Latest Updates
-
Dum Idli: ಇದು ಬ್ರೇಕ್ ಫಾಸ್ಟ್ನ ರಾಜ! ಉಳಿದ ಇಡ್ಲಿಗಳಿಂದ ಸ್ಪೈಸಿ ದಮ್ ಇಡ್ಲಿ.. ಹೋಟೆಲ್ ಶೈಲಿಯಲ್ಲಿ ಮಾಡೋದು ಹೇಗೆ? -
ಯುಗಾದಿ ದಿನ ಈ 5 ಕೆಲಸ ಮಾಡಲೇಬೇಕು! ಪಚಡಿ ತಿನ್ನುವಾಗ ಈ ಶ್ಲೋಕ ಹೇಳಿ.. ಧರ್ಮಸಿಂಧು ರಹಸ್ಯ ಇಲ್ಲಿದೆ -
Ugadi Special Recipes: ನಿಮಿಷಗಳಲ್ಲಿ 3 ಸೂಪರ್ ರೆಸಿಪಿಗಳು! ಅಡುಗೆ ಬಾರದವರಿಗೂ ಇದು ಸುಲಭ -
ಹುಷಾರ್.. ಚೈತ್ರ ನವರಾತ್ರಿ ಬಳಿಕ ಈ ರಾಶಿಯವರಿಗೆ ಸಾಲು ಸಾಲು ಕಷ್ಟ! ಯಾರಿಗೆ ಲಾಭ, ಯಾರಿಗೆ ನಷ್ಟ ತಿಳಿಯಿರಿ -
ಯುಗಾದಿಗೆ ಈ 4 ಖಾದ್ಯಗಳನ್ನು ಮಾಡಲೇಬೇಕು! ನಿಮ್ಮ ಹಬ್ಬ ಇನ್ನಷ್ಟು ಸ್ಪೆಷಲ್.. ಸಂಪೂರ್ಣ ಲಿಸ್ಟ್ ಇಲ್ಲಿದೆ -
ಯುಗಾದಿ ದಿನ.. ಪ್ರೇಮ ಜೀವನದಲ್ಲಿ ಯಾರಿಗೆ ಬೇವು? ಯಾರಿಗೆ ಬೆಲ್ಲ? -
March 19 Horoscope: ಯುಗಾದಿ ದಿನ ಯಾರಿಗೆ ಶುಭದಿನ? -
Ugadi Wishes 2026: ಯುಗಾದಿ 2026ರ ಶುಭಾಶಯಗಳು! ಸ್ನೇಹಿತರು, ಕುಟುಂಬದವರಿಗೆ ಕಳುಹಿಸಲು ಇಲ್ಲಿವೆ 50+ ಸಂದೇಶಗಳು -
ಹಬ್ಬಕ್ಕೆ ಮಾಡಿ ಗೋಧಿ ಪಾಯಸ: ಚೂರು ಉಳಿಯದಂತೆ ಖಾಲಿ ಮಾಡೋಡು ಖಚಿತ! -
ಈರುಳ್ಳಿ ಬೇಡ.. ಬೆಳ್ಳುಳ್ಳಿ ಬೇಡ..!! ಬ್ರಾಹ್ಮಣ ಶೈಲಿಯ ವೆಜ್ ಕುರ್ಮಾ ಮಾಡೋದು ಹೇಗೆ? ಇಲ್ಲಿದೆ ಸೀಕ್ರೆಟ್
ಈ ರಾಶಿಚಕ್ರದ ವ್ಯಕ್ತಿಗಳು ನಂತರದ ಜೀವನದಲ್ಲಿ ಸಾಕಷ್ಟು ಯಶಸ್ಸನ್ನು ಪಡೆದುಕೊಳ್ಳುತ್ತಾರೆ
ಯಾರೂ ಸಹ ಉತ್ತಮ ಗುರಿ ಅಥವಾ ಯೋಜನೆಯನ್ನು ಹೊಂದುವ ಮಾತ್ರಕ್ಕೆ ರಾತ್ರಿ ಕಳೆದು ಬೆಳಗಾಗುವುದ ರೊಳಗೆ ಯಶಸ್ಸನ್ನು ಪಡೆದುಕೊಳ್ಳುವುದಿಲ್ಲ. ಹೊಂದಿರುವ ಗುರಿ ಅಥವಾ ಯೋಜನೆಯು ಸಾಕಾರಗೊಳಿಸಿ ಕೊಳ್ಳಲು ಸಾಕಷ್ಟು ಶ್ರಮವನ್ನು ವಹಿಸಬೇಕು. ನಿರಂತರ ಶ್ರಮ ಹಾಗೂ ನಿಷ್ಠೆಯಿಂದ ಒಂದು ದಿನ ಗುರಿಯ ಸಾಧನೆಯಲ್ಲಿ ಯಶಸ್ಸನ್ನು ಪಡೆದುಕೊಳ್ಳುತ್ತಾನೆ. ಕೆಲವರು ಜೀವನದ ಆಗು ಹೋಗುಗಳ ಬಗ್ಗೆ ನಿರ್ಣಯ ಕೈಗೊಳ್ಳುವುದು ಬಹಳ ನಿಧಾನ. ಅವರ ನಿಧಾನಗತಿಯ ಚಾಲನೆಯಿಂದ ಯೋಜನೆಗಳು ನಿಧಾನವಾಗುತ್ತವೆ. ಯಶಸ್ಸನ್ನು ಸಹ ನಿಧಾನವಾಗಿಯೇ ಪಡೆದುಕೊಳ್ಳುತ್ತಾರೆ.
ಜೋತಿಷ್ಯ ಶಾಸ್ತ್ರದ ಪ್ರಕಾರ ಕೆಲವು ರಾಶಿಚಕ್ರದ ವ್ಯಕ್ತಿಗಳು ತಮ್ಮ ಜೀವನದಲ್ಲಿ ನಿಧಾನವಾಗಿ ಸಾಗುತ್ತಾರೆ. ಅವರ ಜೀವನದಲ್ಲಿ ಸಾಕಷ್ಟು ಸಮಯ ಕಳೆದ ನಂತರ ಯಶಸ್ಸನ್ನು ಪಡೆದುಕೊಳ್ಳುತ್ತಾರೆ ಎಂದು ಹೇಳಲಾಗುವುದು. ಪ್ರತಿಯೊಬ್ಬರು ಜೀವನದಲ್ಲಿ ಯಶಸ್ಸನ್ನು ಪಡೆಯುವ ಉದ್ದೇಶಕ್ಕೆ ಸಾಕಷ್ಟು ಶ್ರಮವನ್ನು ವಹಿಸುತ್ತಾರೆ. ಅದಕ್ಕಾಗಿ ಸೂಕ್ತ ಹಣ ಅಥವಾ ಶ್ರಮದ ಹೂಡಿಕೆ ಮಾಡಬೇಕಾಗುವುದು. ಆದರೆ ಅದರ ಫಲಿತಾಂಶ ಕೆಲವೊಮ್ಮೆ ಬಹುಬೇಗ ದೊರೆಯಬಹುದು. ಇಲ್ಲವೇ ನಿಧಾನವಾಗಿಯೇ ದೊರೆಯುವುದು.

ಹೌದು, ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಕೆಲವು ರಾಶಿಚಕ್ರದವರು ಎಷ್ಟೇ ಶ್ರಮವಹಿಸಿದರೂ ಅವರು ನಂತರದ ಜೀವನ ಅಥವಾ ಅಧಿಕ ಸಮಯದ ಬಳಿಕ ಯಶಸ್ಸನ್ನು ಕಂಡುಕೊಳ್ಳುತ್ತಾರೆ. ಅವರ ಯಶಸ್ಸಿನ ಮಟ್ಟವು ನಿಧಾನವಾಗಿದ್ದಾದರೂ ಅತ್ಯಂತ ಶ್ರೇಷ್ಠ ಹಾಗೂ ಮಹತ್ತರವಾಗಿರುತ್ತದೆ ಎನ್ನಲಾಗುವುದು. ಹಾಗಾಗಿ ಅವರನ್ನು ನಿಧಾನವಾಗಿ ಫಲ ಬಿಡುವ ಗಿಡ ಎಂದು ಹೇಳಬಹುದು. ಹಾಗಾದರೆ ಆ ರಾಶಿಚಕ್ರಗಳು ಯಾವವು? ಅವರ ಯಶಸ್ಸು ಹೇಗಿರುತ್ತದೆ ಎನ್ನುವುದನ್ನು ತಿಳಿದುಕೊಳ್ಳಲು ಮುಂದಿರುವ ವಿವರಣೆಯನ್ನು ಪರಿಶೀಲಿಸಿ.

ವೃಷಭ
ಈ ರಾಶಿಯ ವ್ಯಕ್ತಿಗಳು ಒಂದು ರಾತ್ರಿ ಬೆಳಗಾಗುವುದರಲ್ಲಿಯೇ ಯಶಸ್ಸನ್ನು ಕಾಣುವುದಿಲ್ಲ. ಅವರು ಬಲವಾದ ಕೆಲಸ ನೀತಿಯನ್ನು ಅನುಸರಿಸುತ್ತಾರೆ. ವಿಶ್ರಾಂತಿ ಮತ್ತು ಕಠಿಣ ಕೆಲಸದ ನಡುವೆ ಸಮತೋಲನವನ್ನು ಅನುಸರಿಸುತ್ತಾರೆ. ತಮ್ಮ ಕೆಲಸ ಹಾಗೂ ಗುರಿ ಸಾಧನೆಯ ವಿಚಾರದಲ್ಲಿ ಸೂಕ್ತ ಕ್ರಮ ಹಾಗೂ ಶ್ರಮವನ್ನು ವ್ಯಯಿಸುತ್ತಾರೆ. ನಂತರ ಬಂದ ಯಶಸ್ಸನ್ನು ಆನಂದಿಸುತ್ತಾರೆ.
Most Read: ದೇಹದ ಅಂಗಾಂಗಗಳು ನಿಮ್ಮ ವ್ಯಕ್ತಿತ್ವ ಹೇಳುವುದು!

ವೃಷಭ
ಈ ರಾಶಿಚಕ್ರದವರು ನಿಧಾನ ಮತ್ತು ಸ್ಥಿರ ಓಟವನ್ನು ಹೊಂದಿದವರಾಗಿರುತ್ತಾರೆ. ಕೆಲವು ಸಮಯದ ಬಳಿಕ ಅಥವಾ ಕಾಲಾಂತರದಲ್ಲಿ ಒಂದು ಘನ ವೃತ್ತಿ ಜೀವನ ಹಾಗೂ ಯಶಸ್ಸನ್ನು ಪಡೆದುಕೊಳ್ಳುತ್ತಾರೆ ಎಂದು ಹೇಳಲಾಗುವುದು.

ಕರ್ಕ
ಈ ರಾಶಿಚಕ್ರದವರು ಕುಟುಂಬದಿಂದ ಹೆಚ್ಚು ಪ್ರಚೋದಿತ ಮತ್ತು ಸ್ಥಿರ ಜೀವನದ ಆಸೆಯನ್ನು ಹೊಂದಿರುತ್ತಾರೆ. ಹಾಗಾಗಿ ಕೆಲವೊಮ್ಮೆ ಇವರು ಯಶಸ್ಸನ್ನು ಹೊಂದಲು ನಿಧಾನವಾಗಬಹುದು. ಇವರಲ್ಲಿ ದೀರ್ಘ ಸಮಯದ ಮಹತ್ವಾಕಾಂಕ್ಷೆಯನ್ನು ಕಾಣಬಹುದು. ಸಂಗಾತಿ ಅಥವಾ ಕುಟುಂಬದವರು ಪ್ರವೇಶ ಪಡೆದರೆ ಯಶಸ್ಸಿನ ಮಹತ್ವಾಕಾಂಕ್ಷೆಗಳು ದ್ವಿಗುಣವಾಗುತ್ತದೆ.

ಕರ್ಕ
ಇವರು ಆಯ್ಕೆ ಮಾಡಿಕೊಳ್ಳುವ ವೃತ್ತಿ ಜೀವನವು ನಿಧಾನವಾಗಿ ಯಶಸ್ಸು ನೀಡುವುದು ಆಗಿರಬಹುದು. ಇವರು ವ್ಯವಹಾರ ಪ್ರಾರಂಭಿಸಲು ಅಥವಾ ಉದ್ಯಮಶೀಲ ಮಾರ್ಗವನ್ನು ಹೊಂದಲು ಜಾಣ್ಮೆಯನ್ನು ಬಳಸುವರು. ಅದರ ಪರಿಣಾಮವಾಗಿ ನಿಧಾನವಾದರೂ ನಂತರದ ಜೀವನದಲ್ಲಿ ಅತ್ಯುತ್ತಮ ಯಶಸ್ಸನ್ನು ಪಡೆದುಕೊಳ್ಳುವರು.

ವೃಶ್ಚಿಕ
ಈ ರಾಶಿಯ ವ್ಯಕ್ತಿಗಳು ಅತ್ಯಂತ ಶ್ರಮಜೀವಿಗಳು ಎನ್ನಬಹುದು. ಇವರು ಹಿಡಿದ ಕೆಲಸದಲ್ಲಿ ಸಾಧನೆ ಹಾಗೂ ಯಶಸ್ಸನ್ನು ಪಡೆದುಕೊಳ್ಳುವರು. ಆದರೆ ಇವರಿಗೆ ಯಶಸ್ಸು ಎನ್ನುವುದು ಬಹಳ ನಿಧಾನವಾಗಿ ಅಥವಾ ನಂತರದ ಜೀವನದಲ್ಲಿ ಪಡೆದುಕೊಳ್ಳುತ್ತಾರೆ. ಯಶಸ್ಸು ನಿಧಾನವಾದರೂ ಅತ್ಯುತ್ತಮವಾಗಿರುತ್ತದೆ.

ವೃಶ್ಚಿಕ
ವೃಶ್ಚಿಕ ರಾಶಿಯವರು ನಂಬಲಾಗದಷ್ಟು ವ್ಯವಹಾರದ ಅರಿವನ್ನು ಒಳಗೊಂಡಿರುತ್ತಾರೆ. ಇವರು ಅಲ್ಪಾವಧಿಯ ಲಾಭವನ್ನು ಆಗಾಗ ಪಡೆದುಕೊಂಡರೂ ಸೂಕ್ತ ಯೋಜನೆಯ ಹೂಡಿಕೆ ಹಾಗೂ ಶ್ರಮದ ಫಲಿತಾಂಶವಾಗಿ ಅತ್ಯುತ್ತಮ ಯಶಸ್ಸನ್ನು ಪಡೆದುಕೊಳ್ಳುವರು. ತೆರೆಮರೆಯಲ್ಲಿರುವಂತೆ ಕೆಲಸ ಮಾಡುತ್ತಾರೆಯಾದರೂ ಅಂತಿಮವಾಗಿ ಸೂಕ್ತ ಯಶಸ್ಸನ್ನು ಪಡೆದುಕೊಳ್ಳುವರು.

ಮೀನ
ಈ ರಾಶಿಯವರು ಸಹ ತಡವಾಗಿ ಹೂ ಬಿಡುವ ವ್ಯಕ್ತಿಗಳು ಅಥವಾ ನಿಧಾನವಾಗಿ ಯಶಸ್ಸನ್ನು ಪಡೆದುಕೊಳ್ಳುವವರು ಎಂದು ಹೇಳಲಾಗುತ್ತದೆ. ಇವರು ಯಶಸ್ಸನ್ನು ಪಡೆಯುವುದರ ಮೊದಲು ಅನೇಕ ಪಥಗಳನ್ನು ಅನುಸರಿಸುತ್ತಾರೆ. ಅದರ ಪರಿಣಾಮವಾಗಿಯೇ ಯಶಸ್ಸು ನಿಧಾನವಾಗಿ ದೊರೆಯುವುದು. ಸೂಕ್ತ ಮಾರ್ಗ ಅಥವಾ ಗುರಿಯ ಸಾಧನೆಗೆ ಸಾಕಷ್ಟು ಸಮಯವನ್ನು ಇವರು ವಿನಿಯೋಗಿಸಬೇಕಾಗುವುದು.

ಮೀನ
ಇನ್ನು ಮೀನ ರಾಶಿಯವರು ಇವರು ತಮ್ಮ ಅಂತರ್‍ದೃಷ್ಟಿಯ ಮೇಲೆ ಕೇಂದ್ರೀಕರಿಸಿದ ನಂತರ ಗುರಿ ಸಾಧನೆಗೆ ಸಜ್ಜಾಗುವರು. ಬಳಿಕ ಯಶಸ್ಸನ್ನು ಪಡೆದುಕೊಳ್ಳುವರು. ಇವರ ಯಶಸ್ಸು ನಿಧಾನಗತಿಯದ್ದಾಗಿದ್ದರೂ ಬಹತ್ತರವಾಗಿರುತ್ತದೆ ಎನ್ನಲಾಗುವುದು. ನಿಧಾನ ಮತ್ತು ಸ್ಥಿರವಾದ ವಿಧಾನದಿಂದ ಯಶಸ್ಸನ್ನು ಹೊಂದುವುದರ ಮೂಲಕ ಆನಂದದ ಜೀವನವನ್ನು ಅನುಭವಿಸುತ್ತಾರೆ.



Click it and Unblock the Notifications











