For Quick Alerts
ALLOW NOTIFICATIONS  
For Daily Alerts

ಅಂಗೈ ನೋಡಿ ಹೇಳುವ ಶಾಸ್ತ್ರ-ನೀವು ಸಹ ತಿಳಿದುಕೊಳ್ಳಿ

|

ಹಸ್ತ ಸಾಮುದ್ರಿಕ ಎಂಬುದು ಕೈಯಲ್ಲಿನ ಗೆರೆಗಳನ್ನು ನೋಡಿ, ವ್ಯಕ್ತಿಯ ಭೂತ, ಭವಿಷ್ಯ ಮತ್ತು ವರ್ತಮಾನಗಳನ್ನು ತಿಳಿಸುವ ಒಂದು ಶಾಸ್ತ್ರವಾಗಿದೆ. ಜೀವನದ ಆಗು ಹೋಗುಗಳು, ಪ್ರೀತಿ-ಪ್ರೇಮ, ಭಾವನೆಗಳು ಇತ್ಯಾದಿಗಳು ಸಹ ಈ ಶಾಸ್ತ್ರದಿಂದ ನಾವು ತಿಳಿದುಕೊಳ್ಳಬಹುದು. ಹಸ್ತ ಸಾಮುದ್ರಿಕವನ್ನು ಪುರಾತನ ಕಾಲದಲ್ಲಿ ಕೈರೊಮ್ಯಾನ್ಸಿ ಎಂದು ಕರೆಯುತ್ತಿದ್ದರು. ಇದನ್ನು ಹಲವಾರು ಸಂಸ್ಕೃತಿಗಳು ಪಾಲಿಸುತ್ತಿದ್ದರು. ಈ ಹಸ್ತ ಸಾಮುದ್ರಿಕದ ಹಲವು ಬಗೆಗಳು ವಿಶ್ವದ ಹಲವು ಭಾಗಗಳಲ್ಲಿ ಚಾಲ್ತಿಯಲ್ಲಿದೆ. ಎಲ್ಲಾ ವಿಧಾನಗಳು, ಕೈಯಲ್ಲಿರುವ ಗೆರೆಗಳನ್ನೇ ಪರೀಕ್ಷಿಸಿ ಅದನ್ನು ವಿಶ್ಲೇಷಿಸುವ ಗುಣವನ್ನು ಹೊಂದಿರುತ್ತವೆ. ಬಲಗೈಯನ್ನು ನೋಡಿ ಹೇಳಬೇಕೋ, ಎಡಗೈಯನ್ನು ನೋಡಿ ಹೇಳಬೇಕೋ ಎಂಬುದು ಅವರು ಬಳಸುವ ವಿಧಾನವನ್ನು ಅವಲಂಬಿಸಿ ನಿರ್ಧಾರವಾಗುತ್ತದೆ. ಬನ್ನಿ ಈ ಹಸ್ತ ಸಾಮುದ್ರಿಕದ ಕುರಿತಾಗಿ ಕೆಲವು ವಿವರಗಳನ್ನು ತಿಳಿದುಕೊಳ್ಳೋಣ.

ಹೃದಯದ ಗೆರೆ

ಹೃದಯದ ಗೆರೆ

ಈ ಗೆರೆಯು ವ್ಯಕ್ತಿಯ ಭಾವನಾತ್ಮಕ ಜೀವನ, ಪ್ರೇಮ ಸಂಬಂಧಗಳ ಕುರಿತು ತಿಳಿಸಿಕೊಡುತ್ತದೆ. ಇದು ಕಿರುಬೆರಳಿನ ಕೆಳಗೆ ಇರುವ ಹಸ್ತದ ತುದಿಯಿಂದ ಆರಂಭವಾಗಿ, ಹಾಗೆಯೇ ಸಾಗಿ ತೋರು ಬೆರಳಿನ ಕಡೆ ಮೇಲ್ಮುಖವಾಗಿ ಸಾಗುತ್ತದೆ. ಒಮ್ಮೊಮ್ಮೆ ಇದು ಮಧ್ಯ ಬೆರಳಿನಲ್ಲಿ ಅಂತ್ಯವಾಗಬಹುದು ಇಲ್ಲವೇ ತೋರುಬೆರಳಿನ ಬಳಿ ಅಂತ್ಯವಾಗಬಹುದು. ಈ ಹೃದಯದ ಗೆರೆಯನ್ನು ಸಣ್ಣ ಸಣ್ಣ ವೃತ್ತಗಳು ಅಥವಾ ಕ್ರಾಸ್‌ಗಳ ಮೂಲಕ (ಇದನ್ನು "ಗ್ರಿಡಲ್‌ಡ್" ಅಥವಾ "ಚೈನ್‌ಡ್" ಎಂದು ಕರೆಯುತ್ತಾರೆ) ಗುರುತಿಸಲಾಗುತ್ತದೆ. ಇದು ವ್ಯಕ್ತಿಯ ಆತಂಕವನ್ನು ಸೂಚಿಸುತ್ತದೆ. ಈ ಗೆರೆಯು ವ್ಯಕ್ತಿಯು ಸೂಕ್ಷ್ಮ ಮತ್ತು ಕೋಪಿಷ್ಟ ಹಾಗೂ ಅತ್ಯಂತ ಸೃಜನಶೀಲ ಎಂದು ಸೂಚಿಸುತ್ತದೆ. ಇವರ ಭಾವನೆಗಳು ಇವರಲ್ಲಿ ಈ ಗುಣಗಳನ್ನು ವ್ಯಕ್ತಪಡಿಸಲು ಕಾರಣ ಎಂಬುದನ್ನು ಇದು ಸೂಚಿಸುತ್ತದೆ.

ತಲೆಯ ಗೆರೆ

ತಲೆಯ ಗೆರೆ

ಈ ಗೆರೆಯು ವ್ಯಕ್ತಿಯ ಬೌದ್ಧಿಕ ಜೀವನದ ಕುರಿತಾಗಿ ತಿಳಿಸಿಕೊಡುತ್ತದೆ. ಅಂದರೆ ಈ ವ್ಯಕ್ತಿಯ ಓದು ಮತ್ತು ಸಂವಹನ ಕುರಿತಾಗಿ ತಿಳಿಸಿಕೊಡುತ್ತದೆ. ಇದು ಸಹ ಹಸ್ತದ ತುದಿಯಿಂದ ಆರಂಭವಾಗಿ ಹೆಬ್ಬೆರಳು ಅಥವಾ ತೋರು ಬೆರಳಿನ ಬಳಿ ಅಂತ್ಯವಾಗುತ್ತದೆ. ತಲೆಯ ಗೆರೆಯು ಹೃದಯದ ಗೆರೆಯ ಕೆಳಗೆ ಕಾಣಿಸಿಕೊಳ್ಳುತ್ತದೆ ಹಾಗೂ ಸಮಾನಾಂತರವಾಗಿ ಇದು ಹಸ್ತದ ಇನ್ನೊಂದು ತುದಿಯಿಂದ ಹೊರಗೆ ಚಾಚುತ್ತದೆ. ಯಾವಾಗ ತಲೆಯ ಗೆರೆಯು ಉದ್ದವಾಗಿ ಮತ್ತು ಆಳವಾಗಿರುತ್ತದೆಯೋ, ಆಗ ಅದು ಆ ವ್ಯಕ್ತಿಯ ಗಮನ ಮತ್ತು ಬುದ್ಧಿ ತೀಕ್ಷ್ಣವಾಗಿದೆ ಎಂದು ಸೂಚಿಸುತ್ತದೆ. ಸಣ್ಣದಾದ ಗೆರೆಯು ವ್ಯಕ್ತಿಯು ಮಾತಿಗಿಂತ ಕೃತಿ ಮೇಲು ಎಂದು ಕೆಲಸ ಮಾಡಿ ತೋರಿಸುವ ಜಾಯಮಾನದವನು ಎಂದು ತೋರಿಸುತ್ತದೆ. ಒಂದು ವೇಳೆ ಗೆರೆಯು ನೇರವಾಗಿ ಇದ್ದಲ್ಲಿ, ಅದು ವ್ಯಕ್ತಿಯು ವಾಸ್ತವ ಜ್ಞಾನವನ್ನು ಹೊಂದಿದ್ದಾನೆ ಎಂದು ತೋರಿಸುತ್ತದೆ. ಹಾಗೆಯೇ ವಕ್ರವಾಗಿ ಅಥವಾ ಇಳಿಮುಖವಾಗಿರುವ ಗೆರೆಯು ವ್ಯಕ್ತಿಯು ಸೃಜನಶೀಲ ಚಿಂತಕ ಎಂದು ತೋರಿಸುತ್ತದೆ. ಕೊನೆಗೆ, ತುಂಡಾದ ತಲೆ ಗೆರೆಯು ವ್ಯಕ್ತಿಯು ಪದೇ ಪದೇ ಮನಸು ಬದಲಾಯಿಸುತ್ತಾರೆ ಮತ್ತು ಸುಲಭವಾಗಿ ಇವರ ಮನಸು ಚಂಚಲಗೊಳ್ಳುತ್ತದೆ ಎಂದು ಸೂಚಿಸುತ್ತದೆ.

Most Read: ಗುರುತು ಮರೆಮಾಚಿ ಕ್ಷೌರದಂಗಡಿ ನಡೆಸುತ್ತಿರುವ ಸಹೋದರಿಯರು!

ಜೀವನದ ಗೆರೆ

ಜೀವನದ ಗೆರೆ

ಜೀವನದ ಗೆರೆಯು ವ್ಯಕ್ತಿಯ ದೈಹಿಕ ಆರೋಗ್ಯ ಮತ್ತು ಉಲ್ಲಾಸದ ಕುರಿತಾಗಿ ತಿಳಿಸಿಕೊಡುತ್ತದೆ. ಇದು ಜೀವನದಲ್ಲಿ ಕಾಣಿಸಿಕೊಳ್ಳುವ ಕಾಯಿಲೆಗಳು, ಗಾಯಗಳು, ಹೊಸ ಸ್ಥಳಕ್ಕೆ ವರ್ಗವಾಗುವುದು ಅಥವಾ ಅಪಘಾತಗಳ ಅನುಭವ ಇತ್ಯಾದಿಗಳ ಕುರಿತಾಗಿ ತಿಳಿಸಿಕೊಡುತ್ತವೆ. ಈ ಗೆರೆಯು ಬಹುತೇಕ ಸಂದರ್ಭದಲ್ಲಿ ತಲೆ ಗೆರೆಯ ಜೊತೆಗೆ ಸೇರಿಕೊಳ್ಳುತ್ತದೆ. ಜೀವನದ ಗೆರೆಯು ಹಸ್ತದ ಒಳಗೆ ಕೆಳ ತುದಿಯಿಂದ ಆರಂಭವಾಗಿ ಹೆಬ್ಬೆರಳು ಮತ್ತು ತೋರುಬೆರಳಿನ ಕಡೆಗೆ ಮೇಲ್ಮುಖವಾಗಿ ಸಾಗಿರುತ್ತದೆ. ಒಮ್ಮೊಮ್ಮೆ ಇದ್ ವಕ್ರವಾಗಿ ಹೆಬ್ಬೆರಳಿನ ಕಡೆಗೆ ಹೋಗಬಹುದು ಇಲ್ಲವೇ ನೇರವಾಗಿ ತೋರು ಬೆರಳಿನ ಕಡೆಗೆ ಸಾಗಿ ತಲೆಗೆರೆಯನ್ನು ಸೇರಬಹುದು. ಉದ್ದವಾದ ಮತ್ತು ಆಳವಾದ ಜೀವನದ ಗೆರೆಯು ಉತ್ತಮ ಆರೋಗ್ಯವನ್ನು ಸೂಚಿಸುತ್ತದೆ. ಸಣ್ಣದಾದ ಮತ್ತು ತುಂಡಾದ ಜೀವನದ ಗೆರೆಯು ವ್ಯಕ್ತಿಯು ಇನ್ನಿತರ ಪ್ರಭಾವಿ ವ್ಯಕ್ತಿಗಳ ಅಡಿಯಾಳಾಗುತ್ತಾರೆ ಎಂದು ಸೂಚಿಸುತ್ತದೆ. ನೇರವಾಗಿ ಹೆಬ್ಬೆರಳಿನವರೆಗೆ ಸಾಗುವ ಜೀವನದ ಗೆರೆಯು ವ್ಯಕ್ತಿಯು ಕಡಿಮೆ ಶಕ್ತಿ ಅಥವಾ ಆರೋಗ್ಯಹೀನತೆಯಿಂದ ಬಳಲುತ್ತಾನೆ ಎಂದು ಸೂಚಿಸುತ್ತದೆ. ಜೊತೆಗೆ ಇವರು ಇತರರ ಜೊತೆಗೆ ಹೆಚ್ಚಿಗೆ ಬೆರೆಯುವುದಿಲ್ಲ. ಜೀವನದ ಗೆರೆಯು ತುಂಡಾಗಿದ್ದಲ್ಲಿ, ಅದು ವ್ಯಕ್ತಿಯ ಜೀವನದಲ್ಲಿ ಇದ್ದಕ್ಕಿದ್ದಂತೆ ಪ್ರಮುಖವಾದ ಬದಲಾವಣೆ ಕಾಣಿಸಿಕೊಳ್ಳುತ್ತದೆ ಎಂದು ಸೂಚಿಸುತ್ತದೆ.

ಹಸ್ತ ಸಾಮುದ್ರಿಕದ ಅಂಶಗಳು

ಹಸ್ತ ಸಾಮುದ್ರಿಕದ ಅಂಶಗಳು

ಹಸ್ತ ಸಾಮುದ್ರಿಕದಿಂದ ವ್ಯಕ್ತಿಯ ಭವಿಷ್ಯವನ್ನು ಹೇಳುವವರು ಹಸ್ತದ ಮೇಲಿನ ಗೆರೆಗಳ ಜೊತೆಗೆ ಬೆರಳುಗಳ ಆಕಾರ ಮತ್ತು ಹಸ್ತದ ಆಕಾರವನ್ನು ನೋಡಿ ಇನ್ನಿತರ ಮಾಹಿತಿಯನ್ನು ಸಂಗ್ರಹಿಸುತ್ತಾರೆ. ಈ ಆಕಾರಗಳು ಪ್ರಮುಖವಾಗಿ ನಾಲ್ಕು ವರ್ಗಗಳಾಗಿ ವಿಂಗಡಿಸಲ್ಪಟ್ಟಿವೆ. ಈ ನಾಲ್ಕು ವಿಭಾಗಗಳನ್ನು ಜ್ಯೋತಿಷ್ಯದ ನಾಲ್ಕು ಅಂಶಗಳಾಗಿ (ತತ್ವಗಳು) ಪರಿಗಣಿಸಲ್ಪಡುತ್ತವೆ. ಅವು ಯಾವುವೆಂದರೆ: ಅಗ್ನಿ, ಪೃಥ್ವಿ, ವಾಯು ಮತ್ತು ಜಲ

ಅಗ್ನಿ ಹಸ್ತಗಳು

ಅಗ್ನಿ ಹಸ್ತಗಳು

ಈ ಹಸ್ತಗಳು ಚೌಕಾಕಾರದಲ್ಲಿರುತ್ತವೆ ಹಾಗೂ ಬೆರಳುಗಳಿಂದ ಮಣಿಕಟ್ಟಿನವರೆಗೆ ಉದ್ದವಾಗಿರುತ್ತವೆ. ಬೆರಳುಗಳ ಉದ್ದಕ್ಕಿಂತ ಈ ಭಾಗವು ಉದ್ದವಾಗಿರುತ್ತದೆ. ಇಂತಹ ಹಸ್ತಗಳನ್ನು ಅಗ್ನಿ ಹಸ್ತಗಳು ಎಂದು ಕರೆಯುತ್ತಾರೆ. ಅಗ್ನಿ ಹಸ್ತ ಇರುವವರು ಕೋಪಿಷ್ಠರು ಮತ್ತು ಅಧಿಕ ಶಕ್ತಿಯನ್ನು ಹೊಂದಿರುತ್ತಾರೆ ಹಾಗೂ ತಕ್ಷಣ ಕಾರ್ಯಪ್ರವೃತ್ತರಾಗುವ ಗುಣ ಹೊಂದಿರುತ್ತಾರೆ. ಇವರು ಇತರ ಮಾತುಗಳನ್ನು ಕೇಳುವುದಿಲ್ಲ. ಅಂದರೆ ವಿಚಾರ ಶೂನ್ಯರಾಗಿರುತ್ತಾರೆ.

Most Read: ಕೈಯಲ್ಲಿ ಹೆಚ್ಚು ಹಣ ಉಳಿತಾಯಕ್ಕೆ 7 ಸ್ಮಾರ್ಟ್ ಟಿಪ್ಸ್

ಪೃಥ್ವಿ ಹಸ್ತಗಳು

ಪೃಥ್ವಿ ಹಸ್ತಗಳು

ಯಾವಾಗ ಬೆರಳುಗಳು ಹಸ್ತದ ಚೌಕಾಕಾರದ ಉದ್ದದಷ್ಟೇ ಇರುತ್ತವೆಯೋ ಮತ್ತು ಅಗಲವಾದ ಹಸ್ತವನ್ನು ಹೊಂದಿರುತ್ತವೆಯೋ, ಅಂತಹ ಹಸ್ತಗಳನ್ನು ಪೃಥ್ವಿ ಹಸ್ತಗಳು ಎಂದು ಕರೆಯುತ್ತಾರೆ. ಈ ವ್ಯಕ್ತಿಗಳು ವಾಸ್ತವವಾದಿಗಳಾಗಿರುತ್ತಾರೆ ಮತ್ತು ಶ್ರಮಜೀವಿಗಳಾಗಿರುತ್ತಾರೆ. ಜೊತೆಗೆ ಇವರು ಹಠಮಾರಿಗಳು ಮತ್ತು ತಾವು ಅಂದುಕೊಂಡಿದ್ದಕ್ಕೆ ಬಲವಾಗಿ ಅಂಟಿಕೊಳ್ಳುತ್ತಾರೆ.

ವಾಯು ಹಸ್ತಗಳು

ವಾಯು ಹಸ್ತಗಳು

ಬೆರಳುಗಳು ಹಸ್ತದ ಚೌಕಾಕಾರಕ್ಕಿಂತ ಉದ್ದವಾಗಿದ್ದಲ್ಲಿ ಅಥವಾ ಆಯತಾಕಾರದಲ್ಲಿರುವ ಹಸ್ತಗಳು ಇದ್ದಲ್ಲಿ, ಅದನ್ನು ವಾಯು ಹಸ್ತಗಳು ಎಂದು ಕರೆಯಲಾಗುತ್ತದೆ. ಇವರು ನಿಜಕ್ಕೂ ಚುರುಕು ಬುದ್ಧಿಯವರು, ವಾಚಾಳಿಗಳು ಮತ್ತು ಸಂಘಜೀವಿಗಳಾಗಿರುತ್ತಾರೆ.

Most Read: ಎರಡು ತಲೆಗಳು, ನಾಲ್ಕು ಕಣ್ಣುಗಳು ಮತ್ತು ಮೂರು ಕಿವಿಗಳ ಆಡಿನ ಮರಿ ಜನನ!

ಜಲ ಹಸ್ತಗಳು

ಜಲ ಹಸ್ತಗಳು

ತಮ್ಮ ಹಸ್ತದ ಚೌಕಾಕಾರಕ್ಕಿಂತ ಉದ್ದವಾದ ಬೆರಳುಗಳನ್ನು ಹೊಂದಿರುವ ಮತ್ತು ಅಂಡಾಕಾರದ ಹಸ್ತಗಳನ್ನು ಹೊಂದಿರುವವರನ್ನು ಜಲ ಹಸ್ತದವರು ಎಂದು ಕರೆಯಲಾಗುತ್ತದೆ. ಈ ವ್ಯಕ್ತಿಗಳು ಭಾವನಾಜೀವಿಗಳಾಗಿರುತ್ತಾರೆ ಮತ್ತು ಇತರರ ಭಾವನೆಗೆ ಸ್ಪಂದಿಸುತ್ತಾರೆ. ಇವರು ಆಗಾಗ ಬದಲಾಗುವ ಮೂಡ್‌ ಅನ್ನು ಹೊಂದಿರುತ್ತಾರೆ.

English summary

A Guide to Palm Reading

Palmistry is the art and science of reading palms — interpreting the lines on a person’s palm to gain insight into their life, love and emotions, as well as their past, future and potential. Since the tradition of palm reading, also known as chiromancy, dates back through many millennia to several different cultural traditions, there are many variations in palmistry methods. All methods, however, involve the same fundamental practice of examining the lines that crisscross the palm of the hand and interpreting their meanings. Whether considering a subject’s left or right palm, several primary lines are used in palm reading.. have a look details
Story first published: Wednesday, January 23, 2019, 17:43 [IST]
X
Desktop Bottom Promotion