For Quick Alerts
ALLOW NOTIFICATIONS  
For Daily Alerts

ಜನರನ್ನು ಹೆದರಿಸಬಲ್ಲ ಗುಣಲಕ್ಷಣವನ್ನು ಹೊಂದಿರುವ 4 ರಾಶಿಚಕ್ರದವರು

|

ಕೆಲವರ ಉಪಸ್ಥಿತಿಯೇ ಹಾಗೆ. ಅವರು ಬಂದರು ಎಂದರೆ ಸಾಮಾನ್ಯವಾಗಿ ಎಲ್ಲರೂ ಗಂಭೀರ ಸ್ಥಿತಿಗೆ ಹೋಗುವರು. ಅವರಲ್ಲಿರುವ ಕೆಲವು ಗುಣಗಳೇ ಇತರರಿಂದ ಗೌರವ ಕೊಡುವಂತೆ ಮಾಡುತ್ತದೆ. ಒಂದು ಮಾತಿನ ಮೂಲಕವೇ ಎಲ್ಲಾ ಕೆಲಸವನ್ನು ಮಾಡಿಸುವಂತಹ ಸಾಮಥ್ರ್ಯವನ್ನು ಹೊಂದಿರುತ್ತಾರೆ. ಏಕೆಂದರೆ ಅವರ ಸ್ವಭಾವ ಹಾಗೂ ವರ್ತನೆಗಳು ಆ ರೀತಿಯ ಒಂದು ಹಿನ್ನೆಲೆ ಸೃಷ್ಟಿಯಾಗುವಂತೆ ಮಾಡುವುದು.

ಹೌದು, ಕೆಲವು ವ್ಯಕ್ತಿಗಳು ತಮ್ಮ ಮಾತಿನಿಂದಲೇ ಇತರರ ಮೇಲೆ ಹಿಡಿತವನ್ನು ಸಾಧಿಸುತ್ತಾರೆ. ಅವರ ಗಾಂಭೀರ್ಯ ಹಾಗೂ ವರ್ತನೆಗಳು ನಮ್ಮ ಮೇಲೆ ಸಾಕಷ್ಟು ಪ್ರಭಾವ ಬೀರುತ್ತವೆ. ಅವರ ಅನುಕರಣೆಗಳನ್ನು ಮಾಡುವ ಸಾಧ್ಯತೆಗಳು ಇರುತ್ತವೆ. ಅಂತಹ ಅನುಭವಗಳು ಬಹುತೇಕ ಮಂದಿ ಅನುಭವಿಸಿರುತ್ತಾರೆ ಎಂದು ಸಹ ಹೇಳಬಹುದು.

ಒಬ್ಬ ವ್ಯಕ್ತಿಯ ವ್ಯಕ್ತಿತ್ವವು ಅವರು ವಾಸಿಸುವ ಪರಿಸರವನ್ನು ಅವಲಂಬಿಸಿರುತ್ತದೆ. ಅಂತೆಯೇ ಅವರ ಬೆಳವಣಿಗೆ ಹಾಗೂ ವರ್ತನೆಗಳ ಮೇಲೆ ಗ್ರಹಗತಿಗಳು ಹಾಗೂ ರಾಶಿಚಕ್ರಗಳ ಪ್ರಭಾವ ಅಧಿಕವಾಗಿರುತ್ತದೆ. ಅಂತಹ ಒಂದು ಅದ್ಭುತ ವ್ಯಕ್ತಿತ್ವವನ್ನು ಕೆಲವು ರಾಶಿಚಕ್ರದವರು ಹೊಂದಿರುತ್ತಾರೆ ಎಂದು ಹೇಳಲಾಗುತ್ತದೆ.

ಊಹಿಸಲಾಗದ ಹಾಗೂ ವಿಶ್ವಾಸಾರ್ಹ ವ್ಯಕ್ತಿಗಳು ಮೇಷ ರಾಶಿಯವರು

ಊಹಿಸಲಾಗದ ಹಾಗೂ ವಿಶ್ವಾಸಾರ್ಹ ವ್ಯಕ್ತಿಗಳು ಮೇಷ ರಾಶಿಯವರು

ಮೇಷರಾಶಿಯ ವ್ಯಕ್ತಿಗಳನ್ನು ಊಹಿಸಲಾಗದಂತಹ ವಿಶೇಷತೆಯನ್ನು ಹೊಂದಿರುವ ವ್ಯಕ್ತಿಗಳು ಎಂದು ಹೇಳಬಹುದು. ಅವರು ಎಲ್ಲರ ಎದುರು ಸಂತೋಷವಾಗಿದ್ದಾರೆಂದು ತೋರುತ್ತಾರೆ ಎಂದಾದರೆ ಅವರು ತಮ್ಮಲ್ಲಿ ಅಡಗಿರುವ ನೋವು ಹಾಗೂ ನಿರಾಸೆಯ ವಿಚಾರಗಳನ್ನು ಅಡಗಿಸಿಟ್ಟುಕೊಂಡಿರುತ್ತಾರೆ. ಇವರಿಗೆ ತಮ್ಮ ಭಾವನೆಗಳು ಸಂತಸವನ್ನು ಕೊಟ್ಟಿದೆ ಎಂದಾದಾಗ ಎಲ್ಲಾ ವಿಚಾರಗಳನ್ನು ಹೇಳಿಕೊಳ್ಳುವರು.

ಊಹಿಸಲಾಗದ ಹಾಗೂ ವಿಶ್ವಾಸಾರ್ಹ ವ್ಯಕ್ತಿಗಳು ಮೇಷ ರಾಶಿಯವರು

ಊಹಿಸಲಾಗದ ಹಾಗೂ ವಿಶ್ವಾಸಾರ್ಹ ವ್ಯಕ್ತಿಗಳು ಮೇಷ ರಾಶಿಯವರು

ಇವರು ತಮ್ಮ ಎಲ್ಲಾ ಸಂಗತಿಯನ್ನು ಇತರರಿಗೆ ಹೇಳುವುದರಿಂದ ಅವರು ಎಲ್ಲವನ್ನೂ ಸ್ವೀಕರಿಸುತ್ತಾರೆ ಎನ್ನುವ ತಪ್ಪು ಕಲ್ಪನೆಯನ್ನು ಹೊಂದುವರು. ಅವರ ಅರ್ಥಮಾಡಿಕೊಳ್ಳುವುದಿಲ್ಲ ಎಂದು ಅರ್ಥಮಾಡಿಕೊಳ್ಳಲು ವಿಫಲರಾಗುತ್ತಾರೆ ಎನ್ನಬಹುದು. ಈ ರಾಶಿಯವರ ಇನ್ನೊಂದು ಗುಣವೆಂದರೆ ಅವರ ವಿಶ್ವಾಸ. ಇವರ ವಿಶ್ವಾಸಾರ್ಹ ವರ್ತನೆಗಳೇ ಇವರ ವೈರಿಗಳನ್ನು ಹಾಗೂ ಪ್ರತಿಸ್ಪರ್ಧಿಗಳನ್ನು ಹೆದರಿಸುವುದು.

Most Read: ಭಾರತದ ಈ ಎಂಟು ದೇವಸ್ಥಾನಕ್ಕೆ ಪುರುಷರಿಗೆ ಪ್ರವೇಶ ನಿಷೇಧ ಮಾಡಲಾಗಿದೆಯಂತೆ!

ಹಗೆಯನ್ನು ಸಾಧಿಸಬಲ್ಲ ವೃಷಭ ರಾಶಿಯವರು

ಹಗೆಯನ್ನು ಸಾಧಿಸಬಲ್ಲ ವೃಷಭ ರಾಶಿಯವರು

ಇವರು ಸಾಮಾನ್ಯವಾಗಿ ಶಾಂತ ಸ್ವಭಾವದ ವ್ಯಕ್ತಿಗಳು. ಶಾಂತ ಚಿತ್ತವನ್ನು ಹೊಂದಿರುವ ಇವರು ಯಾವುದೇ ಹಗೆತನವನ್ನು ಹೊಂದಿರುವುದಿಲ್ಲ. ಇವರ ಪ್ರೀತಿಪಾತ್ರರಾಗಿದ್ದರೆ ಅವರು ಏನು ಮಾಡಿದರೂ ಸಹಿಸಿಕೊಳ್ಳುವ ಸ್ವಭಾವದವರು.

ಹಗೆಯನ್ನು ಸಾಧಿಸಬಲ್ಲ ವೃಷಭ ರಾಶಿಯವರು

ಹಗೆಯನ್ನು ಸಾಧಿಸಬಲ್ಲ ವೃಷಭ ರಾಶಿಯವರು

ಆದರೆ ಅವರ ವಿರುದ್ಧವಾದ ಚಟುವಟಿಕೆಯಿಂದ ಕೂಡಿದೆ ಎಂದು ತಿಳಿದ ತಕ್ಷಣದಿಂದ ಅವರು ತಾಳ್ಮೆಯನ್ನು ಕಳೆದುಕೊಳ್ಳುವರು. ಜೊತೆಗೆ ಸೇಡು ತೀರಿಸಿಕೊಳ್ಳಲು ಸಿದ್ಧರಾಗುವರು. ಆ ಸಂಗತಿಯನ್ನು ಇವರು ತಮ್ಮ ಮನಸ್ಸಿನಲ್ಲಿ ಶಾಶ್ವತವಾಗಿ ಇರಿಸಿಕೊಳ್ಳುವರು. ಇವರ ಈ ಸ್ವಭಾವ ತಿಳಿದವರಿಗೆ ಹೆಚ್ಚು ಭಯವಿರುತ್ತದೆ.

ಯಾವುದೇ ಕ್ಷಮೆಗೆ ಅವಕಾಶ ಕೊಡದ ಮಕರ ರಾಶಿಯವರು

ಯಾವುದೇ ಕ್ಷಮೆಗೆ ಅವಕಾಶ ಕೊಡದ ಮಕರ ರಾಶಿಯವರು

ಮಕರ ರಾಶಿಯ ವ್ಯಕ್ತಿಗಳು ಸಾಮಾನ್ಯವಾಗಿ ಶ್ರಮಜೀವಿಗಳು ಎಂದು ಪರಿಗಣಿಸಲಾಗುತ್ತದೆ. ಅವರ ಬುದ್ಧಿವಂತ ಮನಸ್ಸು ಅವರನ್ನು ಬೆಂಬಲಿಸುತ್ತದೆ. ಇವರು ಸದಾ ತಮ್ಮ ಕೆಲಸದಲ್ಲಿ ಸಮರ್ಪಿತರಾಗಿರುತ್ತಾರೆ. ಅವರ ಮೇಲೆ ಆತ್ಮೀಯರು ಬಹುತೇಕವಾಗಿ ಅವಲಂಬಿತರಾಗಿರುತ್ತಾರೆ. ಕೆಲವು ವಿಚಾರಗಳಲ್ಲಿ ನಂಬಲಾಗದಷ್ಟು ಉತ್ತಮ ಗುಣವನ್ನು ಹೊಂದಿರುತ್ತಾರೆ. ಇವರು ಇತರರಿಗೆ ಬಹಳ ಕಟ್ಟುನಿಟ್ಟಾಗಿ ಕಾಣಿಸುವರು.

ಯಾವುದೇ ಕ್ಷಮೆಗೆ ಅವಕಾಶ ಕೊಡದ ಮಕರ ರಾಶಿಯವರು

ಯಾವುದೇ ಕ್ಷಮೆಗೆ ಅವಕಾಶ ಕೊಡದ ಮಕರ ರಾಶಿಯವರು

ಇನ್ನು ತಮ್ಮ ವಿರುದ್ಧವಾಗಿ ಅಥವಾ ಬೆನ್ನಿನ ಹಿಂದೆ ದ್ರೋಹ ಬಗೆಯುತ್ತಾರೆ ಎಂದಾದರೆ ಅವರನ್ನು ಎಂದಿಗೂ ಕ್ಷಮಿಸುವುದಿಲ್ಲ. ಇವರು ಇತರರೊಂದಿಗೆ ಬಲು ಕಟ್ಟುನಿಟ್ಟಿನ ವರ್ತನೆಯನ್ನು ತೋರುವರು.

Most Read: ಮೊಬೈಲ್ ನಂಬರ್‌ನ್ನು 'ಸಂಖ್ಯಾಶಾಸ್ತ್ರದ ಪ್ರಕಾರ' ಆಯ್ಕೆ ಮಾಡಿ-ಅದೃಷ್ಟವಂತರಾಗಿ!

ಅತ್ಯುತ್ತಮ ನಾಯಕರು ಸಿಂಹ ರಾಶಿಯವರು

ಅತ್ಯುತ್ತಮ ನಾಯಕರು ಸಿಂಹ ರಾಶಿಯವರು

ಈ ರಾಶಿಯ ವ್ಯಕ್ತಿಗಳು ಹುಟ್ಟು ನಾಯಕರು ಎಂದು ಹೇಳಲಾಗುವುದು. ಇವರ ಕಠಿಣವಾದ ಒಳನೋಟವು ಜನರಲ್ಲಿ ಕೊಂಚ ಹೆದರಿಕೆಯನ್ನು ಹುಟ್ಟಿಸುವುದು. ಅವರಲ್ಲಿ ಈ ಗುಣಗಳು ಕಾಣದ ವರ್ತನೆಯಾಗಿರುವುದರಿಂದ ಹೆಚ್ಚಿನ ಭಯ ಉಂಟಾಗುವುದು.

ಅತ್ಯುತ್ತಮ ನಾಯಕರು ಸಿಂಹ ರಾಶಿಯವರು

ಅತ್ಯುತ್ತಮ ನಾಯಕರು ಸಿಂಹ ರಾಶಿಯವರು

ಯಾವುದೇ ನಾಚಿಕೆ ಸ್ವಭಾವವನ್ನು ಹೊಂದಿರದ ಇವರನ್ನು ಮೊದಲು ಭೇಟಿಯಾದ ದಿನದಿಂದಲೇ ಭಯವನ್ನು ಹುಟ್ಟಿಸಬಹುದು. ಅದು ಕೆಲವೊಮ್ಮೆ ಸಿಂಹ ರಾಶಿಯವರ ಅಹಂಕಾರ ಎಂದು ತೋರ್ಪಡಿಸಬಹುದು.

English summary

Zodiac Signs With strong Traits That Might Scare People!

Have you ever met a person and felt a little suppressed by their presence? Have you ever met a person who looks too independent? Sometimes it feels like they are trying to dominate, though they might not be. This could be because of the personality that they carry, which reflects such influence on the surroundings.
Story first published: Friday, October 12, 2018, 13:14 [IST]
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more