರಿಸಬೇಕು ಎನ್ನುವ ವಿಚಾರವನ್ನು ಒಳಗೊಂಡಿರುತ್ತದೆ.

ಚಂದ್ರ ಗ್ರಹಣದ ಸಮಯದಲ್ಲಿ ಸೂರ್ಯ ಮತ್ತು ಚಂದ್ರನ ಮುಖಾಮುಖಿಯಾಗಿ ಭೂಮಿಯು ಬರುತ್ತದೆ. ಅಂದರೆ ಸೂರ್ಯ ಮತ್ತು ಚಂದ್ರನ ನಡುವೆ ಭೂಮಿ ನಿಂತಿರುತ್ತದೆ. ಅಂತಹ ಸಂದರ್ಭದಲ್ಲಿ ಭುಮಿಯ ಮೇಲೆ ಬೀಳುವ ಬೆಳಕು ನೆರಳಿನಿಂದ ಕೂಡಿರುವುದಾಗಿರುತ್ತದೆ. ಕೆಂಪು, ಕಂದು ಮತ್ತು ಬೂದು ಬಣ್ಣದ ತೀವ್ರವಾದ ಛಾಯೆಗಳಲ್ಲಿ ಮಾರ್ಪಡಿಸುತ್ತದೆ ಎನ್ನುವುದನ್ನು ನಾವು ನೋಡಬಹುದು.

ಸೂರ್ಯ ಗ್ರಹಣ

ಸೂರ್ಯ ಗ್ರಹಣ

ಸೂರ್ಯ ಗ್ರಹಣದ ಸಮಯದಲ್ಲಿ ಸೂರ್ಯ ಮತ್ತು ಭೂಮಿಯ ನಡುವೆ ಚಂದ್ರನು ಬರುತ್ತಾನೆ. ಹಾಗಾಗಿ ಚಂದ್ರನಂತಹ ಸಣ್ಣ ಉಪಗ್ರಹವು ಭೂಮಿಯ ಮೇಲೆ ಪ್ರತಿಬಿಂಬಿಸುವ ಸೂರ್ಯನ ಬೆಳಕನ್ನು ನಿರ್ಬಂಧಿಸುವ ಸಾಮಥ್ರ್ಯವನ್ನು ಹೊಂದಿರುತ್ತದೆ ಎಂದು ಹೇಳಲಾಗುವುದು. ಈ ಸಂದರ್ಭದಲ್ಲಿ ಭೂಮಿಗೆ ಸೂರ್ಯನ ಕಿರಣ ಬೀಳದೆ ಇರುವುದರಿಂದ ಪರಿಸರವು ಕಲುಷಿತವಾಗಿರುತ್ತದೆ. ಅಂದಕಾರವು ದುಷ್ಟ ಶಕ್ತಿಗಳ ಹುಟ್ಟಿಗೆ ಕಾರಣವಾಗುವುದು ಎನ್ನುವ ನಂಬಿಕೆಯನ್ನು ಹೊಂದಿದ್ದಾರೆ.

ಸೂರ್ಯ ಗ್ರಹಣ

ಸೂರ್ಯ ಗ್ರಹಣ

ಖಗೋಳದಲ್ಲಿ ನಡೆಯುವ ಈ ವಿದ್ಯಮಾನವು ಕೇವಲ ಪರಿಸರದ ಮೇಲಷ್ಟೇ ಅಲ್ಲ. ಅದು ಯಾವ ರಾಶಿಚಕ್ರಗಳ ಮೇಲೆ ಹಿಡಿದಿದೆ? ಅದರ ಪ್ರಭಾವ ಯಾವ ರಾಶಿಚಕ್ರದ ಮೇಲೆ ಋಣಾತ್ಮಕ ವಾಗಿರುತ್ತದೆ? ಎನ್ನುವುದೆಲ್ಲವೂ ಬಹಳ ಪ್ರಮುಖವಾಗಿರುತ್ತದೆ. ಏಕೆಂದರೆ ಗ್ರಹಣದ ಪ್ರಭಾವವು ರಾಶಿಚಕ್ರದ ಮೇಲೆ ನೇರವಾಗಿ ಪರಿಣಾಮ ಬೀರುವುದರಿಂದ ವ್ಯಕ್ತಿಯ ದೈನಂದಿನ ಜೀವನ, ವೃತ್ತಿ, ಹಣಕಾಸು, ವ್ಯವಹಾರ ಸಂಬಂಧ ಸೇರಿದಂತೆ ಅನೇಕ ವಿಚಾರಗಳಲ್ಲಿ ಧನಾತ್ಮಕ ಹಾಗೂ ಋಣಾತ್ಮಕ ರೀತಿಯ ಪರಿವರ್ತನೆ ಉಂಟಾಗುವುದು.

ಸೂರ್ಯ ಮತ್ತು ಚಂದ್ರ ಗ್ರಹಣದ ಪ್ರಭಾವ ಯಾವ ರಾಶಿಗಳ ಮೇಲೆ ಪ್ರಭಾವ ಬೀರುವುದು?

ಸೂರ್ಯ ಮತ್ತು ಚಂದ್ರ ಗ್ರಹಣದ ಪ್ರಭಾವ ಯಾವ ರಾಶಿಗಳ ಮೇಲೆ ಪ್ರಭಾವ ಬೀರುವುದು?

ಈ ವಿಚಾರದ ಅನ್ವಯದ ಅಡಿಯಲ್ಲೇ ಬೋಲ್ಡ್ ಸ್ಕೈ ಸೂರ್ಯ ಮತ್ತು ಚಂದ್ರ ಗ್ರಹಣದ ಪ್ರಭಾವ ಯಾವ ರಾಶಿಗಳ ಮೇಲೆ ಪ್ರಭಾವ ಬೀರುವುದು? ಆ ರಾಶಿಯ ವ್ಯಕ್ತಿಗಳು ಯಾವ ಬಗೆಯ ಸಮಸ್ಯೆಗಳನ್ನು ಎದುರಿಸಬೇಕಾಗುವುದು? ಅನಿವಾರ್ಯವಾಗಿ ಬರುವಂತಹ ಬದಲಾವಣೆಗಳು ಯಾವವು? ಅವುಗಳನ್ನು ಎದುರಿಸಲು ಮಾನಸಿಕವಾಗಿ ಯಾವ ರೀತಿಯ ಧೈರ್ಯ ಅಗತ್ಯವಾಗಿರುತ್ತದೆ? ಎನ್ನುವುದರ ಕುರಿತು ಸಂಕ್ಷಿಪ್ತವಾಗಿ ವಿವರಿಸಿದೆ.

Most Read:ಈ ಮೂರು ರಾಶಿಚಕ್ರದವರಿಗೆ ಹೊಸ ವರ್ಷವು ಊಹೆಗೂ ಮಿಗಿಲಾದ ಹೊಸ ಬದಲಾವಣೆಯನ್ನು ತಂದುಕೊಡುವುದು

2019 ಜನವರಿ 5 ಮತ್ತು 6 ರ ಭಾಗಶಃ ಸೂರ್ಯ ಗ್ರಹಣ

2019 ಜನವರಿ 5 ಮತ್ತು 6 ರ ಭಾಗಶಃ ಸೂರ್ಯ ಗ್ರಹಣ

ಜನರಿ 5-6ರಂದು ನಡೆಯುವ ಈ ಗ್ರಹಣವು ಸೂರ್ಯನಿಗೆ ಭಾಗಶಃ ಗ್ರಹಣವಾಗಿರುತ್ತದೆ. ಇದು ಏಷ್ಯಾ ಮತ್ತು ಪೆಸಿಫಿಕ್‍ನ ಪೂರ್ವ ಭಾಗದಲ್ಲಿ ಗೋಚರಿಸುತ್ತದೆ ಎಂದು ಹೇಳಲಾಗಿದೆ. ಈ ಗ್ರಹಣವು ಮಕರ ರಾಶಿಯ ಮೇಲೆ ಹಿಡಿಯುತ್ತದೆಯಾದರೂ ಎಲ್ಲಾ ರಾಶಿಚಕ್ರದವರ ಮೇಲೂ ಗ್ರಹಣದ ಪ್ರಭಾವ ಬೀರುವುದು. ಇದರಿಂದ ವ್ಯಕ್ತಿ ಅನಿರೀಕ್ಷಿತ ಆಶ್ಚರ್ಯ ಮತ್ತು ತಿರುವನ್ನು ಎದುರಿಸುತ್ತಾನೆ. ಈ ತಿರುವು ಮತ್ತು ಆಶ್ಚರ್ಯದ ಸಂಗತಿ ಧನಾತ್ಮಕ ರೀತಿಯಲ್ಲಿ ಅಥವಾ ರಣಾತ್ಮಕ ರೀತಿಯಲ್ಲೂ ಉಂಟಾಗಬಹುದು. ಅವುಗಳನ್ನು ಎದುರಿಸಲು ಸಿದ್ಧವಾಗಿರಬೇಕಷ್ಟೆ.

ಅನಿರೀಕ್ಷಿತ ಸುದ್ದಿ ಬರಬಹುದು

ಅನಿರೀಕ್ಷಿತ ಸುದ್ದಿ ಬರಬಹುದು

ಸೂರ್ಯ ಗ್ರಹಣವು ಕೆಲವರಿಗೆ ವಿದೇಶಗಳಿಂದ ಅನಿರೀಕ್ಷಿತ ಸುದ್ದಿಗಳನ್ನು ತರಬಹುದು. ವಿಭಿನ್ನ ಸಂಸ್ಕøತಿಗಳು ಅಥವಾ ಧರ್ಮಗಳ ಪ್ರಭಾವಕ್ಕೆ ಒಳಗಾಗಬಹುದು. ಹೊಸ ಘಟನೆಗಳು ಸಂಭವಿಸಬಹುದು. ಕೆಲವು ಘಟನೆಗಳಿಂದ ನಿಮ್ಮ ಮೌಲ್ಯ, ತತ್ವಗಳು ಮತ್ತು ಮನೋಧರ್ಮಗಳು ಬದಲಾವಣೆಯನ್ನು ಕಾಣಬಹುದು. ಹಾಗಾಗಿ ಅಂತಹ ಸಂದರ್ಭದಲ್ಲಿ ದೇವರ ಧ್ಯಾನ ಹಾಗೂ ದ್ವೇಷಗಳನ್ನು ಮರೆತು ನಡೆದರೆ ಮಾನಸಿಕ ಚಿಂತನೆಗಳನ್ನು ನಮ್ಮ ಹಿಡಿತದಲ್ಲಿ ಇಡಬಹುದು ಎಂದು ಜ್ಯೋತಿಷ್ಯ ಶಾಸ್ತ್ರ ಸಲಹೆ ನೀಡುವುದು.

 2019 ಜನವರಿ 20-21ರಲ್ಲಿ ನಡೆಯುವ ಚಂದ್ರ ಗ್ರಹಣ

2019 ಜನವರಿ 20-21ರಲ್ಲಿ ನಡೆಯುವ ಚಂದ್ರ ಗ್ರಹಣ

ಈ ಗ್ರಹಣವು ಯುರೋಪ್, ಏಷ್ಯಾ, ಆಫ್ರಿಕಾ, ಉತ್ತರ ಅಮೆರಿಕಾ, ದಕ್ಷಿಣ ಅಮೆರಿಕಾ, ಪೆಸಿಫಿಕ್, ಅಟ್ಲಾಂಟಿಕ್, ಹಿಂದೂ ಮಹಾಸಾಗರ ಮತ್ತು ಆರ್ಟಿಕ್ ಅಲ್ಲಿ ಗೋಚರಿಸುತ್ತದೆ. ಹುಣ್ಣಿಮೆಯ ಸಮಯದಲ್ಲಿ ಎಲ್ಲವೂ ಉತ್ತಮ ರೀತಿಯಲ್ಲಿ ಇರುತ್ತವೆ. ವ್ಯಕ್ತಿಯ ಮಾನಸಿಕ ಚಿಂತನೆಗಳು ಕೆಲಸ ಕಾರ್ಯಗಳು ಹಾಗೂ ಪರಿಸರದಲ್ಲಿ ನಡೆಯುವ ವಿದ್ಯಮಾನಗಳೆಲ್ಲವೂ ಉತ್ತಮವಾಗಿರುತ್ತವೆ. ಅದೇ ಅಮವಾಸ್ಯೆ ಹಾಗೂ ಚಂದ್ರ ಗ್ರಹಣದ ಸಮಯವು ಅನುಚಿತ ಸಮಯ ಎಂದು ಪರಿಗಣಿಸಲಾಗುವುದು. ಈ ಬಾರಿಯ ಚಂದ್ರ ಗ್ರಹಣವು ಎಲ್ಲಾ ರಾಶಿಚಕ್ರದ ಮೇಲೂ ಪ್ರಭಾವ ಬೀರುವುದು. ಇದರಿಂದ ಕೆಲವು ರಾಶಿಚಕ್ರದವರು ಭಾವನಾತ್ಮಕ ಅಸಮತೋಲನ ಹೆಚ್ಚಾಗುವುದು. ಕೆಲವರಿಗೆ ಅನಾರೋಗ್ಯ ಅಥವಾ ಅಸ್ವಸ್ಥತೆ ಹೆಚ್ಚಾಗಬಹುದು. ಯಾವುದೇ ಕೆಲಸ ಕಾರ್ಯಗಳು ಅಥವಾ ಶುಭಕರವಾದ ಕೆಲಸವನ್ನು ಕೈಗೊಳ್ಳಲು ಇದು ಇತ್ತಮವಾದ ಸಮಯವಾಗಿರುವುದಿಲ್ಲ ಎಂದು ಹೇಳಲಾಗುವುದು.

2019ರ ಜುಲೈ 2ರ ಸೂರ್ಯ ಗ್ರಹಣ

2019ರ ಜುಲೈ 2ರ ಸೂರ್ಯ ಗ್ರಹಣ

ಜುಲೈ 2ರಂದು ನಡೆಯುವ ಸೂರ್ಯ ಗ್ರಹಣವು ದಕ್ಷಿಣ ಪೆಸಿಫಿಕ್ ಸಾಗರ, ಚಿಲಿ ಮತತು ಅಜೆಂಟಿನಾ ದಲ್ಲಿ ಸಂಪೂರ್ಣವಾದ ಸೂರ್ಯ ಗ್ರಹಣವು ಗೋಚರವಾಗುವುದು. ದಕ್ಷಿಣ ಅಮೆರಿಕಾ ಸೇರಿದಂತೆ ಇತರ ಭಾಗಗಳಲ್ಲಿ ಭಾಗಶಃ ಗ್ರಹಣವು ಗೋಚರ ವಾಗುತ್ತದೆ ಎಂದು ಹೇಳಲಾಗುವುದು. ಈ ಗ್ರಹಣವು ಕರ್ಕ ರಾಶಿಯ ಮೇಲೆ ಹಿಡಿಯುವುದರಿಂದ ಕರ್ಕ ರಾಶಿಯ ವ್ಯಕ್ತಿಗಳು ಸಾಕಷ್ಟು ಅಹಿತಕರ ಸಂಗತಿಗಳನ್ನು ಎದುರಿಸಬೇಕಾಗುವುದು. ಕೆಲವು ರಾಶಿಯವರಿಗೆ ಗಾಯ, ಸಂಕಷ್ಟ, ಆರೋಪಗಳಂತಹ ಅನುಚಿತ ಸ್ಥಿತಿಗಳು ಎದುರಾಗುವ ಸಾಧ್ಯತೆಗಳಿರುತ್ತವೆ. ಪರಿಸರದಲ್ಲಿ ಅಥವಾ ಸಮಾಜದಲ್ಲಿ ಪೂರ್ವಿಕರು ಕೆಲವು ಪ್ರಜ್ಞೆಗಳನ್ನು ಕಳೆದು ಕೊಳ್ಳಬಹುದು. ಇಲ್ಲವೆ ಕೆಲವು ಮೂಲಗಳನ್ನು ನಿರ್ಮೂಲನ ಮಾಡುವ ಸಾಧ್ಯತೆಗಳು ಇರುತ್ತವೆ ಎಂದು ಹೇಳಲಾಗುವುದು.

2019ರ ಜುಲೈ 16-17ರ ಚಂದ್ರ ಗ್ರಹಣ

2019ರ ಜುಲೈ 16-17ರ ಚಂದ್ರ ಗ್ರಹಣ

ಈ ಗ್ರಹಣವು ಭಾಗಶಃ ಗ್ರಹಣವಾಗಿರುತ್ತದೆ. ಯುರೋಪ್‍ನ ಬಹುತೇಕ ಭಾಗಗಳಲ್ಲಿ, ಏಷ್ಯಾ, ಆಸ್ಟ್ರೇಲಿಯಾ, ಆಫ್ರಿಕಾ, ದಕ್ಷಿಣ/ಪೂರ್ವ ಉತ್ತರ ಅಮೆರಿಕಾ, ದಕ್ಷಿಣ ಅಮೆರಿಕಾ, ಪೆಸಿಫಿಕ್, ಅಟ್ಲಾಂಟಿಕ್, ಹಿಂದೂ ಮಹಾಸಾಗರ ಮತ್ತು ಅಂಟಾರ್ಟಿಕ ದಲ್ಲಿ ಗೋಚರವಾಗುತ್ತದೆ. ಈ ಗ್ರಹಣವು ಮಕರ ರಾಶಿಯ ಮೇಲೆ ಹಿಡಿಯುವುದು. ಈ ಗ್ರಹಣದಿಂದ ಕೆಲವು ಒಳಿತಾಗುವ ಸಂಗತಿಗಳಿವೆ ಎಂದು ಹೇಳಲಾಗುವುದು. ಸಂಬಂಧಗಳನ್ನು ಸುಧಾರಿಸಿಕೊಳ್ಳಲು ಈ ಗ್ರಹಣವು ಉತ್ತಮ ಅವಕಾಶವನ್ನು ನೀಡುವುದು. ನಿಮ್ಮ ಹೃದಯವನ್ನು ತೆರೆಯಲು ಅಥವಾ ನಿಮ್ಮ ಜೀವನವನ್ನು ಪೋಷಿಸಲು ಬಯಸಿದರೆ ಈ ಸಮಯ ನಿಮಗೆ ಉತ್ತಮವಾಗಿರುತ್ತದೆ. ನೀವು ಹೇಗೆ ಪ್ರೀತಿಸಬೇಕು? ಹೇಗೆ ಪ್ರೀತಿಯನ್ನು ಪಡೆದುಕೊಳ್ಳಬೇಕು ಎನ್ನುವುದನ್ನು ತಿಳಿಸಿಕೊಡುವುದು.

 2019ರ ಡಿಸೆಂಬರ್ 26ರ ಸೂರ್ಯ ಗ್ರಹಣ

2019ರ ಡಿಸೆಂಬರ್ 26ರ ಸೂರ್ಯ ಗ್ರಹಣ

ಡಿಸೆಂಬರ್ 26ರಂದು ಕಾಣಿಸಿಕೊಳ್ಳುವ ಸೂರ್ಯ ಗ್ರಹಣ ಭಾಗಶಃ ವಾಗಿರುತ್ತದೆ. ಇದು ಯುರೋಪ್‍ನ ಪೂರ್ವ ಭಾಗ, ಏಷ್ಯಾ, ಉತ್ತರ/ಪಶ್ಚಿಮ ಆಸ್ಟ್ರೇಲಿಯಾ, ಪೂರ್ವ ಆಫ್ರಿಕಾ, ಪೆಸಿಫಿಕ್ ಮತ್ತು ಹಿಂದೂ ಮಹಾಸಾಗರದಲ್ಲಿ ಗೋಚರಿಸುತ್ತದೆ. ಈ ಗ್ರಹಣವು ಮಕರ, ಕರ್ಕ, ಮಿಥುನ, ಮತ್ತು ಧನು ರಾಶಿಯಲ್ಲಿ ಜನಿಸಿದವರ ಮೇಲೆ ಹೆಚ್ಚಿನ ಪ್ರಭಾವ ಬೀರುತ್ತದೆ. ಅದರಲ್ಲೂ ಆರ್ಥಿಕ ಸ್ಥಿತಿಯ ಮೇಲೆ ಹೆಚ್ಚಿನ ಪ್ರಭಾವ ಉಂಟಾಗುವುದು ಎಂದು ಹೇಳಲಾಗುತ್ತದೆ. ಹಣಕ್ಕೆ ಸಂಬಂಧಿಸಿದ ತೊಂದರೆಗಳು ಉಂಟಾಗಬಹುದು. ಆದಾಯವನ್ನು ಹೆಚ್ಚಿಸಿಕೊಳ್ಳುವ ಪ್ರಯತ್ನವನ್ನು ಮಾಡಬೇಕು. ಸಮಸ್ಯೆಗಳಿಗೆ ಸೂಕ್ತ ಪರಿಹಾರವನ್ನು ಕಂಡುಕೊಳ್ಳಬೇಕಾಗುವುದು. ಸಂದರ್ಭಗಳು ಅಥವಾ ಸನ್ನಿವೇಶಗಳು ಸಾಕಷ್ಟು ಕಷ್ಟವನ್ನು ಉಂಟುಮಾಡಬಹುದು. ಸಂಗಾತಿಗಳಿಂದ ಅನಿರೀಕ್ಷಿತ ಆಶ್ಚರ್ಯಗಳು ಉಂಟಾಗಬಹುದು. ಅವರು ಈ ಅವಧಿಯಲ್ಲಿ ಆರ್ಥಿಕ ದೃಷ್ಟಿಕೋನದಿಂದ ಸಂಗತಿಗಳು ಪ್ರಮುಖ ಪಾತ್ರವನ್ನು ವಹಿಸುತ್ತವೆ.

English summary

Lunar & Solar Eclipses in 2019 and How They Affect Your Zodiac Sign

During the Lunar Eclipse, the Earth is positioned between the Sun and the Moon, when the Sun and the Moon are face to face, which means they are in opposition. We can see how the shadow of the Earth transforms the light in intense shades of red, brown, and then gray.
X
Desktop Bottom Promotion