For Quick Alerts
ALLOW NOTIFICATIONS  
For Daily Alerts

ವೈದ್ಯರೊಬ್ಬರ ನೆನಪಿನ ಶಕ್ತಿಯು ಕಡಿಮೆಯಾಗಿ, ತಮ್ಮ ರೋಗಿಗೆ 'ಬ್ರೈನ್ ಟ್ಯೂಮರ್' ಇರುವುದನ್ನೇ ಹೇಳಲು ಮರೆತರಂತೆ!!

|

ವೈದ್ಯೋ ನಾರಾಯಣ ಹರಿ ಎನ್ನುತ್ತೇವೆ. ಅಂದರೆ ವೈದ್ಯರು ದೇವರಿಗೆ ಸಮಾನ ಎನ್ನುವುದು ಇದರ ಅರ್ಥ. ಆದರೆ ವೈದ್ಯರು ಕೂಡ ಮಾನವರೇ ಆಗಿರುವ ಕಾರಣದಿಂದಾಗಿ ಹಲವಾರು ತಪ್ಪುಗಳು ಅವರಿಂದಲೂ ನಡೆಯುತ್ತದೆ. ಇಂತಹ ತಪ್ಪುಗಳ ಬಗ್ಗೆ ನಾವು ಈಗಾಗಲೇ ಓದಿಕೊಂಡಿರುತ್ತೇವೆ. ಅದೇನೆಂದರೆ ವೈದ್ಯರು ಶಸ್ತ್ರಚಿಕಿತ್ಸೆ ವೇಳೆ ಕತ್ತರಿ ಹಾಗೂ ಇತರ ಸಾಮಗ್ರಿಗಳನ್ನು ರೋಗಿಯ ಹೊಟ್ಟೆಯ ಒಳಗೆ ಬಿಟ್ಟಿರುವುದು. ಇಂತಹ ಅನಾಹುತಗಳು ಹಲವಾರು ನಡೆದಿದೆ. ಅದೇ ರೀತಿಯಲ್ಲಿ ಈಗ ವೈದ್ಯರೊಬ್ಬರ ನೆನಪಿನ ಶಕ್ತಿಯು ಕಡಿಮೆಯಾಗಿ, ಅವರು ತಮ್ಮ ರೋಗಿಗೆ ಮಾರಕ ಕಾಯಿಲೆ ಇರುವುದನ್ನೇ ಹೇಳಲು ಮರೆತ್ತಿದ್ದಾರೆ. ಸುಮಾರು 18 ತಿಂಗಳ ಹಿಂದೆ ಪತ್ತೆಯಾದ ಬ್ರೈನ್ ಟ್ಯೂಮರ್(ಮೆದುಳಿನ ಗಡ್ಡೆ) ಬಗ್ಗೆ ಹೇಳಲು ವೈದ್ಯರು ಮರೆತುಬಿಟ್ಟಿದ್ದಾರೆ. ರೋಗಿಗೆ ಆತನಿಗೆ ದೊಡ್ಡ ಮಟ್ಟದ ಕಾಯಿಲೆ ಇದೆ ಎಂದು ಹೇಳಲು ವೈದ್ಯರಿಗೆ ನೆನಪಿಲ್ಲ. ಇಂತಹ ಒಂದು ಅನಾಹುತ ನಡೆದಿದ್ದು, ಮುಂದೆ ಏನಾಯಿತು ಎನ್ನುವ ಕುತೂಹಲ ನಿಮ್ಮನ್ನು ಕಾಡದೆ ಇರದು. ಈ ಲೇಖನ ಓದಿಕೊಂಡು ಹೋದರೆ ನಿಮ್ಮ ಕುತೂಹಲ ಖಂಡಿತವಾಗಿಯೂ ತಣಿಯುವುದು.

ಘಟನೆಯು ನಡೆದಿರುವುದು ಚೀನಾದಲ್ಲಿ…

ಘಟನೆಯು ನಡೆದಿರುವುದು ಚೀನಾದಲ್ಲಿ…

ಹಾಂಗ್ ಕಾಂಗ್ ನಿವಾಸಿಯಾಗಿರುವ ಲೀ ಶು-ಲಿಯಂಗ್ ಗೆ 54 ಹರೆಯ. 2005ರಲ್ಲಿ ಲೀ ಒಂದು ಸಲ ಶಸ್ತ್ರಚಿಕಿತ್ಸೆಗೆ ಒಳಗಾಗಿ ಮೆದುಳಿನ ಗಡ್ಡೆಯನ್ನು ತೆಗೆಸಿಕೊಂಡಿದ್ದರು. ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದ್ದರೂ ಇದರ ಬಳಿಕ ಅವರಿಗೆ ಅವರಿಗೆ ಎಡ ಕಿವಿ ಕೇಳಿಸುತ್ತಿರಲಿಲ್ಲ.

ಒಂದು ದಿನ ಲೀ ಕುಸಿದು ಬಿದ್ದರು

ಒಂದು ದಿನ ಲೀ ಕುಸಿದು ಬಿದ್ದರು

ಒಂದು ದಿನ ರಸ್ತೆಯಲ್ಲೇ ಲೀ ಕುಸಿದು ಬಿದ್ದರು ಮತ್ತು ಅವರನ್ನು ತಕ್ಷಣವೇ ಯೂ ಮಾ ತೆ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಯಿತು. ಈ ವೇಳೆ ಪರೀಕ್ಷೆ ಮಾಡಿದಂತಹ ವೈದ್ಯರು ಮೆದುಳು ಸರಿಯಾಗಿ ಕಾರ್ಯನಿರ್ವಹಿಸುತ್ತಿದೆ ಮತ್ತು ಯಾವುದೇ ತೊಂದರೆಯಿಲ್ಲ. ಆದರೆ ಆರು ತಿಂಗಳ ಬಳಿಕ ಹೃದಯದ ಪರೀಕ್ಷೆಗೆ ಮರಳಿ ಬರಬೇಕು ಎಂದು ಅವರು ಹೇಳಿದರು.

Most Read: ತನ್ನ 14 ವಾರದ ಭ್ರೂಣದ ಫೋಟೊವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಮಹಿಳೆ!

ಲೀಗೆ ಪದೇ ಪದೇ ಬಳಲಿಕೆ ಕಂಡುಬರುತ್ತಿತ್ತು

ಲೀಗೆ ಪದೇ ಪದೇ ಬಳಲಿಕೆ ಕಂಡುಬರುತ್ತಿತ್ತು

ರಸ್ತೆ ಬಿದ್ದ ಬಳಿಕ ಲೀಗೆ ಪದೇ ಪದೇ ಬಳಲಿಕೆ ಕಂಡು ಬರಲು ಆರಂಭಿಸಿತ್ತು ಮತ್ತು ಇದರಿಂದ ಅವರನ್ನು ಮತ್ತೆ ಆಸ್ಪತ್ರೆಗೆ ದಾಖಲಿಸಲಾಯಿತು. ಲೀ ಪರೀಕ್ಷೆ ಮಾಡಿದಂತಹ ವೈದ್ಯರಿಗೆ ಎರಡನೇ ಗಡ್ಡೆ ಇರುವುದು ಪತ್ತೆಯಾಗಿದೆ. ಆದರೆ ದುರಾದೃಷ್ಟದಿಂದ ಇದನ್ನು ಲೀಗೆ ಹೇಳಲು ವೈದ್ಯರು ಮರೆತರು.

18 ತಿಂಗಳಲ್ಲಿ ಇದು ದೊಡ್ಡ ಹಾನಿ ಉಂಟು ಮಾಡಿತು

18 ತಿಂಗಳಲ್ಲಿ ಇದು ದೊಡ್ಡ ಹಾನಿ ಉಂಟು ಮಾಡಿತು

18 ತಿಂಗಳ ಬಳಿಕ ಮತ್ತೆ ಲೀಗೆ ತನ್ನ ದೇಹದಲ್ಲಿ ಏನೋ ಸರಿಯಿಲ್ಲವೆನ್ನುವಂತಹ ಭಾವನೆಯು ಉಂಟಾಯಿತು ಮತ್ತು ಇದರಿಂದಾಗಿ ಅವರು ಮತ್ತೆ ಪರೀಕ್ಷೆ ಮಾಡಿಕೊಂಡರು. ಮೆದುಳಿನಲ್ಲಿ ಗಡ್ಡೆ ಇರುವುದು ಪತ್ತೆಯಾಗಿದೆ ಮತ್ತು ಅದನ್ನು ಅವರು ಲೀಗೆ ಹೇಳಿರಲ್ಲ. ಆದರೆ ಅದಾಗಲೇ ಹಾನಿಯಾಗಿತ್ತು. ವೈದ್ಯರ ತಪ್ಪಿನಿಂದಾಗಿ ಲೀ ಶಾಶ್ವತವಾಗಿ ಈಗ ಗಾಳಿಕುರ್ಚಿಯಲ್ಲಿ ಕುಳಿತುಕೊಂಡಿರಬೇಕಾಗಿದೆ ಮತ್ತು ಅವರ ಚಲನಶೀಲತೆ ಮೇಲೆ ಸಂಪೂರ್ಣ ಪರಿಣಾಮ ಬೀರಿದೆ.

ದಂಪತಿ ಆಸ್ಪತ್ರೆ ವಿರುದ್ಧ ಕಾನೂನು ಸಮರಕ್ಕೆ ಮುಂದಾಗಿದ್ದಾರೆ

ದಂಪತಿ ಆಸ್ಪತ್ರೆ ವಿರುದ್ಧ ಕಾನೂನು ಸಮರಕ್ಕೆ ಮುಂದಾಗಿದ್ದಾರೆ

ಆಸ್ಪತ್ರೆ ವಿರುದ್ಧ ಅಧಿಕೃತವಾಗಿ ಯಾವುದೇ ದೂರು ದಾಖಲಾಗಿದೆಯಾ ಎಂದು ಇದುವರೆಗೆ ತಿಳಿದುಬಂದಿಲ್ಲ. ಆದರೆ ಲೀ ಮತ್ತು ಅವರ ಪತ್ನಿ ಆಸ್ಪತ್ರೆಗ ವಿರುದ್ಧ ದೂರು ದಾಖಲಿಸಿಕೊಳ್ಳಲು ಮುಂದಾಗಿದ್ದಾರೆ ಎಂದು ವರದಿಗಳು ಹೇಳಿವೆ. ಈಗಾಗಲೇ ಲೀ ಚಿಕಿತ್ಸೆಗಾಗಿ ಸುಮಾರು 9800 ಡಾಲರ್ ವ್ಯಯಿಸಲಾಯಿದೆ. ಆದರೆ ಇದುವರೆಗೆ ಶಾಶ್ವತ ಪರಿಹಾರ ಮಾತ್ರ ಸಿಕ್ಕಿಲ್ಲ. ಇದರಿಂದಾಗಿ ದಂಪತಿ ತುಂಬಾ ನೊಂದಿದ್ದು, ಆಸ್ಪತ್ರೆಗೆ ವಿರುದ್ಧ ಕಾನೂನು ಸಮರಕ್ಕೆ ಮುಂದಾಗಿದ್ದಾರೆ.

ಈ ಘಟನೆ ಬಗ್ಗೆ ನಿಮ್ಮ ಅನಿಸಿಕೆ ಏನು? ನಿಮ್ಮ ಅಭಿಪ್ರಾಯವನ್ನು ನಮಗೆ ಕಮೆಂಟ್ ಬಾಕ್ಸ್ ನಲ್ಲಿ ತಿಳಿಸಿ.

English summary

Doctors Forgot To Inform Patient That He Had Brain Tumour!

Several cases have been reported about doctors and medics forgetting their instruments inside people's bodies.The cases are reported when the patients return to the hospital with severe pain. Something similar happened in this case where a man was not told about his brain tumour which was diagnosed 18 months back! Apparently the doctors forgot to inform the man about his medical condition.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more
X