For Quick Alerts
ALLOW NOTIFICATIONS  
For Daily Alerts

6-11-2018: ಮಂಗಳವಾರದ ದಿನ ಭವಿಷ್ಯ

By ಪಂಡಿತ್ ಮಂಜುನಾಥ್ ದೈವಜ್ಞ ಜ್ಯೋತಿಷ್ಯರು
|

ಮಂಗಳವಾರದ ದಿನ ಪ್ರತಿಯೊಬ್ಬ ವ್ಯಕ್ತಿಯ ಹಸ್ತದಲ್ಲಿ ಮಂಗಳ ಪರ್ವಗಳು ಎದುರು ಬದುರಾಗಿ ಎರಡು ಕಡೆ ಇರುತ್ತವೆ. ಒಂದನೆಯದು ಬುಧ ಪರ್ವ ಹಾಗೂ ಚಂದ್ರ ಪರ್ವದ ಮಧ್ಯದಲ್ಲಿ ಇರುವುದು.ಎರಡನೆಯದು ಗುರು ಪರ್ವ ಹಾಗೂ ಶುಕ್ರ ಪರ್ವಗಳ ನಡುವೆ ಇರುವದು. ಮಂಗಳ ಪರ್ವಗಳು ಎತ್ತರವಾಗಿದ್ದರೆ ಶ್ರಮ ಪ್ರಧಾನ ಜೀವನವನ್ನೆ ಆಗಲಿ. ಬುದ್ದಿ ಪ್ರಧಾನ ಜೀವನವನ್ನೆ ಆಗಲಿ ಒಳ್ಳೆ ಯೋಧನಂತೆ ನಿರ್ವಹಿಸುವನು. ಒಂದನೇ ಮಂಗಳ ಪರ್ವ ಎತ್ತರವಾಗಿದ್ದರೆ,ಜೀವನದ ಎಡರು ತೊಡರುಗಳನ್ನು ಶಾಂತ ರೀತಿಯಿಂದ ಎದುರಿಸುವನು. ಎರಡನೇ ಮಂಗಳ ಪರ್ವ ಎತ್ತರವಾಗಿದ್ದರೆ,ಮುಂದುವರಿಯುವದು ಹೋಗಿ ತನ್ನ ಬಯಕೆಯನ್ನು ಪೂರೈಸಿಕೊಳ್ಳವನು.

ಎರಡೂ ಪರ್ವಗಳು ಎತ್ತರವಾಗಿದ್ದರೆ ಎರಡೂ ಬಗೆಯ ಗುಣಗಳುಳ್ಳವನಾಗುವನು. ಇಂಥವನು ಅನೇಕ ಗಂಡಾತರಗಳಿಗೊಳಗಾಗುವ ಸಂಭವ ಹೆಚ್ಚು. ಒಂದನೇ ಮಂಗಳ ಪರ್ವ ಪೂರ್ಣ ಸಪಾಟಾಗಿದ್ದು , ಎರಡನೇ ಮಂಗಳ ಪರ್ವ ಎತ್ತರವೂ ಉದ್ದವಾಗಿಯೂ ಇದ್ದರೆ ಕೆಡಕುಂಟಾಗುವದು. ಆದರೆ ಒಳ್ಳೆಯ ಸ್ವಭಾವವನ್ನು ಹೊಂದಿರುವನಾಗಿರುತ್ತಾನೆ.

ಇವುಗಳು ಹನ್ನೆರಡು ರಾಶಿಯ ಮೇಲೂ ಪ್ರಭಾವ ಬೀರುತ್ತವೆ. ಮಂಗಳವಾರದ ಆರಾಧ್ಯ ದೈವ. ಆದಿ ಪರಾಶಕ್ತಿ ಪರಮಾತ್ಮಳೇ ಆಗಿದ್ದಾಳೆ. ಅವಳನ್ನು ಜನಪ್ರಿಯವಾಗಿ "ಆದಿ ಶಕ್ತಿ", "ಪರಮ ಶಕ್ತಿ", "ಮಹಾ ಶಕ್ತಿ", "ಮಹಾದೇವಿ", ಅಥವಾ ಇನ್ನೂ ಸರಳವಾಗಿ "ಶಕ್ತಿ" ಎಂದು ಕರೆಯಲಾಗುತ್ತದೆ. ಆದಿ ಪರಾಶಕ್ತಿಯು ಇಡೀ ಬ್ರಹ್ಮಾಂಡದ ಮೂಲ ಸೃಷ್ಟಿಕರ್ತೆ, ಪಾಲಕಿ ಮತ್ತು ವಿಧ್ವಂಸಕಿ ಎಂದು ದೇವಿ ಭಾಗವತ ಪುರಾಣ ಹೇಳುತ್ತದೆ.ತಾಯಿ ಚಾಮುಂಡೀಶ್ವರಿಯನ್ನು ನೆನೆಯುತ್ತಾ ಈ ದಿನದ ರಾಶಿ ಭವಿಷ್ಯವನ್ನು ತಿಳಿಯೋಣ. ಪಂಡಿತ್ ಮಂಜುನಾಥ್ ಶಾಸ್ತ್ರೀ ದೈವಜ್ಞ ಜ್ಯೋತಿಷ್ಯರು.9845743807

ಮೇಷ

ಮೇಷ

ಬಹುತೇಕ ಹಳೆಯ ಲೆಕ್ಕಾಚಾರಗಳೆಲ್ಲ ಒಂದು ಹಂತಕ್ಕೆ ಬಂದು ಜೀವನ ಆನಂದಮಯವಾಗಿರುವುದು. ನಿಮ್ಮ ಪಾಲಿಗೆ ಬರಬೇಕಾಗಿದ್ದ ಆಸ್ತಿ ಕೈ ಸೇರುವುದು. ಕೌಟುಂಬಿಕವಾಗಿ ಸಂತೋಷ ತರುವ ದಿನವಾಗಿದೆ.

ಸಮಾಜದಲ್ಲಿ ನಿಮ್ಮದೇ ಆದ ಒಂದು ವಿಶಿಷ್ಟ ಛಾಪೊಂದನ್ನು ಮೂಡಿಸುವಿರಿ. ಇದರಿಂದ ಸಮಾಜದ ಹಾಗೂ ಸ್ವಕೀಯ ಜನರಿಂದ ಪ್ರಶಂಸೆಗೆ ಒಳಗಾಗುವಿರಿ. ಹಣಕಾಸಿನ ಸ್ಥಿತಿ ಉತ್ತಮವಾಗಿದ್ದು ಶ್ರಮಕ್ಕೆ ತಕ್ಕ ಪ್ರತಿಫಲವನ್ನು ಹೊಂದುವಿರಿ.ನಿಮ್ಮ ಮನೋಸಂಕಲ್ಪಗಳು ಈಡೇರುತ್ತವೆ. ಸಮಾಜದಲ್ಲಿ ಗುರುತರ ಹೊಣೆಗಾರಿಕೆ ನಿಮ್ಮನ್ನು ಕೈಬೀಸಿ ಕರೆಯುವುದು. ಆದರೆ ಬೆಳ್ಳಗಿರುವುದೆಲ್ಲಾ ಹಾಲಲ್ಲ ಎಂಬುದು ತಿಳಿದಿರಲಿ. ಹಣಕಾಸಿನ ತೊಂದರೆ ಇರುವುದಿಲ್ಲ.

ಅದೃಷ್ಟ ಸಂಖ್ಯೆ:2

ವೃಷಭ

ವೃಷಭ

ನಿಮ್ಮ ಆರೋಗ್ಯದ ಬಗ್ಗೆ ಮತ್ತು ಮಕ್ಕಳ ಆರೋಗ್ಯದ ಕಡೆ ಗಮನ ಕೊಡಿ. ಧಾರ್ಮಿಕ ಕಾರ್ಯಗಳಲ್ಲಿ ಭಾಗವಹಿಸುವುದರಿಂದ ಮಾನಸಿಕ ನೆಮ್ಮದಿ ದೊರೆಯುವುದು. ಮನೆಯ ಹಿರಿಯರ ಮಾತಿಗೆ ಎದುರಾಡದಿರಿ. ಖರ್ಚಿಗೆ ತಕ್ಕಷ್ಟು ಹಣ ಕೈ ಸೇರುವುದು.ಮಾತಿನ ಶಕ್ತಿಯ ಬಗ್ಗೆ ಎಚ್ಚರಿಕೆ ಇರಲಿ. ನೀವಾಡುವ ಮಾತು ಪರರಿಗೆ ನೋವುಂಟು ಮಾಡುವ ಸಾಧ್ಯತೆ ಇರುತ್ತದೆ ಮತ್ತು ಅತಿಯಾದ ಮಾತು ನಿಮಗೆ ತೊಂದರೆಯನ್ನುಂಟು ಮಾಡುವುದು. ಅದಕ್ಕಾಗಿ ನೀವು ಪಶ್ಚಾತ್ತಾಪ ಪಡಬೇಕಾಗುವುದು.ಈ ದಿನ ಒತ್ತಡಗಳಿಂದ ದೂರ ಬರುವುದು ಉತ್ತಮ. ಮಹತ್ವದ ನಿರ್ಧಾರವನ್ನು ಮುಂದೂಡುವುದು ಒಳ್ಳೆಯದು. ಗುರು-ಹಿರಿಯರ ಆಶೀರ್ವಾದ ಪಡೆಯಿರಿ. ಸಂಜೆ ಆದಿಶಕ್ತಿಯ ದೇವಾಲಯಕ್ಕೆ ಹೋಗಿಬನ್ನಿ.

ಅದೃಷ್ಟ ಸಂಖ್ಯೆ:1

ಮಿಥುನ

ಮಿಥುನ

ಅಧಿಕಾರದಲ್ಲಿರುವ ಜನರಿಗೆ ಕೀರ್ತಿ ಲಭಿಸುವುದು. ಸಾತ್ವಿಕವಾದ ಕೋಪವೂ ನಿಮಗೆ ಶುಭವನ್ನೇ ಉಂಟು ಮಾಡುವುದು. ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿ ಕಂಡುಬರುವುದು. ಹಣಕಾಸಿನ ತೊಂದರೆ ಇರುವುದಿಲ್ಲ.ಸುಸ್ತು, ನಿರ್ಜಲೀಕರಣದಿಂದ ಆಯಾಸವಾಗುವ ಸಾಧ್ಯತೆ ಇರುತ್ತದೆ. ಈ ಬಗ್ಗೆ ಉದಾಸೀನ ಮಾಡದೆ ಮನೆ ವೈದ್ಯರನ್ನು ಭೇಟಿ ಮಾಡಿ. ಈ ಹಿಂದೆ ನಿಮ್ಮಿಂದ ಸಾಲ ಪಡೆದ ಸ್ನೇಹಿತರು ಇಂದು ಸಾಲ ಮರುಪಾವತಿ ಮಾಡುವ ಸಾಧ್ಯತೆ ಇರುತ್ತದೆ.

ಅಷ್ಟಮ ಶನಿಯ ಕಾಡಾಟವು ಆರೋಗ್ಯದ ಮೇಲೆ ಪರಿಣಾಮವನ್ನು ಬೀರುವುದು. ಹಣಕಾಸಿನ ವಿಷಯದಲ್ಲಿ ಪ್ರಗತಿ ಇದ್ದರೂ ಮಾನಸಿಕ ಚಿಂತನೆಯಿಂದ ಹೈರಾಣ ಆಗುವಿರಿ. ಆಂಜನೇಯ ಸ್ವಾಮಿಯ ಪ್ರಾರ್ಥನೆ ಮಾಡುವುದು ಒಳ್ಳೆಯದು.

ಅದೃಷ್ಟ ಸಂಖ್ಯೆ:2

ಕಟಕ

ಕಟಕ

ಧೈರ್ಯಂ ಸರ್ವತ್ರ ಸಾಧನಂ ಎನ್ನುವಂತೆ ನಿಮ್ಮ ಧೈರ್ಯತನದಿಂದ ಎಲ್ಲಾ ಕೆಲಸಗಳು ಸುಗಮವಾಗಿ ಆಗುವವು. ಸಮಾಜದಲ್ಲಿ ನಿಮ್ಮ ಗೌರವ ಹೆಚ್ಚಾಗುವುದು. ಹಣಕಾಸು ಕೂಡಾ ಸಕಾಲಕ್ಕೆ ಬರುವುದು.ವಿದೇಶ ಪ್ರವಾಸ ಕೈಗೊಳ್ಳುವ ವಿಚಾರ ಸರ್ರನೆ ಎದುರಾಗುವುದು. ತಾಳ್ಮೆಯಿಂದ ಪ್ರಯಾಣದ ಸಾಧಕ ಬಾಧಕಗಳನ್ನು ಚರ್ಚಿಸಿ ಮುಂದುವರೆಯಿರಿ. ಇಲ್ಲದೆ ಹಾಕಿದ ಬಂಡವಾಳಕ್ಕೆ ಸಂಚಕಾರ ಬರುವ ಸಾಧ್ಯತೆ ಇರುವುದು.ನೀವು ಕಾರ್ಯಗಳ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಿ. ಪರರನ್ನು ಕುರಿತು ಟೀಕೆ ಟಿಪ್ಪಣಿಗಳನ್ನು ಮಾಡದಿರಿ. ಆದರೆ ಅನ್ಯರ ಬಗೆಗೂ ನೀವು ಎಚ್ಚರಿಕೆ ವಹಿಸುವುದು ಒಳ್ಳೆಯದು. ಬೇಕೆಂತಲೆ ನಿಮ್ಮ ಬುದ್ಧಿ ಚಾತುರ‍್ಯವನ್ನು ಒರೆ ಹಚ್ಚುವ ಕೆಲಸ ಮಾಡುವರು.

ಅದೃಷ್ಟ ಸಂಖ್ಯೆ:4

ಸಿಂಹ

ಸಿಂಹ

ಯಶಸ್ಸು ಅಥವಾ ಅಪಯಶಸ್ಸುಗಳನ್ನು ಸಮಾನವಾಗಿ ಸ್ವೀಕರಿಸಿ. ದೊರಕಿದ ಅನುಭವ ಮುಂದೆ ನಿಮಗೆ ದಾರಿ ದೀಪವಾಗುವುದು. ನಾನು ತಿಳಿದುಕೊಂಡಿದ್ದೇ ಸತ್ಯ ಎಂಬ ಧೋರಣೆ ಒಳ್ಳೆಯದಲ್ಲ. ಪರರ ಅಭಿಪ್ರಾಯಗಳಿಗೂ ಬೆಲೆ ಕೊಡುವುದು ಒಳಿತು.ನಿಮ್ಮ ಪ್ರತಿಯೊಂದು ಕಾರ್ಯವನ್ನು ಭೂತಗನ್ನಡಿ ಹಿಡಿದು ನೋಡುವ ಗುಣ ಕೆಲವರಲ್ಲಿದೆ. ಅಂತೆಯೆ ನಿಮ್ಮಿಂದ ಆದ ಸಣ್ಣಪುಟ್ಟ ತಪ್ಪನ್ನೆ ದೊಡ್ಡದು ಮಾಡಿ ಅಪಪ್ರಚಾರ ಮಾಡುವರು. ಈ ಬಗ್ಗೆ ಹೆಚ್ಚು ಚಿಂತಿಸದೆ ನಿಮ್ಮ ಕಾರ್ಯದಲ್ಲಿ ತಲ್ಲೀನರಾಗಿ.ನಿಮ್ಮ ಶುದ್ಧ ಅಂತಃಕರಣದ ಸ್ವಭಾವದಿಂದ ಧಾರ್ಮಿಕ ಕ್ಷೇತ್ರದಲ್ಲಿ ಉನ್ನತ ಕೀರ್ತಿಯನ್ನು ಸಂಪಾದಿಸುವಿರಿ. ಪೂರ್ವಾಪರ ಆಸ್ತಿಯ ಬಗ್ಗೆ ತಕರಾರು ಎದುರಾಗುವುದು. ಸ್ನೇಹಿತರ ಸಹಕಾರವಿದೆ.

ಅದೃಷ್ಟ ಸಂಖ್ಯೆ:6

ಕನ್ಯಾ

ಕನ್ಯಾ

ಒಂದು ಸುದೀರ್ಘ ಪ್ರವಾಸದ ಸಂದರ್ಭ ಎದುರಾಗುವುದು. ಇದು ನಿಮ್ಮ ಜ್ಞಾನಾರ್ಜನೆಗೆ ಸಹಕಾರ ನೀಡುವುದು. ಬುದ್ಧಿವಂತ ಜನರ ಒಡನಾಟವೂ ದೊರೆಯುವುದು. ಅದಕ್ಕೆ ತಕ್ಕಂತೆ ಖರ್ಚು, ವೆಚ್ಚಗಳನ್ನು ಸಹ ಮಾಡಬೇಕಾಗುವುದು.

ನಿಮ್ಮದೇ ಆದ ವಿಶಿಷ್ಟ ಪ್ರತಿಭೆಯಿಂದ ಎಲ್ಲರ ಮನ ಗೆಲ್ಲುವಿರಿ. ಇದೇ ತೆರನಾದ ನಿಮ್ಮ ಆತ್ಮವಿಶ್ವಾಸವು ನಿಮಗೆ ಹೆಚ್ಚಿನ ಧನಲಾಭವನ್ನು ತಂದುಕೊಡುವುದು. ಸಾಮಾಜಿಕವಾಗಿ ನೀವು ಗೌರವಿಸಲ್ಪಡುವಿರಿ.ಸಾಧು ಸ್ವಭಾವದವರಾದ ನಿಮ್ಮಿಂದ ಪದೇ ಪದೇ ಹಣವನ್ನು ಪಡೆಯಲು ಉತ್ಸುಕರಾಗುವರು. ಈ ಬಗ್ಗೆ ನೀವು ಎಚ್ಚರಿಕೆಯಿಂದ ಇರಬೇಕು. ಹಣಕೊಟ್ಟು ಸ್ನೇಹವನ್ನು ಹಾಳು ಮಾಡಿಕೊಳ್ಳಬೇಡಿ.

ಅದೃಷ್ಟ ಸಂಖ್ಯೆ:4

ತುಲಾ

ತುಲಾ

ಬಹು ಎತ್ತರಕ್ಕೆ ಬೆಳೆಯಬೇಕೆಂಬ ಆಸೆ ಒಳ್ಳೆಯದು. ಈ ನಡುವೆ ನಿಮ್ಮ ಏಳಿಗೆಗೆ ಸಹಕರಿಸಿದ ಅಧಿಕಾರಿಗಳನ್ನು ಮತ್ತು ಗೆಳೆಯರನ್ನು ಮರೆಯುವುದು ಒಳ್ಳೆಯದಲ್ಲ. ನಿಮ್ಮ ಬುದ್ಧಿವಂತಿಕೆಯು ಹೆಚ್ಚು ಉಪಯೋಗಕ್ಕೆ ಬರುವುದು.ವೃಥಾ ಸುಮ್ಮನೆ ಕೆಲವು ಆರೋಪಗಳನ್ನು ಎದುರಿಸುವಿರಿ. ಇದಕ್ಕೆ ಕಾರಣ ನೀವು ಈ ಹಿಂದೆ ನಡೆದುಕೊಂಡ ರೀತಿಯೇ ಕಾರಣವಾಗಿರುವುದು. ಗುರು ಹಿರಿಯರ ಮಾತನ್ನು ಗೌರವಿಸಿ. ದುಂದುವೆಚ್ಚಕ್ಕೆ ಕಡಿವಾಣ ಹಾಕಿ. ಆದಿತ್ಯ ಹೃದಯ ಮತ್ತು ಲಕ್ಷ್ಮೀಹೃದಯ ಪಾರಾಯಣವನ್ನು ಮಾಡುವುದು ಕ್ಷೇಮ. ಸಾಲದ ತೀರುವಳಿ ಮಾಡುವ ಮೂಲಕ ನಿಮ್ಮ ಮೇಲೆ ಇದ್ದ ಅಪವಾದಗಳಿಂದ ದೂರಬನ್ನಿ. ಕೌಟುಂಬಿಕ ಜೀವನ ಉತ್ತಮವಾಗಿರುವುದು.

ಅದೃಷ್ಟ ಸಂಖ್ಯೆ:8

ವೃಶ್ಚಿಕ

ವೃಶ್ಚಿಕ

ಜೀವನ ಎಂದರೆ ಕಲ್ಲು ಮುಳ್ಳಿನ ಹಾದಿ. ಆ ಹಾದಿಯಲ್ಲಿಯೇ ಅನಿವಾರ‍್ಯವಾಗಿ ಸಾಗಬೇಕಾಗಿರುವುದರಿಂದ ಕಲ್ಲು ಮುಳ್ಳುಗಳಿಂದ ರಕ್ಷಿಸಿಕೊಳ್ಳಲು ಪಾದರಕ್ಷೆ ಹಾಕಿಕೊಳ್ಳುವಂತೆ ಭಗವಂತನ ನಾಮಸ್ಮರಣೆಯು ಭವಸಾಗರವನ್ನು ದಾಟಿಸುವುದು.ಮುಳ್ಳನ್ನು ಮುಳ್ಳಿನಿಂದಲೇ ತೆಗೆಯಬೇಕು ಎಂಬ ಗಾದೆ ಮಾತಿನಾಂತೆ ನಿಮ್ಮ ವಿರೋಧಿಗಳು ನಿಮ್ಮ ಮೇಲೆ ಮಾಡುವ ಅಪವಾದಗಳಿಗೆ ಸೂಕ್ತ ರೀತಿಯಲ್ಲಿ ಉತ್ತರವನ್ನು ಇಂದು ಕೊಡುವಿರಿ. ಇದರಿಂದ ಅವರು ಹಿಮ್ಮೆಟ್ಟುವರು.ಹಣಕಾಸಿನ ವಿಚಾರದಲ್ಲಿ ಅಲ್ಪ ಅಡೆ ತಡೆ ಉಂಟಾಗುವುದು. ಆದಾಗ್ಯೂ ದೈವಕೃಪೆಯಿಂದ ಖರ್ಚಿಗೆ ತಕ್ಕಷ್ಟು ಹಣ ಒದಗಿ ಬರುವುದು. ಆದರೆ ಉಳಿತಾಯ ಮಾಡಲು ಆಗುವುದಿಲ್ಲ.

ಅದೃಷ್ಟ ಸಂಖ್ಯೆ:2

ಧನಸ್ಸು

ಧನಸ್ಸು

ವಿದ್ಯಾರ್ಥಿಗಳು ನಿಜಕ್ಕೂ ಸಂತೋಷ ಪಡಬೇಕಾದ ದಿನ. ನಿಮ್ಮ ಆಂತರಿಕ ಪರೀಕ್ಷೆಯಲ್ಲಿ ಹೆಚ್ಚಿನ ಅಂಕಗಳನ್ನು ಗಳಿಸಿರುವ ಬಗ್ಗೆ ಶಾಲೆಯಲ್ಲಿ ಮಾಹಿತಿ ದೊರೆಯುವುದು. ಈ ಉತ್ಸಾಹದಲ್ಲಿ ವಾಹನಗಳನ್ನು ಅಡ್ಡಾದಿಡ್ಡಿ ಓಡಿಸದಿರಿ.

'ಆಲಸ್ಯಂ ಅಮೃತಂ ವಿಷಂ' ಎನ್ನುವಂತೆ ಆಲಸ್ಯತನವು ಮೊದಲು ಅಮೃತದಂತೆ ರುಚಿಯಾಗಿ ತೋರಿದರು ಅದು ವಿಷವಾಗಿ ಪರಿಣಮಿಸುವುದು. ಹಾಗಾಗಿ ಪ್ರತಿನಿತ್ಯ ಬೇಗನೆ ಏಳುವ ಅಭ್ಯಾಸ ಮಾಡಿಕೊಂಡು ಇಷ್ಟದೇವರನ್ನು ಸ್ಮರಿಸಿ.ಜನ್ಮಶನಿಯು ನಿಮ್ಮ ಬುದ್ಧಿಗೆ ಮಂಕು ಕವಿಯುವಂತೆ ಮಾಡುವರು. ಕೆಲಸ ಕಾರ್ಯದಲ್ಲಿ ಉತ್ಸಾಹ ಕಡಿಮೆ ಆಗುವುದು. ಉದ್ಯೋಗದಲ್ಲಿ ಬದಲಾವಣೆ ಸಾಧ್ಯತೆ ಇದೆ. ಆದಷ್ಟು ಈ ದಿನ ತಾಳ್ಮೆಯಿಂದ ಇರಿ.

ಅದೃಷ್ಟ ಸಂಖ್ಯೆ:8

ಮಕರ

ಮಕರ

ದುಡಿದ ಹಣ ನೀರಿನಂತೆ ಖರ್ಚಾಗುತ್ತಿರುವುದರಿಂದ ಸಹಜವಾಗಿಯೇ ನಾಳಿನ ಚಿಂತೆ ಎದುರಾಗುವುದು. ಚಿಂತ್ಯಾಕ ಮಾಡುತೀ ಚಿನ್ಮಯನಿದ್ದಾನೆ ಎಂಬಂತೆ ಗುರುವಿನ ಸ್ತೋತ್ರ ಪಠಿಸಿರಿ. ಗುರು, ಹಿರಿಯರಿಗೆ ನಮಿಸಿ ಹೊರಗೆ ಕಾಲಿಡಿ.ಅನ್ಯ ಮನಸ್ಕತೆಯಿಂದ ಹೊರಬನ್ನಿ. ದುಡಿಮೆ ಮಾಡಲು ಹಲವು ದಾರಿಗಳಿವೆ. ನಿಮ್ಮ ಮನಸ್ಸಿನ ಒಳವಿಚಾರವನ್ನು ಆಪ್ತ ಗೆಳೆಯನ ಮುಂದೆ ಹೇಳಿಕೊಳ್ಳಿ. ಆತನು ನಿಮಗೆ ಸಾಂತ್ವನ ನೀಡುವುದರ ಜೊತೆಯಲ್ಲಿ ನಿಮ್ಮ ಬಾಳು ಬೆಳಗುವಂತಹ ಸೂಚನೆ ನೀಡುವನು.ಸಕಾರಾತ್ಮಕ ಶಕ್ತಿಯು ನಿಮ್ಮಿಂದ ಉತ್ತಮವಾದ ಕೆಲಸವನ್ನು ಮಾಡಿಸುವುದು. ಇದಕ್ಕೆ ಪೂರಕವಾಗಿ ಹಣಕಾಸು ಕೂಡಾ ಒದಗಿ ಬರುವುದು. ಸ್ನೇಹಿತರು ನಿಮ್ಮ ಸಹಾಯಕ್ಕೆ ಬರುವರು. ಕೌಟುಂಬಿಕ ಜೀವನ ಉತ್ತಮವಾಗಿರುತ್ತದೆ.

ಅದೃಷ್ಟ ಸಂಖ್ಯೆ:1

ಕುಂಭ

ಕುಂಭ

ಒಳಿತಿಗಾಗಿನ ನಿಮ್ಮ ಆಲೋಚನೆಗಳಿಗೆ ಒಂದು ನಿಶ್ಚಿತ ಕ್ರಿಯಾಶೀಲತೆ ಒದಗಿ ಬರುವುದು. ನಿಮ್ಮ ಕಾರ್ಯ ವೈಖರಿಯನ್ನು ನಿಮ್ಮ ಮೇಲಧಿಕಾರಿಗಳು ಕೊಂಡಾಡುವರು. ಮತ್ತು ನಿಮಗೆ ಬಡ್ತಿ ನೀಡಲು ಆದೇಶಿಸುವರು.ಗುರುಬಲವಿರುವುದರಿಂದ ವಿವಾಹ ಯೋಗ್ಯ ವಧು-ವರರಿಗೆ ಕಂಕಣಭಾಗ್ಯ ಒದಗಿ ಬರಲಿದೆ. ಆದರೆ ಯಾರದೋ ಒತ್ತಡಕ್ಕೆ ಮಣಿದು ವಿನಾಹದ ಸಂಗಾತಿಯ ಬಗ್ಗೆ ಒಪ್ಪಿಗೆ ಸೂಚಿಸದಿರಿ. ಸಂಗಾತಿಯ ಆಯ್ಕೆ ಅಷ್ಟು ಸುಲಭವಲ್ಲ ಎನ್ನುವುದು ಗೊತ್ತಾಗುವುದು.

ಸಕಲವನ್ನು ಎರಡು ಬಾರಿ ಚಿಂತಿಸಿ ಕಾರ್ಯ ಪ್ರವೃತ್ತರಾಗುವ ನಿಮ್ಮ ಜಾಣ್ಮೆಯು ಎಲ್ಲೆಡೆಯೂ ಪ್ರಶಂಸೆಗೆ ಒಳಗಾಗುವುದು. ಕಚೇರಿಯ ಕೆಲಸಗಳ ವಿಷಯವಾಗಿ ಯಾರಾರ‍ಯರನ್ನೊ ನಂಬಿ ಮೋಸ ಹೋಗದಿರಿ. ಗುರು ಸ್ತೋತ್ರ ಪಠಿಸಿ.

ಅದೃಷ್ಟ ಸಂಖ್ಯೆ:2

ಮೀನ

ಮೀನ

ದಿನದ ಕೆಲಸಗಳು ಏಕತಾನತೆಯಿಂದ ಕೂಡಿರುವುದರಿಂದ ಮನಸ್ಸಿಗೆ ಬೇಸರವಾಗುವುದು. ನಿಮ್ಮ ಹಳೆಯ ಸ್ನೇಹಿತರಿಗೆ ದೂರವಾಣಿ ಮಾಡಿ ಯೋಗಕ್ಷೇಮವನ್ನು ವಿಚಾರಿಸಿರಿ. ಅವರು ತಿಳಿಸುವ ವಿಷಯವು ನಿಮಗೆ ಹೊಸ ಚೈತನ್ಯ ತುಂಬುವುದು.

ಅನೇಕ ರೀತಿಯ ಅಧಿಕಾರ ಹಾಗೂ ವರ್ಚಸ್ಸು ಪಡೆಯಲು ಹೆಚ್ಚಿನದಾದ ಅವಕಾಶಗಳು ಇಂದು ನಿಮಗೆ ದೊರೆಯಲಿದೆ. ಹಳೆಯ ಗೆಳೆಯರು ನಿಮ್ಮನ್ನು ಭೇಟಿ ಮಾಡುವರು. ಹಣಕಾಸಿನ ಪರಿಸ್ಥಿತಿ ಅಷ್ಟೇನೂ ಉತ್ತಮವಿಲ್ಲ.ನಿಮ್ಮ ಇಚ್ಛಾಶಕ್ತಿಯು ಇತರೆಯವರನ್ನು ಬೆರಗು ಗೊಳಿಸುವುದು. ಈ ದಿನ ನಿಮ್ಮಲ್ಲಿ ಒಂದು ವಿಶಿಷ್ಟ ಚೈತನ್ಯವನ್ನು ಗುರು ಮಹಾರಾಜರು ತುಂಬುವರು. ಗುರು ಕಾರುಣ್ಯ ಪಡೆದ ನೀವೇ ಧನ್ಯರು.

ಅದೃಷ್ಟ ಸಂಖ್ಯೆ:1

ಪಂಡಿತ್ ಮಂಜುನಾಥ್ ಶಾಸ್ತ್ರೀ

ದೈವಜ್ಞ ಜ್ಯೋತಿಷ್ಯರು 9845743807

ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು ಹಾಗೂ ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಬಲಿಷ್ಟ ಪೂಜಾ ಶಕ್ತಿಯಿಂದ ಸರ್ವ ಗುಪ್ತ ಸಮಸ್ಯೆಗಳಿಗೆ ಶಾಶ್ವತ ಪರಿಹಾರ 9845743807 call/ whatsapp

English summary

your daily horoscope-6-November-2018

Know what astrology and the planets have in store for you today. Choose your zodiac sign and read the details...
Story first published: Tuesday, November 6, 2018, 4:00 [IST]
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more