For Quick Alerts
ALLOW NOTIFICATIONS  
For Daily Alerts

ಈ ಹಳ್ಳಿಯಲ್ಲಿ ದುಷ್ಟ ಶಕ್ತಿಯಿಂದ ದೂರ ಇರಬೇಕು ಎಂದರೆ ಮಹಿಳೆಯರು ಶೂಗಳಲ್ಲಿ ಇರುವ ನೀರನ್ನು ಕುಡಿಯಬೇಕಂತೆ!

|

ಭಾರತ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರ. ವಿಜ್ಞಾನ, ತಂತ್ರಜ್ಞಾನ, ಶಿಕ್ಷಣ ಹಾಗೂ ಮಹತ್ವದ ತತ್ವಗಳಲ್ಲಿ ಸಾಕಷ್ಟು ಅಭಿವೃದ್ಧಿಯನ್ನು ಹೊಂದಿದೆ. ಇಂಗ್ಲಿಷ್‍ನಲ್ಲಿ ಮಾತನಾಡುವ ಎರಡನೇ ಅತಿದೊಡ್ಡ ದೇಶ ಎನ್ನುವ ಹೆಗ್ಗಳಿಕೆಯನ್ನು ಭಾರತ ಪಡೆದುಕೊಂಡಿದೆ. ಭಾರತದಲ್ಲಿಯೇ ವಿದ್ಯಾಭ್ಯಾಸವನ್ನು ಮುಗಿಸಿ, ವಿದೇಶದಲ್ಲಿ ವೈದ್ಯರು, ಎಂಜಿನಿಯರ್‍ಗಳು, ವಿಜ್ಞಾನಿಗಳಾಗಿ ಕೆಲಸ ನಿರ್ವಹಿಸುತ್ತಿರುವವರು ಸಾಕಷ್ಟು ಜನರಿದ್ದಾರೆ. ಈ ಎಲ್ಲಾ ಹೆಮ್ಮೆಯ ಸಂಗತಿಯೊಂದಿಗೆ ದುಃಖಕರವಾದ ಸಂಗತಿಯೂ ಇದೆ. ಅದೇನೆಂದರೆ ಮಹಿಳೆಯರ ಮೇಲೆ ದೌರ್ಜನ್ಯ ಹಾಗೂ ವಿಕಾರತೆಯಿಂದ ಕೂಡಿರುವ ಮೂಢ ನಂಬಿಕೆಗಳು. ಇವು ಅಭಿವೃದ್ಧಿ ಹೊಂದುತ್ತಿರುವ ದೇಶ ಎನ್ನುವ ಸಂತೋಷದ ಸಂಗತಿಯ ಹಿಂದೆ ಅಡಗಿರುವ ದುಃಖದ ವಿಷಯ ಎಂದು ಬಣ್ಣಿಸಬಹುದು.

ಹೌದು, ಮೂಢ ನಂಬಿಕೆ ಹಾಗೂ ಆಚರಣೆಯು ಇಂದಿಗೂ ಭಾರತದೆಲ್ಲೆಡೆ ಇರುವುದನ್ನು ಕಾಣಬಹುದು. ವಿವಿಧ ಭಾಷೆ, ಜಾತಿ, ಧರ್ಮ ಹಾಗೂ ಸಮಾಜವನ್ನು ಹೊಂದಿರುವ ವಿಶಿಷ್ಟ ದೇಶ ಭಾರತ. ಆದರೆ ಈ ವಿಶೇಷಗಳ ನಡುವೆ ಕೆಲವು ನಂಬಲು ಅಸಾಧ್ಯವಾದಂತಹ ಆಚರಣೆಗಳು ಮತ್ತು ಮೂಢನಂಬಿಕೆಗಳು ಇಂದಿಗೂ ಆಚರಣೆಯಲ್ಲಿ ಇರುವುದು ಸೋಚನೀಯ ಸಂಗತಿ. ವಿಶಾಲವಾದ ನಮ್ಮ ದೇಶದಲ್ಲಿ ಸಾಕಷ್ಟು ಬುಡಗಟ್ಟು ಜನಗಳು ಹಾಗೂ ಮೂಢ ನಂಬಿಕೆಗಳನ್ನು ನಂಬುವ ಜನರಿದ್ದಾರೆ. ಇವರಿಗೆ ಇರುವ ಶಿಕ್ಷಣದ ಕೊರತೆ ಹಾಗೂ ಆಧುನಿಕತೆಯ ಜ್ಞಾನ ಇಲ್ಲದೆ ಇರುವುದೇ ಇದಕ್ಕೆ ಕಾರಣ ಎಂದು ಹೇಳಬಹುದು.

ಹೆಚ್ಚಾಗಿ ಗ್ರಾಮೀಣ ಪ್ರದೇಶದಲ್ಲಿ

ಹೆಚ್ಚಾಗಿ ಗ್ರಾಮೀಣ ಪ್ರದೇಶದಲ್ಲಿ

ಇಂದಿಗೂ ಕಡು ಬಡತನದಲ್ಲಿ ಇರುವ ಕೆಲವು ಗ್ರಾಮೀಣ ಪ್ರದೇಶದಲ್ಲಿ ಜನರು ಮಾನಸಿಕ ಅಸ್ವಸ್ಥತೆ, ದೈಹಿಕ ಅಸ್ವಸ್ಥತೆ ಅನಿರೀಕ್ಷಿತ ಘಟನೆಗಳು ಸಂಭವಿಸುವುದು ಎಲ್ಲವೂ ಭೂತ-ಪ್ರೇತಗಳ ಕೈವಾಡ ಎಂದು ನಂಬುತ್ತಾರೆ. ಮಹಿಳೆಯರ ಋತುಚಕ್ರ ಕ್ರಮವನ್ನು ಅತ್ಯಂತ ಮಡಿ-ಮೈಲಿಗೆ ಎಂದು ಭಾವಿಸುವರು. ಹಾಗಾಗಿ ಮಹಿಳೆ ಋತುಚಕ್ರದ ಸಮಯದಲ್ಲಿ ಕೆಲವು ಸೀಮಿತ ಪ್ರದೇಶದಲ್ಲಿ ಇರಬೇಕು. ಅವಳು ಮನಸ್ಸಿಗೆ ಬಂದಂತೆ ಓಡಾಡುವುದು ಅಥವಾ ಕೆಲವು ವಸ್ತುಗಳನ್ನು ಮುಟ್ಟಿದರೆ ಅದು ಅಪಶಕುನ ಹಾಗೂ ಮೈಲಿಗೆ/ಅಶುಚಿ ಎಂದು ಪರಿಗಣಿಸುತ್ತಾರೆ. ಈ ಕಾರಣಕ್ಕಾಗಿಯೇ ದುಷ್ಟ ಶಕ್ತಿಗಳು ಆಗಮಿಸುತ್ತಾರೆ ಎನ್ನುವ ನಂಬಿಕೆಯನ್ನು ಹೊಂದಿದ್ದಾರೆ.

Most Read: ರಾಜಸ್ಥಾನದ ಈ ಗ್ರಾಮದಲ್ಲಿ, ಮೊದಲು ಮಕ್ಕಳು, ಆಮೇಲೆ ಮದುವೆ!!

ಹೆಚ್ಚಾಗಿ ಗ್ರಾಮೀಣ ಪ್ರದೇಶದಲ್ಲಿ

ಹೆಚ್ಚಾಗಿ ಗ್ರಾಮೀಣ ಪ್ರದೇಶದಲ್ಲಿ

ಕೆಲವೊಮ್ಮೆ ಅಪನಂಬಿಕೆಗಳು ಬಲವಾದ ಸಂಶಯದ ಘಟ್ಟವನ್ನು ತಲುಪಿ, ಸಂಬಂಧಗಳನ್ನೇ ಸರ್ವನಾಶ ಮಾಡಬಲ್ಲವು. ಇಲ್ಲವೇ ಅಚಾತುರ್ಯಗಳಲ್ಲಿ ಪರ್ಯಾವಸನಗೊಳ್ಳಬಹುದು. ಅಂತೆಯೇ ಮೂಢನಂಬಿಕೆಗಳು ಅತಿಯಾಗಿದ್ದಲ್ಲಿ ಇಲ್ಲವೇ ತೀವ್ರ ಸ್ವರೂಪ ಉಳ್ಳದಾಗಿದ್ದಲ್ಲಿ ನಮ್ಮ ಆರೋಗ್ಯವನ್ನೂ, ಮನಃಶಾಂತಿಯನ್ನು ಕೆಡಿಸಬಹುದು. ಮೂಢನಂಬಿಕೆಗಳು ಸಾಮಾಜಿಕ ಸ್ವಾಸ್ಥಕ್ಕೂ, ಪ್ರಗತಿಗೂ ಧಕ್ಕೆಯನ್ನು ತರಬಹುದು. ಆಚರಣೆಯಲ್ಲಿರುವ ಮೂಢನಂಬಿಕೆಗಳ ಪಟ್ಟಿ ಬಹಳ ದೊಡ್ಡದಾಗಿದೆ. ಇಂದು ನಾವು ಎಂತಹ ಜಗತ್ತಿನಲ್ಲಿದ್ದೇವೆ ಎಂದರೆ ಆಕಡೆ ಟೆಕ್ನಾಲಜಿಗಳನ್ನೂ ಸಹ ನಂಬುತ್ತೇವೆ, ಇನ್ನೊಂದೆಡೆ ಭಾರತೀಯ ಸಂಪ್ರದಾಯಗಳನ್ನು ಸಹ ನಾವು ಪಾಲಿಸಿಕೊಂಡು ಬರುತ್ತೇವೆ. ಅದರಲ್ಲೂ ಕೆಲವೊಂದಿಷ್ಟು ಮೂಢನಂಬಿಕೆಗಳನ್ನು ಇನ್ನೂ ಸಹ ನಾವು ಸಂಪ್ರದಾಯದ ಹೆಸರಿನಲ್ಲಿ ಪಾಲಿಸಿಕೊಂಡು ಬರುತ್ತೇವೆ.

ದುಷ್ಟಶಕ್ತಿಗಳನ್ನು ದೂರ ಇಡಲು ಮಹಿಳೆಯರು ಒಂದು ಶೂ ಅನ್ನು ತಲೆಯ ಮೇಲೆ ಇಟ್ಟುಕೊಳ್ಳುತ್ತಾರಂತೆ!

ದುಷ್ಟಶಕ್ತಿಗಳನ್ನು ದೂರ ಇಡಲು ಮಹಿಳೆಯರು ಒಂದು ಶೂ ಅನ್ನು ತಲೆಯ ಮೇಲೆ ಇಟ್ಟುಕೊಳ್ಳುತ್ತಾರಂತೆ!

ಹೌದು, ಈ ಬಗೆಯ ಮೂಢ ನಂಬಿಕೆ ಹಾಗೂ ತೆರೆದ ಮನಸ್ಸಿನ ಜ್ಞಾನವನ್ನು ಪಡೆದುಕೊಳ್ಳಲು ಹಿಂದಾದ ವ್ಯಕ್ತಿಗಳು ಇಂದಿಗೂ ತಮ್ಮ ಜೀವನದಲ್ಲಿ ಕತ್ತಲೆಯನ್ನು ಬಿಟ್ಟು ಬೇರೇನು ಕಾಣಲು ಸಾಧ್ಯವಾಗದು. ಕೆಲವು ಮೂಢ ಆಚರಣೆಗಳು ಇಂದಿಗೂ ಅವರನ್ನು ಹಿಂದುಳಿಯುವಂತೆ ಮಾಡಿದೆ ಎಂದು ಹೇಳಬಹುದು. ಅಂತಹ ಒಂದು ಆಶ್ಚರ್ಯವನ್ನು ಸೂಚಿಸುವಂತಹ ಸಂಗತಿ ಹಾಗೂ ಅದನ್ನು ಇಂದಿಗೂ ಜನರು ಆಚರಣೆಯಲ್ಲಿ ಇಟ್ಟುಕೊಮಡಿರುವ ವಿಷಯ ಎಂದರೆ "ದುಷ್ಟಶಕ್ತಿಗಳನ್ನು ದೂರ ಇಡಲು ಮಹಿಳೆಯರು ಒಂದು ಶೂ ಅನ್ನು ತಲೆಯ ಮೇಲೆ ಇಟ್ಟುಕೊಳ್ಳುವುದು ಹಾಗೂ ಒಂದು ಶೂ ಅನ್ನು ಬಾಯಲ್ಲಿ ಕಚ್ಚಿಕೊಂಡು ಸಾಗುವುದು. ಇದರೊಟ್ಟಿಗೆ ಶೂ ಅಲ್ಲಿ ನೀರನ್ನು ಹಾಕಿ ಕುಡಿಯುವುದು".

ರಾಜಸ್ಥಾನದಲ್ಲಿ ನಡೆಯುವ ಪದ್ಧತಿ

ರಾಜಸ್ಥಾನದಲ್ಲಿ ನಡೆಯುವ ಪದ್ಧತಿ

ನಿಜ, ರಾಜಸ್ಥಾನದ ದಕ್ಷಿಣ ಭಾಗದಲ್ಲಿ ಭಿಲ್ವಾರ ಎನ್ನುವ ಹೆಸರಿನ ಚಿಕ್ಕ ಹಳ್ಳಿಯಿದೆ. ಇಲ್ಲಿ ಬಂಕುಯಾ ಮಾತಾ ದೇವಸ್ಥಾನವಿದೆ. ಪುರುಷರಿಗೆ ಮಾತ್ರ ಹೆಚ್ಚಿನ ಆಧ್ಯತೆ ನೀಡುವ ಈ ಹಳ್ಳಿಯಲ್ಲಿ ಕೆಲವು ಅಂದಕಾರದ ಮೂಢನಂಬಿಕೆಗಳು ಇವೆ. ಅವುಗಳಲ್ಲಿ ಮಹಿಳೆಯರು ಶೂ ಇಂದ ನೀರುಕುಡಿಯುವುದು ಹಾಗೂ ಬಾಯಲ್ಲಿ ಕಚ್ಚಿಕೊಳ್ಳುವುದು ಸಹ ಒಂದು. ಇದನ್ನು ಈ ಹಳ್ಳಿಯ ಪುರುಷರು ಮಾಡುವುದಿಲ್ಲ. ಮಹಿಳೆಯರು ಮಾತ್ರ ಈ ಆಚರಣೆ ಮಾಡಬೇಕು ಎನ್ನುವ ನಿಯಮವಿದೆ.

Most Read: ನಕ್ಷತ್ರಗಳ ಶಕ್ತಿ ನಿಮ್ಮ ಮೇಲೆ ಏನು ಪ್ರಭಾವ ಬೀರುವುದು ನೋಡಿ...

ಬಂಕುಯಾ ದೇವಸ್ಥಾನ

ಬಂಕುಯಾ ದೇವಸ್ಥಾನ

ಬಂಕುಯಾ ದೇವಸ್ಥಾನದಲ್ಲಿ ಮಹಿಳೆಯರು ತಲೆಯ ಮೇಲೊಂದು ಶೂ, ಬಾಯಲ್ಲೊಂದು ಶೂ ಕಚ್ಚಿಕೊಂಡು ಸಾಗುವುದು ಸಾಮಾನ್ಯವಾದ ದೃಶ್ಯವಾಗಿರುತ್ತದೆ. ಇದರ ಬಗ್ಗೆ ಯಾರೂ ಅಲ್ಲಗಳೆಯುವುದಿಲ್ಲ. ಹಾಗೊಮ್ಮೆ ಹೇಳಿದರೆ ಅದರಿಂದ ಒಂದಿಷ್ಟು ಶಾಪ ಪ್ರಾಪ್ತಿಯಾಗುವುದು ಎಂದು ಹೇಳುತ್ತಾರೆ. ದುಷ್ಟ ಶಕ್ತಿಗಳ ನಿಗ್ರಹಕ್ಕೆ ಹಾಗೂ ಧನಾತ್ಮಕ ಶಕ್ತಿಯನ್ನು ಆಹ್ವಾನಿಸಿಕೊಳ್ಳುವ ಉದ್ದೇಶಕ್ಕಾಗಿ ಭಿಲ್ವಾರ ಗ್ರಾಮದ ಮಹಿಳೆಯರು ಅವಮಾನಕರ ಹಾಗೂ ಅಮಾನವೀಯ ಆಚರಣೆಯನ್ನು ಮಾಡುತ್ತಾರೆ ಎಂದು ಹೇಳಲಾಗುವುದು. ಭೂಪಾಸ್ ದೇವಸ್ಥಾನದ ಪುರೋಹಿತರು ಮಹಿಳೆಯರ ಘನತೆ ಹಾಗೂ ಅವರ ಹೆಮ್ಮೆಯ ಸಂಗತಿಯ ಬಗ್ಗೆ ಯಾವುದೇ ಧನಾತ್ಮಕ ಚಂತನೆಗಳಿಲ್ಲ. ಅವರನ್ನು ಅಂದಕಾರಕ್ಕೆ ಮೀಸಲಾಗಿರುವ ವ್ಯಕ್ತಿಗಳು ಎನ್ನುವ ರೀತಿಯಲ್ಲಿ ಪರಿಗಣಿಸುತ್ತಾರೆ. ಅವರೊಂದಿಗೆ ಅನೇಕ ಅಂದಾಚರಣೆಯನ್ನು ಮಾಡಲು ಮುಂದಾಗುವರು.

ತಲೆಯ ಮೇಲೆ ಶೂ

ತಲೆಯ ಮೇಲೆ ಶೂ

ಇಲ್ಲಿಯ ಮಹಿಳೆಯರು ಮೂಢನಂಬಿಕೆಯ ಆಚರಣೆಯ ಹಿನ್ನೆಲೆಯಲ್ಲಿ ಮೈಲಿಗಟ್ಟಲೆ ದೂರದಿಂದ ಬೂಟುಗಳನ್ನು ತಲೆಯ ಮೇಲಿಟ್ಟುಕೊಂಡು ಸಾಗುತ್ತಾರೆ. ಬೂಟುಗಳಲ್ಲಿ ನೀರನ್ನು ಹಾಕಿಕೊಂಡು ಕುಡಿಯುತ್ತಾರೆ. ದೇವಾಲಯಕ್ಕೆ ಸುಮಾರು 200 ಮೆಟ್ಟಿಲುಗಳಿವೆ. ಅಷ್ಟು ಮೆಟ್ಟಿಲುಗಳನ್ನು ಏರುವಾಗಲೂ ತಲೆಯ ಮೇಲೆ ಬೂಡುಗಳು ಹಾಗೂ ಬಾಯಲ್ಲಿ ಬೂಟುಗಳನ್ನು ಕಚ್ಚಿಕೊಂಡೇ ಮಹಿಳೆ ಬರಬೇಕು. ಹೀಗೆ ಮಾಡುವುದರಿಂದ ದುಷ್ಟು ಪರಿಣಾಮಗಳು ಯಾವುದೂ ಸಂಭವಿಸದು. ದುಃಖಕರ ಸಂಗತಿಯನ್ನು ತೊಡೆದುಹಾಕಲು ಇರುವ ತ್ವರಿತವಾದ ಪರಿಹಾಋ ಎಂದು ಪರಿಗಣಿಸಲಾಗುತ್ತದೆ.

ಅಪಾಯವೇ ಹೆಚ್ಚು

ಅಪಾಯವೇ ಹೆಚ್ಚು

ಈ ವಿಚಿತ್ರ ಆಚರಣೆಯಿಂದ ಮಹಿಳೆಯರಿಗೆ ಆಗುವ ಒಳ್ಳೆಯ ಸಂಗತಿಗಳಿಗಿಂತ ಹೆಚ್ಚು ಅನಾನುಕೂಲತೆಗಳು ಆಗುವ ಸಾಧ್ಯತೆಗಳೇ ಹೆಚ್ಚಾಗಿರುತ್ತವೆ. ಅವರು ಬಾಯಲ್ಲಿ ಕಚ್ಚಿಕೊಳ್ಳುವ ಬೂಟುಗಳು/ಶೂಗಳು ಯಾವುದೂ ಹೊಸತಲ್ಲ. ನಿತ್ಯ ಬಳಕೆ ಮಾಡಿ ಬಿಟ್ಟಿರುವ ಹಳೆಯ ಶೂ ಗಳು. ಅವುಗಳಲ್ಲಿ ಸಾಕಷ್ಟು ಕೊಳೆ ಹಾಗೂ ಕ್ರಿಮಿಕೀಟಗಳು ಇರುತ್ತವೆ. ಅವುಗಳನ್ನು ತಲೆಯ ಮೇಲೆ ಇಟ್ಟುಕೊಳ್ಳುವುದು, ಬಾಯಲ್ಲಿ ಕಚ್ಚಿಕೊಳ್ಳುವುದು ಹಾಗೂ ಅದರಲ್ಲಿ ನೀರನ್ನು ತುಂಬಿಕೊಂಡು ನೀರನ್ನು ಕುಡಿಯುವುದು ಎಂದರೆ ಅದರಲ್ಲಿರುವ ರೋಗಾಣುಗಳು ಅಥವಾ ಸೋಂಕು ಕ್ರಿಮಿಕೀಟಗಳು ನೇರವಾಗಿ ದೇಹದ ಒಳಗೆ ಆಕ್ರಮಿಸಬಲ್ಲವು. ಜೊತೆಗೆ ಇಲ್ಲ ಸಲ್ಲದ ಆರೋಗ್ಯ ಸಮಸ್ಯೆಗಳು ತಲೆದೂರುತ್ತವೆ. ಅವರಿಗೆ ಆರೋಗ್ಯದ ಬಗ್ಗೆ ಸೂಕ್ತ ಜ್ಞಾನ ಇಲ್ಲದೆ ಇರುವುದೇ ಇಂತಹ ಅಂದಕಾರದ ಆಚರಣೆಗೆ ಇಂದಿಗೂ ಚಾಲ್ತಿಯಲ್ಲಿದೆ ಎಂದು ಹೇಳಬಹುದು.

Most Read: ನಂಬುತ್ತೀರೋ ಬಿಡುತ್ತೀರೋ, ಇಲ್ಲಿ ಪ್ರೇತ-ಭೂತಗಳದ್ದೇ ಕಾಟವಂತೆ!

ಮಹಿಳೆಯರಿಗೆ ಗೌರವ ಇಲ್ಲ

ಮಹಿಳೆಯರಿಗೆ ಗೌರವ ಇಲ್ಲ

ಆ ಹಳ್ಳಿಯಲ್ಲಿ ಇಂದಿಗೂ ಶಿಕ್ಷಣದ ಕೊರತೆ, ಪಿತೃಪ್ರಭುತ್ವ, ಆರೋಗ್ಯ ಪಾಲನೆಯ ಸೌಲಭ್ಯ ಇಲ್ಲದೆ ಇರುವುದು ಇಂದಿಗೂ ಅವರಲ್ಲಿ ಸಾಕಷ್ಟು ಸಮಸ್ಯೆಗಳು ಹಾಗೂ ದುಃಖದ ಸಂಗತಿಯು ನೆಲೆಯೂರಿವೆ. ಇಲ್ಲಿ ಮಹಿಳೆಯರಿಗೆ ಯಾವುದೇ ಸ್ಥಾನ ಮಾನ ಹಾಗೂ ಗೌರವ ಇಲ್ಲದೆ ಮನಸ್ಸಿಗೆ ಬಂದಂತೆ ನಡೆಸಿಕೊಳ್ಳುವುದು ಸಾಮಾನ್ಯ. ಇಂತಹ ಸ್ಥಿತಿಯಿಂದ ಮುಕ್ತರಾಗಿ ತಮ್ಮ ಜೀವನದ ನಿಜವಾದ ಸ್ವಾತಂತ್ರ್ಯ ಹಾಗೂ ಹಕ್ಕನ್ನು ಮಹಿಳೆಯರು ಪಡೆದುಕೊಳ್ಳಬೇಕಾದ ಅನಿವಾರ್ಯತೆ ಇದೆ.

ಅರಿಯಬೇಕಿದೆ

ಅರಿಯಬೇಕಿದೆ

ನಾವು ಆಧುನಿಕತೆಯ ಕಡೆಗೆ ಹೆಜ್ಜೆ ಇಡುತ್ತಿದ್ದೇವೆ. ನಮ್ಮಲ್ಲಿ ಸಾಕಷ್ಟು ಬದಲಾವಣೆಯನ್ನು ತಂದುಕೊಳ್ಳಬೇಕು. ಸ್ವಚ್ಛತೆ, ಆರೋಗ್ಯ, ಶಿಕ್ಷಣಗಳ ಬಗ್ಗೆ ಆಸಕ್ತಿ ಹಾಗೂ ಜ್ಞಾನ ಹೊಂದಿದಾಗ ಸಮಸ್ಯೆಗಳನ್ನು ಗುರುತಿಸುವುದು ಹಾಗೂ ಅದರಿಂದ ಪಾರಾಗುವ ಬುದ್ಧಿ ಬರುವುದು. ಅಜ್ಞಾನ ಹಾಗೂ ಮೂಢ ನಂಬಿಕೆಗಳಿಗಿಂತ ಮಾನವೀಯತೆ ಎನ್ನುವುದು ಬಹುಮುಖ್ಯ ಎನ್ನುವುದನ್ನು ಅರಿಯಬೇಕಿದೆ. ಆಗ ಮಾತ್ರ ನಮ್ಮ ದೇಶದಲ್ಲಿ ಇಂದಿಗೂ ಇರುವ ಅಮಾನವೀಯ ಮೂಢನಂಬಿಕೆಗಳು ಮರೆಯಾಗಿ ಹೋಗಲು ಸಾಧ್ಯ.

English summary

In this Women Forced to Drink Water From Shoes!

India has come a long way, they say. We are the second-largest English speaking country, our youngsters go on to become doctors and engineers at MNCs, we are more developed than we've ever been. But amidst all the glitter lies a deep, dark secret which paints a rather sad picture of our supposedly 'developed' country.God men, exorcism, rituals and superstitions - as regressive as they might be - are belief systems that plague our country. There still exist places which believe that a mental disorder, or something as trivial as a fever, can be caused by evil spirits
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more