For Quick Alerts
ALLOW NOTIFICATIONS  
For Daily Alerts

ಹುಡುಗಿಯ ಬೆನ್ನತ್ತಿ ಹೋಗಿ ಮಧುಮೇಹ ತಂದುಕೊಂಡ!

|

ನಿಮ್ಮ ಕನಸುಗಳನ್ನು ಬೆನ್ನತ್ತಿಕೊಂಡು ಅದನ್ನು ಈಡೇರಿಸಿಕೊಳ್ಳುವುದು ಇದೆಯಲ್ಲಾ ಅದು ಅತೀ ದೊಡ್ಡ ಕಠಿಣ ಸವಾಲು. ಇದು ಪ್ರತಿಯೊಬ್ಬರಿಂದಲೂ ಸಾಧ್ಯವಾಗಲ್ಲ. ಕೆಲವು ಜನರು ಬೇರೆಯವರ ಗಮನ ಸೆಳೆಯಲು ಏನಾದರೂ ವಿಚಿತ್ರವಾಗಿರುವುದನ್ನು ಮಾಡಲು ಪ್ರಯತ್ನಿಸುತ್ತಾರೆ. ಇದರಿಂದಲೇ ಅವರು ಜನಪ್ರಿಯರಾಗುತ್ತಾರೆ ಕೂಡ.

ಇತ್ತೀಚೆಗೆ ತೈವಾನ್ ನ ಸಾಮಾಜಿಕ ಜಾಲತಾಣವೊಂದರಲ್ಲಿ ವ್ಯಕ್ತಿಯೊಬ್ಬ ತನ್ನ ಪ್ರೀತಿಯಿಂದ ಮಧುಮೇಹ ಹೇಗೆ ಬಂದಿದೆ ಎಂದು ಬರೆದುಕೊಂಡಿದ್ದಾರೆ. ಈ ಅಸಾಮಾನ್ಯ ಘಟನೆ ಬಗ್ಗೆ ನೀವು ತಿಳಿಯಿರಿ. ಈ ವ್ಯಕ್ತಿಯ ತೈವಾನ್ ನ ಸಾಮಾಜಿಕ ಜಾಲತಾಣ ಡಿಕಾರ್ಡ್ ನಲ್ಲಿ ಬರೆದುಕೊಂಡಿದ್ದಾನೆ. ಎರಡು ವರ್ಷಗಳ ಮೊದಲು ತಾನು ಒಂದು ಹುಡುಗಿಯ ಪ್ರೀತಿಯಲ್ಲಿ ಬಿದ್ದೆ ಎಂದು ಹೇಳಿದ್ದಾರೆ. ಈ ಹುಡುಗಿಯು ತನ್ನ ಮನೆಯ ಸಮೀಪದಲ್ಲೇ ಇದ್ದ 7-ಇಲೆವನ್ ನಲ್ಲಿ ಕೆಲಸ ಮಾಡುತ್ತಲಿದ್ದಳು. ಆತ ತುಂಬಾ ನಾಚಿಕೆ ಸ್ವಭಾವದವನಾಗಿದ್ದ ಕಾರಣದಿಂದಾಗಿ ಆಕೆಯ ಮುಂದೆ ಪ್ರೇಮ ನಿವೇದನೆ ಹೇಗೆ ಮಾಡಿಕೊಳ್ಳಬೇಕು ಎಂದು ಆತನಿಗೆ ತಿಳಿದಿರಲಿಲ್ಲ.

Coffee From GF’s Cafe Left Him Diabetic

ನೆಟ್ಟಿಗರು ಮೊದಲಿಗೆ ಈ ಕಥೆಯನ್ನು ತುಂಬಾ ಪ್ರೇರಣೆಯದ್ದು ಎಂದು ಭಾವಿಸಿದ್ದರು. ಆತ ಮೊದಲಿಗೆ ಈ ರೀತಿ ಬರೆದುಕೊಂಡಿದ್ದ. ನಾವು ಹುಡುಗಿಯನ್ನು ಬೆನ್ನಟ್ಟುವಾಗ, ನಮ್ಮ ಕನಸುಗಳ ಹುಡುಗಿಯನ್ನು ಪಡೆಯಲು ನಾವು ನಮ್ಮ ಪರಿಶ್ರಮವನ್ನು ಅವಲಂಬಿಸಲಾಗುತ್ತದೆ.'' ತನ್ನನ್ನು ನೋಡಬೇಕೆಂದು ಆತ ವಿಚಿತ್ರ ವಿಧಾನವನ್ನು ಅನುಸರಿಸಿದ. ಪ್ರತಿನಿತ್ಯವು ಆಕೆಯ ಶಾಪ್ ನಿಂದ ಕಾಫಿ ಖರೀದಿ ಮಾಡಲು ಆತ ನಿರ್ಧಾರ ಮಾಡಿದ. ಆದರೆ ಕೇವಲ ಕಾಫಿ ಖರೀದಿ ಮಾಡಿದರೆ ಆಗ ಅದರಿಂದ ಹೆಚ್ಚು ಆಕರ್ಷಣೆಗೆ ಒಳಗಾಗುವುದಿಲ್ಲ. ತನ್ನನ್ನು ಆಕೆ ನೆನಪಿನಲ್ಲಿ ಇಟ್ಟುಕೊಳ್ಳಬೇಕು ಎಂದು ಆತ ನಿರ್ಧಾರ ಮಾಡಿ. ತನ್ನ ಕಾಫಿಯಲ್ಲಿ ಐದು ಚಮಚ ಸಕ್ಕರೆ ಹಾಕಬೇಕು ಎಂದು ಆತ ಹೇಳಿದ.

ಹುಡುಗಿಯು ಇದನ್ನು ಕೇಳಿದ ವೇಳೆ ಆಕೆ ಅಚ್ಚರಿಯಿಂದ ಇದು ತುಂಬಾ ಸಿಹಿ ಆಗಿರುವುದಲ್ಲವೇ ಎಂದು ಕೇಳಿದಳು. ಆಗ ಆ ಯುವಕ ತಡಮಾಡದೆ ಅದು ನಿನ್ನಷ್ಟು ಸಿಹಿಯಾಗಿ ಇರಲಿಕ್ಕಿಲ್ಲ ಎಂದು ಹೇಳಿಬಿಟ್ಟ. ಈ ಮಾತನ್ನು ಕೇಳಿದ ಹುಡುಗಿ ಸಣ್ಣ ನಾಚಿಕೆಯ ಕಿರುನಗೆ ಬೀರಿ ಅಲ್ಲಿಂದ ಹೊರಟುಹೋದಳು. ಇದರ ಬಳಿಕ ಪ್ರತಿನಿತ್ಯವು ಆಕೆಯ ಕೈಯಿಂದ ಕಾಫಿ ತರಿಸಿಕೊಂಡು ಅದಕ್ಕೆ ಐದು ಚಮಚ ಸಕ್ಕರೆ ಹಾಕಿ ಕುಡಿಯುತ್ತಿದ್ದ.

ಈ ಕಥೆಯು ಸಂತೋಷದ ಅಂತ್ಯ ಕಂಡಿದೆ ಎಂದು ನಿಮಗನಿಸುತ್ತಿದ್ದರೆ ಖಂಡಿತವಾಗಿಯೂ ಇದು ತಪ್ಪು. ಇದೇ ಪೋಸ್ಟ್ ನಲ್ಲಿ ಆ ವ್ಯಕ್ತಿ ಹೀಗೆ ಬರೆದಿದ್ದಾನೆ. ನನಗೆ ಎರಡು ವರ್ಷಗಳ ಬಳಿಕ ಮಧುಮೇಹ ಬಂದಿತ್ತು. ಆ ವ್ಯಕ್ತಿಗೆ ಮಧುಮೇಹ ಬಂದಿರುವುದನ್ನು ಕಂಡು ನೆಟ್ಟಿಗರಿಗೆ ತುಂಬಾ ಆಘಾತವಾಗಿದೆ. ಈ ಪರಿಸ್ಥಿತಿಯನ್ನು ವಿವರಿಸಿದ ಬಗ್ಗೆ ಕೆಲವು ಮಂದಿ ಆತನ ಬಗ್ಗೆ ಸಿಟ್ಟು ವ್ಯಕ್ತಪಡಿಸಿದ್ದಾರೆ. ಆದರೆ ಆತನಿಗೆ ಹುಡುಗಿ ಸಿಕ್ಕಿದ್ದಾಳೆಯಾ ಇಲ್ಲವಾ ಎಂದು ಹೇಳಿಲ್ಲ. ನಿಮ್ಮ ಕನಸಿನ ಹುಡುಗಿಯನ್ನು ಪಡೆಯಲು ಯಾವ ಹಂತಕ್ಕೆ ಹೋಗಬಲ್ಲೀರಿ ಎಂದು ನಮಗೆ ಕಮೆಂಟ್ ಬಾಕ್ಸ್ ನಲ್ಲಿ ಬರೆಯಲು ಮರೆಯಬೇಡಿ.

English summary

Coffee From GF’s Cafe Left Him Diabetic

A man shared his unusual experience of how falling in love made him diabetic. The guy who had fallen in love with a coffee shop staff wanted her to notice him and hence he decided to make a special customised coffee order. He asked the woman to add 5 spoons of sugar to his coffee. He claimed that 2 years later he is suffering from diabetes.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more
X