Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ದೇಹದ ಅಂಗಾಂಗಗಳು ನಿಮ್ಮ ವ್ಯಕ್ತಿತ್ವ ಹೇಳುವುದು!
ವ್ಯಕ್ತಿಯೊಬ್ಬನ ವ್ಯಕ್ತಿತ್ವವನ್ನು ತಿಳಿಯಲು ಹಲವಾರು ವಿಧಾನಗಳು ಇವೆ. ಈ ಬಗ್ಗೆ ಬೋಲ್ಡ್ ಸ್ಕೈ ನಿಮಗೆ ಕೆಲವೊಂದು ಲೇಖನಗಳ ಮೂಲಕ ತಿಳಿಸಿಕೊಟ್ಟಿದೆ. ಇಂದಿನ ಲೇಖನದಲ್ಲಿ ದೇಹದ ಅಂಗಾಂಗಳಿಂದ ವ್ಯಕ್ತಿತ್ವ ತಿಳಿಯುವುದು ಹೇಗೆ ಎಂದು ನೋಡಬಹುದು. ಕೆಲವೊಂದು ಅಧ್ಯಯನಗಳ ಪ್ರಕಾರ ಅಂಗಾಂಗಗಳು ನಿಮ್ಮ ವ್ಯಕ್ತಿತ್ವ ಹಾಗೂ ಭವಿಷ್ಯವನ್ನು ತಿಳಿಸುವುದು ಎಂದು ಹೇಳಿವೆ. ಮೂಗಿನಿಂದ ಹಿಡಿದು ಮುಖ, ತುಟಿಗಳು ಹೀಗೆ ಹಲವಾರು ಅಂಗಾಂಗಗಳು ವ್ಯಕ್ತಿತ್ವ ತಿಳಿಯಲು ಪ್ರಮುಖ ಪಾತ್ರ ವಹಿಸುವುದು. ವಿವಿಧ ಅಂಗಾಂಗಗಳು ನಿಮ್ಮ ವ್ಯಕ್ತಿತ್ವವನ್ನು ಹೇಗೆ ಹೊರಚೆಲ್ಲುವುದು ಎಂದು ತಿಳಿಸಿಕೊಡಲಿದ್ದೇವೆ. ಇದನ್ನು ಓದಲು ತಯಾರಾಗಿರಿ. ದೇಹದ ವಿವಿಧ ಭಾಗಗಳು ವ್ಯಕ್ತಿತ್ವ ಹೇಗೆ ಹೇಳುವುದು....

ಮೂಗಿನ ಗಾತ್ರ
ಮೂಗಿನ ಗಾತ್ರವು ವ್ಯಕ್ತಿಯ ವ್ಯಕ್ತಿತ್ವ ತಿಳಿಯುವಲ್ಲಿ ಪ್ರಮುಖ ಪಾತ್ರ ವಹಿಸುವುದು ಎಂದು ಅಧ್ಯಯನಗಳು ಹೇಳಿವೆ. ವ್ಯಕ್ತಿಯ ಮೂಗು ಉದ್ದಗಿದ್ದರೆ ಆಗ ವ್ಯಕ್ತಿಯ ತನ್ನ ವೃತ್ತಿ ಹಾಗೂ ವೈಯಕ್ತಿಕ ಬದುಕಿನಲ್ಲಿ ತುಂಬಾ ಮಹತ್ವಾಕಾಂಕ್ಷಿಯಾಗಿರುವನು. ಇವರು ತುಂಬಾ ಕಠಿಣ ಪರಿಶ್ರಮಿಗಳು ಹಾಗೂ ಯಾವಾಗಲೂ ತುಂಬಾ ಪರಿಪೂರ್ಣತೆ ಹೊಂದಲು ಪ್ರಯತ್ನಿಸುವರು.

ಮೂಗಿನ ಗಾತ್ರ
ವ್ಯಕ್ತಿಯ ಮೂಗು ಸಣ್ಣದಾಗಿದ್ದರೆ, ಆ ವ್ಯಕ್ತಿಯು ತುಂಬಾ ಸೂಕ್ಷ್ಮ ಹಾಗೂ ಪ್ರಾಮಾಣಿಕ ವ್ಯಕ್ತಿ ಎಂದು ಹೇಳಲಾಗುತ್ತದೆ. ಈ ವ್ಯಕ್ತಿಗಳು ಭಾವನೆಗಳಿಗೆ ಎಲ್ಲಕ್ಕಿಂತಲೂ ಹೆಚ್ಚಿನ ಮಹತ್ವ ನೀಡುವರು.
ವ್ಯಕ್ತಿಯ ಮೂಗು ಚೂಪಾಗಿದ್ದರೆ:ವ್ಯಕ್ತಿಯ ಮೂಗು ಚೂಪಾಗಿದ್ದರೆ ಆಗ ಅವರು ಆರ್ಥಿಕ ನಿರ್ಧಾರ ಮಾಡುವಲ್ಲಿ ತುಂಬಾ ಒಳ್ಳೆಯವರು ಎಂದು ಪರಿಗಣಿಸಲಾಗಿದೆ. ಇನ್ನೊಂದು ಕಡೆ ಮೂಗಿನ ದ್ವಾರವು ದೊಡ್ಡದಾಗಿದ್ದರೆ ಆಗ ಆ ವ್ಯಕ್ತಿಗಳು ಗಳಿಸಿದ ಹಣವನ್ನು ಉಳಿತಾಯ ಮಾಡುವ ಬದಲು ಖರ್ಚು ಮಾಡುವುದು ಹೆಚ್ಚು ಎಂದು ಹೇಳಲಾಗುತ್ತದೆ.
ಮೂಗಿನ ದ್ವಾರವು ಸಣ್ಣದಾಗಿದ್ದರೆ ಆಗ ಆ ವ್ಯಕ್ತಿಗಳಿಗೆ ವೈಯಕ್ತಿಕ ಸಂಬಂಧ ಹಾಗೂ ಕುಟುಂಬದ ಸಮಸ್ಯೆಗಳಿಗೆ ಹೆಚ್ಚು ಬದ್ಧರಾಗಿರುವರು.
ಅಗಲವಾದ ಮೂಗು:ಇಂತಹ ಮೂಗು ಇರುವವರು ದೃಢ ವ್ಯಕ್ತಿತ್ವವನ್ನು ಹೊಂದಿರುತ್ತಾರೆ. ಆದರೆ ಕೋಪಿಷ್ಠರು. ಇವರು ನಿಧಾನವಾಗಿ ಅಳೆದು ತೂಗಿ ನಿರ್ಧಾರ ತೆಗೆದುಕೊಳ್ಳುತ್ತಾರೆ ಮತ್ತು ಇತರರ ಮೇಲೆ ಪ್ರಭಾವ ಬೀರುತ್ತಾರೆ.

ಮುಖದ ಆಕಾರ
ಅಧ್ಯಯನಗಳು ಕಂಡುಕೊಂಡಿರುವಂತಹ ವಿಚಾರದ ಪ್ರಕಾರ ಮುಖದ ಆಕಾರವು ಉದ್ದವಾಗಿದ್ದರೆ ಅಂತಹವರು ತುಂಬಾ ಬುದ್ಧಿವಂತ ವ್ಯಕ್ತಿಗಳಾಗಿರುವರು. ಅಧ್ಯಯನಗಳ ಪ್ರಕಾರ ತುಂಬಾ ವಿಶಾಲವಾಗಿರುವಂತಹ ಮುಖ ಹೊಂದಿರುವಂತಹ ವ್ಯಕ್ತಿಗಳು ಪೂರ್ವಗ್ರಹಪೀಡಿತರು, ಭಾವನೆಗಳಿಲ್ಲದೆ ಇರುವವರು ಮತ್ತು ಜೀವನದಲ್ಲಿ ತುಂಬಾ ಯಶಸ್ಸನ್ನು ಪಡೆಯುವವರು ಎಂದು ತಿಳಿಯಲಾಗಿದೆ. ಸಣ್ಣ ಮುಖವನ್ನು ಹೊಂದಿರುವಂತಹ ವ್ಯಕ್ತಿಗಳು ಭಾವನಾತ್ಮಕವಾಗಿ ಇರುವಂತಹ ವ್ಯಕ್ತಿಗಳು ಎಂದು ತಿಳಿದು ಬಂದಿದೆ.

ಕಣ್ಣಿನ ಬಣ್ಣಗಳು
ಕಂದುಬಣ್ಣದ ದೊಡ್ಡ ಕಣ್ಣುಗಳನ್ನು ಹೊಂದಿರುವಂತಹ ವ್ಯಕ್ತಿಗಳು ಜನ್ಮತಃ ನಾಯಕರಾಗಿರುವವರು. ಈ ವ್ಯಕ್ತಿಗಳು ತುಂಬಾ ಬುದ್ಧಿವಂತರಾಗಿರುವರು. ಕಡುಕಂದು ಬಣ್ಣ ಹೊಂದಿರುವ ಕಣ್ಣು ಇರುವವರು ತುಂಬಾ ಅಂತರ್ಮುಖಿಗಳು ಎಂದು ಪರಿಗಣಿಸಲಾಗಿದೆ. ಇವರು ತುಂಬಾ ವಿಚಿತ್ರ ಹಾಗೂ ರಹಸ್ಯ ವ್ಯಕ್ತಿತ್ವ ಹೊಂದಿರುವರು. ಇನ್ನೊಂದು ಕಡೆಯಲ್ಲಿ ತಿಳಿನೀಲಿ ಬಣ್ಣದ ಕಣ್ಣುಗಳನ್ನು ಹೊಂದಿರುವಂತಹ ವ್ಯಕ್ತಿಗಳು ತುಂಬಾ ಸ್ಮರ್ಧಾತ್ಮಕವಾಗಿರುವರು.

ಕಡುನೀಲಿ ಬಣ್ಣ ಹೊಂದಿರುವ ವ್ಯಕ್ತಿಗಳು
ಅದೇ ಕಡುನೀಲಿ ಬಣ್ಣ ಹೊಂದಿರುವ ವ್ಯಕ್ತಿಗಳಲ್ಲಿ ದೈಹಿಕ ಸಾಮರ್ಥ್ಯವು ಅಧಿಕವಾಗಿರುವುದು. ಇದರ ಹೊರತಾಗಿ ಕಪ್ಪು ಕಣ್ಣುಗಳನ್ನು ಹೊಂದಿರುವ ವ್ಯಕ್ತಿಗಳು ಅಂತರ್ಮುಖಿಗಳು ಮತ್ತು ರಹಸ್ಯವಾಗಿರುವವರು ಎನ್ನಲಾಗಿದೆ. ತಿಳಿಬಣ್ಣದ ಕಣ್ಣುಗಳನ್ನು ಹೊಂದಿರುವಂತಹ ವ್ಯಕ್ತಿಗಳು ಸಮಾಜಮುಖಿಗಳು ಹಾಗೂ ಹೊರಗಡೆ ಹೆಚ್ಚು ಸುತ್ತಾಡುವವರು ಎಂದು ಪರಿಗಣಿಸಲಾಗಿದೆ.

ತುಟಿಗಳ ವಿನ್ಯಾಸ
ತುಟಿಗಳು ಮಧ್ಯಮ ಗಾತ್ರದ್ದಾಗಿದ್ದರೆ ಆಗ ನೀವು ಅವರ ಸಂಬಂಧದಲ್ಲಿ ಯಾವುದೇ ರೀತಿಯ ಸ್ವಾತಂತ್ರ್ಯವನ್ನು ಪಡೆಯುವುದನ್ನು ನಿರೀಕ್ಷೆ ಮಾಡಬಾರದು. ಅವರಿಗೆ ಆಕರ್ಷಣೆ ತುಂಬಾ ಇಷ್ಟವಾಗುವುದು. ಆದರೆ ಅವರು ನಾಟಕೀಯತೆ ದ್ವೇಷಿಸುವರು. ದೊಡ್ಡ ತುಟಿಗಳನ್ನು ಹೊಂದಿರುವಂತಹ ವ್ಯಕ್ತಿಗಳು ತುಂಬಾ ಕಾಳಜಿ ವಹಿಸುವವರು. ಇವರಿಗೆ ತಮಗಿಂತ ಬೇರೆಯವರ ಬಗ್ಗೆ ಹೆಚ್ಚಿನ ಕಾಳಜಿ ಇರುವುದು. ಇವರು ಅನ್ಯರಿಗೆ ಮೊದಲ ಆದ್ಯತೆ ನೀಡುವರು.

ತುಟಿಗಳ ವಿನ್ಯಾಸ
ಚಾಚಿದ ತುಟಿಗಳಿರುವಂತಹ ವ್ಯಕ್ತಿಗಳು ತುಂಬಾ ಉದಾರ ಮತ್ತು ಹೊರಗಡೆ ಸುತ್ತಾಡುವ ವ್ಯಕ್ತಿಗಳು ಎಂದು ಹೇಳಬಹುದು. ತೆಳುವಾಗಿರುವ ತುಟಿಗಳನ್ನು ಹೊಂದಿರುವಂತಹ ವ್ಯಕ್ತಿಗಳು ತುಂಬಾ ಸ್ಪರ್ಧಾತ್ಮಕ ಮತ್ತು ಏಕಾಂಗಿಯಾಗಿರುವರು. ಈ ವ್ಯಕ್ತಿಗಳು ಬೇರೆಯವರೊಂದಿಗೆ ಸಮಯ ಕಳೆಯುವ ಬದಲು ಒಬ್ಬಂಟಿಯಾಗಿಯೇ ಇರಲು ಬಯಸುವರು.



Click it and Unblock the Notifications
