For Quick Alerts
ALLOW NOTIFICATIONS  
For Daily Alerts

ನೀವು ಮುಟ್ಟಲೇಬಾರದ ದೇಹದ 5 ಅಂಗಗಳು

|

ಮನುಷ್ಯನನ್ನು ಸೃಷ್ಟಿ ಮಾಡುವ ವೇಳೆ ಕೆಲವೊಂದು ಅಂಗಗಳನ್ನು ದೇಹದ ಹೊರಭಾಗದಲ್ಲಿ ಹಾಗೂ ಇನ್ನು ಕೆಲವು ಅಂಗಗಳನ್ನು ದೇಹದ ಒಳಗಡೆ ರೂಪಿಸಲಾಗಿದೆ. ದೇಹದ ಒಳಗಡೆ ಇರುವಂತಹ ಪ್ರತಿಯೊಂದು ಅಂಗಗಳು ತುಂಬಾ ಸೂಕ್ಷ್ಮ ಹಾಗೂ ಅವುಗಳ ಸರಿಯಾಗಿ ಕಾರ್ಯನಿರ್ವಹಿಸದೆ ಇದ್ದರೆ ಆಗ ಹೊರಗಿನ ಯಾವುದೇ ಅಂಗವು ಕಾರ್ಯನಿರ್ವಹಿಸಲು ಸಾಧವಿಲ್ಲ.

ದೇಹದ ಹೊರಗಡೆ ಕೂಡ ಕೆಲವು ಅಂಗಗಳು ತುಂಬಾ ಸೂಕ್ಷ್ಮವಾಗಿರುವುದು. ಹೀಗಾಗಿ ದೇಹದ ಕೆಲವೊಂದು ಅಂಗಗಳ ಬಗ್ಗೆ ನಾವು ತುಂಬಾ ಎಚ್ಚರಿಕೆ ವಹಿಸಬೇಕು. ದೇಹದ ಕೆಲವೊಂದು ಅಂಗಗಳನ್ನು ಮುಟ್ಟುವುದು ತುಂಬಾ ಅಪಾಯಕಾರಿ ಎಂದು ನಿಮಗೆ ತಿಳಿದಿದೆಯಾ? ಕೈಗಳನ್ನು ಸೋಪ್ ಅಥವಾ ಹ್ಯಾಂಡ್ ವಾಶ್ ನಿಂದ ತೊಳೆದುಕೊಂಡು ಈ ಅಂಗಗಳನ್ನು ಮುಟ್ಟಿದರೂ ಆಗಲೂ ಅವುಗಳು ಕೀಟಾಣುಗಳ ದಾಳಿಗೆ ಒಳಗಾಗಬಹುದು. ಇಂತಹ ದೇಹದ ಅಂಗಗಳು ಯಾವುದು ಎಂದು ನೀವು ತಿಳಿಯಿರಿ…

ಕಣ್ಣುಗಳು

ಕಣ್ಣುಗಳು

ಕಣ್ಣುಗಳು ತುಂಬಾ ಸೂಕ್ಷ್ಮವಾಗಿದ್ದು, ಏನಾದರೂ ಬಿದ್ದರೆ ಆಗ ನೀವು ನೇರವಾಗಿ ಕೈಬೆರಳುಗಳನ್ನು ಹಾಕಬಾರದು. ಕೀಟಾಣುಗಳು ಇರುವಂತಹ ಕೈಗಳಿಂದ ನೀವು ಕಣ್ಣುಗಳನ್ನು ಮುಟ್ಟಿದರೆ ಆಗ ಕೀಟಾಣುಗಳು ಸಂಖ್ಯೆಯು ಅಲ್ಲಿ ಹೆಚ್ಚಾಗುವುದು. ಇದರಿಂದಾಗಿ ಕೆಂಪುಕಣ್ಣೂ ಅಥವಾ ಇತರ ಕೆಲವೊಂದು ಸೋಂಕುಗಳು ಕಾಣಿಸಿಕೊಳ್ಳಬಹುದು.

ಕಿವಿಯ ತೂತು

ಕಿವಿಯ ತೂತು

ಕಿವಿಯೊಳಗೆ ಬೆರಳು ಅಥವಾ ಬೇರೆ ಏನಾದರೂ ವಸ್ತುಗಳನ್ನು ಹಾಕುತ್ತಲಿದ್ದರೆ ಆಗ ನೀವು ಇದನ್ನು ಕಡೆಗಣಿಸಬೇಕು. ಅಧ್ಯಯನಗಳ ಪ್ರಕಾರ ನೀವು ಕಿವಿಯ ತೂತಿನೊಳಗಡೆ ಏನಾದರೂ ವಸ್ತುಗಳನ್ನು ಹಾಕಿದರೆ ಆಗ ಕಿವಿ ತಮಟೆಯ ಚರ್ಮವು ಹರಿದು ಹೋಗುವ ಸಾಧ್ಯತೆಯು ಇರುವುದು. ಕಿವಿಯಲ್ಲಿ ತುರಿಕೆ ಅಥವಾ ಕಿರಿಕಿರಿ ಆಗುತ್ತಿದ್ದರೆ ಏನು ಮಾಡಬೇಕು? ಆಗ ನೀವು ವೈದ್ಯರನ್ನು ಭೇಟಿ ಮಾಡಿ ಅವರಿಂದ ಪರೀಕ್ಷಿಸಿಕೊಳ್ಳಿ.

ಉಗುರಿನ ಕೆಳಗಡೆ ಇರುವ ಚರ್ಮ

ಉಗುರಿನ ಕೆಳಗಡೆ ಇರುವ ಚರ್ಮ

ಉಗುರಿನ ಚರ್ಮದ ಕೆಳಗಡೆ ಸ್ಟ್ಯಾಫ್ ನಂತಹ ಬ್ಯಾಕ್ಟೀರಿಯಾವು ಮನೆ ಮಾಡಿಕೊಂಡಿರಬಹುದು. ಬ್ಯಾಕ್ಟೀರಿಯ ಬರದೆ ಇರುವಂತ ಮಾಡಲು ಸಣ್ಣ ಉಗುರು ಇಟ್ಟುಕೊಳ್ಳಬೇಕು.

Most Read: ವೈದ್ಯರ ಪ್ರಕಾರ ದೇಹದ ಈ 7 ಅಂಗಗಳನ್ನು ಮುಟ್ಟಲೇಬಾರದಂತೆ! ಯಾಕೆ ಗೊತ್ತೇ?

ಮುಖ

ಮುಖ

ಮುಖ ತೊಳೆಯಲು ಇರುವಾಗ ಅಥವಾ ಕ್ರೀಮ್ ಹಚ್ಚಲು ಇರುವಾಗ ಮಾತ್ರ ಮುಖ ಮುಟ್ಟಬೇಕು. ಅನಗತ್ಯವಾಗಿ ಮುಖವನ್ನು ಮುಟ್ಟುತ್ತಾ ಇರಬೇಡಿ. ಯಾಕೆಂದರೆ ಇದರಿಂದ ಕೀಟಾಣುಗಳು ತುಂಬಿರುವುದು ಮತ್ತು ಕೀಟಾಣುಗಳಿಂದ ಮುಖ ಮುಟ್ಟಿದರೆ ಆಗ ಚರ್ಮಕ್ಕೆ ಅದು ಅಂಟಿಕೊಳ್ಳಬಹುದು ಮತ್ತು ಇದರಿಂದ ಚರ್ಮದ ಸಮಸ್ಯೆ ಆಗಬಹುದು. ಚರ್ಮದ ಸಮಸ್ಯೆಗಳಾಗಿರುವ ಮೊಡವೆ ಹಾಗೂ ಬ್ಲ್ಯಾಕ್ ಹೆಡ್ ಗಳು ಕಾಣಿಸಿಕೊಳ್ಳಬಹುದು. ಚರ್ಮದ ರಂಧ್ರಗಳಲ್ಲಿ ಎಣ್ಣೆಯು ಸೇರಿಕೊಂಡು ಮೊಡವೆ ಹಾಗೂ ಬ್ಲ್ಯಾಕ್ ಹೆಡ್ ಗಳು ಮೂಡುವುದು.

ಮೂಗಿನ ಒಳಭಾಗ

ಮೂಗಿನ ಒಳಭಾಗ

ವಿವಿಧ ಅಧ್ಯಯನಗಳಿಂದ ಕಂಡುಕೊಂಡಿರುವಂತಹ ವಿಚಾರವೆಂದರೆ ಕಿವಿ, ಮೂಗು ಮತ್ತು ಗಂಟಲಿನ ಸಮಸ್ಯೆ ಇರುವಂತಹ ಜನರಲ್ಲಿ ಶೇ.51ರಷ್ಟು ಮೂಗಿನ ಒಳಗೆ ಬೆರಳನ್ನು ಹಾಕುವಂತವರಲ್ಲಿ ಸ್ಟ್ಯಾಪ್ ವೈರಸ್ ಕಂಡುಬಂದಿದೆ. ನೀವು ಮೂಗಿಗೆ ಕೈ ಹಾಕುವುದನ್ನು ಬಿಡಬೇಕು. ಯಾಕೆಂದರೆ ಇದು ಆರೋಗ್ಯಕ್ಕೆ ಹಾನಿಕಾರಕವಾಗಿದೆ.

English summary

Five Body Parts You Should Never Touch

You are responsible for both physical and internal health. You have to be very careful about certain body parts. Do you know touching some body parts might be risky? Even though you wash your hands properly with soap or hand wash. They can still do the work of germ transmission. Here are some body part you should never touch with your hands
X
Desktop Bottom Promotion