For Quick Alerts
ALLOW NOTIFICATIONS  
For Daily Alerts

ಚಂದ್ರ ಗ್ರಹಣ: ಎಲ್ಲಾ 12 ರಾಶಿಗಳ ಮೇಲೆ ಪ್ರಭಾವ ಹೇಗಿರುತ್ತದೆ?

|

ಚಂದ್ರಗ್ರಹಣವು 2019ರ ಜುಲೈ 16 ಮತ್ತು ಜುಲೈ 17ರಂದು ಗೋಚರಿಸಲಿದೆ. ಭಾರತದಲ್ಲಿ ಜುಲೈ 17ರ ಆರಂಭ 12:13 ಗಂಟೆಗೆ ಗೋಚರಿಸಲಿದೆ. ಇದು 2019ರ ಕೊನೆಯ ಚಂದ್ರಗ್ರಹಣವಾಗಿದೆ. ಸೂರ್ಯ ಮತ್ತು ಚಂದ್ರನ ಮಧ್ಯೆಯು ಭೂಮಿಯು ಬರುವುದನ್ನು ಚಂದ್ರಗ್ರಹಣವೆಂದು ಹೇಳಲಾಗುತ್ತದೆ. ಇದು ಭಾರತದಲ್ಲಿ ಅಂಶಿಕವಾಗಿ ಕಾಣಿಸಿಕೊಳ್ಳುವುದು.

Lunar Eclipse

ಚಂದ್ರಗ್ರಹಣದ ಬಗ್ಗೆ ಹಲವಾರು ತಪ್ಪು ಅಭಿಪ್ರಾಯಗಳು ಹಾಗೂ ಮೂಢನಂಬಿಕೆಗಳು ಕೂಡ ಇದೆ. ಆದರೆ ನಾವು ಈ ಲೇಖನದಲ್ಲಿ ಚಂದ್ರಗ್ರಹಣದಿಂದ ರಾಶಿಚಕ್ರಗಳ ಮೇಲೆ ಯಾವ ರೀತಿಯ ಪರಿಣಾಮ ಉಂಟಾಗಲಿದೆ ಎಂದು ನೋಡುವ.

ಮೇಷ

ಮೇಷ

ಚಂದ್ರಗ್ರಹಣದಿಂದಾಗಿ ನೀವು ಭಾವನಾತ್ಮಕವಾಗಿ ತುಂಬಾ ಸೂಕ್ಷ್ಮವಾಗುವಿರಿ. ನಿಮ್ಮ ತರ್ಕಬದ್ಧ ನಿರ್ಧಾರಗಳನ್ನು ಹಾಗೆ ಹಿಡಿದಿಟ್ಟುಕೊಳ್ಳುವಿರಿ. ಸ್ವಯಂ ಪ್ರತಿಫಲನಕ್ಕೆ ಇದು ಸರಿಯಾದ ಸಮಯವಾಗಿದೆ ಮತ್ತು ಉದ್ಯೋಗದ ಜಾಗದಲ್ಲಿ ನಿಮಗೆ ಸವಾಲುಗಳು ಎದುರಾಗಲಿದೆ. ಅದಾಗ್ಯೂ, ನಿಮ್ಮ ಆತ್ಮವಿಶ್ವಾಸ ಮತ್ತು ತಾಳ್ಮೆಯನ್ನು ಉನ್ನತ ಮಟ್ಟದಲ್ಲಿಡಿ. ಉದ್ಯೋಗದ ಸವಾಲುಗಳು ತುಂಬಾ ಸಮಯ ತಿನ್ನಬಹುದು ಮತ್ತು ನಿಮ್ಮನ್ನು ನಿಧಾನಗೊಳಿಸಬಹುದು.

ವೃಷಭ

ವೃಷಭ

ಈ ಚಂದ್ರಗ್ರಹಣವು ನಿಮ್ಮ ಕೌಟುಂಬಿಕ ಜೀವನವನ್ನು ಅಸ್ಥಿರಗೊಳಿಸುವ ಕಾರಣದಿಂದಾಗಿ ನೀವು ಕುಟುಂಬ ಸದಸ್ಯರೊಂದಿಗಿನ ಸಂಬಂಧವನ್ನು ಸುಧಾರಿಸಲು ಪ್ರಯತ್ನಿಸಿ. ಇದರ ಹೊರತಾಗಿ ಈ ಚಂದ್ರಗ್ರಹಣವು ನಿಮ್ಮ ರಾಶಿಗೆ ಒಳ್ಳೆಯದನ್ನು ಉಂಟು ಮಾಡಲಿದೆ.

 ಮಿಥುನ

ಮಿಥುನ

ಈ ಗ್ರಹಣವು ನಿಮ್ಮ ರಾಶಿಯಲ್ಲಿ ಯಾವುದೇ ಧನಾತ್ಮಕತೆ ಉಂಟು ಮಾಡುವುದಿಲ್ಲ. ವೈಯಕ್ತಿಕ ಹಾಗೂ ವೃತ್ತಿ ಜೀವನದಲ್ಲಿ ಈ ವರ್ಷವು ನಿಮಗೆ ತುಂಬಾ ಒತ್ತಡದ್ದಾಗಿರಲಿದೆ.

ಕರ್ಕಾಟಕ

ಕರ್ಕಾಟಕ

ಈ ಎರಡನೇ ಚಂದ್ರಗ್ರಹಣವು ನಿಮಗೆ ಅತೀ ಮಹತ್ವದ್ದಾಗಿದೆ. ಯಾಕೆಂದರೆ ಯಾವುದೇ ಆರ್ಥಿಕ ನಿರ್ಧಾರಗಳನ್ನು ನೀವು ತೆಗೆದುಕೊಳ್ಳುವಾಗ ಹೆಚ್ಚು ಜಾಗೃತೆ ವಹಿಸಿ. ಆರ್ಥಿಕ ಅಪಾಯವನ್ನು ತೆಗೆದುಕೊಳ್ಳಬೇಡಿ. ಉದಾಹರಣೆಗೆ ಹೂಡಿಕೆ ಮಾಡುವುದು.

ಸಿಂಹ

ಸಿಂಹ

ಚಂದ್ರಗ್ರಹಣದಿಂದ ಹೆಚ್ಚು ಪರಿಣಾಮ ಬೀರುವ ರಾಶಿಯೇ ಸಿಂಹ ರಾಶಿ. ಇದು ನಿಮ್ಮ ಕ್ರಿಯಾತ್ಮಕತೆಯನ್ನು ಹೆಚ್ಚಿಸುವುದು. ಇದರೊಂದಿಗೆ ನೀವು ವೈಯಕ್ತಿಕ ಅಥವಾ ವೃತ್ತಿಪರ ಜೀವನದಲ್ಲಿ ಅಪಾಯ ಎದುರಿಸುವ ವೇಳೆ ಹೆಚ್ಚು ಜಾಗರೂಕತೆಯಿಂದ ಇರಬೇಕು.

ಕನ್ಯಾ

ಕನ್ಯಾ

ಸಹಾನೂಭೂತಿ ಹಾಗೂ ದಯೆಯ ರಾಶಿಗೆ ಈ ಚಂದ್ರಗ್ರಹಣವು ನಿಮಗೆ ಶತ್ರುಗಳು ಯಾರು ಎನ್ನುವುದನ್ನು ಅರ್ಥ ಮಾಡಿಕೊಳ್ಳಲು ನೆರವಾಗುವುದು. ಇದರೊಂದಿಗೆ ಇದು ನಿಮ್ಮಲ್ಲಿ ಕ್ರಿಯಾತ್ಮಕತೆ ಹೆಚ್ಚಿಸುವುದು. ನಿಮ್ಮ ನಡವಳಿಕೆಯಿಂದ ಹೊರಬಂದು ಹೊಸತನ್ನು ಇದು ಪ್ರಯತ್ನಿಸುವಂತೆ ಮಾಡುವುದು.

ತುಲಾ

ತುಲಾ

ಈ ಚಂದ್ರಗ್ರಹಣವು ನಿಮಗೆ ಸ್ವಲ್ಪ ಸಮಸ್ಯೆಯಾಗಲಿರಲಿದೆ. ಇದು ಜೀವನದಲ್ಲಿ ಸ್ಥಿರತೆ ಕಳೆದುಕೊಳ್ಳುವಂತೆ ಮಾಡುವುದು. ವೃತ್ತಿ, ವೈಯಕ್ತಿಕ ಮತ್ತು ಕೌಟುಂಬಿಕ ಜೀವನದಲ್ಲಿ ನೀವು ಭಿನ್ನ ನಿರ್ದೇಶನದಲ್ಲಿ ಸಾಗುವಂತೆ ಮಾಡುವುದು. ಪೋಷಕರೊಂದಿಗೆ ನಿಮ್ಮ ಸಂಬಂಧವು ತೊಂದರೆಗೆ ಸಿಲುಕಲಿದೆ.

ವೃಶ್ಚಿಕ

ವೃಶ್ಚಿಕ

ಈ ವರ್ಷದ ಚಂದ್ರಗ್ರಹಣವು ನಿಮಗೆ ವಿವಿಧ ರೀತಿಯಲ್ಲಿ ನಕಾರಾತ್ಮಕವಾಗಿ ಪರಿಣಾಮ ಬೀರಲಿದೆ. ಇದು ನೀವು ತೆಗೆದುಕೊಳ್ಳುವ ನಿರ್ಧಾರಗಳು ಮತ್ತು ಭಾವನೆಗಳ ಮೇಲೆ ಸಂಪೂರ್ಣವಾಗಿ ಪರಿಣಾಮ ಬೀರಲಿದೆ.

ಧನು

ಧನು

ನೀವು ಕ್ರಿಯಾತ್ಮಕತೆ ಬಗ್ಗೆ ಆಲೋಚನೆ ಮಾಡುವಂತೆ ಇದು ಪ್ರೋತ್ಸಾಹಿಸಲಿದೆ ಮತ್ತು ಹೊಸ ವಿಚಾರಗಳನ್ನು ಸ್ವೀಕರಿಸುವಂತೆ ಮಾಡಲಿದೆ. ಇದು ನಿಮ್ಮ ಜೀವನದ ಮೇಲೆ ಮಹತ್ವದ ಪರಿಣಾಮ ಬೀರಲಿದೆ.

ಮಕರ

ಮಕರ

ಈ ಚಂದ್ರಗ್ರಹಣವು ನಿಮ್ಮ ಜೀವನದ ಮೇಲೆ ನಕಾರಾತ್ಮಕ ಪರಿಣಾಮ ಬೀರಲಿದೆ. ಇದರಿಂದ ನಿಮ್ಮ ಅಸುರಕ್ಷತೆ ಭಾವನೆಯು ಹೆಚ್ಚಲಿದೆ. ನಿಮ್ಮ ನಂಬಿಕೆ ಮತ್ತು ಆತ್ಮವಿಶ್ವಾಸವು ಕುಸಿಯಲಿದೆ. ಇದರಿಂದ ನಿಮಗೆ ಪ್ರೀತಿಪಾತ್ರರನ್ನು ನಿಯಂತ್ರಿಸಬೇಕಾಗಿ ಬರಬಹುದು.

ಕುಂಭ

ಕುಂಭ

ಕುಂಭ ರಾಶಿಗೆ ಚಂದ್ರಗ್ರಹಣದ ಹೆಚ್ಚಿನ ಪರಿಣಾಮವು ಸಿಗಲಿದೆ. ಇತರರಲ್ಲಿ ಇದು ನಿಮ್ಮ ಮೌಲ್ಯವನ್ನು ಹೆಚ್ಚಿಸಲಿದೆ. ನಿಮ್ಮ ಕೌಶಲ್ಯಗಳನ್ನು ಜನರು ಗುರುತಿಸಬಹುದು ಮತ್ತು ನೀವು ನಾಯಕರಾಗುವಂತಹ ಸಾಧ್ಯತೆಯು ಹೆಚ್ಚಾಗಿದೆ. ಈ ಒಳ್ಳೆಯ ವಿಚಾರಗಳು ಜಗಳಕ್ಕೆ ಕಾರಣವಾಗಬಹುದು ಎಂದು ನೆನಪಿಡಿ.

ಮೀನ

ಮೀನ

ಹಲವಾರು ಸವಾಲುಗಳನ್ನು ಹೊಂದಿರುವ ಈ ಚಂದ್ರಗ್ರಹಣವು ವೈಯಕ್ತಿಕ ಹಾಗೂ ವೃತ್ತಿಪರ ವಿಚಾರದಲ್ಲಿ ನಿಮಗೆ ಪರೀಕ್ಷೆಯನ್ನು ಒಡ್ಡಲಿದೆ.

English summary

Lunar Eclipse 2019: Impact Of Lunar Eclipse On Zodiac Signs

The lunar eclipse of 2019 will occur on 16 and 17 July. In India, people will be able to witness the penumbral/partial lunar eclipse starting from 12:13 am on 17 July. The last lunar eclipse of the year 2019, during which the Earth in course of its orbit around the Sun, comes between the Sun and Moon, will be partially visible in India. With various customs and myths accustomed to the lunar eclipse, now, we will take a look into the impact this lunar eclipse have on your zodiac signs.
X
Desktop Bottom Promotion