For Quick Alerts
ALLOW NOTIFICATIONS  
For Daily Alerts

  ಈ ರಾಶಿಯವರು ತಮ್ಮ ಜೀವನದಲ್ಲಿ ತುಂಬಾ ಪ್ರಾಯೋಗಿಕವಾಗಿರುತ್ತಾರೆ....!

  By Sushma Charhra
  |

  ಕೆಲವು ರಾಶಿಯವರಿದ್ದಾರೆ ಅವರದ್ದು ಯಾವಾಗಲೂ ಪ್ರಾಯೋಗಿಕವಾಗಿ ಆಲೋಚಿಸುವ ಮನಸ್ಥಿತಿ. ಅವರಿಗೆ ಯಾವುದೇ ಭಾವನೆಗಳೂ ಕೂಡ ಏನನ್ನೂ ಮಾಡುವುದಿಲ್ಲ...ಅಂದರೆ ಅವರ ಬಳಿ ಭಾವನೆಗಳಿಗೆ ಬೆಲೆ ಇಲ್ಲ. ಬದಲಾಗಿ ಯಾವಾಗಲೂ ಹೀಗೆ ಮಾಡಿದರೆ ಏನಾಗುತ್ತೆ., ಹಾಗೆ ಮಾಡಿದರೆ ಏನಾಗುತ್ತೆ ಎಂಬ ಭವಿಷ್ಯವನ್ನು ಪ್ರಾಯೋಗಿಕವಾಗಿ ಅಷ್ಟೇ ಆಲೋಚಿಸುತ್ತಾರೆ. ಯಾರದ್ದಾದರೂ ಮನಸ್ಸಿಗೆ ಇದು ನೋವುಂಟು ಮಾಡಬಹುದೇ ಎಂಬ ಆಲೋಚನೆ ಅವರಿಗಿರುವುದಿಲ್ಲ., ಬದಲಾಗಿ ಅದರ ಮುಂದಿನ ಪ್ರಾಯೋಗಿಕ ಪರಿಣಾಮವನ್ನಷ್ಟೇ ಆಲೋಚಿಸುತ್ತಾರೆ.

  ಇಲ್ಲಿ ಅಂತಹ ಕೆಲವು ರಾಶಿಯವರ ಬಗ್ಗೆ ತಿಳಿಸಲಾಗಿದೆ ಮತ್ತು ಅವರು ಹೇಗೆ ಪ್ರಾಯೋಗಿಕವಾಗಿರುತ್ತಾರೆ ಎಂಬ ಸಂಪೂರ್ಣ ಮಾಹಿತಿ ನೀಡಲಾಗಿದೆ. ಈ ರಾಶಿಯವರು ಯಾವಾಗಲೂ ತಮ್ಮ ಬಗ್ಗೆ ಅಷ್ಟೇ ಆಲೋಚಿಸುತ್ತಾರೆ. ಅವರಿಗೆ ಬೇರೆಯವರಿಗೆ ಏನಾದರೂ ಚಿಂತೆಯಿಲ್ಲ. ಭಾವನಾತ್ಮಕವಾಗಿ ಬೇರೆಯವರ ಬಗ್ಗೆ ಆಲೋಚಿಸುವ ಪ್ರವೃತ್ತಿ ಇವರಲ್ಲಿಲ್ಲ. ಬದಲಾಗಿ ತಮ್ಮ ಒಳಿತಿಗೆ ಏನು ಮಾಡಬೇಕು ಎಂಬುದಷ್ಟೇ ಅವರ ಚಿಂತನೆ. ತಮ್ಮ ಹಿತಕ್ಕಾಗಿ ಏನು ಬೇಕಾದರೂ ಮಾಡಿಯಾರು ಎಂಬ ಮನಸ್ಥಿತಿಯ ರಾಶಿಯವರು ಇವರುಗಳು.

  ಭಾವನಾತ್ಮಕವಾಗಿದ್ದರೆ ತಮ್ಮ ಬೇಳೆ ಬೇಯುವುದಿಲ್ಲ ಎಂಬ ಮನಸ್ಥಿತಿಯ ರಾಶಿಯವರ ಬಗ್ಗೆ ನಾವಿಲ್ಲಿ ಮಾತನಾಡುತ್ತಿದ್ದೇವೆ. ಅವರದ್ದು ಏನಿದ್ದರೂ ವಯಕ್ತಿಕ ಆಲೋಚನೆಗಳು ಮತ್ತು ವಯಕ್ತಿಕ ಜವಾಬ್ದಾರಿಗಳು ಅಷ್ಟೇ.. ಹಾಗಾದ್ರೆ ಯಾವೆಲ್ಲ ರಾಶಿಯವರು ಹೀಗಿರುತ್ತಾರೆ ಎಂಬ ಬಗೆಗಿನ ಮಾಹಿತಿ ಇಲ್ಲಿದೆ. ನೀವು ಅಥವಾ ನಿಮ್ಮವರೂ ಯಾರಾದರೂ ಈ ಪಟ್ಟಿಯಲ್ಲಿದ್ದಾರಾ ಪರೀಕ್ಷಿಸಿಕೊಳ್ಳಿ...

  ಮಕರ ರಾಶಿ(ಡಿಸೆಂಬರ್ 23- ಜನವರಿ 20)

  ಮಕರ ರಾಶಿ(ಡಿಸೆಂಬರ್ 23- ಜನವರಿ 20)

  ಮಕರ ರಾಶಿಯವರು ಬಹಳ ಪ್ರಾಯೋಗಿಕವಾಗಿ ಆಲೋಚಿಸುವ ವ್ಯಕ್ತಿತ್ವವುಳ್ಳವರು. ತಮ್ಮನ್ನು ತಾವು ಬಹಳವಾಗಿ ಗೌರವಿಸಿಕೊಳ್ಳುತ್ತಾರೆ ಮತ್ತು ತಮ್ಮ ಸಿದ್ಧಾಂತಗಳಿಂದ,ತತ್ವಗಳಿಂದ ಕೈ ಕೊಳಕು ಮಾಡಿಕೊಳ್ಳುವ ಪ್ರವೃತ್ತಿವುಳ್ಳವರು ಮಕರ ರಾಶಿಯವರು. ತಮ್ಮ ನಿರ್ಧಾರಗಳಿಗೆ ಬದ್ಧರಾಗಿರುತ್ತಾರೆ ಮತ್ತು ಬಹಳ ಆಲೋಚಿಸಿ ದಿಟ್ಟತನದಿಂದ ವರ್ತಿಸುತ್ತಾರೆ, ಯಾವುದೇ ನಿರ್ಧಾರ ಕೈಗೊಳ್ಳುವಾಗ ಬಹಳ ಆಲೋಚಿಸಿ ಸರಿಯಾದ ನಿರ್ಧಾರ ಕೈಗೊಳ್ಳುವಲ್ಲಿ ಇವರು ನಿಪುಣರು. ಇದೆಲ್ಲವನ್ನು ಹೊರತು ಪಡಿಸಿ, ಇವರು ತಾಳ್ಮೆಗೆ ಹೆಸರುವಾಸಿಯಾದವರು. ಸಮಯ ಬಂದಾಗ ಎಲ್ಲವೂ, ಎಲ್ಲದೂ ಸರಿಯಾದ ಮಾರ್ಗದಲ್ಲಿ ಸಾಗುತ್ತದೆ ಮತ್ತು ಬೆಲೆ ಬಾಳುತ್ತದೆ ಎಂಬುದರ ಬಗ್ಗೆ ಇವರಿಗೆ ಬಹಳ ನಂಬಿಕೆ ಇದೆ.

  ಕನ್ಯಾ ರಾಶಿ (ಅಗಸ್ಟ್ 24 –ಸೆಪ್ಟೆಂಬರ್ 23)

  ಕನ್ಯಾ ರಾಶಿ (ಅಗಸ್ಟ್ 24 –ಸೆಪ್ಟೆಂಬರ್ 23)

  ನಿಮಗೆ ಯಾವುದೋ ಸಮಸ್ಯೆಯಾಗಿದೆ ಎಂದರೆ ಕನ್ಯಾ ರಾಶಿಯವರು ನಿಮ್ಮೊಂದಿಗೆ ಜೊತೆಯಾಗಿರುತ್ತಾರೆ. ಅವರಿಗೆ ಚೆನ್ನಾಗಿ ಗೊತ್ತು. ಒಂದು ಸಮಸ್ಯೆಯನ್ನು ಹೇಗೆ ನಿವಾರಿಸಬೇಕು ಎಂಬುದರ ಬಗ್ಗೆ. ಕೇವಲ ಪ್ರಾಯೋಗಿಕವಾಗಿ ಮಾತ್ರವಲ್ಲ ಬದಲಾಗಿ ವಿಶ್ವಾಸಾರ್ಹತೆಯನ್ನೂ ಹೊಂದಿರುವ ವ್ಯಕ್ತಿಗಳು ಕನ್ಯಾರಾಶಿಯವರು. ಕಲ್ಪನಾ ಪ್ರಪಂಚದಲ್ಲಿ ತೇಲಾಡುವುದು ಎಂದರೆ ಇವರಿಗೆ ಇಷ್ಟವಿಲ್ಲ, ಇವರದ್ದು ವರ್ತಮಾನದಲ್ಲಿ ಖುಷಿಯಾಗಿರಬೇಕು ಎಂಬ ತತ್ವವುಳ್ಳವರು. ಯಾವುದೋ ಒಂದು ವಿಚಾರದ ಬಗ್ಗೆ ತಿಳಿದುಕೊಳ್ಳಬೇಕಾದ ಸಂದರ್ಬದಲ್ಲಿ ಇವರು ಏಕಪಕ್ಷೀಯವಾಗಿ ಯಾವ ನಿರ್ಧಾರವನ್ನೂ ಕೈಗೊಳ್ಳುವುದಿಲ್ಲ. ಬದಲಾಗಿ ತಾಳ್ಮೆಯಿಂದ ಎಲ್ಲವನ್ನೂ ಕೇಳಿ ಕಾರಣಗಳನ್ನು ತಿಳಿದುಕೊಳ್ಳುತ್ತಾರೆ. ಇದನ್ನು ಹೊರತು ಪಡಿಸಿ, ನೀವು ಯಾವಾಗಲೂ ಕನ್ಯಾ ರಾಶಿಯವರನ್ನು ಲೆಕ್ಕದಲ್ಲಿ ಇಟ್ಟುಕೊಂಡಿರಬಹುದಾದ ವ್ಯಕ್ತಿತ್ವವುಳ್ಳವರು ಇವರಾಗಿರುತ್ತಾರೆ.

  ಮೇಷ ರಾಶಿ (ಮಾರ್ಚ್ 21- ಎಪ್ರಿಲ್ 19)

  ಮೇಷ ರಾಶಿ (ಮಾರ್ಚ್ 21- ಎಪ್ರಿಲ್ 19)

  ಮೇಷ ರಾಶಿಯವರು ಸೂಪರ್ ಪ್ರಾಕ್ಟಿಕಲ್ ಅಂತ ಅನ್ನಿಸದೇ ಇರಬಹುದು. ಆದರೆ ಅವರದ್ದು ಹಲವಾರು ದಾರಿಗಳಿರುತ್ತೆ. ಭದ್ರತೆ ಇರುವ ಕೆಲಸ, ಆರಾಮದಾಯಕವಾಗಿರುವ ಮನೆ, ಬ್ಯಾಂಕಿನಲ್ಲಿ ಸಾಕಷ್ಟು ಹಣವಿರಬೇಕು ಎಂಬ ಆಲೋಚನೆ ಹೊಂದಿರುವ ಇವರದ್ದು ಯಾವಾಗಲೂ ಪ್ರಾಯೋಗಿಕವಾಗಿರುವ ಆಲೋಚನೆ. ಎಲ್ಲಿದ್ದರೆ ಇವೆಲ್ಲ ದಕ್ಕುತ್ತದೆ ಎಂಬ ಆಲೋಚನೆ ಇವರದ್ದು. ತಮ್ಮಿಂದ ಯಾವ ಕೆಲಸ ಆಗುವುದಿಲ್ಲ ಎಂದು ಭಾವಿಸುತ್ತಾರೋ ಅದನ್ನು ಮಾಡಲು ಹೋಗಿ ಹಾಳು ಮಾಡುವ ವ್ಯಕ್ತಿತ್ವ ಇವರದ್ದಲ್ಲ ಬದಲಾಗಿ ಯಾರು ಮಾಡಬಲ್ಲರೋ ಅಂತವರ ಜೊತೆ ಸೇರಿ ಆ ಕೆಲಸವನ್ನು ಪೂರ್ಣಗೊಳಿಸಿ ಲಾಭ ಪಡೆಯುವ ಮನಸ್ಥಿತಿ ಇವರದ್ದು. ಹಾಗಂತ ಇವರು ಸಂಘಟಿತ ಶಕ್ತಿ ಉಳ್ಳವರು ಎಂದು ಭಾವಿಸಬೇಡಿ. ಬದಲಾಗಿ ಇವರದ್ದು ತಮಗೆ ಅಗತ್ಯವಿರುವುದನ್ನು ಹೇಗೆ ಪಡೆದುಕೊಳ್ಳಬಹುದು ಎಂಬುದನ್ನು ಪ್ರಾಯೋಗಿಕವಾಗಿ ಆಲೋಚಿಸುವ ಮನಸ್ಥಿತಿ ಅಷ್ಟೇ..

  ವೃಷಭ ರಾಶಿ (ಎಪ್ರಿಲ್ 20 – ಮೇ 20)

  ವೃಷಭ ರಾಶಿ (ಎಪ್ರಿಲ್ 20 – ಮೇ 20)

  ವೃಷಭ ರಾಶಿಯವರು ಎಲ್ಲರಿಗಿಂತ ಅತೀ ಹೆಚ್ಚು ಪ್ರಾಯೋಗಿಕವಾಗಿರುವ ರಾಶಿಯವರು. ತಮ್ಮ ಜೀವನದ ಪ್ರತೀ ಘಳಿಗೆಯನ್ನೂ ಪ್ರಾಯೋಗಿಕವಾಗಿಯೇ ಆಲೋಚಿಸುವ ವ್ಯಕ್ತಿತ್ವ ಇವರದ್ದು. ಇವರನ್ನು ಇನ್ನೊಬ್ಬರನ್ನು ಬಲವಾಗಿ ನೆಚ್ಚಿಕೊಂಡಿರುತ್ತಾರೆ,ದೃಢ ಸಂಕಲ್ಪದವರಾಗಿರುತ್ತಾರೆ, ಯಾವುದಾದರೂ ಕೆಲಸವನ್ನು ತುಂಬಾ ಸರಳ ಮತ್ತು ಸುಲಭವಾಗಿ ಮುಗಿಸಲು ಏನು ಮಾಡಬಹುದು ಎಂಬುದರ ಬಗ್ಗೆ ಸರಿಯಾದ ಕಲ್ಪನೆ ಇವರಿಗಿರುತ್ತೆ. ಇದನ್ನು ಹೊರತು ಪಡಿಸಿ, ಇವರು ಯಾವುದೇ ವಿಚಾರಕ್ಕೆ ಕೂಡಲೇ ಪ್ರತಿಕ್ರಿಯಿಸುವುದಿಲ್ಲ. ಇವರನ್ನು ಯಾರೂ ಸುಲಭದಲ್ಲಿ ಮೋಸಗೊಳಿಸಲು ಸಾಧ್ಯವಿಲ್ಲ.ಕಣ್ಣಾರೆ ಕಂಡರೂ ಪರಾಮರ್ಶಿಸಿ ನೋಡುವ ವ್ಯಕ್ತಿತ್ವ ಇವರದ್ದು. ಅತೀ ವಿನಯದಿಂದ ಯಾರೂ ಇವರನ್ನು ವಂಚನೆಗೊಳಪಡಿಸಲು ಸಾಧ್ಯವಿಲ್ಲ.

  ಮಿಥುನ ರಾಶಿ (ಮೇ 21 – ಜೂನ್ 20)

  ಮಿಥುನ ರಾಶಿ (ಮೇ 21 – ಜೂನ್ 20)

  ಮಿಥುನ ರಾಶಿಯವರು ಕೆಲವು ವಿಚಾರಗಳನ್ನು ಬಹಳ ಸರಳವಾಗಿ ತೆಗೆದುಕೊಳ್ಳುತ್ತಾರೆ. ಆದರೆ ಪ್ರತಿಯೊಂದನ್ನೂ ಪ್ರಾಯೋಗಿಕವಾಗಿ ಆಲೋಚಿಸುತ್ತಾರೆ. ಭವಿಷ್ಯದ ಆಲೋಚನೆ ಇವರಲ್ಲಿ ಬಹಳಷ್ಟಿರುತ್ತೆ. ಹಾಗಾಗಿ ಮುಂದಿನ ದಿನಗಳಿಗಾಗಿ ದೊಡ್ಡದೊಡ್ಡ ಕಲ್ಪನೆಗಳನ್ನು ಮಾಡುತ್ತಾರೆ. ಮಕ್ಕಳ ವಿಚಾರದಲ್ಲಂತೂ ಇವರು ಬಹಳ ಪ್ರಾಯೋಗಿಕವಾಗಿ ಆಲೋಚನೆ ಮಾಡುತ್ತಾರೆ. ಅನಗತ್ಯವಾಗಿ ಯಾವಾಗಲೂ ಮಕ್ಕಳನ್ನು ಶಿಕ್ಷೆಗೆ ಗುರಿಪಡಿಸುವುದಿಲ್ಲ. ತಮ್ಮ ಮಕ್ಕಳಿಗೆ ಯಾವುದೋ ವಿಚಾರದ ಬಗ್ಗೆ ತಿಳಿಸಿ ಹೇಳಬೇಕು ಎಂದರೆ ಇವರು ಅನಿಯಂತ್ರಿತವಾಗಿ ಹೇಳುವುದಿಲ್ಲ ಬದಲಾಗಿ ಪ್ರಾಯೋಗಿಕವಾಗಿಯೇ ತಿಳಿಸಿಕೊಡುತ್ತಾರೆ. ನಿಮ್ಮ ಪ್ರೀತಿಯ ರಾಶಿಯು ಇಲ್ಲಿ ಬರೆಯಲಾಗಿದೆಯಾ.. ಇಂತಹ ಇನ್ನಷ್ಟು ಸ್ಟೋರಿಗಳನ್ನು ಓದಲು ಬಯಸುತ್ತೀರಾ.. ಹಾಗಾದ್ರೆ ನಮ್ಮ ಸೆಕ್ಷನ್ ಓದುವುದನ್ನು ಮರೆಯಬೇಡಿ. ಈ ಲೇಖನದ ಬಗ್ಗೆ ಕಮೆಂಟ್ ಮಾಡಿ..

  English summary

  Zodiacs Which Are Known To Be Practical

  There are certain zodiac signs which are known to be the worst when it comes to being emotional as they tend to be way too practical and this is something that makes them stand out in crowd. Here, in this article, we are revealing you about the zodiac signs which are known to be the most practical zodiac sign.These zodiac signs are known to only think about themselves and not think with the emotional baggage. These guys tend to stay focused on what they are supposed to do instead of getting overwhelmed and stuck.
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more