Just In
Don't Miss
- News
ಅನರ್ಹ ಶಾಸಕ ರೋಷನ್ ಬೇಗ್ ಮುಂದಿನ ನಡೆ ಏನು?
- Movies
ನಿರ್ದೇಶನ, ನಿರ್ಮಾಣದ ನಂತರ ವಿತರಕರಾದ ನಾಗತಿಹಳ್ಳಿ ಚಂದ್ರಶೇಖರ್
- Technology
ಶಿಯೋಮಿ 'ರೆಡ್ಮಿ ಕೆ30' ಸ್ಮಾರ್ಟ್ಫೋನ್ ಬಿಡುಗಡೆ!.ಬೆಲೆ ಎಷ್ಟು?.ಫೀಚರ್ಸ್ ಏನು?
- Automobiles
ಮೊದಲ ಬಾರಿಗೆ ಪ್ರದರ್ಶಿತವಾದ ಹೊಸ ತಲೆಮಾರಿನ ಪಜೆರೊ ಸ್ಪೋರ್ಟ್
- Travel
ಬೀಚ್ಗೆ ಹೋಗುವ ಮುನ್ನ ಈ ಸಂಗತಿಗಳು ನೆನಪಿನಲ್ಲಿರಲಿ
- Sports
ಕ್ರಿಕೆಟ್ನಿಂದ ದೂರವಿರುವ ಧೋನಿ ಸೈನಿಕರಿಗಾಗಿ ಮಾಡುತ್ತಿರೋದೇನು!
- Finance
ಗುಡ್ ರಿಟರ್ನ್ ವೃತ್ತಿ ಮಾರ್ಗದರ್ಶಿ: ಅಡುಗೆ ಕಾಂಟ್ರ್ಯಾಕ್ಟ್ ಬಗ್ಗೆ ಇಂಚಿಂಚು ಮಾಹಿತಿ
- Education
HAL Recruitment 2019: ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ
ಪೋಲೆಂಡ್‌ನಲ್ಲಿ ಫುಟ್ಬಾಲ್ ಅಭಿಮಾನಿಗಳು ಲೋಹದ ಪಂಜರದೊಳಗೆ ಆಟ ನೋಡಬೇಕಂತೆ! ಯಾಕೆ ಗೊತ್ತೇ?
ವಿದೇಶಗಳಲ್ಲಿ ಫುಟ್ಬಾಲ್ ಪಂದ್ಯಗಳು ನಡೆಯುವ ಸಂದರ್ಭದಲ್ಲಿ ಎರಡು ತಂಡಗಳ ಅಭಿಮಾನಿಗಳು ಪರಸ್ಪರ ಹೊಡೆದಾಡಿಕೊಂಡಿರುವ ಬಗ್ಗೆ ನಾವು ಓದಿಕೊಂಡಿದ್ದೇವೆ. ಯಾಕೆಂದರೆ ಫುಟ್ಬಾಲ್ ಅಂದರೆ ಅವರಿಗೆ ಜೀವಕ್ಕಿಂತಲೂ ಮೇಲು. ತಮ್ಮ ತಂಡ ಸೋಲುತ್ತಿದೆ ಎನ್ನುವುದನ್ನು ಅಭಿಮಾನಿಗಳಿಗೆ ಸಹಿಸಲು ಸಾಧ್ಯವಾಗುವುದಿಲ್ಲ. ಇದೇ ಕಾರಣದಿಂದಾಗಿ ಹಲವಾರು ಸಂದರ್ಭದಲ್ಲಿ ಅಭಿಮಾನಿಗಳ ಮಧ್ಯೆ ಹೊಡೆದಾಟ ನಡೆದಿದೆ. ಇನ್ನು ಕೆಲವೊಂದು ಸಂದರ್ಭದಲ್ಲಿ ಸ್ಟೇಡಿಯಂನ್ನು ಪುಡಿಗೈದಿರುವುದು, ಬೆಂಕಿ ಹಚ್ಚಿರುವುದು ಮುಂತಾದ ಘಟನೆಗಳು ನಡೆದಿದೆ.
ನಮ್ಮಲ್ಲಿ ಕ್ರಿಕೆಟ್ ಪ್ರೇಮಿಗಳು ಕ್ರಿಕೆಟ್ ಪಂದ್ಯ ಸೋತಾಗ ಕ್ರಿಕೆಟಿಗರ ಮನೆಗೆ ಕಲ್ಲೆಸೆದಂತೆ! ಅಭಿಮಾನಿಗಳನ್ನು ನಿಯಂತ್ರಣ ಮಾಡುವುದು ರಕ್ಷಣಾ ಸಿಬ್ಬಂದಿಗೆ ಕೂಡ ತುಂಬಾ ಕಷ್ಟದ ಕೆಲಸವಾಗಿರುವುದು. ಹೀಗಾಗಿ ಪೋಲೆಂಡ್ ನಲ್ಲಿ ಹೊಸ ಕ್ರಮ ತೆಗೆದುಕೊಂಡಿದ್ದಾರೆ. ಅದೇನೆಂದರೆ ಕಬ್ಬಿಣದ ಪಂಜರದಲ್ಲಿ ಫುಟ್ಬಾಲ್ ಅಭಿಮಾನಿಗಳನ್ನು ಹಾಕಿಡುವುದು! ನೀವು ಇದನ್ನು ತಮಾಷೆ ಎಂದು ತಿಳಿಯಬೇಡಿ. ಇದು ನಿಜವಾಗಿಯೂ ನಡೆಯುತ್ತಲಿದೆ.
ಇದರ ಬಗ್ಗೆ ನೀವು ಇನ್ನಷ್ಟು ಮಾಹಿತಿ ತಿಳಿಯಲು ಮುಂದೆ ಓದುತ್ತಾ ಸಾಗಿ...

ನೂರಕ್ಕೂ ಹೆಚ್ಚು ಅಭಿಮಾಣಿಗಳು ಕಬ್ಬಿಣದ ಪಂಜರದೊಳಗಿನಿಂದ ಪಂದ್ಯ ವೀಕ್ಷಿಸುವರು
ಹುಟ್ನಿಕ್ ಕ್ರಾಕೋವ್ ತಂಡದ ಸುಮಾರು 100ಕ್ಕೂ ಅಧಿಕ ಅಭಿಮಾನಿಗಳನ್ನು ಸ್ಟೇಡಿಯಂನಲ್ಲಿ ಪಂಜರದಲ್ಲಿ ಹಾಕಿಡಲಾಗುತ್ತದೆ. ಹುಟ್ನಿಕ್ ಕ್ರಾಕೋವ್ ತಂಡವು ಪೊಲಿಶ್ 3ನೇ ಫುಟ್ಬಾಲ್ ಡಿವಿಷನ್ ನಲ್ಲಿ ಸ್ಪಾರ್ಟಕಸ್ ಡೇಲ್ಸ್ಜಿ ತಂಡದ ವಿರುದ್ಧ ಆಟವಾಡುವ ವೇಳೆ ಹೀಗೆ ಮಾಡಲಾಗುತ್ತದೆ. ಸಂಪೂರ್ಣ 90 ನಿಮಿಷದ ಪಂದ್ಯದ ವೇಳೆ ಅಭಿಮಾನಿಗಳು ಈ ಕಬ್ಬಿಣದ ಪಂಜರದೊಳಗೆ ಇರಬೇಕು.
Most Read: ಸಾಲ ತೀರಿಸಿಕೊಳ್ಳಲು ತನ್ನ 29 ಅಂಡಾಣುಗಳನ್ನು ಮಾರಿದ ವಿದ್ಯಾರ್ಥಿನಿ!!

ಪೋಲೆಂಡ್ ನ ನಿಯಮದ ಪ್ರಕಾರ
ಪೋಲೆಂಡ್ ನ ನಿಯಮದ ಪ್ರಕಾರ ಪಂದ್ಯಕ್ಕೆ ಆತಿಥ್ಯ ವಹಿಸುವ ತಂಡದ ಅಭಿಮಾನಿಗಳನ್ನು ಎದುರಾಳಿ ತಂಡದ ಅಭಿಮಾನಿಗಳಿಂದ ಪ್ರತ್ಯೇಕವಾಗಿ ಇಡಬೇಕು. ಇದರಿಂದಾಗಿ ಸ್ಟೇಡಿಯಂನಲ್ಲಿ ತುಂಬಾ ಪ್ರತ್ಯೇಕ ಸ್ಥಳದಲ್ಲಿ ಅವರನ್ನು ಕಾಣಬಹುದು. ಈ ಜಾಗದಲ್ಲಿ ಆಸನದ ಮುಂಭಾಗದಲ್ಲಿ ದೊಡ್ಡ ಬೇಲಿಯನ್ನು ಹಾಕಲಾಗುತ್ತದೆ. ಇದರ ಮುಖ್ಯ ಉದ್ದೇಶವೆಂದರೆ ಅಭಿಮಾನಿಗಳ ನಡುವಿನ ಹಿಂಸಾಚಾರ ತಪ್ಪಿಸುವುದು.

ಹಲವಾರು ವರ್ಷಗಳಿಂದ ಈ ನಿಯಮವು ಜಾರಿಯಲ್ಲಿದೆ
ಫುಟ್ಬಾಲ್ ಪಂದ್ಯದ ವೇಳೆ ಅಭಿಮಾನಿಗಳನ್ನು ಪ್ರತ್ಯೇಕವಾಗಿ ಇಡುವುದು ಹಲವಾರು ವರ್ಷಗಳಿಂದ ಪಾಲಿಸಿಕೊಂಡು ಬರುತ್ತಿರುವ ನಿಯಮವಾಗಿದೆ. ಆದರೆ ಇತ್ತೀಚೆಗೆ ಈ ವಿಧಾನಗಳು ಗಮನ ಸೆಳೆದಿದೆ. ಇದರ ಫೋಟೊಗಳನ್ನು ಜನಪ್ರಿಯ ಪೊಲಿಶ್ ಫುಟ್ಬಾಲ್ ಫ್ಯಾನ್ ವೆಬ್ ಸೈಟ್ ನಲ್ಲಿ ಹಾಕಲಾಗಿದೆ. ಇದರ ಬಳಿಕ ಇದು ತುಂಬಾ ವೈರಲ್ ಆಗಿದೆ.
Most Read: ಟಾಯ್ಲೆಟ್ ಸೀಟ್ ನೆಕ್ಕಿದ ಮನೆಕೆಲಸದ ಯುವತಿಯ ವಿಡಿಯೋ ವೈರಲ್!
ವಿಡಿಯೋ ನೋಡಿ
ಪಂಜರವು ಹೇಗೆ ಕಾಣಿಸುತ್ತದೆ ಎಂದು ತಿಳಿಯಲು ನೀವು ವಿಡಿಯೋ ನೋಡಿ ಮತ್ತು ನಿಮ್ಮ ತಂಡವು ಆಟವಾಡುವುದನ್ನು ಪಂಜರದೊಳಗೆ ಕುಳಿತುಕೊಂಡು ನೋಡಲು ಇಷ್ಟಪಡುತ್ತೀರಾ ಎಂದು ನಮಗೆ ಕಮೆಂಟ್ ಬಾಕ್ಸ್ ನಲ್ಲಿ ಬರೆದು ತಿಳಿಸಿ.