Latest Updates
-
ರಣವೀರ್-ದೀಪಿಕಾ ದಂಪತಿಗೆ ಹೆಣ್ಣು ಮಗು: ಹೊಸ ಪೋಷಕರಿಗೆ ಸಂಬಂಧಿಕರು ನೀಡಬೇಕಾದ ಗೌರವಯುತ ಬೆಂಬಲವೇನು? -
ಬೆಂಗಳೂರಿನಲ್ಲಿ ಇಂದು 6 ಗಂಟೆಗಳ ಕಾಲ ನೀರಿನ ವ್ಯತ್ಯಯ: ಈ ಪ್ರದೇಶಗಳ ನಿವಾಸಿಗಳು ಎಚ್ಚರ! -
ಗಣೇಶ ಹಬ್ಬದ ಸಂಭ್ರಮ: ಮಧುಮೇಹಿಗಳಿಗೂ ಸುರಕ್ಷಿತವಾದ ಆರೋಗ್ಯಕರ 'ಉಕಡಿಚೆ ಮೋದಕ' ತಯಾರಿಸುವುದು ಹೇಗೆ? -
ಸೆಪ್ಟೆಂಬರ್ ಇಕ್ವಿನಾಕ್ಸ್: ನಿಮ್ಮ ಕ್ಯಾಮೆರಾದಲ್ಲಿ ಸೂರ್ಯೋದಯ-ಸೂರ್ಯಾಸ್ತದ ಅದ್ಭುತ ದೃಶ್ಯ ಸೆರೆಹಿಡಿಯಿರಿ! -
ವಿಶ್ವ ಕಾರ್-ಫ್ರೀ ಡೇ: ಟ್ರಾಫಿಕ್ ಬಿಟ್ಟು 20 ನಿಮಿಷದ ಈ ಸಿಂಪಲ್ ರೂಟೀನ್ ಫಾಲೋ ಮಾಡಿ! -
ಸೈಫ್-ಕರೀನಾ ಪ್ರೇಮಪತ್ರದ ರಹಸ್ಯ: ನಿಮ್ಮ ಸಂಬಂಧವನ್ನೂ ಗಟ್ಟಿಗೊಳಿಸಲು ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿ! -
ಈರುಳ್ಳಿ ಬೆಲೆ ಏರಿಕೆ: ಬಜೆಟ್ ಉಳಿಸಲು ಮತ್ತು ಈರುಳ್ಳಿ ದೀರ್ಘಕಾಲ ಸಂಗ್ರಹಿಸಲು ಸರಳ ಟಿಪ್ಸ್ -
ಏಕಾದಶಿ ಉಪವಾಸ: ಆರೋಗ್ಯಕರವಾಗಿರಲು ₹300ರಲ್ಲಿ ಪೌಷ್ಟಿಕ ಆಹಾರದ ಪ್ಲಾನ್ ಇಲ್ಲಿದೆ! -
ಸ್ಯಾಮ್ಸಂಗ್ One UI 9 ಅಪ್ಡೇಟ್: ನಿಮ್ಮ ಫೋನ್ಗೆ ಬಂದಿದೆಯೇ? ಸುರಕ್ಷಿತವಾಗಿ ಇನ್ಸ್ಟಾಲ್ ಮಾಡುವುದು ಹೇಗೆ? -
ಮಳೆಗಾಲದಲ್ಲಿ ಫಿಟ್ ಆಗಿರಲು 12 ನಿಮಿಷಗಳ ಇಂಡೋರ್ ವರ್ಕೌಟ್: ಜಿಮ್ ಇಲ್ಲದೆ ಮನೆಯಲ್ಲೇ ಮಾಡಿ!
ಎಂಟು ವರ್ಷದ ಬಾಲಕಿಯ ಹೊಟ್ಟೆಯಲ್ಲಿತ್ತು 'ಕೂದಲಿನ ದೊಡ್ಡ ಉಂಡೆ'! ವೈದ್ಯರೇ ನೋಡಿ ಶಾಕ್ ಆದರು!!
ಕೆಲವೊಂದು ಸಲ ನಮ್ಮ ಕೆಟ್ಟ ಅಭ್ಯಾಸಗಳು ನಮ್ಮ ಆರೋಗ್ಯದ ಮೇಲೆ ಯಾವ ರೀತಿಯಲ್ಲಿ ಕೆಟ್ಟ ಪರಿಣಾಮ ಬೀರುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಅದರಲ್ಲೂ ಸಣ್ಣ ಮಕ್ಕಳಲ್ಲಿ ಕೆಲವೊಂದು ಅಭ್ಯಾಸಗಳು ಇರುವುದು. ಅದರಲ್ಲಿ ಮುಖ್ಯವಾಗಿ ಉಗುರು ಕಚ್ಚುವುದು, ಕೂದಲನ್ನು ಎಳೆದು ಬಾಯಿಗೆ ಹಾಕಿಕೊಳ್ಳುವುದು, ಇನ್ನು ಕೆಲವು ಸಣ್ಣ ಮಕ್ಕಳು ಸಿಕ್ಕಿದೆಲ್ಲವನ್ನು ತಿನ್ನುವ ಅಭ್ಯಾಸ ಬೆಳೆಸಿಕೊಂಡಿರುತ್ತವೆ.
ಇದು ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವುದು. ಇದರಿಂದ ಮಕ್ಕಳಿಗೆ ಆರಂಭದಲ್ಲೇ ಇಂತಹ ಅಭ್ಯಾಸದಿಂದ ದೂರವಿರಬೇಕು ಎಂದು ಗದರಿಸಬೇಕು. ಇಲ್ಲವಾದಲ್ಲಿ ಅದು ದೊಡ್ಡ ಮಟ್ಟದ ಸಮಸ್ಯೆಗೂ ಕಾರಣವಾಗಬಹುದು. ನಾವು ಇಂದು ಈ ಲೇಖನದಲ್ಲಿ ನಿಮಗೆ ತಿಳಿಸಲು ಹೊರಟಿರುವುದು ಇಂತಹ ಒಂದು ವಿಷಯದ ಬಗ್ಗೆ. ಇಲ್ಲೊಬ್ಬಳು ಸಣ್ಣ ಬಾಲಕಿಯು ತನ್ನ ಕೂದಲನ್ನು ಯಾವಾಗಲೂ ಬಾಯಿಗೆ ಹಾಕಿಕೊಂಡು ಕಚ್ಚಿಕೊಳ್ಳುತ್ತಿದ್ದಳು. ಈ ಕೂದಲು ಬಾಯಿ ಮೂಲಕ ಹೊಟ್ಟೆಗೆ ಸೇರಿ ಅಲ್ಲಿ ಒಂದು ರಾಶಿಯಾಗಿದೆ. ಇದನ್ನು ನೋಡಿದ ವೈದ್ಯರು ಕೂಡ ಅಚ್ಚರಿಗೀಡಾಗಿದ್ದಾರೆ. ಈ ವಿಚಿತ್ರ ಘಟನೆ ಬಗ್ಗೆ ನೀವು ಮುಂದೆ ಓದುತ್ತಾ ಸಾಗಿ.

2ರ ಹರೆಯದಿಂದಲೇ ಆಕೆ ತನ್ನ ಕೂದಲು ತಿನ್ನಲು ಆರಂಭಿಸಿದ್ದಳು!
ದಕ್ಷಿಣ ಚೀನಾದ ಗುವಾಂಗ್ಡಾಂಗ್ ಎನ್ನುವ ಪ್ರದೇಶದ ನಿವಾಸಿಯಾಗಿರುವ 8ರ ಹರೆಯದ ಬಾಲಕಿ ಫೀಫೀ ಎಂಬ ಬಾಲಕಿಯ ಹೊಟ್ಟೆಯಲ್ಲಿ ಕೂದಲಿನ ಉಂಡೆಯ ಇತ್ತು. ವರದಿಗಳು ಹೇಳುವ ಪ್ರಕಾರ ಈ ಬಾಲಕಿಯು ತನ್ನ 2ರ ಹರೆಯದಿಂದಲೇ ಕೂದಲನ್ನು ಎಳೆದುಕೊಂಡು, ಅದನ್ನು ಬಾಯಿಗೆ ಹಾಕಿ ತಿನ್ನಲು ಆರಂಭಿಸಿದ್ದಳು.

ಕೂದಲು ತಿನ್ನದಂತೆ ಆಕೆಯ ತಾಯಿಯು ಆಕೆಗೆ ಸೂಚಿಸಿದ್ದರು
ವರ್ಷದ ಆರಂಭದಲ್ಲಿ ತನ್ನ ಮಗಳ ಕೂದಲು ತಿನ್ನುವ ಅಭ್ಯಾಸವನ್ನು ನಿಲ್ಲಿಸಿರುವುದಾಗಿ ತಾಯಿ ಹೇಳಿಕೊಂಡಿದ್ದಾಳೆ ಎಂದು ವರದಿಗಳು ಹೇಳಿವೆ. ಒಂದು ತಿಂಗಳ ಬಳಿಕ ತನ್ನ ಮಗಳು ಪದೇ ಪದೇ ಅನಾರೋಗ್ಯಕ್ಕೆ ತುತ್ತಾಗುತ್ತಿರುವುದನ್ನು ಆಕೆ ಗಮನಿಸಿದ್ದಾಳೆ. ತೀವ್ರ ಹೊಟ್ಟೆ ನೋವು ಹಾಗೂ ವಾಂತಿಯಿಂದಾಗಿ ಒಂದು ವಾರ ಕಾಲ ಆಕೆ ಅನಾರೋಗ್ಯಕ್ಕೆ ಒಳಗಾಗಿದ್ದಾಳೆ.

ವೈದ್ಯರು ಆಕೆಯ ಪರೀಕ್ಷೆ ಮಾಡಿದರು
ವೈದ್ಯರು ಆಕೆಯ ಮೇಲೆ ಗ್ಯಾಸ್ಟ್ರಿಕ್ ಲ್ಯಾವೆಜ್ ಚಿಕಿತ್ಸೆ ಮಾಡಿದರು. ಈ ವಿಧಾನದಿಂದ ಹೊಟ್ಟೆಯನ್ನು ಸಂಪೂರ್ಣವಾಗಿ ಖಾಲಿ ಮಾಡಲಾಗುತ್ತದೆ. ಆದರೆ ಬಾಲಕಿಯ ಹೊಟ್ಟೆಯಲ್ಲಿ ಕೂದಲಿನ ದೊಡ್ಡ ಉಂಡೆಯು ಇರುವುದನ್ನು ನೋಡಿದ ವೈದ್ಯರು ಅಚ್ಚರಿಗೊಳಗಾದರು.

ಆಕೆಗೆ ತಕ್ಷಣ ಶಸ್ತ್ರಚಿಕಿತ್ಸೆ ಮಾಡಲಾಯಿತು
ಬಾಲಕಿಗೆ ತಕ್ಷಣ ಶಸ್ತ್ರಚಿಕಿತ್ಸೆ ಮಾಡಿ ಆಕೆಯ ಹೊಟ್ಟೆಯಲ್ಲಿ ಇದ್ದಂತಹ ಕೂದಲಿನ ಉಂಡೆಯನ್ನು ಹೊರಗೆ ತೆಗೆಯಲಾಯಿತು.



Click it and Unblock the Notifications
