For Quick Alerts
ALLOW NOTIFICATIONS  
For Daily Alerts

ಹುಟ್ಟಿದ ಮಗುವಿನ ರಾಶಿಯನ್ನು ತಿಳಿಯಲು ಹೀಗೆ ಮಾಡಿ

|

ಹೊಸ ಮಗುವಿನ ಜನ್ಮ ಎಂದರೆ ಮನೆಯಲ್ಲಿ ಸಂತಸ ಹಾಗೂ ಸಂಭ್ರಮವನ್ನು ತರುವ ಸ್ಮರಣೀಯ ಘಳಿಗೆಯಾಗಿದೆ. ಮನೆಯ ಭಾಗ್ಯದ ಬಾಗಿಲು ತೆರೆಯುವ ಮಗುವಿನ ಭವಿಷ್ಯ, ವ್ಯಕ್ತಿತ್ವ ಹಾಗೂ ಅದೃಷ್ಟಗಳು ಹೇಗಿರಲಿವೆ ಎಂಬುದನ್ನು ತಿಳಿಯುವ ಕುತೂಹಲವೂ ಪಾಲಕರು ಹಾಗೂ ಮನೆಯ ಸದಸ್ಯರಿಗೆ ಇರುವುದು ಸಹಜ. ಜ್ಯೋತಿಷ್ಯ ಶಾಸ್ತ್ರದ ಮೂಲಕ ನವಜಾತ ಶಿಶುವಿನ ಭವಿಷ್ಯದ ವ್ಯಕ್ತಿತ್ವ ಹಾಗೂ ಜೀವನದ ಬಗ್ಗೆ ಒಂದು ಸ್ಥೂಲ ಅಂದಾಜು ಪಡೆಯಲು ಸಾಧ್ಯವಿದೆ.

ಮಗುವಿನ ಗ್ರಹಗತಿ ಅಂದರೆ ಸೂರ್ಯ, ಚಂದ್ರ ಹಾಗೂ ಇತರ ಗ್ರಹಗಳ ಚಲನೆಗಳನ್ನು ನಿಖರವಾಗಿ ಲೆಕ್ಕಾಚಾರ ಹಾಕುವ ಮೂಲಕ ಭವಿಷ್ಯ ಜೀವನದ ಬಗ್ಗೆ ತಿಳಿದುಕೊಳ್ಳಬಹುದು. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಭವಿಷ್ಯ ಅರಿಯಲು ಮಗು ಹುಟ್ಟಿದ ನಿಖರ ದಿನಾಂಕ ಹಾಗೂ ಸಮಯ ಗೊತ್ತಿರಬೇಕಾಗುತ್ತದೆ. ಇದರ ಆಧಾರದಲ್ಲಿ ಮಗುವಿನ ರಾಶಿ ಯಾವುದು ಎಂಬುದನ್ನು ಹೇಗೆ ನಿರ್ಧರಿಸಬಹುದು ಎಂಬುದನ್ನು ಈ ಅಂಕಣದಲ್ಲಿ ತಿಳಿಸಲಾಗಿದೆ.

 ರಾಶಿ ಅಥವಾ ರಾಶಿಚಕ್ರ ಎಂದರೇನು?

ರಾಶಿ ಅಥವಾ ರಾಶಿಚಕ್ರ ಎಂದರೇನು?

ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರದ ಪ್ರಕಾರ ಆಕಾಶವನ್ನು 12 ಭಾಗಗಳಾಗಿ ವಿಂಗಡಿಸಲಾಗಿದೆ. ಪ್ರತಿ ಭಾಗವನ್ನು ಒಂದು ನಕ್ಷತ್ರಪುಂಜ ಅಥವಾ ನಕ್ಷತ್ರಗಳ ವ್ಯವಸ್ಥೆ ಎಂದು ಗುರುತಿಸ ಲಾಗುತ್ತದೆ. ಹೀಗೆ ಪ್ರತಿಯೊಂದು ಭಾಗವನ್ನು ರಾಶಿ ಅಥವಾ ರಾಶಿಚಕ್ರಗಳನ್ನು ಆಧರಿಸಿ ನಿರ್ದಿಷ್ಟ ರಾಶಿಯ ಹೆಸರಿನಿಂದ ನಾಮಕರಣ ಮಾಡಲಾಗಿದೆ. ಹೀಗೆ ಒಟ್ಟು 12 ರಾಶಿಗಳಿದ್ದು ಅವು ಹೀಗಿವೆ: ಮೇಷ (ರಾಮ), ವೃಷಭ (ಎತ್ತು), ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಹಾಗೂ ಮೀನ.

ಸೂರ್ಯರಾಶಿ ಹಾಗೂ ಚಂದ್ರರಾಶಿಗಳೆಂದರೇನು?

ಸೂರ್ಯರಾಶಿ ಹಾಗೂ ಚಂದ್ರರಾಶಿಗಳೆಂದರೇನು?

ನಿರ್ದಿಷ್ಟ ಸಮಯದಲ್ಲಿ ಯಾವ ರಾಶಿಗಳ ನಕ್ಷತ್ರಪುಂಜದ ಮೇಲೆ ಸೂರ್ಯನಿರುವನೋ ಆ ರಾಶಿಗಳನ್ನು ಸೂರ್ಯರಾಶಿಗಳೆಂದು ಹಾಗೂ ಯಾವ ರಾಶಿಗಳ ನಕ್ಷತ್ರಪುಂಜದ ಮೇಲೆ ಚಂದ್ರನಿರುವನೋ ಆ ರಾಶಿಗಳನ್ನು ಚಂದ್ರರಾಶಿಗಳೆಂದು ಕರೆಯಲಾಗುತ್ತದೆ.

Most Read:ರಾಶಿಚಕ್ರದ ಪ್ರಕಾರ ಹೇಗೆ ಕೋಪಗಳು ವ್ಯಕ್ತವಾಗುತ್ತವೆ ನೋಡಿ...

ಹುಟ್ಟಿದ ಮಗುವಿನ ಸೂರ್ಯರಾಶಿ ತಿಳಿಯುವುದು ಹೇಗೆ?

ಹುಟ್ಟಿದ ಮಗುವಿನ ಸೂರ್ಯರಾಶಿ ತಿಳಿಯುವುದು ಹೇಗೆ?

ಎಲ್ಲ ಹನ್ನೆರಡು ರಾಶಿ ಚಕ್ರಗಳನ್ನು ಸುತ್ತಲು ಸೂರ್ಯ 12 ತಿಂಗಳುಗಳನ್ನು ತೆಗೆದುಕೊಳ್ಳುತ್ತಾನೆ. ಅಂದರೆ ಅಂದಾಜು ಒಂದು ರಾಶಿಯ ಮೇಲೆ ಒಂದು ತಿಂಗಳವರೆಗೆ ಸೂರ್ಯ ಇರುತ್ತಾನೆ. ಮಗು ಹುಟ್ಟಿದ ತಿಂಗಳಿನ ಆಧಾರದ ಮೇಲೆ ಸೂರ್ಯರಾಶಿಯನ್ನು ಕಂಡು ಹಿಡಿಯಬಹುದಾಗಿದೆ. ಹೀಗಾಗಿ ಮಗುವಿನ ಸೂರ್ಯರಾಶಿಯನ್ನು ಕೆಳಗಿನ ಪಟ್ಟಿ ನೋಡಿ ಅಳೆಯಬಹುದು:

*ಮೇಷ - ಮಾರ್ಚ 21 ರಿಂದ ಏಪ್ರಿಲ್ 20

*ವೃಷಭ - ಏಪ್ರಿಲ್ 21 ರಿಂದ ಮೇ 21

*ಮಿಥುನ - ಮೇ 22 ರಿಂದ ಜೂನ್ 21

*ಕರ್ಕ - ಜೂನ್ 22 ರಿಂದ ಜುಲೈ 22

*ಸಿಂಹ - ಜುಲೈ 23 ರಿಂದ ಆಗಸ್ಟ್ 21

*ಕನ್ಯಾ - ಆಗಸ್ಟ್ 22 ರಿಂದ ಸೆಪ್ಟೆಂಬರ್ 23

*ತುಲಾ - ಸೆಪ್ಟೆಂಬರ್ 24 ರಿಂದ ಅಕ್ಟೋಬರ್ 23

*ವೃಶ್ಚಿಕ - ಅಕ್ಟೋಬರ್ 24 ರಿಂದ ನವೆಂಬರ್ 22

*ಧನು - ನವೆಂಬರ್ 23 ರಿಂದ ಡಿಸೆಂಬರ್ 22

*ಮಕರ - ಡಿಸೆಂಬರ್ 23 ರಿಂದ ಜನೆವರಿ 20

*ಕುಂಭ - ಜನೆವರಿ 21 ರಿಂದ ಫೆಬ್ರವರಿ 19

*ಮೀನ - ಫೆಬ್ರವರಿ 20 ರಿಂದ ಮಾರ್ಚ 20

Most Read:ಮುಖ ನೋಡಿದ ತಕ್ಷಣ ನಿಮ್ಮ ಮದುವೆ ಬಗ್ಗೆ ಹೇಳಬಹುದು!

ಮಗುವಿನ ಚಂದ್ರರಾಶಿ ತಿಳಿಯುವುದು ಹೇಗೆ?

ಮಗುವಿನ ಚಂದ್ರರಾಶಿ ತಿಳಿಯುವುದು ಹೇಗೆ?

ಮಗುವಿನ ಚಂದ್ರರಾಶಿ ತಿಳಿದುಕೊಳ್ಳುವುದು ಅಷ್ಟು ಸುಲಭದ ಕೆಲಸವಲ್ಲ. ಪ್ರತಿ ತಿಂಗಳು ಚಂದ್ರ ಎಲ್ಲ ರಾಶಿಗಳ ಮೇಲೂ ಸಂಚರಿಸುವುದರಿಂದ ಇದನ್ನು ಕಂಡು ಹಿಡಿಯುವುದು ಕ್ಲಿಷ್ಟಕರವಾಗಿದೆ. ಅಂದಾಜು ಒಂದು ತಿಂಗಳಲ್ಲಿ ಎರಡೂವರೆ ದಿನ ಚಂದ್ರ ಒಂದು ರಾಶಿಯಲ್ಲಿರುತ್ತಾನೆ. ಮಗು ಹುಟ್ಟಿದ ಘಳಿಗೆಯಲ್ಲಿ ಯಾವ ರಾಶಿಯಲ್ಲಿ ಚಂದ್ರನಿರುವನೋ ಅದು ಮಗುವಿನ ಚಂದ್ರರಾಶಿಯಾಗಿರುತ್ತದೆ. ಇದನ್ನು ಸ್ಪಷ್ಟವಾಗಿ ತಿಳಿಯಲು ಜ್ಯೋತಿಷ್ಯ ಶಾಸ್ತ್ರಜ್ಞರ ಮೊರೆ ಹೋಗುವುದು ಸೂಕ್ತ.

English summary

How to Know zodiac sign of Your New Born Baby

A newborn baby brings happiness and excitement into the home. While rejoicing the birth of the baby, you will be curious to know the baby’s personality, future and luck. Fortunately, astrology helps you gather a fair amount of outline on your baby’s characteristics and life. Astrology works through precise calculations of the movements of sun, moon and planets. To know about your baby and its future, you must first know the precise time and date when your baby was born.
X
Desktop Bottom Promotion