Just In
- 6 hrs ago
ಮನೆ ನವೀಕರಣ ಮಾಡುತ್ತಿದ್ದೀರಾ? ತಪ್ಪದೇ ಲೇಖನ ಓದಿ
- 8 hrs ago
ಆರು ಬೆರಳಿಗೆ ಕಾರಣ ಹಾಗೂ ಚಿಕಿತ್ಸೆ
- 11 hrs ago
ಮೇಕಪ್ ಹಚ್ಚಿದಾಗ ಎಂದಿಗೂ ಈ ಕೆಲಸಗಳನ್ನು ಮಾಡಲೇಬೇಡಿ
- 12 hrs ago
ರಕ್ಷಿಸಿದ ವ್ಯಕ್ತಿಗೆ ಧನ್ಯವಾದ ಹೇಳಿದ ಸ್ಲಾತ್ ಕರಡಿ ವೀಡಿಯೋ ವೈರಲ್
Don't Miss
- News
ಆಟಿಕೆ ಬಂದೂಕು ತೋರಿಸಿ ಮುಖ್ಯಮಂತ್ರಿ ಅಣ್ಣನನ್ನೇ ಅಪಹರಿಸಿದ ಐನಾತಿಗಳು
- Finance
ಫಾಸ್ಟ್ಟ್ಯಾಗ್ ಡೆಡ್ಲೈನ್ಗೆ ಸ್ವಲ್ಪ ವಿನಾಯಿತಿ
- Sports
ವಿಶ್ವ ಟಿ20ಯಲ್ಲಿ ಕೂಲ್ ಕ್ಯಾಪ್ಟನ್ ಎಂಎಸ್ ಧೋನಿ ಆಡಲಿದ್ದಾರೆ: ಡ್ವೇನ್ ಬ್ರಾವೊ
- Technology
ಲಿಂಕ್ಸ್ ಗಳನ್ನು ಕ್ಯೂಆರ್ ಕೋಡ್ ಬಳಸಿ ಹಂಚಿಕೊಳ್ಳುವುದು ಹೇಗೆ?
- Automobiles
ನೆಚ್ಚಿನ ವಾಹನದ 50ನೇ ಹುಟ್ಟುಹಬ್ಬವನ್ನು ಆಚರಿಸಿದ ಅಪ್ಪ-ಮಗ
- Movies
ಜಯಲಲಿತಾ ಸಿನಿಮಾ ಬಳಿಕ ಮತ್ತೊಬ್ಬ ಸಿಎಂ ಬಯೋಪಿಕ್ ಸಾಧ್ಯತೆ
- Education
KSP: ಪೊಲೀಸ್ ಸಬ್ ಇನ್ಸ್ಪೆಕ್ಟರ್ ಹುದ್ದೆಗಳ ಇಟಿ- ಪಿಎಸ್ಟಿ ಪ್ರವೇಶ ಪತ್ರ ಬಿಡುಗಡೆ
- Travel
ಹಳ್ಳಿಗಾಡಿನ ಸೊಗಡನ್ನು ಅನುಭವಿಸಲು ಬೆಂಗಳೂರಿನ ಸುತ್ತಮುತ್ತ ಇರುವ ಈ ಸುಂದರ ಗ್ರಾಮಗಳಿಗೆ ಹೋಗಿ ಬನ್ನಿ
ನಾಯಿ ಮರಿಯಂತೆ ಬಟ್ಟೆ ಧರಿಸಿಕೊಂಡು, ಅದರಂತೆ ಸಮಯ ಕಳೆಯುವ ವ್ಯಕ್ತಿ
ಕೆಲವು ಜನರು ಯಾವ ಮಟ್ಟದಲ್ಲಿ ಹುಚ್ಚುತನ ಹೊಂದಿರುತ್ತಾರೆ ಎಂದರೆ ಅವರಿಗೆ ತಾವು ಏನು ಮಾಡುತ್ತಿದ್ದೇವೆ ಎನ್ನುವ ಅರಿವು ಇದ್ದರೂ ಅದರಿಂದ ತಮಗೆ ದೊಡ್ಡ ಮಟ್ಟದಲ್ಲಿ ಪ್ರಚಾರ ಸಿಗಲಿ ಎನ್ನುವುದೇ ಅವರ ನಿರೀಕ್ಷೆ ಆಗಿದೆ. ಕೆಲವು ವಿಚಿತ್ರವಾಗಿ ವರ್ತಿಸುವರು ಹಾಗೂ ಇನ್ನು ಕೆಲವರು ವಿಚಿತ್ರ ಕೆಲಸಗಳನ್ನು ಮಾಡುವರು. ಮಾನಸಿಕ ಸ್ಥಿಮಿತ ಕಳೆದುಕೊಂಡಿರುವ ವ್ಯಕ್ತಿಗಳು ವಿಚಿತ್ರವಾಗಿ ವರ್ತಿಸಿದರೆ ಅದರಲ್ಲಿ ಏನೂ ಅಚ್ಚರಿಯಿಲ್ಲ.
ಆದರೆ ಸಾಮಾನ್ಯ ಮನುಷ್ಯ ಈ ರೀತಿ ವರ್ತಿಸಿದರೆ ಹೇಗಿರಬೇಡ? ಅಂತಹ ವ್ಯಕ್ತಿಯೊಬ್ಬನ ಬಗ್ಗೆ ನಾವು ನಿಮಗೆ ಈ ಲೇಖನದಲ್ಲಿ ತಿಳಿಸಲಿದ್ದೇವೆ. ಈ ವ್ಯಕ್ತಿಯು ಸಣ್ಣ ಬಾಲಕನಾಗಿದ್ದಾಗಿನಿಂದಲೇ ತನ್ನನ್ನು ತಾನು ಒಂದು ನಾಯಿ ಮರಿ ಎಂದು ಭಾವಿಸಿದ್ದ. ಈ ವ್ಯಕ್ತಿಯು ನಾಯಿ ಮರಿಯಂತೆ ಬಟ್ಟೆ ಧರಿಸಿಕೊಂಡು, ಅದರಂತೆ ಸಮಯ ಕಳೆಯುತ್ತಾನೆ. ಈ ಮನುಷ್ಯ ನಾಯಿ ಮರಿ ಬಗ್ಗೆ ನೀವು ಈ ಲೇಖನದಲ್ಲಿ ತಿಳಿಯಿರಿ.

ಆತನಿಗೆ ಮನುಷ್ಯನೆಂಬ ಭಾವನೆ ಬರಲೇ ಇಲ್ಲ
ಗ್ರೇಟರ್ ಮ್ಯಾಂಚೆಸ್ಟರ್ ನ ಸಾಲ್ಫೋರ್ಡ್ ನ ಕಝ್ ಜೇಮ್ಸ್(37) ಎಂಬ ವ್ಯಕ್ತಿಯು ತನ್ನ ನಿಜವಾದ ವ್ಯಕ್ತಿತ್ವವನ್ನು ಸ್ವೀಕರಿಸಿಲ್ಲ ಮತ್ತು ತಾನು ಮನುಷ್ಯ ನಾಯಿ ಮರಿ ಎಂದು ಆತ ಭಾವಿಸಿದ್ದಾನೆ. ತನಗೆ ಯಾವತ್ತೂ ಮನುಷ್ಯ ಎಂಬ ಭಾವನೆಯು ಬಂದಿರಲೇ ಇಲ್ಲ ಎಂದು ಆತ ಹೇಳಿಕೊಂಡಿದ್ದಾನೆ. ಇದರಿಂದಾಗಿ ಆತ ಮನುಷ್ಯ ನಾಯಿ ಮರಿ ಆಗಿ ಜೀವನ ಕಳೆಯಲು ನಿರ್ಧಾರ ಮಾಡಿದ್ದಾನೆ ಮತ್ತು ಒಂದು ತಟ್ಟೆಯಲ್ಲಿ ನಾಯಿಯಂತೆ ಊಟ ಕೂಡ ಮಾಡುತ್ತಾನೆ.

ತನ್ನ ಒಳಮನಸ್ಸಿನ ಮಾತನ್ನು ಕೇಳಿದ
ಕಝ್ ಜೇಮ್ಸ್ ಎಂಬಾತ ಸ್ಟೋರ್ ಮ್ಯಾನೇಜರ್ ಆಗಿದ್ದ. ಆತ ತನ್ನ ಒಳಮನಸ್ಸಿನ ಮಾತನ್ನು ಕೇಳಿಕೊಂಡು ಕೆಲವೊಂದು ಸಂದರ್ಭದಲ್ಲಿ ತನ್ನ ಸ್ನೇಹಿತರಿಗೆ ಬೊಗಳುತ್ತಿದ್ದ ಮತ್ತು ಹಲ್ಲಿನಿಂದಲೇ ಯಾವುದೇ ವಸ್ತುವನ್ನು ಕಚ್ಚಿಕೊಂಡು ಹೋಗುತ್ತಲಿದ್ದ. ನಾಯಿಗಳ ಬಿಸ್ಕಟ್ ನ್ನು ಆತ ತಿನ್ನುತ್ತಲಿದ್ದ. ಈ ಬಿಸ್ಕಟ್ ಆತನಿಗೆ ತುಂಬಾ ಇಷ್ಟವಂತೆ!

ಆತ ನಾಯಿ ಮರಿಯಂತಹ ಬಟ್ಟೆ ಧರಿಸುವನು
ಕೆಲಸದ ಸಮಯವನ್ನು ಹೊರತುಪಡಿಸಿ, ಜೇಮ್ಸ್ ಯಾವಾಗಲೂ ರಬ್ಬರ್ ನಿಂದ ಮಾಡಿರುವಂತಹ ನಾಯಿ ಮರಿ ಹೋಲುವ ಬಟ್ಟೆ, ಮಾಸ್ಕ್, ಬಾಲ ಇತ್ಯಾದಿ ಧರಿಸುವನು. ಇದಕ್ಕಾಗಿ ಆತನಿಗೆ ಸುಮಾರು 2000 ಪೌಂಡ್ ಖರ್ಚಾಗುತ್ತದೆ.
Most Read: ಕೋಳಿ ಮಾಂಸದ ಒಳಗಡೆ ಜೀವಂತ ಇಲಿ ಓಡಾಟ!

ಆತನಿಗೆ ನಾಯಿಯಂತೆ ತಟ್ಟೆಯಲ್ಲಿ ತಿನ್ನುವುದು ಇಷ್ಟ
ಮನೆಯಲ್ಲಿ ಆರಾಮ ಮಾಡುವುದನ್ನು ಮತ್ತು ನಾಯಿಯಂತೆ ತಟ್ಟೆಯಲ್ಲಿ ಊಟ ಮಾಡಲು ತುಂಬಾ ಇಷ್ಟ ಪಡುತ್ತೇನೆ ಎಂದು ಜೇಮ್ಸ್ ಹೇಳಿಕೊಂಡಿದ್ದಾನೆ. ಆದರೆ ತಾನು ನಾಯಿಯ ಆಹಾರವನ್ನು ತಿನ್ನುವುದಿಲ್ಲ. ಬದಲಿಗೆ ಸಾಮಾನ್ಯ ಮನುಷ್ಯರು ತಿನ್ನುವಂತಹ ಆಹಾರವನ್ನು ನಾಯಿಯ ರೀತಿಯಲ್ಲಿ ತಿನ್ನುತ್ತೇನೆ ಎನ್ನುತ್ತಾನೆ ಜೇಮ್ಸ್. ತನಗೆ ನಾಯಿ ಬಿಸ್ಕಟ್ ತುಂಬಾ ಇಷ್ಟ ಮತ್ತು ಅದರ ರುಚಿ ಕೂಡ ನೋಡಿರುವುದಾಗಿ ಆತ ಹೇಳಿ ಕೊಂಡಿದ್ದಾನೆ. ಈ ವಿಚಿತ್ರ ವ್ಯಕ್ತಿತ್ವದ ಮನುಷ್ಯನ ಬಗ್ಗೆ ನಿಮ್ಮ ಅಭಿಪ್ರಾಯ ಏನು? ನೀವು ನಿಮ್ಮ ಅನಿಸಿಕೆಯನ್ನು ನಮಗೆ ಕಮೆಂಟ್ ಬಾಕ್ಸ್ ನಲ್ಲಿ ಬರೆಯಲು ಮರೆಯಬೇಡಿ.