Latest Updates
-
ಬಿಸಿಲಿನ ಬೇಗೆಗೆ ತತ್ತರಿಸಿದ್ದೀರಾ? ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ಈ ಕೂಲಿಂಗ್ ಹ್ಯಾಕ್ಸ್ ಮಿಸ್ ಮಾಡ್ಬೇಡಿ! -
ಬದಲಾಗುತ್ತಿರುವ ಹವಾಮಾನ: ನಿಮ್ಮ ಫಿಟ್ನೆಸ್ ದಿನಚರಿಯನ್ನು ಬದಲಾಯಿಸದಿದ್ದರೆ ಕಾದಿದೆ ಅಪಾಯ! -
ವಾಟ್ಸಾಪ್ನಲ್ಲಿ ಪ್ರೀತಿಯ ಬಲೆ: ನಿಮ್ಮ ಖಾತೆ ಖಾಲಿಯಾಗುವ ಮುನ್ನ ಈ ಎಚ್ಚರಿಕೆ ವಹಿಸಿ! -
ದೆಹಲಿ-ಎನ್ಸಿಆರ್ನಲ್ಲಿ ಧೂಳಿನ ಬಿರುಗಾಳಿ ಅಬ್ಬರ: ನಿಮ್ಮ ಮನೆ ಮತ್ತು ಗಿಡಗಳನ್ನು ರಕ್ಷಿಸಿಕೊಳ್ಳುವುದು ಹೇಗೆ? -
ಬೇಸಿಗೆಯ ಧಗೆಗೆ ಸುಸ್ತಾಗಿದ್ದೀರಾ? ಈ ಸಾಂಪ್ರದಾಯಿಕ ಆಹಾರಗಳಿದ್ದರೆ ಬಿಸಿಲು ನಿಮ್ಮನ್ನೇನೂ ಮಾಡಲ್ಲ! -
ಅಂತರಾಷ್ಟ್ರೀಯ ನೃತ್ಯ ದಿನ: ಸೋಶಿಯಲ್ ಮೀಡಿಯಾದಲ್ಲಿ ಡ್ಯಾನ್ಸ್ ಅಬ್ಬರ, ನೀವು ಮಿಸ್ ಮಾಡ್ಬೇಡಿ! -
ಬಿಸಿಲ ಧಗೆಯಲ್ಲಿ ವರ್ಕೌಟ್ ಮಾಡ್ತಿದ್ದೀರಾ? ನಿಮ್ಮ ಆರೋಗ್ಯಕ್ಕೆ ಕಾದಿದೆ ದೊಡ್ಡ ಅಪಾಯ, ಈ ತಪ್ಪುಗಳನ್ನು ಮಾಡಬೇಡಿ! -
ಬಿಸಿಲಿನ ಬೇಗೆಯಲ್ಲಿ ಮದುವೆ ಸಂಭ್ರಮ: ಅತಿಥಿಗಳ ಆರೋಗ್ಯ ಕಾಪಾಡಲು ಪ್ಲಾನ್ ಬದಲಾಯಿಸುವುದು ಅನಿವಾರ್ಯವೇ? -
ದೆಹಲಿ-ಎನ್ಸಿಆರ್ನಲ್ಲಿ ಧೂಳಿನ ಬಿರುಗಾಳಿ ಅಬ್ಬರ: ನಿಮ್ಮ ಬಾಲ್ಕನಿ ಗಾರ್ಡನ್ ಮತ್ತು ಮನೆಯನ್ನು ರಕ್ಷಿಸಿಕೊಳ್ಳುವುದು ಹೇಗೆ? -
ಹೀಟ್ವೇವ್ ಎಚ್ಚರಿಕೆ: ಬಿಸಿಲ ಬೇಗೆಯಿಂದ ಬಚಾವಾಗಲು ಈ ಸರಳ ಆಹಾರ ಕ್ರಮಗಳನ್ನು ಮರೆಯದಿರಿ
ವಿಮಾನದಲ್ಲಿ ನಗ್ನವಾಗಿಯೇ ಪ್ರಯಾಣಿಸಲು ಬಯಸಿದ ವ್ಯಕ್ತಿ! ಕೊನೆಗೆ ಏನಾಯಿತು ಗೊತ್ತೇ?
ಇಂದಿನ ದಿನಗಳಲ್ಲಿ ಜನಪ್ರಿಯತೆಗಾಗಿ ಹಪಹಪಿಸುತ್ತಿರುವವರ ಸಂಖ್ಯೆಗೇನೂ ಕಡಿಮೆಯಿಲ್ಲ. ಪ್ರತಿಯೊಬ್ಬರಿಗೂ ತಾವು ಜನಪ್ರಯರಾಗಬೇಕು. ತಮ್ಮ ಬಗ್ಗೆ ಪ್ರತಿಯೊಬ್ಬರ ಬಾಯಿಯಲ್ಲೂ ಮಾತು ಬರಬೇಕು ಎಂದು ಬಯಸುವರು. ಇದಕ್ಕಾಗಿ ಇನ್ನಿಲ್ಲದ ಸರ್ಕಸ್ ಮಾಡುವರು. ಅದರಲ್ಲೂ ಮುಖ್ಯವಾಗಿ ನೀವು ಸಾರ್ವಜನಿಕ ಸ್ಥಳದಲ್ಲಿ ಏನಾದರೂ ಮಾಡಿದರೆ ಅದು ಹೆಚ್ಚು ಜನಪ್ರಿಯವಾಗುವುದು.

ಇದಕ್ಕಾಗಿ ಜನಪ್ರಿಯತೆ ಬಯಸುವವರು ತಮ್ಮ ವಿಚಿತ್ರ ವರ್ತನೆ ತೋರಿಸಲು ಇಂತಹ ಸ್ಥಳಗಳನ್ನೇ ಆಯ್ಕೆ ಮಾಡಿಕೊಳ್ಳುವರು. ಇಂತಹ ಒಂದು ಘಟನೆಯು ವಿಮಾನ ನಿಲ್ದಾಣವೊಂದರಲ್ಲಿ ನಡೆದಿದ್ದು, ಆತ ವಿಮಾನ ನಿಲ್ದಾಣದಲ್ಲಿ ನಗ್ನನಾಗಿದ್ದಾನೆ. ಇದರ ಬಗ್ಗೆ ನೀವು ಮತ್ತಷ್ಟು ತಿಳಿಯಿರಿ.

ಚೆಕ್ ಇನ್ ನಲ್ಲಿ ಆತ ಸಂಪೂರ್ಣ ಬಟ್ಟೆ ಧರಿಸಿದ್ದ
38ರ ಹರೆಯದ ವ್ಯಕ್ತಿಯೊಬ್ಬ ಮಾಸ್ಕೋದ ಡೊಮೊಡೆಡೊವೊ ವಿಮಾನ ನಿಲ್ದಾಣದಲ್ಲಿ ವಿಮಾನ ಹತ್ತಲು ಪ್ರಯತ್ನಿಸಿದ್ದ. ಆತ ಚೆಕ್ ಇನ್ ಸಂದರ್ಭದಲ್ಲಿ ಸಂಪೂರ್ಣವಾಗಿ ಬಟ್ಟೆ ಧರಿಸಿ ಮುಂದೆ ಸಾಗಿದ್ದ. ಇದರ ಬಳಿಕ ಆತ ತನ್ನ ಬಟ್ಟೆ ಬಿಚ್ಚಿ, ಸಂಪೂರ್ಣವಾಗಿ ನಗ್ನವಾಗಿದ್ದ ಮತ್ತು ವಿಮಾನದ ಕಡೆ ಓಡಿಹೋಗಿದ್ದ.

ಆತ ಕುಡಿದಿರಲಿಲ್ಲ
ವಿಚಾರಣೆ ವೇಳೆ ವ್ಯಕ್ತಿಯು ಕುಡಿದಿರಲಿಲ್ಲ ಎನ್ನುವುದು ಸ್ಪಷ್ಟವಾಗಿತ್ತು. ನಿಯಮಗಳನ್ನು ಉಲ್ಲಂಘಿಸಿದ ಕಾರಣದಿಂದಾಗಿ ಆತನನ್ನು ವಿಮಾನ ನಿಲ್ದಾಣದ ಭದ್ರತಾ ಸಿಬ್ಬಂದಿ ಹಿಡಿದರು.

ನಗ್ನವಾಗಿರುವಾಗಲೇ ಆತನಿಗೆ ಕೈಕೋಳ ಹಾಕಲಾಯಿತು
ಆ ವ್ಯಕ್ತಿಯನ್ನು ನೆಲದ ಮೇಲೆ ಹಾಕಿ ಆತನಿಗೆ ಕೈಕೋಳ ಹಾಕಲಾಯಿತು. ಆದರೆ ಆತ ಈ ವೇಳೆ ನಗ್ನವಾಗಿದ್ದ. ಇದರ ಬಳಿಕ ಆತನ ಸುತ್ತಲು ಪೊಲೀಸರು ಸುತ್ತವರಿದಿದ್ದರು. ಆತ ಈ ರೀತಿ ನಗ್ನವಾಗಲು ಕಾರಣ ಏನು ಎಂದು ಇದರ ಬಳಿಕ ತನಿಖೆಯು ಮುಂದುವರಿಯಿತು.

ಬಟ್ಟೆಗಳು ಅಡ್ಡಿಯಾಗುತ್ತಿದೆ ಎಂದು ಭಾವಿಸಿದ್ದ
ವಾಯುಯಾನದ ವೇಳೆ ತುಂಬಾ ಆರಾಮವಾಗಿರಬೇಕು ಎಂದು ಬಯಸಿದ್ದೆ. ಆದರೆ ಇದಕ್ಕೆ ಬಟ್ಟೆಗಳು ಅಡ್ಡಿಯಾಗುತ್ತಿದ್ದವು. ನನಗೆ ಒಂದು ವಿಶೇಷ ಅನುಭವ ಪಡೆಯಲಿಕ್ಕಿತ್ತು. ಬಟ್ಟೆ ಧರಿಸಿದ್ದ ಕಾರಣದಿಂದಾಗಿ ಅದು ಸಾಧ್ಯವಾಗುತ್ತಿರಲಿಲ್ಲ. ಇದರಿಂದ ಬಟ್ಟೆ ಬಿಚ್ಚಲು ಬಯಸಿದೆ ಎಂದು ಆ ವ್ಯಕ್ತಿಯು ವಿಮಾನ ನಿಲ್ದಾಣದಲ್ಲಿ ಬಟ್ಟೆ ಬಿಚ್ಚಿರುವ ಬಗ್ಗೆ ಹೇಳಿಕೊಂಡಿದ್ದಾನೆ. ಇಂತಹ ವಿಚಿತ್ರ ವ್ಯಕ್ತಿಗಳು ಪ್ರತಿನಿತ್ಯ ನಮಗೆ ಒಂದಲ್ಲಾ ಒಂದು ರೀತಿಯಲ್ಲಿ ಸಿಗುವರು. ಈ ಘಟನೆ ಬಗ್ಗೆ ನಿಮ್ಮ ಅಭಿಪ್ರಾಯವೇನು? ನಿಮ್ಮ ಅನಿಸಿಕೆಯನ್ನು ಕಮೆಂಟ್ ಬಾಕ್ಸ್ ಗೆ ಹಾಕಿಬಿಡಿ.



Click it and Unblock the Notifications