For Quick Alerts
ALLOW NOTIFICATIONS  
For Daily Alerts

ಈ ದೇಶದಲ್ಲಿ ಶವ ಪೆಟ್ಟಿಗೆ ನೇತು ಹಾಕಲಾಗುತ್ತದೆ!

|

ವಿವಿಧ ದೇಶ, ರಾಜ್ಯ, ಊರು ಸುತ್ತಿಕೊಂಡು ಅಲ್ಲಿರುವಂತಹ ವೈವಿಧ್ಯಮಯ ಪ್ರವಾಸಿ ತಾಣಗಳನ್ನು ವೀಕ್ಷಿಸಬೇಕು ಹಾಗೂ ಅಲ್ಲಿನ ಇತಿಹಾಸವನ್ನು ತಿಳಿದುಕೊಳ್ಳಬೇಕು ಎನ್ನುವಂತಹ ಕುತೂಹಲವು ಪ್ರತಿಯೊಬ್ಬರಲ್ಲೂ ಇರುವುದು. ಕೆಲವರು ತಮ್ಮ ಜೀವನದಲ್ಲಿ ಹಲವಾರು ಪ್ರವಾಸಿ ತಾಣಗಳಿಗೆ ಹೋಗಿ ಬಂದಿರುವರು. ಇನ್ನು ಕೆಲವರು ವರ್ಷಕ್ಕೆ ಒಮ್ಮೆಯಾದರೂ ಪ್ರವಾಸ ಕೈಗೊಳ್ಳುತ್ತಾ ಇರುತ್ತಾರೆ.

Hanging Coffins

ಆದರೆ ನೀವು ನಿಜವಾಗಿಯೂ ತೂಗು ಹಾಕಿರುವಂತಹ ಶವ ಪೆಟ್ಟಿಗೆಯನ್ನು ನೋಡಿದರೆ ಹೇಗಿರಬಹುದು? ಇದು ತುಂಬಾ ವಿಚಿತ್ರವಾಗಿ ಕಾಣಿಸಬಹುದಲ್ಲವೇ? ಇಂತಹ ಸ್ಥಳಗಳು ಇದೆಯಾ ಎಂದು ನಿಮಗೆ ಅಚ್ಚರಿಯಾಗಬಹುದು. ನಿಜವಾಗಿಯೂ ತೂಗು ಹಾಕಿರುವಂತಹ ಶವದ ಪೆಟ್ಟಿಗೆಗಳು ಇರುವಂತಹ ಸ್ಥಳವೊಂದು ಇದೆ ಮತ್ತು ಇದರಲ್ಲಿ ಕೆಲವು ಶವ ಪೆಟ್ಟಿಗೆಗಳು ಶತಮಾನಗಳಿಂದಲೂ ಇಲ್ಲಿ ನೇತಾಡುತ್ತಿವೆ. ಈ ಬಗ್ಗೆ ನೀವು ಇನ್ನಷ್ಟು ತಿಳಿಯಿರಿ

ಫಿಲಿಫೈನ್ಸ್ ನಲ್ಲಿ ಈ ಪ್ರದೇಶವಿದೆ

ಫಿಲಿಫೈನ್ಸ್ ನಲ್ಲಿ ಈ ಪ್ರದೇಶವಿದೆ

ಫಿಲಿಫೈನ್ಸ್ ನಲ್ಲಿ ಸಗಾಡ ಎನ್ನುವ ವಿಚಿತ್ರ ನಗರವಿದೆ. ಈ ನಗರದಲ್ಲಿ ಸಂಪೂರ್ಣವಾಗಿ ಆಕರ್ಷಕ ಗುಹೆಗಳು, ಸುಂದರ ಬೆಟ್ಟಗಳು ಮತ್ತು ಆಕರ್ಷಣೀಯವಾಗಿರುವಂತಹ ಕಾಡುಗಳು ಇವೆ. ಇದರಲ್ಲಿ ತುಂಬಾ ಆಕರ್ಷಣೆಯ ಸ್ಥಳವೆಂದರೆ ಬೆಟ್ಟದಲ್ಲಿ ನೇತಾಡುವಂತಹ ಶವಪೆಟ್ಟಿಗೆಗಳು. ಇವುಗಳಲ್ಲಿ ಕೆಲವು ಶವಪೆಟ್ಟಿಗೆಗಳು ಶತಮಾನಕ್ಕಿಂತಲೂ ಹೆಚ್ಚು ಹಳೆಯದ್ದಾಗಿದೆ.

Most Read: ಈ ಐದು ರಾಶಿಯವರನ್ನು ಅರ್ಥ ಮಾಡಿಕೊಳ್ಳುವುದೇ ಕಷ್ಟವಂತೆ! ಯಾಕೆ ಗೊತ್ತೇ?

ಇದು ತುಂಬಾ ಪುರಾತನ ಸಂಪ್ರದಾಯ

ಇದು ತುಂಬಾ ಪುರಾತನ ಸಂಪ್ರದಾಯ

ಶವ ಪೆಟ್ಟಿಗೆಯನ್ನು ದಫನ ಮಾಡುವುದು ಅನಾದಿ ಕಾಲದಿಂದಲೂ ಮಾಡಿಕೊಂಡು ಬಂದಿರುವಂತಹ ಸಂಪ್ರದಾಯವಾಗಿದೆ. ಶವಪೆಟ್ಟಿಗೆ ನೇತಾಡಿಸುವಂತಹ ಸಂಪ್ರದಾಯ ಕೂಡ ಚೀನಾ, ಇಂಡೋನೇಶಿಯಾ ಇತ್ಯಾದಿ ರಾಷ್ಟ್ರಗಳಲ್ಲಿ ಹಿಂದಿನಿಂದಲೂ ಪಾಲಿಸಿಕೊಂಡು ಬಂದಿರುವಂತಹ ಸಂಪ್ರದಾಯವಾಗಿದೆ.

ಈ ಸಂಪ್ರದಾಯವು ಸುಮಾರು 2000 ವರ್ಷ ಹಳೆಯದ್ದು

ಈ ಸಂಪ್ರದಾಯವು ಸುಮಾರು 2000 ವರ್ಷ ಹಳೆಯದ್ದು

ಶವ ಪೆಟ್ಟಿಗೆ ನೇತಾಡಿಸುವಂತಹ ವಿಚಿತ್ರ ಸಂಪ್ರದಾಯವು ಸುಮಾರು 2000 ವರ್ಷ ಹಳೆಯದ್ದಾಗಿದೆ ಎಂದು ನಂಬಲಾಗಿದೆ. ಇಲ್ಲಿ ಕಂಡುಬರುವಂತಹ ಶವಪೆಟ್ಟಿಗೆಗಿಂತ ಹೆಚ್ಚಿನ ಶವಪೆಟ್ಟಿಗೆಗಳು ಅಲ್ಲಿವೆ ಎಂದು ಹೇಳಲಾಗುತ್ತಿದೆ. ನೇತು ಹಾಕಿರುವಂತಹ ಶವ ಪೆಟ್ಟಿಗೆಯು ಬಿದ್ದ ಬಳಿಕ ಮತ್ತೊಂದು ಶವ ಪೆಟ್ಟಿಗೆಯನ್ನು ಆ ಜಾಗದಲ್ಲಿ ಮತ್ತೆ ನೇತು ಹಾಕಲಾಗುತ್ತದೆ.

ಈ ಪ್ರದೇಶದಲ್ಲಿ ಯುವಕರು ಶವಪೆಟ್ಟಿಗೆ ನಿರ್ಮಿಸುವರು

ಈ ಪ್ರದೇಶದಲ್ಲಿ ಯುವಕರು ಶವಪೆಟ್ಟಿಗೆ ನಿರ್ಮಿಸುವರು

ತಮ್ಮ ಹಿರಿಯರಿಗಾಗಿ ಯುವಜನರು ಶವಪೆಟ್ಟಿಗೆ ನಿರ್ಮಾಣ ಮಾಡುವುದು ಇಲ್ಲಿನ ಸಂಪ್ರದಾಯವಾಗಿದೆ.

Most Read: ಋತುಚಕ್ರದ ರಕ್ತವನ್ನು ತನ್ನ ಮುಖಕ್ಕೆ ಹಾಗೂ ಮೈಗೆ ಸವರಿಕೊಂಡ ಮಹಿಳೆ!

ದೇಹವು ಅದರೊಳಗೆ ಹೊಂದಿಕೊಳ್ಳದೆ ಇದ್ದರೆ…

ದೇಹವು ಅದರೊಳಗೆ ಹೊಂದಿಕೊಳ್ಳದೆ ಇದ್ದರೆ…

ಒಂದು ವೇಳೆ ಶವಪೆಟ್ಟಿಗೆ ಒಳಗಡೆ ದೇಹವು ಹೊಂದಾಣಿಕೆ ಆಗದೇ ಇದ್ದರೆ ಆಗ ದೇಹವನ್ನು ತುಂಡು ಮಾಡಿಕೊಂಡು ಶವಪೆಟ್ಟಿಗೆಯಲ್ಲಿ ಇಡಲಾಗುತ್ತದೆ.

ಶವಪೆಟ್ಟಿಗೆ ನೇತು ಹಾಕುವ ಸಾಮಾನ್ಯ ನಂಬಿಕೆ

ಶವಪೆಟ್ಟಿಗೆ ನೇತು ಹಾಕುವ ಸಾಮಾನ್ಯ ನಂಬಿಕೆ

ಶವ ಪೆಟ್ಟಿಗೆ ನೇತು ಹಾಕುವ ಸಾಮಾನ್ಯ ನಂಬಿಕೆ ಎಂದರೆ ಅದು ಆತ್ಮವು ಸ್ವರ್ಗಕ್ಕೆ ಸಂಪರ್ಕವನ್ನು ಹೊಂದಿದೆ ಎನ್ನುವುದರ ಸಂಕೇತವಾಗಿದೆ.

ಈ ಬಗ್ಗೆ ನಿಮ್ಮ ಅಭಿಪ್ರಾಯವೇನು? ನಿಮ್ಮ ಅನಿಸಿಕೆಯನ್ನು ಕಮೆಂಟ್ ಬಾಕ್ಸ್ ಗೆ ಹಾಕಿಬಿಡಿ.

English summary

Bizarre Facts About Hanging Coffins!

Sagada is a unique town in the Philippines. The place is full of fascinating caves, majestic mountains, and breathtaking wilderness. One of the highlights of this place are the hanging coffins from the mountains. Some of these coffins are believed to be centuries old!
X
Desktop Bottom Promotion