For Quick Alerts
ALLOW NOTIFICATIONS  
For Daily Alerts

ಮಾಜಿ ಪ್ರೇಯಸಿಯ ಕೈಕೊಟ್ಟ ಸೇಡು ಟ್ಯಾಟೂನಲ್ಲಿ ತೀರಿಸಿಕೊಳ್ಳಿ!

|

ಟ್ಯಾಟು ಹಾಕಿಸಿಕೊಳ್ಳುವುದು ಇಂದಿನ ದಿನಗಳಲ್ಲಿ ಒಂದು ರೀತಿಯ ಫ್ಯಾಶನ್ ಆಗಿದೆ. ಮೈ ಮೇಲೆ ಜಾಗವಿಲ್ಲದಂತೆ ಟ್ಯಾಟೂ ಹಾಕಿಸಿಕೊಳ್ಳುವವರು ಇದ್ದಾರೆ. ಆದರೆ ಕೆಲವೊಂದು ಸಂದರ್ಭದಲ್ಲಿ ಟ್ಯಾಟೂ ಹಾಕಿಕೊಂಡ ಬಳಿಕ ಪರಿತಪಿಸಬೇಕಾಗುತ್ತದೆ. ಯಾಕೆಂದರೆ ಪ್ರೇಮದ ಕಡಲಿನಲ್ಲಿ ತೇಲುತ್ತಿರುವ ವೇಳೆ ತನ್ನ ಪ್ರಿಯತಮೆಯನ್ನು ಖುಷಿ ಮಾಡಲು ಅವರ ಮುಖವಿರುವಂತಹ ಟ್ಯಾಟೂ ಹಾಕಿಸಿಕೊಳ್ಳುವರು.

ಆದರೆ ಕೆಲವು ತಿಂಗಳು ಕಳೆದ ಬಳಿಕ ಪ್ರಿಯತಮೆ ಕೈಕೊಟ್ಟಾಗ ಟ್ಯಾಟೂ ನೋಡಿ ಮತ್ತಷ್ಟು ದುಃಖ ಉಮ್ಮಳಿಸಿ ಬರುವುದು. ಈ ವೇಳೆ ಟ್ಯಾಟೂವನ್ನು ತೆಗೆಯಬೇಕೆಂದು ಅವರು ಬಯಸುವರು. ಇದನ್ನು ತೆಗೆಯುವ ಬದಲು ಅಲ್ಲೇ ಏನಾದರೂ ಮಾರ್ಪಾಡು ಮಾಡಿಕೊಂಡರೆ ಆಗ ಮೂಲ ಟ್ಯಾಟೂ ಏನಿತ್ತು ಎಂದು ಯಾರಿಗೂ ತಿಳಿಯದು. ಕೆಲವರು ಇಂತಹ ಟ್ಯಾಟೂಗಳನ್ನು ತುಂಬಾ ತಮಾಷೆಯಾಗಿ ಮಾರ್ಪಾಡು ಮಾಡಿಕೊಂಡಿದ್ದಾರೆ. ಪ್ರೇಮ ಪೈಫಲ್ಯ ಅಥವಾ ಪತ್ನಿಗೆ ಡೈವೋರ್ಸ್ ನೀಡಿದ ಬಳಿಕ ಮೈಮೇಲೆ ಇರುವಂತಹ ಟ್ಯಾಟೂವನ್ನು ಮಾರ್ಪಾಡು ಮಾಡಿಕೊಂಡು ರೀತಿಯಿದು.

ಮಾಜಿ ಪ್ರೇಯಸಿ ಮೇಲೆ ನಾಯಿಮರಿ!

ಮಾಜಿ ಪ್ರೇಯಸಿ ಮೇಲೆ ನಾಯಿಮರಿ!

ತನ್ನ ಎದೆಯ ಮೇಲಿದ್ದ ಮಾಜಿ ಪ್ರೇಯಸಿಯ ಟ್ಯಾಟೂ ಮೇಲೆ ಈ ಯುವಕ ನಾಯಿ ಮರಿಯ ಚಿತ್ರ ಬಿಡಿಸಿಕೊಂಡಿದ್ದಾರೆ. ಅದು ಕೂಡ ಆತನ ಹೃದಯದ ಮೇಲೆ. ಇದು ಒಳ್ಳೆಯ ಮಾರ್ಪಾಡು ಎಂದು ನಮ್ಮ ಅನಿಸಿಕೆ.

ಮಾಜಿಯನ್ನು ಯೋಧನನ್ನಾಗಿ ಮಾಡುವುದು!

ಮಾಜಿಯನ್ನು ಯೋಧನನ್ನಾಗಿ ಮಾಡುವುದು!

ಈ ಹುಡುಗ ತನ್ನ ಮಾಜಿ ಪ್ರೇಯಸಿಯ ಮುಖದ ಟ್ಯಾಟೂವನ್ನು ಪುರಾತನ ಸಾಮುರೈ ಯೋಧನಾಗಿ ಮಾಡಲು ನಿರ್ಧರಿಸಿದ್ದಾನೆ. ಈ ಟ್ಯಾಟೂ ತುಂಬಾ ಕೆಟ್ಟ ಕೆಲಸದಂತೆ ಗೋಚರಿಸುತ್ತಿದೆ.

Most Read: ಹಚ್ಚೆಗೆ ಮರುಳಾಗಿ, ಅಪಾಯದ ಸುಳಿಗೆ ಸಿಲುಕಬೇಡಿ!

ಆಕೆ ಈ ಟ್ಯಾಟೂ ಮಾರ್ಪಾಡನ್ನು ನೋಡಬೇಕೆಂದು ಬಯಸುತ್ತೇವೆ!

ಆಕೆ ಈ ಟ್ಯಾಟೂ ಮಾರ್ಪಾಡನ್ನು ನೋಡಬೇಕೆಂದು ಬಯಸುತ್ತೇವೆ!

ಕೈಕೊಟ್ಟ ಪ್ರೇಯಸಿ ಮೇಲೆ ಸೇಡು ತೀರಿಸಿಕೊಳ್ಳಲು ಇದಕ್ಕಿಂತ ದೊಡ್ಡ ವಿಧಾನವಿಲ್ಲ. ಯಾಕೆಂದರೆ ಈ ಯುವಕ ತನ್ನ ಮಾಜಿ ಪ್ರೇಯಸಿಯ ಟ್ಯಾಟೂ ಮುಖದ ಮೇಲೆ ಒಂದು ರೀತಿಯ ದೆವ್ವದ ಮುಖವನ್ನು ಹಾಕಿಕೊಂಡಿದ್ದಾನೆ. ಇದನ್ನು ಆತನ ಮಾಜಿ ಪ್ರೇಯಸಿ ನೋಡಿದರೆ ಹೇಗಿರಬಹುದು?

ಪಿಶಾಚಿಯಿಂದ ದೆವ್ವ

ಪಿಶಾಚಿಯಿಂದ ದೆವ್ವ

ಯುವಕರು ತಮ್ಮ ಮಾಜಿ ಪ್ರೇಯಸಿಗಳ ಮುಖದ ಟ್ಯಾಟೂವನ್ನು ಪಿಶಾಚಿ, ದೆವ್ವದ ರೂಪ ನೀಡಲು ಕಾರಣವೇನು ಎಂದು ನಿಮಗೆ ತಿಳಿದಿದೆಯಾ? ಅವರು ಅಷ್ಟರಮಟ್ಟಿಗೆ ಈ ಹುಡುಗರಿಗೆ ಹಿಂಸೆ ನೀಡಿರಬಹುದು!

Most Read: ಟ್ಯಾಟೂ ಹಾಕಿಸಿಕೊಂಡ ಬಳಿಕ, ಅದರ ಆರೈಕೆ ಹೀಗಿರಲಿ...

ಇದು ತುಂಬಾ ಅದ್ಭುತವಾಗಿರುವ ಟ್ಯಾಟೂ ಮಾರ್ಪಾಡು!

ಇದು ತುಂಬಾ ಅದ್ಭುತವಾಗಿರುವ ಟ್ಯಾಟೂ ಮಾರ್ಪಾಡು!

ಈ ಯುವಕನಿಗೆ ಖಂಡಿತವಾಗಿಯೂ ಮಾಜಿ ಪ್ರೇಯಸಿಯು ತುಂಬಾ ನೋವುಂಟು ಮಾಡಿರಬಹುದು. ಮಾರ್ಪಾಡು ಯಾವ ಮಟ್ಟದಲ್ಲಿ ಪರಿಪೂರ್ಣವಾಗಿದೆ ಎಂದರೆ ಇದು ಒಬ್ಬ ಅದ್ಭುತ ಟ್ಯಾಟೂ ಕಲಾವಿದನಿಂದ ಮಾತ್ರ ಸಾಧ್ಯ.

ಈ ಲೇಖನದ ಬಗ್ಗೆ ನಿಮ್ಮ ಅಭಿಪ್ರಾಯವೇನು? ಕಮೆಂಟ್ ಬಾಕ್ಸ್ ನಲ್ಲಿ ನಿಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳಿ.

English summary

Funny Ways People Altered Their Tattoos

Some individuals had made the grave mistake of having the faces of their girlfriends and wives tattooed on their bodies. They had to get their tattoos altered as most of these tattoos were portraits of their once upon a time loved ones. The alterations of these tattoos have been done in epic ways in which one can never make out what the original tattoo was about!
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more
X