ಈ ಮೂರು ರಾಶಿಯವರು ಗಾಸಿಪ್ ಮಾಡಲು ತುಂಬಾನೇ ಇಷ್ಟಪಡುತ್ತಾರಂತೆ!

By Deepu
Subscribe to Boldsky

ಗಾಸಿಪ್ ಯಾನೆ ಹರಟೆ ಹೊಡೆಯುವುದರಲ್ಲಿ ಮಹಿಳೆಯರಿಗೆ ಮೊದಲ ಸ್ಥಾನ ಎಂದು ಹಿಂದೆ ಹೇಳಲಾಗುತ್ತದೆ. ಮಹಿಳೆಯರು ದಿನವಿಡಿ ಕುಳಿತುಕೊಂಡು ಹರಟೆ ಹೊಡೆಯಬಲ್ಲರು. ಅದರಲ್ಲೂ ನಾಲ್ಕೈದು ಮಂದಿ ಮಹಿಳೆಯರು ಸೇರಿದರಂತೂ ಹೇಳುವುದೇ ಬೇಡ. ಇಡೀ ಜಗತ್ತೇ ಮುಳುಗಿದರೂ ಇವರಿಗೆ ಹರಟೆ ಮಧ್ಯೆ ಏನೂ ಕಾಣಿಸದು. ಆದರೆ ಇದಕ್ಕೆ ಪುರುಷರು ಹೊರತಾಗಿಲ್ಲ ಯಾಕೆಂದರೆ ಕೆಲವರು ಗಾಸಿಪ್ ಮಾಡುವುದು ಅವರ ರಾಶಿಚಕ್ರಗಳ ಪ್ರಭಾವದಿಂದ ಎಂದು ಹೇಳಲಾಗುತ್ತದೆ.

ಈ ಲೇಖನದಲ್ಲಿ ಅತಿಯಾಗಿ ಗಾಸಿಪ್ ಮಾಡುವ ರಾಶಿಗಳ ಬಗ್ಗೆ ನಾವು ನಿಮಗೆ ತಿಳಿಸಿಕೊಡಲಿದ್ದೇವೆ. ಇವರು ಗಾಸಿಪ್ ಮಾಡುವಲ್ಲಿ ತುಂಬಾ ಮುಂದು ಎಂದು ಜ್ಯೋತಿಷ್ಯಶಾಸ್ತ್ರವು ಹೇಳುತ್ತದೆ.

ಸೂಚನೆ: ಗೌಪ್ಯ ಕಾಪಾಡುವಂತಹ ಅಗತ್ಯ ಏನು ಎಂದು ಈ ರಾಶಿಯವರಿಗೆ ತಿಳಿದಿರುವ ಕಾರಣದಿಂದಾಗಿ ಇವರು ತಮ್ಮಂತೆ ಗಾಸಿಪ್ ಮಾಡುವಂತಹ ಜತೆಗಾರರು ಸಿಕ್ಕಿದರೆ ಮಾತ್ರ ಅದನ್ನು ಹೊರಹಾಕುವರು. ಗಾಸಿಪ್ ಮಾಡುವ ರಾಶಿಗಳ ಬಗ್ಗೆ ತಿಳಿಯಿರಿ.

 ಮಿಥುನ: ಮೇ 21-ಜೂನ್ 20

ಮಿಥುನ: ಮೇ 21-ಜೂನ್ 20

ತಾವು ಯಾರಿಗೂ ಈ ಮಾತನ್ನು ಹೇಳುವುದಿಲ್ಲವೆಂದು ಮಿಥುನ ರಾಶಿಯವರು ಮಾತು ಕೊಡುವರು. ಆದರೆ ಇದನ್ನು ಎಲ್ಲರಿಗೂ ಹೇಳುವರು. ಇವರು ನಿಮ್ಮ ವಿಶ್ವಾಸ ಗಳಿಸುವರು ಮತ್ತು ಅದು ಹೇಗೆ ಪಡೆಯಬೇಕೆಂದು ಅವರಿಗೆ ಚೆನ್ನಾಗಿ ತಿಳಿದಿದೆ. ನಿಮ್ಮಲ್ಲಿರು ವಂತಹ ಎಲ್ಲಾ ಮಾಹಿತಿಗಳನ್ನು ತಿಳಿಸಿ ಎಂದು ಅವರು ನಿಮಗೆ ಹೇಳುವರು ಮತ್ತು ಇದನ್ನು ಗೌಪ್ಯವಾಗಿಡುವುದಾಗಿಯೂ ತಿಳಿಸುವರು.

ಮಿಥುನ: ಮೇ 21-ಜೂನ್ 20

ಮಿಥುನ: ಮೇ 21-ಜೂನ್ 20

ನೀವು ಎಲ್ಲಾ ಗೌಪ್ಯ ವಿಚಾರಗಳನ್ನು ಅವರಿಗೆ ಹೇಳಿದ್ದೀರಿ ಎಂದು ತಿಳಿಯುವ ಹೊತ್ತಿಗೆ ಅವರು ಎಲ್ಲವನ್ನು ಹರಡಿರುವರು. ಇವರು ಗಾಸಿಪ್ ಹರಡುವುದರಲ್ಲಿ ಪ್ರವೀಣರು ಮತ್ತು ಇನ್ನೊಂದು ಬದಿಯಲ್ಲಿ ಇವರಿಗೆ ಸಿಕ್ಕಿರುವ ಕಪ್ಪು ಉಡುಗೊರೆಯಲ್ಲಿ ಗಾಸಿಪ್ ಕೂಡ ಒಂದಾಗಿದೆ.

ತುಲಾ: ಸೆ.24-ಅ.23

ತುಲಾ: ಸೆ.24-ಅ.23

ನ್ಯಾಯದ ಪರವಾಗಿರುವ ಮತ್ತು ಜೀವನದಲ್ಲಿ ಆಡಳಿತವು ನ್ಯಾಯಯುತ ವಾಗಿರಬೇಕೆಂದು ಹೇಳುವಂತಹ ತುಲಾ ರಾಶಿಯವರು ಕೂಡ ಗಾಸಿಪ್ ಹರಡುವರು. ಇವರು ತುಂಬಾ ಮೃಧು, ಮುಗ್ಧ ಮತ್ತು ಒಲವಿನ ವ್ಯಕ್ತಿಗಳಾಗಿರುವರು. ಇವರಿಗೆ ಗಾಸಿಪ್ ಎಂದರೆ ತುಂಬಾ ಇಷ್ಟ. ಇವರು ತುಂಬಾ ಮುಕ್ತವಾಗಿಯೇ ಗಾಸಿಪ್ ಮಾಡುವರು. ಇವರು ಹೆದರಿಕೊಂಡು ಹರಟೆ ಹೊಡೆಯುವುದನ್ನು ಇಷ್ಟಪಡಲ್ಲ. ಮುಕ್ತವಾಗಿ ಸಾರ್ವಜನಿಕವಾಗಿ ಹರಟೆ ಹೊಡೆಯುವುದನ್ನು ಇವರು ಸಂಭ್ರಮಿಸುವರು.

ತುಲಾ: ಸೆ.24-ಅ.23

ತುಲಾ: ಸೆ.24-ಅ.23

ಇವರು ಪ್ರತಿಯೊಬ್ಬರನ್ನು ಸ್ನೇಹಿತರನ್ನಾಗಿ ಮಾಡುವರು. ಪರಿಸ್ಥಿತಿಯ ಎಲ್ಲಾ ದೃಷ್ಟಿಕೋನದಿಂದ ನೋಡುವರು. ಇನ್ನೊಂದು ಬದಿಯಲ್ಲಿ ಅವರು ಯಾವುದೇ ಒಂದು ಕಡೆಗೆ ತಮ್ಮ ನಂಬಿಕೆಯನ್ನು ವ್ಯಕ್ತ ಪಡಿಸಿದರೂ ಅವರು ತೀರ್ಪು ನೀಡುವ ಮೊದಲು ಪ್ರತಿಯೊಂದು ಕೋನವನ್ನು ಸಂಪೂರ್ಣವಾಗಿ ಪರಿಗಣಿಸಿರುವರು.

ಕುಂಭ: ಜ.21-ಫೆ.18

ಕುಂಭ: ಜ.21-ಫೆ.18

ಹರಟೆ ಮತ್ತು ನಾಟಕ ಮಾಡುವುದು ಕುಂಭ ರಾಶಿಯವರಿಗೆ ಇಷ್ಟವಾಗವುದಿಲ್ಲ. ಅದಾಗ್ಯೂ, ಇವರು ಮಾತ್ರ ಅದಕ್ಕೆ ಸಂಬಂಧಹೊಂದಿರುವರು. ಈ ವ್ಯಕ್ತಿಗಳು ಹರಟೆಯಲ್ಲಿ ಭಾಗಿಯಾಗಬಾರದು ಎಂದು ಭಾವಿಸಿದ್ದರೂ ಅದರಲ್ಲಿ ಒಳ ಗೊಳ್ಳುವುದು ಇವರಿಗೆ ಇಷ್ಟವಾಗುವುದು. ಇನ್ನೊಂದು ಬದಿಯಲ್ಲಿ ಇವರು ನಾಟಕವಾಡಲು ತುಂಬಾ ಪ್ರೌಢರಾಗಿದ್ದರೆ ಮತ್ತು ಯಾರು ಗಮನಿಸದೆ ಇರುವ ರೀತಿಯಲ್ಲಿ ಇವರು ತುಂಬಾ ಸೂಕ್ಷ್ಮವಾಗಿ ಪರಿಸ್ಥಿತಿ ನಿಭಾಯಿಸುವರು.

ಕುಂಭ: ಜ.21-ಫೆ.18

ಕುಂಭ: ಜ.21-ಫೆ.18

ಇವರು ಹರಟೆಯ ಒಂದು ಭಾಗವನ್ನು ತೆಗೆದುಕೊಂಡು ಅದನ್ನು ತುಂಬಾ ಆಸಕ್ತಿ ದಾಯಕವಾಗಿಸುವರು. ಮನರಂಜನೆಗೂ ಮಿಗಿಲಾಗಿರುವಂತಹ ವಿವಾದವನ್ನು ಇವರು ಬಯಸುವರು. ಆದರೆ ಹರಟೆಯನ್ನು ಇವರು ಯಾವಾಗಲೂ ಒಪ್ಪಿ ಕೊಳ್ಳಲು ತಯಾರಾಗಿರುವುದಿಲ್ಲ. ಯಾಕೆಂದರೆ ಅದಕ್ಕೆ ಅವರು ಅಹಂ ಅಡ್ಡಿ ಉಂಟು ಮಾಡುವುದು. ಇದನ್ನು ನೀವು ಒಪ್ಪಿಕೊಳ್ಳುವಿರಾ? ಇದರಲ್ಲಿ ನಿಮ್ಮ ರಾಶಿಗಳು ಇದೆಯಾ ಎಂದು ನಮಗೆ ಕಮೆಂಟ್ ಬಾಕ್ಸ್ ನಲ್ಲಿ ತಿಳಿಸಿ.

For Quick Alerts
ALLOW NOTIFICATIONS
For Daily Alerts

    English summary

    Zodiac Signs Who Love To Gossip!

    When it is about sharing some interesting juicy gossip, we often tend to run to our partners in crime and spill the beans to them. But what happens when gossiping is something that is related to your zodiac sign? Well, there are those zodiac signs which are known to gossip the most. These zodiac signs are known to be aware of the happenings around them.
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more