Latest Updates
-
ಬೇಸಿಗೆ ಮದುವೆ ಸಂಭ್ರಮ: ಬಿಸಿಲ ಬೇಗೆಯಿಂದ ಅತಿಥಿಗಳನ್ನು ರಕ್ಷಿಸಲು ಇಲ್ಲಿದೆ ಮಾಸ್ಟರ್ ಪ್ಲಾನ್ -
ಮೇ 2-3ರ ಬಿರುಗಾಳಿ ಎಚ್ಚರಿಕೆ: ನಿಮ್ಮ ಮನೆ ಮತ್ತು ಬಾಲ್ಕನಿ ಗಿಡಗಳನ್ನು ಸುರಕ್ಷಿತವಾಗಿಡಲು ಇಂದೇ ಈ ಕೆಲಸ ಮಾಡಿ! -
ಭಾರತದಲ್ಲಿ ಸುಡುವ ಬಿಸಿಲು: ಹೀಟ್ ವೇವ್ನಿಂದ ಪಾರಾಗಲು ಇಲ್ಲಿವೆ ಬೆಸ್ಟ್ ಡಯಟ್ ಮತ್ತು ಹೈಡ್ರೇಶನ್ ಟಿಪ್ಸ್! -
ಮೆಟ್ ಗಾಲಾ 2026: ರೆಡ್ ಕಾರ್ಪೆಟ್ ಮೇಲೆ ಕರಣ್ ಜೋಹರ್ ಅಬ್ಬರ, ಭಾರತೀಯ ಫ್ಯಾಷನ್ ಲೋಕದ ಹೊಸ ಸಂಚಲನ! -
ಮೇ ತಿಂಗಳ ಬಿಸಿಲ ಧಗೆ: ನಿಮ್ಮ ಬೆಳಗಿನ ದಿನಚರಿಯಲ್ಲಿ ಈ ಬದಲಾವಣೆ ಮಾಡಿಕೊಳ್ಳದಿದ್ದರೆ ಕಷ್ಟ! -
ಎವೆಲಿನ್ ಶರ್ಮಾ ವಿಚ್ಛೇದನ: ಮಕ್ಕಳ ಭವಿಷ್ಯಕ್ಕಾಗಿ ಈ ಜೋಡಿ ಆರಿಸಿದ ಹೊಸ ದಾರಿ ಯಾವುದು? -
ಬಿಸಿಲ ಧಗೆಗೆ ತಂಪಾದ ಗುಡ್ ನ್ಯೂಸ್: ಮೇ 8 ರಿಂದ ಶುರುವಾಗಲಿದೆ ಗ್ರೇಟ್ ಸಮ್ಮರ್ ಸೇಲ್! -
ಬಿಸಿಲ ಬೇಗೆಗೆ ಸುಸ್ತಾಗಿದ್ದೀರಾ? ಈ ಸರಳ ಆಹಾರ ಪದ್ಧತಿಯಿಂದ ಇಡೀ ದಿನ ಇರಿ ಫ್ರೆಶ್! -
ಬಿಸಿಲ ಬೇಗೆಗೆ ಸುಸ್ತಾಗಿದ್ದೀರಾ? ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿ ಕೂಲ್ ಆಗಿರಿ! -
ಬಿಸಿಗಾಳಿಯ ಅಬ್ಬರ: ನಿಮ್ಮ ಫಿಟ್ನೆಸ್ ದಿನಚರಿಯನ್ನು ಬದಲಾಯಿಸದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ!
ಅತ್ಯುತ್ತಮ ಶಿಕ್ಷಕರು ಯಾರೆಂದು ತಿಳಿಯಲು ರಾಶಿಚಕ್ರವನ್ನು ಪರಿಶೀಲಿಸಿ!
"ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕ್ತಿ" ಎನ್ನುವ ಮಾತು ಎಷ್ಟು ನಿಜಾ ಅಲ್ವಾ? ನಮ್ಮ ಕಲಿಕೆಯ ಹಂತದಲ್ಲಿ ಯಾರು ಶ್ರದ್ಧಾ ಭಕ್ತಿಯಿಂದ ವಿಷಯಗಳನ್ನು ಮನದಟ್ಟು ಮಾಡಿಕೊಳ್ಳುತ್ತಾನೋ ಅಂತಹವರು ಮಾತ್ರ ಬಹುಬೇಗ ಜೀವನದಲ್ಲಿ ಮುಂದೆ ಬರುತ್ತಾರೆ. ಯಾರು ಹೇಳಿದ್ದನ್ನು ಸಂಪೂರ್ಣವಾಗಿ ಕೇಳದೆ, ಅಹಂಕಾರದ ಗುಣವನ್ನು ತೋರಿಸುತ್ತಾರೋ ಅಂತಹವರಿಗೆ ಜೀವನದಲ್ಲಿ ಸಾಧನೆ ಮಾಡುವುದು ಕಷ್ಟವಾಗುತ್ತದೆ ಎನ್ನಲಾಗುವುದು.
ನಾವು ಜನಿಸಿದ ನಕ್ಷತ್ರಗಳೇ ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ. ನಾವು ಹುಟ್ಟಿದ ಘಳಿಗೆಯಿಂದ ನಿರ್ಧಾರವಾಗುವ ನಕ್ಷತ್ರಗಳು ಮತ್ತು ರಾಶಿಚಕ್ರಗಳು ನಮ್ಮ ಆಸಕ್ತಿ, ಭಾವನೆ, ವರ್ತನೆ, ಸಂವೇದನೆ, ಸಾಮರ್ಥ್ಯ ಹಾಗೂ ಭವಿಷ್ಯವನ್ನು ನಿರ್ಧರಿಸುತ್ತದೆ. ಜೊತೆಗೆ ನಮ್ಮ ಜೀವನದಲ್ಲಿ ವೃತ್ತಿ ಜೀವನದ ಆಯ್ಕೆಯ ಮೇಲೂ ಪ್ರಭಲವಾದ ಪ್ರಭಾವ ಬೀರುವುದು ಎನ್ನಲಾಗುವುದು.

ಕೆಲವರು ಅವರ ರಾಶಿಚಕ್ರದ ಆಧಾರದ ಮೇಲೆ ಅತ್ಯುತ್ತಮ ಶೀಕ್ಷಕನಾಗಬಲ್ಲರು. ಶಿಕ್ಷಕ ವೃತ್ತಿಯೇ ಅವರಿಗೆ ಜೀವನಲ್ಲಿ ಶ್ರೇಷ್ಠತೆ ಹಾಗೂ ಹೆಸರನ್ನು ತಂದುಕೊಡುವುದು ಎನ್ನಲಾಗುತ್ತದೆ. ಇಂದು ಸಪ್ಟೆಂಬರ್ 5 ಶಿಕ್ಷಕರ ದಿನಾಚರಣೆ. ಈ ವಿಶೇಷ ದಿನದ ಅಂಗವಾಗಿ ಯಾವ ರಾಶಿಚಕ್ರದವರು ಅತ್ಯುತ್ತಮ ಶಿಕ್ಷಕರಾಗಬಲ್ಲರು ಎನ್ನುವುದನ್ನು ತಿಳಿಸಿಕೊಡುತ್ತಿದ್ದೇವೆ...

ವೃಷಭ
ಈ ರಾಶಿಚಕ್ರದ ಜನರು ಬಲವಾದ ಇಚ್ಛಾಶಕ್ತಿಯನ್ನು ಹೊಂದಿರುತ್ತಾರೆ. ಇವರು ನಂಬಿಗಸ್ತರು ಹಾಗೂ ಶಾಂತಿ ಪ್ರಿಯರು. ಅದ್ಭುತ ತಾಳ್ಮೆಯ ಶಕ್ತಿಯನ್ನು ಹೊಂದಿರುವ ಇವರು ಸ್ವಯಂ ಅವಲಂಬಿತರಾಗಲು ಬಯಸುತ್ತಾರೆ. ವಿಶ್ವಾಸಾರ್ಹ ವ್ಯಕ್ತಿಯಾದ ಇವರು ಸಾಕಷ್ಟು ಉತ್ಸಾಹದಲ್ಲಿ ಕೆಲಸ ನಿರ್ವಹಿಸಲು ಮುಂದಾಗುವರು. ಈ ಎಲ್ಲಾ ಗುಣಗಳು ಶಿಕ್ಷಕನಾಗಲು ಉತ್ತಮವಾಗಿರುವುದರಿಂದ ಇವರು ಭೋಧಕನಾಗಿರಲು/ ಅಧ್ಯಾಪಕರಾಗಲು ಸೂಕ್ತ ವ್ಯಕ್ತಿಗಳಾಗಿರುತ್ತಾರೆ ಎನ್ನಲಾಗುವುದು.

ಮಿಥುನ
ಬುದ್ಧಿವಂತ ವ್ಯಕ್ತಿಗಳಾದ ಇವರು ನಿಷ್ಕ್ರಿಯವಾಗಿ ಕುಳಿತುಕೊಳ್ಳಲು ಸಾಧ್ಯವಿಲ್ಲ. ಒಗಟುಗಳನ್ನು ಬಿಡಿಸುವುದು ಹಾಗೂ ಮಿದುಳಿಗೆ ವ್ಯಾಯಾಮವನ್ನು ನೀಡುವುದು ಅತ್ಯುತ್ತಮ ವಿಶ್ರಾಂತಿಯ ಬಗೆ ಎನ್ನಬಹುದು. ಸಹಭಾಗಿತ್ವದಲ್ಲಿ ಕೆಲಸಮಾಡಲು ಬಯಸುವ ಇವರು ಎಲ್ಲರೊಂದಿಗೂ ಕೆಲಸ ಮಾಡಲು ಇಚ್ಛಿಸುತ್ತಾರೆ. ಅಪರಿಚಿತರೊಡನೆ ಹೆಚ್ಚು ಮಾತನಾಡಲು ಬಯಸದ ಇವರು ಸಂವಹನ ಕೌಶಲ್ಯದ ವಿಚಾರದಲ್ಲಿ ಅತ್ಯುತ್ತಮ ಕೌಶಲ್ಯವನ್ನು ಪಡೆದು ಕೊಂಡಿರುತ್ತಾರೆ ಎನ್ನಲಾಗುವುದು. ಇವರು ಶಿಕ್ಷಕ ವೃತ್ತಿಯನ್ನು ಆಯ್ಕೆ ಮಾಡಿಕೊಂಡಾಗ ಅತ್ಯುತ್ತಮವಾಗಿ ಕೆಲಸ ನಿರ್ವಹಿಸುತ್ತಾರೆ.

ಕರ್ಕ
ಇವರು ಬಲವಾದ ಇಚ್ಛಾಶಕ್ತಿಯಿಂದ ಹೆಸರುವಾಸಿಯಾಗಿದ್ದಾರೆ. ಇವರು ತಮ್ಮ ಜೀವನದಲ್ಲಿ ಹೊಂದಿರುವ ಗುರಿಯನ್ನು ಸಾಧಿಸುವ ತನಕ ಬಿಡುವುದಿಲ್ಲ. ಎಂತಹ ಸಂದರ್ಭಗಳು ಎದುರಾದರೂ ಹೆದರುವುದಿಲ್ಲ. ಧೈರ್ಯದಿಂದ ಮುಂದೆ ಸಾಗುವ ಮನೋಭಾವವನ್ನು ಹೊಂದಿರುತ್ತಾರೆ. ಯಾವುದೇ ಕೆಲಸವನ್ನು ಅರ್ಧಕ್ಕೆ ನಿಲ್ಲಿಸುವುದಿಲ್ಲ. ಯಾವುದೇ ಕೆಲಸವನ್ನು ನಿರ್ವಹಿಸುವ ಮುನ್ನ ಚೆನ್ನಾಗಿ ಯೋಚಿಸುತ್ತಾರೆ. ಇವರು ಬೋಧನೆಯ ವೃತ್ತಿಯನ್ನು ಆಯ್ಕೆಮಾಡಿಕೊಂಡರೆ ಭಾವನಾತ್ಮಕವಾಗಿಯೂ ಅತ್ಯುತ್ತಮವಾಗಿ ಕೆಲಸ ನಿರ್ವಹಿಸುತ್ತಾರೆ. ಜೊತೆಗೆ ಯಶಸ್ಸು ದೊರೆಯುವುದು ಎನ್ನಲಾಗುವುದು.

ಕನ್ಯಾ
ಇವರು ಶ್ರಮಜೀವಿಗಳು ಎನ್ನಬಹುದು. ಆದರೆ ಇವರು ಇವರಿಗೆ ಇಷ್ಟವಾದ ಅಥವಾ ಆಸಕ್ತಿಯನ್ನು ಹೊಂದಿದ್ದ ಕೆಲಸದಲ್ಲಿ ಮಾತ್ರ ಹೆಚ್ಚಿನ ಶ್ರಮ ವಹಿಸುತ್ತಾರೆ ಎನ್ನಲಾಗುವುದು. ಇತರರ ಮೇಲೆ ಪ್ರಭಾವ ಬೀರುವುದರಲ್ಲಿ ಎತ್ತಿದ ಕೈ ಎನ್ನಬಹುದು. ವಿವಿಧ ವಿಷಯಗಳ ಕುರಿತು ಹೆಚ್ಚಿನ ಜ್ಞಾನವನ್ನು ಹೊಂದಲು ಪ್ರಯತ್ನಿಸುವರು. ಹಾಗಾಗಿ ಇವರು ಶಿಕ್ಷಕ ವೃತ್ತಿಯನ್ನು ಆಯ್ಕೆ ಮಾಡಿಕೊಂಡರೆ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಕನಾಗಿ ಕಾರ್ಯ ನಿರ್ವಹಿಸಬಲ್ಲರು.



Click it and Unblock the Notifications