For Quick Alerts
ALLOW NOTIFICATIONS  
For Daily Alerts

ಹೌದು! ಜೂನ್ ತಿಂಗಳಲ್ಲಿ ಈ ನಾಲ್ಕು ರಾಶಿಯವರಿಗೆ ಸಮಸ್ಯೆ ಕಾಡಲಿದೆ!!

|

ಸಮಸ್ಯೆ ಯಾರಿಗೆ ಇರುವುದಿಲ್ಲ ಹೇಳಿ? ಪ್ರತಿಯೊಬ್ಬರು ಒಂದಲ್ಲಾ ಒಂದು ಸಮಸ್ಯೆ ಹಾಗೂ ಒತ್ತಡದಿಂದ ಬಳಲುತ್ತಲೇ ಇರುತ್ತಾರೆ. ಅದರಲ್ಲಿ ಕೆಲವರು ತಮ್ಮ ಕಷ್ಟಗಳನ್ನು ತೋರಿಸಿಕೊಳ್ಳದೆ ಇರಬಹುದು. ಕೆಲವರು ಸಮಸ್ಯೆ ಚಿಕ್ಕದಾಗಿದ್ದರೂ ಬಹುದೊಡ್ಡ ಸಮಸ್ಯೆ ಬಂದೊದಗಿರುವಂತೆ ವರ್ತಿಸಬಹುದು. ಸಮಸ್ಯೆಗಳನ್ನು ಹೇಗೆ ಬಗೆಹರಿಸಬೇಕು ಎನ್ನುವುದನ್ನು ಸೂಕ್ತ ಚಿಂತನೆ ಹಾಗೂ ಪರಿಹಾರ ಕಂಡುಕೊಳ್ಳುವುದರ ಮೂಲಕ ನಿವಾರಿಸಬಹುದು. ಸಾವಿಲ್ಲದ ಮನೆಯಿಲ್ಲ ಎನ್ನುವಂತೆ ಸಮಸ್ಯೆ ಇಲ್ಲದ ವ್ಯಕ್ತಿಗಳಿಲ್ಲ ಎನ್ನುವುದನ್ನು ಪ್ರತಿಯೊಬ್ಬರು ಅರಿಯಬೇಕು.

ಈ ವರ್ಷದಲ್ಲಿ ಗ್ರಹಗತಿಗಳು ವಿಶೇಷವಾದ ಸಂಚಾರ ಹಾಗೂ ಬದಲಾವಣೆಯನ್ನು ಹೊಂದುವುದರಿಂದ ಪ್ರತಿಯೊಂದು ರಾಶಿಚಕ್ರದವರು ಸಹ ಗಮನಾರ್ಹ ಪರಿಣಾಮವನ್ನು ಅನುಭವಿಸುತ್ತಾರೆ ಎಂದು ಹೇಳಲಾಗುವುದು. ಅಂದರೆ ಅದೃಷ್ಟ ಹಾಗೂ ದುರಾದೃಷ್ಟ ಎನ್ನುವುದು ಒಂದಾದ ನಂತರ ಒಂದರಂತೆ ಬರುತ್ತದೆಯಾದರೂ ಎರಡರಲ್ಲೂ ಸಮಾನತೆ ಇದೆ ಎಂದು ಹೇಳಲಾಗುವುದು. ಜೂನ್ ತಿಂಗಳಲ್ಲಿ ಉಂಟಾಗುವ ಕೆಲವು ಗ್ರಹಗಳ ಬದಲಾವಣೆಯು ಆಯ್ದ ರಾಶಿಚಕ್ರಗಳ ಮೇಲೆ ಕಠಿಣವಾದ ಪರಿಸ್ಥಿತಿಯನ್ನು ಒಡ್ಡುವುದು ಎನ್ನಲಾಗುತ್ತದೆ.

ಪ್ರತಿಯೊಂದು ಸಮಸ್ಯೆಗೂ ಪರಿಹಾರ ಎನ್ನುವುದು ಇದ್ದೇ ಇರುತ್ತದೆ. ಕತ್ತಲೆ ಕಳೆದ ಮೇಲೆ ಬೆಳಕು ಬರಲೇ ಬೇಕು ಎನ್ನುವಂತೆ, ಸಮಸ್ಯೆಗಳು ಎದುರಾದಾಗ ಅದಕ್ಕೆ ಸೂಕ್ತ ಪರಿಹಾರ ಮಾಡುವುದರ ಮೂಲಕ ಸುಖವನ್ನು ಪಡೆಯಬಹುದು. ಹಾಗೆಯೇ ಜೂನ್ ತಿಂಗಳಲ್ಲಿ ನಾಲ್ಕು ರಾಶಿಚಕ್ರದವರು ಅತ್ಯಂತ ಕಠಿಣ ಸಮಯವನ್ನು ಅನುಭವಿಸುವರು. ಆ ಸಂದರ್ಭದಲ್ಲಿ ಕೆಲವು ನಿರ್ಣಯ ಹಾಗೂ ಪರಿಹಾರ ಕ್ರಮ ಅನುಸರಿಸಿದರೆ ತಕ್ಕಮಟ್ಟಿಗೆ ಸುಧಾರಣೆಯನ್ನು ಕಾಣಬಹುದು ಎಂದು ಹೇಳಲಾಗುವುದು...

1.ಕರ್ಕ

1.ಕರ್ಕ

ಇವರು ತಮ್ಮ ನಿರೀಕ್ಷೆಯ ರೀತಿಯಲ್ಲಿಯೇ ಪರಿವರ್ತನೆಯನ್ನು ಕಾಣುತ್ತಾ ಸಾಗುತ್ತಿರುತ್ತಾರೆ. ಒಂದು ಪ್ರಮುಖ ಮಾರ್ಗದಿಂದ ನಿಮ್ಮ ನಡೆ ಸಾಗುತ್ತಿದ್ದರೆ ಜೂನ್ ತಿಂಗಳಲ್ಲಿ ಅದು ಕೆಲವು ಅಡೆತಡೆಗಳನ್ನು ಅನುಭವಿಸುವುದು. ಉದ್ಯೋಗ ಕ್ಷೇತ್ರದಲ್ಲಿ ಗೊಂದಲ ಹಾಗೂ ಸಮಸ್ಯೆಗಳು ನಿಮ್ಮನ್ನು ಅಲ್ಲಾಡಿಸಬಹುದು.

ಕರ್ಕ

ಕರ್ಕ

ಪಾಲುದಾರರ ಅಸಮರ್ಪಕ ವರ್ತನೆಯಿಂದ ಇವರು ವಿಭಿನ್ನ ತಿರುವನ್ನು ಪಡೆದುಕೊಳ್ಳಬಹುದು. ನೀವು ಅಂದುಕೊಂಡಂತೆ ಯಾವ ಯೋಜನೆಯೂ ಸುಸೂತ್ರವಾಗಿ ನೆರವೇರದು. ಹಾಗಾಗಿ ಎಲ್ಲವನ್ನು ಸ್ಥಿರವಾಗಿ ನಿಯಂತ್ರಣದಲ್ಲಿಟ್ಟುಕೊಳ್ಳುವುದರ ಮೂಲಕ ಸಮಸ್ಯೆಗಳನ್ನು ಸ್ವಲ್ಪ ಮಟ್ಟಿಗೆ ತಗ್ಗಿಸಬಹುದು.

2.ಕನ್ಯಾ

2.ಕನ್ಯಾ

ಈ ತಿಂಗಳಲ್ಲಿ ಇವರು ವಿಶ್ರಾಂತಿಯನ್ನು ಪಡೆದುಕೊಳ್ಳಬೇಕು. ಮೇಣದ ಬತ್ತಿಯ ಎರಡು ತುದಿಯಲ್ಲೂ ಉರಿಯುತ್ತಿದ್ದಂತೆ ಸಮಸ್ಯೆಗಳು ಅಥವಾ ಪರಿಸ್ಥಿತಿಗಳು ನಿಮ್ಮನ್ನು ಅಲ್ಲಾಡಿಸುವುದು ಅಥವಾ ಸುಡಬಹುದು. ವೃತ್ತಿ ಕ್ಷೇತ್ರದಲ್ಲಿ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ವಿಪರೀತ ಮಟ್ಟವನ್ನು ತಲುಪಬಹುದು. ಹಾಗಾಗಿ ಆದಷ್ಟು ನಿಮ್ಮ ವಿಶ್ರಾಂತಿಗಾಗಿ ಸ್ವಲ್ಪ ಸಮಯವನ್ನು ನಿಗದಿಪಡಿಸಿ. ಒಂದಷ್ಟು ಸಮಯವನ್ನು ನಿದ್ರೆಗೆ ಮೀಸಲಿಡಿ. ಆಗ ಮಾನಸಿಕ ಹಾಗೂ ದೈಹಿಕ ಆರೋಗ್ಯದ ಸುಧಾರಣೆಯನ್ನು ಕಾಣುವಿರಿ. ಈ ತಿಂಗಳಲ್ಲಿ ಸಾಮಾಜಿಕ ಜೀವನ, ವೈಕ್ತಿಕ ಜೀವನ ಹಾಗೂ ಪ್ರಣಯದ ಜೀವನವು ಹಿನ್ನೆಡೆಯ ಮೂಲಕ ಹಾದುಹೋಗುವುದು. ಹಾಗಾಗಿ ನೀವು ಆದಷ್ಟು

ಆಂತರಿಕ ನೆಮ್ಮದಿಯನ್ನು ಹೊಂದಲು ವಿಶ್ರಾಂತಿಯನ್ನು ಪಡೆಯುವುದು ಸೂಕ್ತ ಎನ್ನಲಾಗುವುದು.

3. ಧನು

3. ಧನು

ಈ ತಿಂಗಳಲ್ಲಿ ನಿಮ್ಮ ಜೀವನದ ಪ್ರತಿಯೊಂದು ವಿಚಾರವು ಚಂಚಲತೆಯಿಂದ ಕೂಡಿರುತ್ತದೆ. ಅದು ಇವರಿಗೆ ಒಂದಿಷ್ಟು ನಿರಾಶೆಗೆ ಕಾರಣವಾಗಬಹುದು. ಈ ತಿಂಗಳಲ್ಲಿ ನಿಮ್ಮ ವೃತ್ತಿ ಜೀವನದಲ್ಲಿ ಕಷ್ಟಕರವಾದ ಸನ್ನಿವೇಶಗಳನ್ನು ಎದುರಿಸಬೇಕಾಗುವುದು. ಅಲ್ಲದೆ ಋಣಾತ್ಮಕ ಪರಿಣಾಮವನ್ನು ಅನುಭವಿಸಬೇಕಾಗುವುದು. ಪ್ರೀತಿಯ ಜೀವನವು ಸಹ ಅಷ್ಟು ಉತ್ತಮ ಸ್ಥಿತಿಯಲ್ಲಿ ಇರುವುದಿಲ್ಲ. ಸಮಯವು ಸ್ವಲ್ಪ ಕ್ಲಿಷ್ಟಕರವಾಗಿಯೇ ತೋರುತ್ತದೆ. ಹಾಗಾಗಿ ನೀವು ನಿಮ್ಮ ಒತ್ತಡವನ್ನು ಕಡಿಮೆ ಮಾಡಿಕೊಳ್ಳಲು ಒಂದಿಷ್ಟು ವ್ಯಾಯಾಮಗಳ ಮೊರೆ ಹೋಗುವುದು ಸೂಕ್ತ ಎಂದು ಜ್ಯೋತಿಷ್ಯ ಶಾಸ್ತ್ರ ಸಲಹೆ ನೀಡುವುದು.

4.ಮಕರ

4.ಮಕರ

ಇವರು ಜೂನ್ ತಿಂಗಳಲ್ಲಿ ಸಾಕಷ್ಟು ತಾಳ್ಮೆ ಹಾಗೂ ಸಹಿಸಿಕೊಳ್ಳುವ ಶಕ್ತಿಯನ್ನು ಹೊಂದಬೇಕು. ಆಗ ವೃತ್ತಿ ಕ್ಷೇತ್ರದಲ್ಲಿ ಹಾಗೂ ವೈಯಕ್ತಿಕ ಜೀವನದಲ್ಲಿ ಉಂಟಾಗುವ ಸಮಸ್ಯೆ ಹಾಗೂ ಗೊಂದಲಗಳ ವಿರುದ್ಧ ಹೋರಾಡಲು ಸಾಧ್ಯವಾಗುವುದು. ಇವರಿಗೆ ತಮ್ಮ ಕಚೇರಿಯಲ್ಲಿ ಜವಾಬ್ದಾರಿ ವಿಚಾರಕ್ಕೆ ಸಮಸ್ಯೆ ಉಂಟಾಗಬಹುದು. ಅದು ಇವರ ನಿಯಂತ್ರಣದಲ್ಲಿ ಇರುವುದಿಲ್ಲ. ನಿಮ್ಮ ಪಾಲುದಾರರಲ್ಲಿ ಉತ್ತಮ ಗುಣ, ತಾಳ್ಮೆ ಹಾಗೂ ತಿಳುವಳಿಕೆಯ ಗುಣವನ್ನು ಗುರುತಿಸಿ. ಜೊತೆಗೆ ಅವರನ್ನು

ಅರ್ಥಮಾಡಿಕೊಳ್ಳಲು ಪ್ರಯತ್ನಿಸಿ. ಅವರು ನಿಮ್ಮನ್ನು ಪರೀಕ್ಷೆಗೆ ಒಳಪಡಿಸುತ್ತಾರೆ. ಆಗ ಅವರು ನಿಮ್ಮ ಬಗ್ಗೆ ಧನಾತ್ಮಕ ನಿಲುವನ್ನು ಹೊಂದುವರು. ಈ ತಿಂಗಳಲ್ಲಿ ಬರುವ ಸಮಸ್ಯೆಗಳಿಂದ ಒತ್ತಡ ಉಂಟಾಗುವುದು. ಒತ್ತಡವನ್ನು ನಿಯಂತ್ರಿಸಲು ಸೂಕ್ತ ವ್ಯಾಯಾಮಗಳನ್ನು ಅನುಸರಿಸಬೇಕು. ಆಗಲೇ ಮಾನಸಿಕ ಹಾಗೂ ದೈಹಿಕ ಆರೋಗ್ಯ ಉತ್ತಮವಾಗಿರುತ್ತದೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ.

English summary

Zodiac Signs That Will Have The Toughest June

A lot of us associate June with positivity, good fortune, and fun. It's the beginning of summer, so the vibe is, of course, pretty magical. But, sometimes, the stars have other things in mind, even during wonderful summer months — and not every zodiac sign is always destined to have an easy-go-lucky month. In fact, there are four zodiac signs that will have a tough June in 2018, due to some unfortunate planetary choreography. While certain signs will be positioned for epic summer romances, work wins, and bouts of luck, other signs will be dealt a hand of stressful communication issues, professional setbacks, and romantic disasters.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more