Just In
Don't Miss
- Sports
ಅಂಪೈರ್ ವಿರುದ್ಧ ಅಸಮಾಧಾನ, ಮ್ಯಾಚ್ ರೆಫರೀಗೆ ದೂರಿತ್ತ ಇಂಗ್ಲೆಂಡ್
- Automobiles
ಹೊಸ ಸಫಾರಿ ಕಾರಿಗಾಗಿ ಆಕ್ಸೆಸರಿಸ್ ಪ್ಯಾಕೇಜ್ ಬಿಡುಗಡೆ ಮಾಡಿದ ಟಾಟಾ ಮೋಟಾರ್ಸ್
- News
ವಿಡಿಯೋ ವೈರಲ್; ಗೋವಾದಲ್ಲಿ ಕನ್ನಡಿಗರ ಮೇಲೆ ದಬ್ಬಾಳಿಕೆ
- Movies
ಜೈಲಿನಿಂದ ಹೊರಬಂದ ಬಳಿಕ ಹೊಸ ಸಿನಿಮಾ ಕೈಗೆತ್ತಿಕೊಂಡ ರಾಗಿಣಿ
- Education
BMRCL Recruitment 2021: ಚೀಫ್ ಇಂಜಿನಿಯರ್, ಮ್ಯಾನೇಜರ್ ಮತ್ತು ಡಿಜಿಎಂ ಹುದ್ದೆಗಳಿಗೆ ಅರ್ಜಿ ಆಹ್ವಾನ
- Finance
ಎಲ್ಪಿಜಿ ಸಿಲಿಂಡರ್ಗಳ ಬೆಲೆ ಮತ್ತೆ ಹೆಚ್ಚಳ: ತಿಂಗಳಲ್ಲಿ 3ನೇ ಬಾರಿ!
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಪುಟಾಣಿ ಮಕ್ಕಳು ತಮ್ಮ ಶಿಕ್ಷಕರಿಗೆ ಬರೆದ ಹೃದಯಾಳದ ಮಾತುಗಳು
ಪುಟಾಣಿ ಮಕ್ಕಳ ಮನಸ್ಸಿನಲ್ಲಿ ಕಲ್ಮಶವೆನ್ನುವುದು ಇರುವುದಿಲ್ಲ. ಅವರು ನೇರವಾಗಿ ತಮ್ಮ ಹೃದಯದಲ್ಲಿ ಏನು ಇದೆಯೋ ಅದನ್ನೇ ಹೇಳುವರು. ಆದರೆ ಪೋಷಕರು ಕೆಲವೊಮ್ಮೆ ಮಕ್ಕಳಿಗೆ ಕೂಡ ಸುಳ್ಳು ಹೇಳುವುದನ್ನು ಕಲಿಸಿಕೊಡುವರು. ಅದರಲ್ಲೂ ಪುಟಾಣಿ ಮಕ್ಕಳ ಮೇಲೆ ಇಂದಿನ ದಿನಗಳಲ್ಲಿ ಅತಿಯಾದ ಶೈಕ್ಷಣಿಕ ಒತ್ತಡವನ್ನು ಹಾಕಲಾಗುತ್ತದೆ. ಇದರಿಂದ ಮಕ್ಕಳಿಗೆ ಕಲಿಕೆ ಅನ್ನುವುದು ಒಂದು ರೀತಿಯಲ್ಲಿ ಬಂಧನವಾಗಿದೆ. ಪ್ರತಿನಿತ್ಯವು ಮನೆಗೆಲಸವನ್ನು ಮಾಡಿಕೊಂಡು ಬರಬೇಕಾದ ಒತ್ತಡವು ಮಕ್ಕಳಿಗೆ ಇರುವುದು. ಇಲ್ಲೊಬ್ಬ ಪುಟಾಣಿ ಮಗುವಿಗೆ ಕೈಲ್ ಶ್ವಾರ್ಟ್ಜ್ ಎನ್ನುವ ಪ್ರಾಥಮಿಕ ಹಂತದ ಶಿಕ್ಷಕರೊಬ್ಬರು ನೀಡಿರುವಂತಹ ಅಸೈನ್ ಮೆಂಟ್ ಈಗ ಟ್ವಿಟ್ಟರ್ ಮತ್ತು ಇತರ ಸಾಮಾಜಿಕ ಮಾಧ್ಯಮಗಳಲ್ಲಿ ತುಂಬಾ ಜನಪ್ರಿಯವಾಗಿದೆ.
ತಮ್ಮ ಶಿಕ್ಷಕರಿಗೆ ಏನು ತಿಳಿದಿರಬೇಕು ಎಂದು ಆಲೋಚನೆ ಮಾಡಿಕೊಂಡು ಬರೆಯುವಂತೆ ಹೇಳಲಾಯಿತು. ಇದಕ್ಕೆ ಬಂದ ಉತ್ತರ ತುಂಬಾ ವೈರಲ್ ಆಗಿದೆ. ಕರಿಹಲಗೆ ಮೇಲೆ ಇರುವಂತಹ ವಾಕ್ಯವನ್ನು ಪೂರ್ತಿಗೊಳಿಸಬೇಕು ಎಂದು ಶಿಕ್ಷಕರು ವಿದ್ಯಾರ್ಥಿಗಳಿಗೆ ಕೇಳಿಕೊಂಡರು. ವಾಕ್ಯವು ಈ ರೀತಿಯಾಗಿತ್ತು, ನನ್ನ ಶಿಕ್ಷಕರಿಗೆ ಇದು ತಿಳಿದಿರಬೇಕೆಂದು ಆಶಿಸುತ್ತೇನೆ...... ಶಿಕ್ಷಕಿಗೆ ಸಿಕ್ಕಿರುವಂತಹ ಪ್ರಾಮಾಣಿಕ ಉತ್ತರವು ಯಾರ ಹೃದಯವನ್ನು ಕರಗಿಸಬಹುದು. ಈ ಉತ್ತರವು ಈಗ ಸಾಮಾಜಿಕ ಜಾಲತಾಣದಲ್ಲೂ ತುಂಬಾ ವೈರಲ್ ಆಗಿದೆ. ಇದಕ್ಕೆ ಬಂದಿರುವ ತುಂಬಾ ಪ್ರಾಮಾಣಿಕ ಉತ್ತರವನ್ನು ನೀವು ತಿಳಿಯಿರಿ.

ಕಡಿದುಹೋಗಿರುವಂತಹ ಸಂಬಂಧ
ವಿದ್ಯಾರ್ಥಿಯು ತನ್ನ ಪೋಷಕರ ಕಡಿದು ಹೋಗಿರುವಂತಹ ಹೋಗಿರುವ ಸಂಬಂಧದ ಬಗ್ಗೆ ತುಂಬಾ ಭಾವನಾತ್ಮಕವಾಗಿ ಬರೆದಿರುವನು.

ವಿದ್ಯಾರ್ಥಿಯ ಚಿಂತೆ
ವಿದ್ಯಾರ್ಥಿಯು ತನಗೆ ರಾತ್ರಿ ವೇಳೆ ಮಲಗುವ ಜಾಗದ ಬಗ್ಗೆ ತುಂಬಾ ಚಿಂತೆಯನ್ನು ವಿವರಿಸಲು ನಿರ್ಧರಿಸಿರುವರು.

ತನ್ನ ಬಗ್ಗೆ ವಿವರ ಹಂಚಿಕೊಂಡಿರುವರು
ವಿದ್ಯಾರ್ಥಿಯು ಆತ/ಆಕೆಯ ಆಕರ್ಷಣೆ ಮತ್ತು ಬಲಗಳ ಬಗ್ಗೆ ಬರೆದುಕೊಂಡಿರುವ.
Most Read:ನಿಮಗೆ ಗೊತ್ತೇ? ಈ ಆರು ರಾಶಿಯವರು ಅಧಿಕ ಪ್ರಮಾಣದಲ್ಲಿ ಹಣ ಖರ್ಚು ಮಾಡುತ್ತಾರಂತೆ!!

ಮಧ್ಯದ ಮಗುವಾಗಿರುವ ಬಗ್ಗೆ ತೊಂದರೆ
ಈ ಮಗುವಿಗೆ ನಿಜವಾಗಿಯೂ ಗಂಭೀರ ಸಮಸ್ಯೆಯಿದೆ ಮತ್ತು ಆತ/ಆಕೆ ತಾನು ಮಧ್ಯದ ಮಗುವಾಗಿರುವ ಬಗ್ಗೆ ಚಿಂತೆ ವ್ಯಕ್ತಪಡಿಸಿದೆ ಮತ್ತು ಪೋಷಕರು ಪರಸ್ಪರ ಬೇರ್ಪಟ್ಟಿರುವುದು ಕೂಡ.

ಸೋದರ/ಸೋದರಿಯರ ಚಿಂತೆ
ಈ ವಿದ್ಯಾರ್ಥಿಯು ನಿಜವಾಗಿಯೂ ಆತ/ಆಕೆಯ ಸೋದರ/ಸೋದರಿಯನ್ನು ಪ್ರೀತಿಸುವವರು. ಪ್ರತೀ ರಾತ್ರಿಯು ತಾನು ಎದುರಿಸುತ್ತಿರುವ ಭೀತಿ ಬಗ್ಗೆ ಹಂಚಿಕೊಂಡಿರುವರು.

ಮನೆಯ ಒಳಗಿನ ಚಿತ್ರಣ
ತಾನು ಒಂದು ನಿರ್ವಸಿತ ಶಿಬಿರದಲ್ಲಿ ವಾಸಿಸುತ್ತಿದ್ದೇನೆ ಎನ್ನುವುದನ್ನು ಹೇಳಲು ಈ ಮಗುವಿಗೆ ತುಂಬಾ ಧೈರ್ಯ ಬೇಕು.
Most Read: ಕೇವಲ 9 ನಿಮಿಷದಲ್ಲಿ ಆರು ಮಕ್ಕಳಿಗೆ ಜನ್ಮ ನೀಡಿದ ಮಹಾನ್ ತಾಯಿ!

ತಾಯಿಯ ಸಮಸ್ಯೆಯನ್ನು ಶಿಕ್ಷಕಿಯು ತಿಳಿದುಕೊಳ್ಳಬೇಕೆಂದು ಬಯಸಿದ
ತನ್ನ ತಾಯಿಯು ಮೂರು ಸಲ ವಿಚ್ಛೇದನ ಪಡೆದಿರುವ ಬಗ್ಗೆ ಶಿಕ್ಷಕಿಯು ತಿಳಿದುಕೊಳ್ಳಬೇಕು ಎಂದು ಆ ಮಗು ಬಯಸಿದೆ.

ತಂದೆ ಪ್ರೀತಿಗೆ ಹಂಬಲಿಸುತ್ತಾ…
ತಂದೆಯು ಕೆಲಸದ ಕಡೆ ಹೆಚ್ಚಿನ ಗಮನಹರಿಸುತ್ತಿರುವ ಕಾರಣದಿಂದಾಗಿ ತಂದೆಯ ಪ್ರೀತಿಯು ಹೇಗೆ ಸಿಗುತ್ತಿಲ್ಲ ಎನ್ನುವುದನ್ನು ಈ ಮಗು ತುಂಬಾ ಚೆನ್ನಾಗಿ ವಿವರಿಸಿದೆ.