For Quick Alerts
ALLOW NOTIFICATIONS  
For Daily Alerts

ಈತ ಕ್ಷೌರದಂಗಡಿಯಲ್ಲಿ ಕುತ್ತಿಗೆ ಮಸಾಜ್ ಮಾಡಿಸಿಕೊಂಡು ಆಸ್ಪತ್ರೆ ಸೇರಿದ! ಅಷ್ಟಕ್ಕೂ ಏನಾಯಿತು ಗೊತ್ತೇ?

|

ತುಂಬಾ ಬಳಲಿರುವಂತಹ ದೇಹಕ್ಕೆ ಸಂಪೂರ್ಣವಾಗಿ ಎಣ್ಣೆ ಹಚ್ಚಿಕೊಂಡು ಮಸಾಜ್ ಮಾಡಿಸಿಕೊಂಡರೆ ಆಗ ಸಿಗುವಂತಹ ಸುಖವೇ ಬೇರೆ. ಅದೇ ರೀತಿ ನಾವು ಸೆಲೂನ್ ಗೆ ಹೋದರೆ ಅಲ್ಲಿ ಕ್ಷೌರ ಮಾಡಿಸಿಕೊಂಡ ಬಳಿಕ ಕೆಲವು ಮಂದಿ ನಮ್ಮ ಬೆನ್ನು ಹಾಗೂ ಕುತ್ತಿಗೆಗೆ ಮಸಾಜ್ ಮಾಡುವರು. ಇದು ತುಂಬಾ ಆರಾಮದಾಯಕ ಎಂದು ಅನಿಸುವುದು. ಆದರೆ ಇಂತಹ ಮಸಾಜ್ ಮಾಡುವವರು ತುಂಬಾ ಅನುಭವಿಗಳು ಆಗಿರಬೇಕು.

Neck Massage

ಇಲ್ಲವಾದಲ್ಲಿ ದೊಡ್ಡ ಸಮಸ್ಯೆಯು ಬರಬಹುದು. ಯಾಕೆಂದರೆ ಸರಿಯಾಗಿ ಮಸಾಜ್ ಮಾಡದೆ ಇದ್ದರೆ ನರಗಳ ಮೇಲೆ ಪರಿಣಾವಾಗಿ ಬೇರೆ ಸಮಸ್ಯೆಯು ಕಾಣಿಸಿಕೊಳ್ಳಬಹುದು. ಇದಕ್ಕಾಗಿ ನೀವು ಕ್ಷೌರದ ಅಂಗಡಿಯಲ್ಲಿ ಮಸಾಜ್ ಮಾಡಿಸಿಕೊಳ್ಳುವ ವೇಳೆ ತುಂಬಾ ಎಚ್ಚರಿಕೆ ವಹಿಸಿ. ಇಲ್ಲೊಬ್ಬ ವ್ಯಕ್ತಿಯು ಕ್ಷೌರದಂಗಡಿಯಲ್ಲಿ ಕುತ್ತಿಗೆ ಮಸಾಜ್ ಮಾಡಿಸಿಕೊಳ್ಳಲು ಹೋಗಿ ಆಸ್ಪತ್ರೆಗೆ ದಾಖಲಾಗಿರುವ ಘಟನೆಯು ನಡೆದಿದೆ. ಈ ಬಗ್ಗೆ ನೀವು ವಿವರವಾಗಿ ಮತ್ತಷ್ಟು ಮಾಹಿತಿ ತಿಳಿಯಿರಿ.

ಆ ವ್ಯಕ್ತಿ ಕ್ಷೌರದಂಗಡಿಗೆ ತೆರಳಿದ

ಆ ವ್ಯಕ್ತಿ ಕ್ಷೌರದಂಗಡಿಗೆ ತೆರಳಿದ

ನಮ್ಮದೇ ದೇಶದ ಈ ವ್ಯಕ್ತಿ ಯಾವಾಗಲೂ ಕ್ಷೌರದಂಗಡಿಗೆ ಹೋಗಿ ಅಲ್ಲಿ ಕೂದಲು ಕತ್ತರಿಸಿಕೊಂಡ ಬಳಿಕ ಸ್ವಲ್ಪ ಮಸಾಜ್ ಮಾಡಿಸುವುದು ಹವ್ಯಾಸ ಮಾಡಿಕೊಂಡಿದ್ದ. ಕ್ಷೌರದಂಗಡಿಯಿಂದ ಹೊರಬಂದ ಕೆಲವೇ ನಿಮಿಷಗಳಲ್ಲಿ ಆತನಿಗೆ ಉಸಿರಾಟದ ಸಮಸ್ಯೆಯು ಕಾಣಿಸಿಕೊಂಡಿತು.

ವೈದ್ಯರು ಆತನ ಪರೀಕ್ಷೆ ಮಾಡಿದರು

ವೈದ್ಯರು ಆತನ ಪರೀಕ್ಷೆ ಮಾಡಿದರು

ವೈದ್ಯರು ಆ ವ್ಯಕ್ತಿಯ ಎಂಆರ್ ಐ ಸ್ಕ್ಯಾನ್ ಮಾಡಿದರು. ಈ ವೇಳೆ ಅವರಿಗೆ ಕುತ್ತಿಗೆಯಲ್ಲಿ ಗಂಭೀರವಾದ ಗಾಯಗಳು ಕಾಣಿಸಿಕೊಂಡವು. ಕುತ್ತಿಗೆಗೆ ಮಸಾಜ್ ಮಾಡಿಕೊಂಡ ವೇಳೆ ಕಾಣಿಸಿಕೊಂಡ ಗಾಯಗಳು ಇದಾಗಿದ್ದವು.

Most Read: ನಿಮಗೆ ಗೊತ್ತಾ? ಈ ಮಹಿಳೆ ಕಣ್ಣುಗಳನ್ನು ಕೂಡ ಸ್ವಚ್ಛಗೊಳಿಸುತ್ತಾಳಂತೆ!

ಆತನ ನರಗಳಿಗೆ ಹಾನಿಯಾಗಿತ್ತು

ಆತನ ನರಗಳಿಗೆ ಹಾನಿಯಾಗಿತ್ತು

ವೈದ್ಯರು ಹೇಳುವ ಪ್ರಕಾರ ಫರೆನಿಕ್ ನರಕ್ಕೆ ಹಾನಿ ಉಂಟಾಗಿತ್ತು. ಈ ನರವು ಧ್ವನಿಫಲಕವನ್ನು ನಿಯಂತ್ರಿಸುವುದು. ಇದು ಉಸಿರಾಟದ ಪ್ರಮುಖ ಸ್ನಾಯುವಾಗಿದೆ.

ಆತ ಈಗ ಆಸ್ಪತ್ರೆಯಲ್ಲಿದ್ದಾನೆ

ಆತ ಈಗ ಆಸ್ಪತ್ರೆಯಲ್ಲಿದ್ದಾನೆ

ಈ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಮತ್ತು ಆತನಿಗೆ ಕೃತಕ ಉಸಿರಾಟದ ವ್ಯವಸ್ಥೆ ಮಾಡಲಾಗಿದೆ. ಆ ವ್ಯಕ್ತಿಯ ಡಯಾಫರ್ಮ್ ಸಂಪೂರ್ಣವಾಗಿ ಹಾನಿಯಾಗಿದೆ ಮತ್ತು ಇದರಿಂದ ಆತನಿಗೆ ಜೀವಮಾನವಿಡಿ ಸಮಸ್ಯೆನ್ನು ಎದುರಿಸಬೇಕಾಗುತ್ತದೆ. ಯಾಕೆಂದರೆ ಇಂತಹ ನರಗಳು ಪುನರ್ ಜೀವನ ಪಡೆಯುವುದು ತುಂಬಾ ಅಪರೂಪವಾಗಿದೆ.

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ಏನು? ನಿಮ್ಮ ಅಭಿಪ್ರಾಯ ಕಮೆಂಟ್ ಬಾಕ್ಸ್ ಗೆ ಹಾಕಿ.

English summary

A Neck Massage Landed Him In Hospital

A man from India had serious injuries to his neck. He had damaged the phrenic nerve which is a nerve that controls the diaphragm, an essential muscle involved in breathing. Doctors reveal that he has been put on non-invasive ventilation to support his breathing and may continue to be on it life-long.
X
Desktop Bottom Promotion