For Quick Alerts
ALLOW NOTIFICATIONS  
For Daily Alerts

29-10-2018: ಸೋಮವಾರದ ದಿನ ಭವಿಷ್ಯ

By ಪಂಡಿತ್ ಮಂಜುನಾಥ್ ದೈವಜ್ಞ ಜ್ಯೋತಿಷ್ಯರು
|

ಸೋಮವಾರದ ದಿನ ತ್ರಿಮೂರ್ತಿಗಳಲ್ಲಿ ಒಬ್ಬನಾದ ಮಹಾ ಶಿವನು ಲಿಂಗ ಸ್ವರೂಪಿ. ಲಿಂಗ ಎಂಬ ಶಬ್ದ 'ಶಿವನ ಪ್ರತೀಕ'.ಶಿವ ಪುರಾಣದ ಪ್ರಕಾರ ವಿಶ್ವದಲ್ಲಿ ಅಂಧಕಾರ ತುಂಬಿದ್ದಾಗ ಅಲ್ಲಿದ್ದದ್ದು ಉರಿಯುತ್ತಿದ್ದ ಅಂತ್ಯವಿಲ್ಲದ ಕಂಭವೊಂದು ಮಾತ್ರ. ಈ ಕಂಬವೇ 'ಪುರುಷ' ಅಥವ ಪುರುಷ ಶಕ್ತಿ ಇದೇ ಶಿವ. ಆದ್ದರಿಂದಲೇ ಶಿವ ಅಥವ ಈ ಪುರುಷ ಶಕ್ತಿಯನ್ನು 'ಲಿಂಗ' ರೂಪದಲ್ಲಿ ಆರಾಧಿಸಲಾಗುತ್ತದೆ.

ಲಿಂಗದ ಕೆಳಗಿನ ಭಾಗವನ್ನು ಯೋನಿ ಎಂದು ಹೇಳಲಾಗುತ್ತದೆ. ಲಿಂಗ-ಯೋನಿಗಳ ಸಮಾಗಮ ಇದರ ಅರ್ಥ ಸಮಸ್ತ ವಿಶ್ವ ಅದರಲ್ಲಿದೆ ಅಂತ. ಅನಂತವಾದ ಐಕ್ಯತೆಗೆ, ಜೀವೋದ್ಭವಕ್ಕೆ ಅದು ಸೂಚನೆ ಇದ್ದಂತೆ. ಅದೇ ರೀತಿ ಶಿವಲಿಂಗದಲ್ಲಿರುವ ಲಿಂಗ, ಯೋನಿ ಭಾಗಗಳು ಮಾನವ ಸಂತಾನೋತ್ಪತ್ತಿ ವ್ಯವಸ್ಥೆಯ ಅವಯವಗಳ ಸೂಚನೆ ಎಂದು ಭಾವಿಸಲಾಗುತ್ತದೆ.ಲಿಂಗದಲ್ಲಿ ಶಿವ-ಶಕ್ತಿ ಒಟ್ಟಿಗೆ ಇರುವುದರಿಂದ ಪ್ರಚಂಡ ಶಕ್ತಿಯು ನಿರ್ಮಾಣವಾಗುತ್ತದೆ. ಮಹೇಶ್ವರನನ್ನು ನೆನೆಯುತ್ತಾ ಈ ದಿನದ ರಾಶಿ ಭವಿಷ್ಯವನ್ನು ತಿಳಿಯೋಣ.ಪಂಡಿತ್ ಮಂಜುನಾಥ್ ಶಾಸ್ತ್ರೀ ದೈವಜ್ಞ ಜ್ಯೋತಿಷ್ಯರು.9845743807

ಮೇಷ

ಮೇಷ

ನಿಮ್ಮ ಎಲ್ಲಾ ಕಾರ್ಯಗಳಲ್ಲಿ ಯಶಸ್ಸು ದೊರೆಯುವ ಸಂಭವವಿದೆ. ಆದರೆ ಕಾರ್ಯಕ್ಷೇತ್ರದಲ್ಲಿ ಮುನ್ನುಗ್ಗುವ ಧೈರ್ಯವನ್ನು ತೋರಬೇಕಿದೆ. ಹಿಂದಿನ ಸೋಲನ್ನು ನೆನೆದು ಹೆಜ್ಜೆ ಇಡಲು ಹಿಂಜರಿಯದಿರಿ. ನಿಮಗೆ ಸಂತಸ ಉಂಟಾಗುವುದು. ನಿಮ್ಮ ಅನೇಕ ವಿಚಾರಗಳನ್ನು ಸರ್ರನೆ ಯಾರ ಜತೆಗೂ ಹಂಚಿಕೊಳ್ಳದಿರಿ. ನಿಮ್ಮ ದಾರಿ ತಪ್ಪಿಸಲು ಹಲವರು ಕಾದಿದ್ದಾರೆ. ಆದರೆ ಸತ್ಯ, ನಿಷ್ಠೆಗೆ ಯಾವಾಗಲು ಜಯವಿರುವಂತೆ ನೀವು ಗೆಲುವಿನ ನಗು ಬೀರುವಿರಿ.ನೀವು ಸರ್ಕಾರದ ಕೆಲಸಗಳನ್ನು ಮಾಡಿಕೊಡುವ ಕಂಟ್ರಾಕ್ಟರ್‌ ಆಗಿದ್ದರೆ ನಿಮಗೆ ಸರ್ಕಾರದಿಂದ ಬರಬೇಕಾಗಿದ್ದ ಹಣಕ್ಕಾಗಿ ಬೇಡಿಕೆ ಸಲ್ಲಿಸಿದ್ದರೆ ಶೀಘ್ರವೇ ಆ ಹಣವು ನಿಮ್ಮ ಕೈಸೇರುವ ಸಾಧ್ಯತೆ ಇರುತ್ತದೆ. ಹಣಕಾಸು ಸ್ಥಿತಿ ಉತ್ತಮವಾಗಿರುತ್ತದೆ. ಅದೃಷ್ಟ ಸಂಖ್ಯೆ:2

ವೃಷಭ

ವೃಷಭ

ಸಂಶಯಾತ್ಮ ವಿನಶ್ಯತಿ ಎಂದರು ಹಿರಿಯರು. ಸಣ್ಣಪುಟ್ಟ ವಿಷಯಗಳಿಗೆ ಸಂಶಯ ಪಡುತ್ತಾ ಕೂತರೆ ಮಹತ್ತರವಾದ ಕಾರ್ಯವನ್ನು ಮಾಡಲು ಆಗುವುದಿಲ್ಲ. ನಂಬಿ ಕೆಟ್ಟವರಿಲ್ಲವೋ ರಂಗಯ್ಯನಾ ಎನ್ನುವಂತೆ ನಿಮ್ಮ ಕುಲದೇವೆತೆಯ ಪ್ರಾರ್ಥನೆಯೊಂದಿಗೆ ಕಾರ್ಯ ನಿರ್ವಹಿಸಿ.ನಿಮ್ಮಿಂದಲೇ ಸಮಗ್ರ ವಿಷಯವನ್ನು ತಿಳಿದುಕೊಂಡು ಅದಕ್ಕೆ ಬಣ್ಣ ಹಚ್ಚಿ ನಿಮ್ಮ ವಿರುದ್ಧ ಪಿತೂರಿ ನಡೆಸುವ ಜನರಿದ್ದಾರೆ. ಹಾಗಾಗಿ ಅಂತಹ ವ್ಯಕ್ತಿಗಳಿಂದ ದೂರ ಇರುವುದು ಒಳ್ಳೆಯದು. ಅದೃಷ್ಟ ಸಂಖ್ಯೆ:1

ಮಿಥುನ

ಮಿಥುನ

ವ್ಯಕ್ತಿಯೊಬ್ಬ ಸಮಾಜದಲ್ಲಿ ಹೆಸರು ಮಾಡುತ್ತಾ ಹೋದರೆ ಇತರರು ಆತನನ್ನು ಕೆಳಗೆ ತಳ್ಳಲು ಹಲವು ಸಂಚುಗಳನ್ನು ಮಾಡುವರು ಮತ್ತು ವ್ಯಕ್ತಿಯು ಮಾಡುವ ಸಣ್ಣತಪ್ಪನ್ನೆ ದೊಡ್ಡದು ಮಾಡಿ ಆಪಪ್ರಚಾರ ಮಾಡುವರು. ನೀವು ಅದಕ್ಕೆ ವಿಚಲಿತರಾಗಬೇಡಿ. ಕೆಲವು ಬಿಕ್ಕಟ್ಟುಗಳನ್ನು ಎದುರಿಸುವಿರಿ. ಇದರಿಂದ ಮಾನಸಿಕವಾಗಿ ಬಳಲುವಿರಿ. ದುರ್ಗಾಸ್ತುತಿಯಿಂದ ನಿಮಗೆ ಒದಗುವ ಬಿಕ್ಕಟ್ಟುಗಳಿಂದ ದೂರ ಬರುವಿರಿ. ಮಕ್ಕಳು ನಿಮಗೆ ಸಂತಸವನ್ನುಂಟು ಮಾಡುವರು. ದುಡ್ಡೇ ದೊಡ್ಡಪ್ಪ ವಿದ್ಯೆ ಅವರಪ್ಪ. ಹಾಗಾಗಿ ನೀವು ಜಾಣ್ಮೆಯಿಂದ ಕೆಲಸ ನಿರ್ವಹಿಸುವ ಮುಂಚೆ ಮುಂಗಡ ಹಣವನ್ನು ಪಡೆದೇ ಆರಂಭಿಸಿ. ಇದರಿಂದ ನಿಮಗೆ ನೆಮ್ಮದಿ ಉಂಟಾಗುವುದು. ಆಂಜನೇಯ ಪ್ರಾರ್ಥನೆ ಮಾಡಿ. ಅದೃಷ್ಟ ಸಂಖ್ಯೆ:2

ಕಟಕ

ಕಟಕ

ಜೀವನ ಸುಗಮವಾಗಿ ಸಾಗುತ್ತಿದೆ. ಆದರೆ ಮನೆಯ ಸದಸ್ಯರೆ ನಿಮ್ಮ ಮಾತನ್ನು ಅಲಕ್ಷಿಸುತ್ತಿರುವುದು ನಿಮಗೆ ನೋವು ಉಂಟು ಮಾಡುವ ಸಂಗತಿ. ಇದರಲ್ಲಿ ನಿಮ್ಮ ತಪ್ಪಿನ ಪಾತ್ರವಿಲ್ಲ. ಹಾಗಾಗಿ ತಾಳ್ಮೆಯಿಂದ ಇರಿ. ಅವರೇ ಸರಿದಾರಿಗೆ ಬರುವರು. ತಮ್ಮ ಸ್ವಾರ್ಥಕ್ಕಾಗಿ ನಿಮ್ಮನ್ನು ಇತರರು ಬಳಸಿಕೊಳ್ಳುವ ಸಾಧ್ಯತೆ ಇದೆ. ಹಾಗಾಗಿ ಇಲ್ಲದ ಸಬೂಬು ಹೇಳಿ ಜಾಣ್ಮೆಯಿಂದ ಅವರಿಂದ ತಪ್ಪಿಸಿಕೊಳ್ಳುವುದು ಒಳ್ಳೆಯದು. ಹಣಕಾಸಿನ ಪರಿಸ್ಥಿತಿ ಉತ್ತಮವಾಗಿರುತ್ತದೆ.

ಮನಸ್ಸಿನ ಹೊಯ್ದಾಟ ಇದ್ದರೂ ಸಂಕಲ್ಪಿತ ಕಾರ್ಯಸಿದ್ಧಿಗೆ ಅವಕಾಶ ಕೂಡಿ ಬರುವುದು. ಆರೋಗ್ಯದ ಮೇಲೆ ಗಮನವಿರಲಿ. ಮನೋನಿಯಾಮಕ ರುದ್ರದೇವರನ್ನು ಭಜಿಸುವುದರಿಂದ ಎಲ್ಲಾ ಕೆಲಸ ಕಾರ್ಯಗಳು ಕೈಗೂಡುವುದು. ಅದೃಷ್ಟ ಸಂಖ್ಯೆ:3

ಸಿಂಹ

ಸಿಂಹ

ಸಿಂಹರಾಶಿಯವರು ಸಿಟ್ಟಿನವರು ಎಂಬುದು ಸಾಮಾನ್ಯ ಸಂಗತಿ. ಆದರೆ ನೀವು ಏಕೆ ಕೋಪಗೊಳ್ಳುತ್ತಿರಿ ಎಂದು ಯಾರೂ ಅಥೈರ್‍ಸಿಕೊಳ್ಳುವುದಿಲ್ಲ. ಆದಾಗ್ಯೂ ಎಲ್ಲರನ್ನು ನಗುಮುಖದಿಂದ ಸಂಭಾಳಿಸಿಕೊಂಡು ಹೋಗುವ ನಿಮ್ಮ ಮನದಲ್ಲಿ ಅನೇಕ ಸಂಕಟಗಳನ್ನು ಆನುಭವಿಸುವಿರಿ. 'ನೀವು ಸುಮ್ಮನಿರಿ. ನಾನು ಸುಮ್ಮನಿರುತ್ತೇನೆ' ಎಂದು ಧಮಕಿ ಹಾಕುವ ಜನರಿಗೆ ಧೈರ್ಯದಿಂದ ಸೂಕ್ತ ಉತ್ತರವನ್ನು ನೀಡುವಿರಿ. ಇದರಿಂದ ಅವರು ನಿಮ್ಮ ಸಹವಾಸಕ್ಕೆ ಬರದೆ ದೂರ ಉಳಿಯುವರು. ಎಲ್ಲಾ ಸಕಲ ಸಂಪತ್ತು ಇದ್ದರೂ ಅದನ್ನು ಅನುಭವಿಸಲು ಆಗುತ್ತಿಲ್ಲ. ಎಲ್ಲವೂ ಎದುರಿಗೆ ಇದ್ದರೂ ಅದು ಕನ್ನಡಿಯಲ್ಲ. ಕಾಣುವ ಪ್ರತಿಬಿಂಬದಂತೆ ನಿತ್ಯ ಜೀವನಕ್ಕೆ ಉಪಯೋಗಕ್ಕೆ ಬರುತ್ತಿಲ್ಲ. ಕುಲದೇವರ ಆರಾಧನೆ ಮಾಡಿ. ಅನಗತ್ಯ ಖರ್ಚಿಗೆ ಕಡಿವಾಣ ಹಾಕಿ. ಅದೃಷ್ಟ ಸಂಖ್ಯೆ:9

ಕನ್ಯಾ

ಕನ್ಯಾ

ವಿವಾದಪೂರ್ಣ ವಿಚಾರವು ತಾತ್ವಿಕವಾದ ಮಾತುಕತೆಯೊಂದಿಗೆ ಹಾಗೂ ಹೊಂದಾಣಿಕೆಯೊಂದಿಗೆ ಇತ್ಯರ್ಥಗೊಳ್ಳಲಿದೆ. ನಿಮ್ಮನ್ನು ಎಲ್ಲರೂ ಆದರಿಸುವರು. ಇಬ್ಬರು ಉತ್ತಮ ಸ್ನೇಹಿತರಲ್ಲಿ ಯಾರಿಗೆ ಮೊದಲು ಪ್ರಾಶಸ್ತ್ಯ ಕೊಡಬೇಕು ಎಂಬ ವಿಚಾರದಲ್ಲಿ ಗೊಂದಲಕ್ಕೆ ಬೀಳುವಿರಿ. ಸಣ್ಣಸಣ್ಣ ಮಾತುಗಳಿಗೆ ಮನಸ್ತಾಪ ಉಂಟಾಗುವ ಸಾಧ್ಯತೆ ಇದೆ. ಗಾಜಿನ ಮನೆಯಲ್ಲಿರುವವರ ಮನಸ್ಥಿತಿ ನಿಮ್ಮದಾಗಿರುತ್ತದೆ. ಆದಷ್ಟು ತಾಳ್ಮೆಯಿಂದ ಇರಿ. ಒಂದು ವೇಳೆ ನೀವು ನಿಮ್ಮ ಮಾತಿನಲ್ಲಿ ದುಡುಕಿದರೆ ಪರಿಣಾಮ ಘೋರವಾಗಿರುತ್ತದೆ. ನಿಮ್ಮನ್ನು ನೀವು ವಿಮರ್ಶಿಸುವ ಕಾಲ ಇದು. ನೀವು ಸಾಗಿ ಬಂದ ದಾರಿಯನ್ನು ಮತ್ತೊಮ್ಮೆ ಸಿಂಹಾವಲೋಕನ ಮಾಡಿಕೊಳ್ಳಿ. ನಿಮ್ಮ ಮುಂದಿನ ಬಾಳಿನ ಮಾರ್ಗಸೂಚಿ ಆಗುವುದು. ನಿಮ್ಮ ಶಕ್ತಿಯ ಸೂಕ್ತ ನಿರ್ವಹಣೆಯಿಂದ ಕಾರ್ಯದಲ್ಲಿ ಜಯ ಹೊಂದಬೇಕು. ಅದೃಷ್ಟ ಸಂಖ್ಯೆ:6

ತುಲಾ

ತುಲಾ

ಮನೆಗೆದ್ದು ಮಾರುಗೆಲ್ಲು ಎಂದರು. ಮನೆಯ ಹಿರಿಯರಿಗೆ ಅಗೌರವ ತೋರಿ ಸಮಾಜದಲ್ಲಿ ಪ್ರಮುಖನೆನೆಸಿಕೊಳ್ಳಬೇಕೆಂಬ ಹಂಬಲದಲ್ಲಿ ವೇದಿಕೆಯಲ್ಲಿ ಮಾತ್ರ ಹಿರಿಯರಿಗೆ ಗೌರವ ಕೊಡಿ ಎಂದು ಭಾಷಣ ಮಾಡಿದರೆ ಹೇಗೆ? ನಿಮ್ಮನ್ನು ನೀವು ಮೊದಲು ತಿದ್ದಿ ಕೊಳ್ಳಿ. ನಂಬಿಸಿ ಕೈಕೊಡುವಂತಹ ಜನರು ಬಣ್ಣದ ಮಾತುಗಳಿಂದ ಕನಸನ್ನು ಬಿತ್ತಲಿದ್ದಾರೆ. ಅದರ ಪ್ರಭಾವಕ್ಕೆ ಒಳಗಾಗಿ ನೀವು ದುಡಿದ ಹಣವನ್ನು ಖರ್ಚು ಮಾಡಿ ಮೋಸಕ್ಕೆ ಒಳಗಾಗುವಿರಿ. ಯಾವುದೇ ತರಹದ ಒಪ್ಪಂದಗಳಿಗೆ ಒಪ್ಪಿಗೆ ಸೂಚಿಸದಿರಿ. ನಿಮ್ಮ ಬಗೆಗಿನ ಕೆಲವು ವಿಚಾರಗಳನ್ನು ತಿಳಿದು ನಿಮ್ಮ ಪ್ರಗತಿಯನ್ನು ಚಿವುಟಿ ಹಾಕುವ ಪ್ರಯತ್ನಗಳನ್ನು ಕೆಲವರು ಮಾಡುತ್ತಿರುವರು. ಇಂತಹ ಜನರಿಂದ ಆದಷ್ಟು ದೂರ ಉಳಿಯುವುದು ಒಳ್ಳೆಯದು. ಹನುಮಾನ್‌ ಚಾಲೀಸ್‌ ಪಠಣ ಮಾಡಿ. ಅದೃಷ್ಟ ಸಂಖ್ಯೆ:4

ವೃಶ್ಚಿಕ

ವೃಶ್ಚಿಕ

ಬಾಳಸಂಗಾತಿಯೊಂದಿಗೆ ಅನವಶ್ಯಕ ಮನಸ್ತಾಪಗಳಿಗೆ ಅವಕಾಶ ಕೊಡಬೇಡಿ. ಸದ್ಯದ ಗ್ರಹಸ್ಥಿತಿ ಅಷ್ಟೇನೂ ಉತ್ತಮವಿಲ್ಲ. ಉಗುರಿನಿಂದ ಆಗುವ ಕೆಲಸಕ್ಕೆ ಕೊಡಲಿ ತೆಗೆದುಕೊಂಡರು ಎನ್ನುವಂತೆ ಸರಳವಾಗಿ ಬಗೆಹರಿವ ವಿಚಾರವು ಕಗ್ಗಂಟಾಗುವುದು. ನಿಮ್ಮ ಕಾರ್ಯ ಯೋಜನೆಗಳು ಅರ್ಥ ಪೂರ್ಣವಾದರೂ ಅನ್ಯ ರೀತಿಯ ಹಲವು ಜನರು ಅದಕ್ಕೆ ಅಪಾರ್ಥವನ್ನು ಕಲ್ಪಿಸುವುದರಿಂದ ಕೈಗೆ ಬಂದ ತುತ್ತು ಬಾಯಿಗಿಲ್ಲದಂತೆ ಆಗುವುದು. ಆದ್ದರಿಂದ ಹೀಗಾಗದಿರಲು ನಿಮ್ಮ ಮನೆ ದೇವರನ್ನು ಅನನ್ಯ ಭಕ್ತಿಯಿಂದ ಧ್ಯಾನಿಸಿ. ಬಾಳಸಂಗಾತಿಯ ಆರೋಗ್ಯದ ಬಗ್ಗೆ ಎಚ್ಚರ ಇಟ್ಟುಕೊಳ್ಳಬೇಕಾಗುವುದು. ಉದ್ಯೋಗದಲ್ಲಿ ದಿಢೀರನೆ ಸಮಸ್ಯೆಗಳು ಎದುರಾಗುವ ಸಂದರ್ಭವಿರುತ್ತದೆ. ಕೆಲವು ವಿಷಯಗಳಲ್ಲಿ ಆತುರದ ನಿರ್ಧಾರವು ಕೆಡಕುಗಳಿಗೆ ಮೂಲ ಕಾರಣವಾಗುವುದು. ಅದೃಷ್ಟ ಸಂಖ್ಯೆ:2

ಧನಸ್ಸು

ಧನಸ್ಸು

ಮನುಜ ಎಂದ ಮೇಲೆ ನೂರೆಂಟು ಆಸೆ ಇದ್ದದ್ದೆ. ಆದರೆ ಆ ವಿಚಾರಗಳನ್ನು ನಿಮ್ಮ ಆಪ್ತರ ಮುಂದೆ ಹೇಳಿಕೊಳ್ಳದೆ ಬರಿ ಮನಸ್ಸಿನಲ್ಲಿ ಮಂಡಿಗೆ ತಿನ್ನಬೇಕು ಎಂದು ಬಯಸಿದರೆ ಹೇಗೆ? ನಿಮ್ಮ ಮನಸ್ಸಿನ ವಿಚಾರವನ್ನು ಸ್ನೇಹಿತರೆದುರು ಹೇಳಿ ಕೊಳ್ಳಿ. ವಿವಾಹಾಪೇಕ್ಷಿಗಳಿಗೆ ಹಿರಿಯ ಸಂಬಂಧಿಗಳಿಂದ ಉತ್ತಮವಾದ ಸಹಾಯ ಲಭ್ಯವಾಗುವುದು. ಸೂಕ್ತ ಸಂಗಾತಿಯ ಆಯ್ಕೆಯು ನಿಮ್ಮ ವಿಚಾರದ ಮೇಲೆ ನಿಂತಿರುವುದು. ನಿಮಗೆ ಕಂಕಣ ಭಾಗ್ಯ ಒದಗಿ ಬರುವುದು. ಇಟ್ಟ ಗುರಿ ಬಿಟ್ಟ ಬಾಣದಂತೆ ನಿಮ್ಮ ಗಮನವು ನಿರ್ದಿಷ್ಟವಾದ ಕಾರ್ಯದತ್ತ ಕೇಂದ್ರೀಕೃತವಾಗಿದೆ. ಹಾಗಾಗಿ ಗೆಲುವು ನಿಮ್ಮದಾಗುವುದು. ಗೆಳೆಯರು ನಿಮ್ಮನ್ನು ಅರ್ಥ ಮಾಡಿಕೊಂಡು ಸಹಾಯ ಹಸ್ತ ನೀಡುವರು.ಅದೃಷ್ಟ ಸಂಖ್ಯೆ:1

 ಮಕರ

ಮಕರ

ಧೈರ್ಯಂ ಸರ್ವತ್ರ ಸಾಧನಂ ಎಂದರು. ಹಾಗಾಗಿ ಸದ್ಯದ ಪರಿಸ್ಥಿತಿಯಲ್ಲಿ ಗ್ರಹಗಳು ವಿಮುಖರಾಗಿದ್ದರೂ ನಿಮ್ಮ ಮನೋಧೈರ್ಯವೆ ನಿಮ್ಮನ್ನು ಕಾಪಾಡುವುದು. ಮುಂಗೋಪವನ್ನು ಬಿಟ್ಟುಬಿಡಿ. ಇದರಿಂದ ನಿಮ್ಮ ಕಾರ್ಯಗಳು ಸುಗಮವಾಗಿ ಆಗುವುದು. ಯಾವುದು ನಿಮ್ಮಿಂದ ಆಗುವುದಿಲ್ಲವೋ ಎಂದು ತಿಳಿದಿರುವ ನಿಮಗೆ ಒಂದು ಮಹತ್ತರ ಕೆಲಸವು ಕೈಗೂಡಿ ನಿಮಗೆ ಸಂತಸವನ್ನುಂಟು ಮಾಡುವುದು. ಈ ಕೆಲಸಕ್ಕಾಗಿ ಪಟ್ಟ ಶ್ರಮವು ಸಾರ್ಥಕ ಎನಿಸುವುದು.

ಏಕಾಏಕಿ ದೊಡ್ಡ ದೊಡ್ಡ ಯೋಜನೆಗಳ ಬೆನ್ನು ಹತ್ತದಿರಿ. ಅಟ್ಟವನ್ನು ಏರದವರು ಬೆಟ್ಟವನ್ನು ಏರಬಹುದೇ? ಹಾಗಾಗಿ ತಾಳ್ಮೆಯಿಂದ ನಿಮ್ಮ ಮುಂದೆ ಇರುವ ಸರಳ ಕೆಲಸಗಳನ್ನು ಮನಸ್ಸುಕೊಟ್ಟು ಮಾಡಿ ಮತ್ತು ಆತ್ಮವಿಶ್ವಾಸವನ್ನು ಗಳಿಸಿಕೊಳ್ಳಿ. ಅದೃಷ್ಟ ಸಂಖ್ಯೆ:9

ಕುಂಭ

ಕುಂಭ

ಭೂಮಿ ವಿಕ್ರಯ, ರಿಯಲ್‌ ಎಸ್ಟೇಟ್‌ ಮತ್ತು ಕಬ್ಬಿಣದ ವಸ್ತುಗಳ ಸಂಬಂಧವಾದ ವ್ಯವಹಾರದಲ್ಲಿ ಎಚ್ಚರದಿಂದ ಇರಿ. ನಿಮ್ಮ ಮನೋಗತ ಕಾಮನೆಯು ಶೀಘ್ರವೇ ಕೈಗೂಡುವ ಸಂಭವವಿರುತ್ತದೆ. ದಿನದಿಂದ ದಿನಕ್ಕೆ ಪ್ರಬುದ್ಧಮಾನಕ್ಕೆ ಬರುತ್ತಿರುವ ನಿಮಗೆ ನಿಮ್ಮ ಕಾರ್ಯದಲ್ಲಿ ಯಾವುದೇ ತಪ್ಪನ್ನು ಹುಡುಕಲು ಆಗದೆ ಇದ್ದ ಜನರು ನಿಮಗೆ ಅನಗತ್ಯ ಪ್ರಲೋಭನೆಯನ್ನುಂಟು ಮಾಡಿ ನಿಮ್ಮನ್ನು ತಪ್ಪಿತಸ್ಥರನ್ನಾಗಿ ಮಾಡಲು ಹವಣಿಸುತ್ತಿರುವರು. ಈ ಬಗ್ಗೆ ಎಚ್ಚರ ಅಗತ್ಯ. ತುಂಬಿದ ಕೊಡ ತುಳಕಲಾರದು. ಅಂತೆಯೆ ಖಾಲಿ ಕೊಡ ಶಬ್ದ ಮಾಡಲಾರದು. ಆದರೆ ನೀವು ತುಂಬಿದ ಕೊಡದಂತೆ. ಸಮಯಕ್ಕೆ ತಕ್ಕಂತೆ ನಡೆದುಕೊಳ್ಳುವ ಸ್ವಭಾವ ಇರುವ ನಿಮ್ಮನ್ನು ಎಲ್ಲರೂ ಮೆಚ್ಚುವರು. ಹಣಕಾಸಿನ ವಿಚಾರ ಪ್ರಗತಿಯಲ್ಲಿರುತ್ತದೆ. ಅದೃಷ್ಟ ಸಂಖ್ಯೆ:2

ಮೀನ

ಮೀನ

ವಿದೇಶ ಪ್ರವಾಸ ಇಲ್ಲವೆ ದೂರ ಪ್ರವಾಸಗಳನ್ನು ಮುಂದೂಡುವುದು ಒಳಿತು ಮತ್ತು ನಿಮ್ಮ ವೈಯಕ್ತಿಕ ಆರೋಗ್ಯದ ಕಡೆ ಗಮನ ಕೊಡುವುದು ಒಳ್ಳೆಯದು. ಮಗನ ನೌಕರಿಯ ಬಗ್ಗೆ ಚಿಂತೆ ಕಾಡುವುದು. ದುರ್ಗಾದೇವಿಯ ಆರಾಧನೆ ಮಾಡುವುದು ಒಳಿತು. ಸಣ್ಣಪುಟ್ಟ ಕಾರ್ಯಗಳು ಕೂಡಾ ನೆರವೇರಲು ಸಾಕಷ್ಟು ಜನರ ಸಹಾಯವನ್ನು ಬಯಸುವ ಸಂದರ್ಭ ಒದಗಿ ಬರುವುದು. ನಿಮ್ಮನ್ನು ಪ್ರೀತಿಸುವವರ ಮೂಲಕ ನಿಮ್ಮ ಕಾರ್ಯಗಳನ್ನು ಮಾಡಿಕೊಳ್ಳಿ. ಕುಲದೇವರ ಆಶೀರ್ವಾದವು ನಿಮ್ಮನ್ನು ರಕ್ಷಿಸುವುದು. ಗುರುವಿನ ಬಲವಿಲ್ಲದವರಿಗೆ ಸಣ್ಣ ವಿಷಯವೂ ಗಹನವಾಗಿ ಕಾಡುವುದು. ಸಣ್ಣಪುಟ್ಟ ವಿಷಯಗಳೇ ನಿಮ್ಮ ಮನಸ್ಸಿನ ಚಿಂತೆಗೆ ಕಾರಣವಾಗುವುದು. ಹಣಕಾಸಿನ ಮೇಲೆ ಹೆಚ್ಚಿನ ಹಿಡಿತವಿಟ್ಟುಕೊಳ್ಳುವುದು ಒಳ್ಳೆಯದು. ಅದೃಷ್ಟ ಸಂಖ್ಯೆ:1

ಪಂಡಿತ್ ಮಂಜುನಾಥ್ ಶಾಸ್ತ್ರೀ

ದೈವಜ್ಞ ಜ್ಯೋತಿಷ್ಯರು 9845743807

ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು ಹಾಗೂ ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಬಲಿಷ್ಟ ಪೂಜಾ ಶಕ್ತಿಯಿಂದ ಸರ್ವ ಗುಪ್ತ ಸಮಸ್ಯೆಗಳಿಗೆ ಶಾಶ್ವತ ಪರಿಹಾರ 9845743807 call/ whatsapp

English summary

your daily horoscope-29-october-2018

Know what astrology and the planets have in store for you today. Choose your zodiac sign and read the details...
Story first published: Monday, October 29, 2018, 10:13 [IST]
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more