For Quick Alerts
ALLOW NOTIFICATIONS  
For Daily Alerts

ಆಗಸ್ಟ್ 11ರ ಸೂರ್ಯಗ್ರಹಣದಿಂದ ರಾಶಿಗಳ ಮೇಲೆ ಪರಿಣಾಮವೇನು?

By Hemanth
|

ಈ ವರ್ಷವನ್ನು ಗ್ರಹಣಗಳ ವರ್ಷವೆಂದರೆ ತಪ್ಪಾಗಲಾರದು. ಯಾಕೆಂದರೆ ಗ್ರಹಣಗಳು ಒಂದರ ಹಿಂದೆ ಒಂದು ಈ ವರ್ಷ ಬಂದಿದೆ. ಅದರಲ್ಲೂ ಕೇವಲ 15 ದಿನಗಳ ಅಂತರಲ್ಲಿ ಚಂದ್ರಗ್ರಹಣ ಮತ್ತು ಸೂರ್ಯಗ್ರಹಣವು ಬಂದಿದೆ. ಇದೇ ಬರುವ ಆಗಸ್ಟ್ 11, 2018ರಂದು ವರ್ಷದ ಎರಡನೇ ಸೂರ್ಯಗ್ರಹಣವು ಕಾಣಿಸಿಕೊಳ್ಳಲಿದೆ. ಈ ಗ್ರಹಣವು ಉತ್ತರ ಅಮೆರಿಕಾ, ಗ್ರೀನ್ ಲ್ಯಾಂಡ್, ಉತ್ತರ ಯುರೋಪ್ ಮತ್ತು ಈಶಾನ್ಯ ಏಶ್ಯಾದಲ್ಲಿ ಗೋಚರಿಸಲಿದೆ. ಶತಮಾನದ ಅತೀ ದೀರ್ಘ ಚಂದ್ರಗ್ರಹಣವು ಕಾಣಿಸಿಕೊಂಡ 15 ದಿನಗಳಲ್ಲೇ ಸೂರ್ಯಗ್ರಹಣವು ಕಾಣಿಸಿಕೊಳ್ಳುತ್ತಿದೆ. ಸೂರ್ಯಗ್ರಹಣವು ಬೆಳಗ್ಗೆ 8.02ರಿಂದ 9.46 ಗಂಟೆ ತನಕ ಇರಲಿದೆ. ಈ ಲೇಖನದಲ್ಲಿ ನಿಮಗೆ ಗ್ರಹಣದ ಬಗ್ಗೆ ಸಂಪೂರ್ಣ ಮಾಹಿತಿ ನೀಡಲಿದ್ದೇವೆ.

ಗ್ರಹಣದ ವಿಧಗಳು

ನಾಲ್ಕು ವಿಧದ ಗ್ರಹಣಗಳು ಇವೆ. ಪೂರ್ಣ, ಖಗ್ರಾಸ, ಅಂಶಿಕ ಮತ್ತು ಭಾಗಶಃ

ಪೂರ್ಣ ಗ್ರಹಣ

ಪೂರ್ಣ ಗ್ರಹಣವು ಚಂದ್ರನು ಸಂಪೂರ್ಣವಾಗಿ ಸೂರ್ಯನನ್ನು ಆವರಿಸಿದಾಗ ನಡೆಯುವುದು. ಸೂರ್ಯನ ಕರೋನಾವು ತೆಳುರೇಖೆಯಂತೆ ಕಾಣಿಸುವುದು.

ವಾರ್ಷಿಕ ಗ್ರಹಣ

ಭೂಮಿ, ಸೂರ್ಯ ಮತ್ತು ಚಂದ್ರ ಸಮಾನ ರೇಖೆಯಲ್ಲಿದ್ದಾಗ ವಾರ್ಷಿಕ ಗ್ರಹಣವು ಸಂಭವಿಸುವುದು. ಆದರೆ ಇದನ್ನು ವೀಕ್ಷಿಸುವವರಿಗೆ ಚಂದ್ರನು ಸೂರ್ಯಕ್ಕಿಂತ ಸಣ್ಣದಾಗಿ ಕಾಣಿಸುವುದು.

ಖಗ್ರಾಸ ಗ್ರಹಣ

ಖಗ್ರಾಸ ಗ್ರಹಣವು ಒಂದು ದಿಕ್ಕಿನಿಂದ ಸಂಪೂರ್ಣವಾಗಿ ಮತ್ತು ಬೇರೆ ದಿಕ್ಕಿನಿಂದ ವಾರ್ಷಿಕವಾಗಿ ಕಾಣಿಸುವುದು. ಇದು ಅಂಶಿಕ ಮತ್ತು ಪೂರ್ಣ ಸೂರ್ಯಗ್ರಹಣದ ಮಧ್ಯದಲ್ಲಿರುವುದು.

ಅಂಶಿಕ ಗ್ರಹಣ

ಅಂಶಿಕ ಗ್ರಹಣವು ಸೂರ್ಯನನ್ನು ಚಂದ್ರನು ಅರ್ಧದಷ್ಟು ಮಾತ್ರ ಆವರಿಸಿದಾಗ ನಡೆಯುವುದು. ಸೂರ್ಯ ಮತ್ತು ಚಂದ್ರನು ಸರಿಯಾಗಿ ಚಂದ್ರನ ರೇಖೆಯಲ್ಲಿರುವುದಿಲ್ಲ.

ಪ್ರತೀ ಗ್ರಹಣವು ಅದರ ಜತೆಗಾರನೊಂದಿಗೆ ಬರುವುದು

ಕೇವಲ ಒಂದು ಗ್ರಹಣ ಮಾತ್ರ ಬರುವುದಿಲ್ಲವೆನ್ನುವುದು ಭೂಮಂಡಲದ ನಿಯಮವಾಗಿದೆ. ಒಂದು ಗ್ರಹಣ ಬಂದರೆ ಆಗ ಮತ್ತೊಂದು ಗ್ರಹಣವು ಇದರ ಹಿಂದೆ ಬರುವುದು. ಈ ಸಲ ಮೂರನೇ ಗ್ರಹಣವು ಬಂದಿದೆ. ಪ್ರತಿಯೊಂದು ಗ್ರಹಣವು ಇದನ್ನು ಪಾಲಿಸುವ ಮತ್ತು ಪಾಲಿಸದೆ ಇರುವವರ ಮೇಲೆ ಅವರ ಅಧಿಪತಿ ಗ್ರಹ ಮತ್ತು ರಾಶಿಚಕ್ರಕ್ಕೆ ಅನುಗುಣವಾಗಿ ಪರಿಣಾಮ ಬೀರುವುದು. ನಿಮ್ಮ ರಾಶಿಚಕ್ರಗಳ ಮೇಲೆ ಗ್ರಹಣವು ಯಾವ ರೀತಿಯ ಪರಿಣಾಮ ಬೀರಲಿದೆ ಎಂದು ತಿಳಿಯುವ.... ಆಗಸ್ಟ್ ನ ಗ್ರಹಣದಿಂದ ರಾಶಿಚಕ್ರಗಳ ಮೇಲೆ ಪರಿಣಾಮಗಳು..

ಮೇಷ(ಮೇ21-ಎಪ್ರಿಲ್ 19)

ಮೇಷ(ಮೇ21-ಎಪ್ರಿಲ್ 19)

ನೀವು ಯಾವುದಾದರೂ ಹೊಸತನ್ನು ಆರಂಭಿಸಬೇಕೆಂದು ಆಲೋಚನೆ ಮಾಡಿದ್ದರೆ ಅದಕ್ಕೆ ಈಗ ಸೂಕ್ತ ಸಮಯವಲ್ಲ. ನೀವು ಇದಕ್ಕಾಗಿ ಸ್ವಲ್ಪ ಕಾಯಬೇಕು. ಸಪ್ಟೆಂಬರ್ ತನಕ ನೀವು ಇದಕ್ಕಾಗಿ ಕಾಯಿರಿ.

ವೃಷಭ (ಎ.20-ಮೇ 20)

ವೃಷಭ (ಎ.20-ಮೇ 20)

ನಿಮ್ಮ ಜೀವನದಲ್ಲಿ ಈಗಾಗಲೇ ಹಲವಾರು ಬದಲಾವಣೆಗಳು ನಡೆದಿದೆ ಮತ್ತು ವರ್ಷದ ಮೂರನೇ ಗ್ರಹಣವು ನಿಮ್ಮಲ್ಲಿ ಮಹತ್ತರ ಬದಲಾವಣೆ ತರಲಿದೆ. ಇದು ಕುಟುಂಬ ಅಥವಾ ವೃತ್ತಿಯಾಗಿರಬಹುದು.

ಮಿಥುನ(ಮೇ 21-ಜೂನ್ 20)

ಮಿಥುನ(ಮೇ 21-ಜೂನ್ 20)

ಈ ಗ್ರಹಣವು ನಿಮಗೆ ತುಂಬಾ ಧನಾತ್ಮಕವಾಗಿರಲಿದೆ. ಜೀವನದಲ್ಲಿ ನೀವು ಹೆಚ್ಚಿನ ಶಕ್ತಿಯೊಂದಿಗೆ ಹೊಸ ಬದಲಾವಣೆಗಳನ್ನು ಬಯಸಿದ್ದೀರಿ. ಆದರೆ ನೀವು ಸ್ವಲ್ಪ ತಾಳ್ಮೆ ವಹಿಸಬೇಕು.

ಕರ್ಕಾಟಕ(ಜೂನ್ 21-ಜುಲೈ 22)

ಕರ್ಕಾಟಕ(ಜೂನ್ 21-ಜುಲೈ 22)

ನಿಮ್ಮ ಜೀವನದಲ್ಲಿ ವಿಚಾರಗಳು ತುಂಬಾ ನಿಧಾನವಾಗಿ ಸಾಗಲಿದೆ. ಯಾವುದೇ ಮಹತ್ತರ ಪರಿಣಾಮ ಬೀರುವುದಿಲ್ಲ. ಜೀವನದ ಆದ್ಯತೆ ಬಗ್ಗೆ ಯೋಚಿಸಲು ಮತ್ತು ಪುನರಾಲೋಚಿಸಲು ನಿಮಗೆ ಒಳ್ಳೆಯ ಸಮಯ ಸಿಗಲಿದೆ.

 ಸಿಂಹ (ಜುಲೈ23-ಆ.22)

ಸಿಂಹ (ಜುಲೈ23-ಆ.22)

ಆಗಸ್ಟ್ ನ ಸೂರ್ಯಗ್ರಹಣವು ಸಿಂಹ ರಾಶಿಯಲ್ಲಿ ಸಂಭವಿಸಲಿದೆ. ಸಿಂಹ ರಾಶಿಯವರು ತುಂಬಾ ದೀರ್ಘಕಾಲದಿಂದ ಮಾಡಬೇಕೆಂದು ಬಯಸಿರುವ ಕೆಲಸ ಮಾಡಲು ಇದು ಒಳ್ಳೆಯ ಅವಕಾಶ.

ಕನ್ಯಾ (ಆ.23-ಸೆ.23)

ಕನ್ಯಾ (ಆ.23-ಸೆ.23)

ಗ್ರಹಣದ ವೇಳೆ ಬುಧನು ವಿರುದ್ಧಗತಿಯಲ್ಲಿರುವನು. ಸಂವಹನಕ್ಕೆ ಸಂಬಂಧಿಸಿದ ವಿಚಾರಗಳು ತುಂಬಾ ನಿಧಾನಗತಿಯಲ್ಲಿ ನಡೆಯುವ ಕಾರಣ ತಾಳ್ಮೆ ಮುಖ್ಯ. ಕೆಲವು ವಿಚಾರಗಳು ನಿಮಗೆ ಗೊಂದಲ ಮೂಡಿಸಬಹುದು. ಇದರಿಂದ ಗ್ರಹಣದ ಸಮೀಪಕ್ಕೆ ಹೊಸತನ್ನು ಆರಂಭಿಸಬೇಡಿ.

ತುಲಾ (ಸೆ.24-ಅ.22)

ತುಲಾ (ಸೆ.24-ಅ.22)

ದೊಡ್ಡ ನಿರ್ಧಾರ ತೆಗೆದುಕೊಳ್ಳುವಂತೆ ಉದ್ವೇಗವು ನಿಮ್ಮೊಳಗೆ ಗ್ರಹಣದ ಪ್ರಭಾವದಿಂದ ಮೂಡಬಹುದು. ಆದರೆ ಇಂತಹ ನಿರ್ಧಾರಕ್ಕೆ ನೀವು ಅವಸರಿಸದೆ ಜನವರಿ ತನಕ ತಾಳ್ಮೆಯಿಂದ ಕಾಯಿರಿ. ಅದುವರೆಗೆ ನೀವು ಈ ವಿಚಾರದ ಬಗ್ಗೆ ಮತ್ತಷ್ಟು ವಿಮರ್ಶೆ ಮಾಡಿ.

ವೃಶ್ಚಿಕ (ಅ.23-ನ.21)

ವೃಶ್ಚಿಕ (ಅ.23-ನ.21)

ಈ ಸೂರ್ಯಗ್ರಹಣವು ನಿಮಗೆ ಅದ್ಭುತವಾದ ಶಕ್ತಿ ನೀಡಲಿದೆ ಮತ್ತು ಇದರಿಂದ ನೀವು ಬಯಸಿರುವಂತಹ ಗುರಿ ಸಾಧಿಸಲು ನೆರವಾಗಲಿದೆ. ಈ ಗ್ರಹಣವು ನಿಮ್ಮಲ್ಲಿ ಸಂಪೂರ್ಣವಾಗಿ ಧನಾತ್ಮಕ ಸಮಯ ತರಲಿದೆ.

ಧನು (ನ.22-ಡಿ.21)

ಧನು (ನ.22-ಡಿ.21)

ಈ ಗ್ರಹಣವು ಮುಂದಿನ ಕೆಲವು ತಿಂಗಳ ಕಾಲ ನೀವು ತುಂಬಾ ಮಹತ್ವಾಕಾಂಕ್ಷೆಯಾಗಿರುವಂತೆ ಮಾಡುವುದು. ಈ ಶಕ್ತಿಯನ್ನು ಎಲ್ಲಿ ವಿನಿಯೋಗಿಸಬೇಕೆಂದು ತಿಳಿಯಲು ನಿಮ್ಮದೇ ಆದ ಸಮಯ ಹಾಗೂ ನಿರ್ಧಾರ ಮಾಡಿ. ಇದನ್ನು ನೀವು ಕೇವಲ ವೆಚ್ಚ ಮಾಡದೆ ಹೂಡಿಕೆ ಮಾಡಿ.

 ಮಕರ (ಡಿ.22-ಜ.19)

ಮಕರ (ಡಿ.22-ಜ.19)

ಬಾಕಿ ಇರುವಂತಹ ವಿಚಾರವು ಮತ್ತೆ ಮರುಕಳಿಸಲಿದೆ. ಆದರೆ ಈ ಸಮಯದಲ್ಲಿ ನಿಮ್ಮಲ್ಲಿರುವ ಧನಾತ್ಮಕ ಹಾಗೂ ಅದ್ಭುತ ಶಕ್ತಿಯಿಂದ ಇದನ್ನು ನಿಭಾಯಿಸಲು ಯಶಸ್ವಿಯಾಗುವಿರಿ. ಸ್ನೇಹಿತರು ಮತ್ತು ಕುಟುಂಬದವರು ನಿಮಗೆ ನೆರವಾಗುವರು.

ಕುಂಭ (ಜ.20-ಫೆ.19)

ಕುಂಭ (ಜ.20-ಫೆ.19)

ಈ ಗ್ರಹಣವು ನಿಮಗೆ ಒಳ್ಳೆಯ ಅವಕಾಶ ಕೊಡಲಿದೆ. ಇದು ನಿಮಗೆ ಸ್ನೇಹ, ಪ್ರೀತಿ ಅಥವಾ ವ್ಯಪಾರಕ್ಕೆ ಜತೆಗಾರನನ್ನು ಕೊಡಲಿದೆ.

ಮೀನ (ಫೆ.20-ಮಾ.20)

ಮೀನ (ಫೆ.20-ಮಾ.20)

ಕೌಟುಂಬಿಕ ಅಥವಾ ಜೀವನಕ್ಕೆ ಸಂಬಂಧಿಸಿದ ಕೆಲವು ಸಣ್ಣಪುಟ್ಟ ವಿಚಾರಗಳು ಬಂದ ಹಾಗೆ ಹೋಗಲಿದೆ. ಸೂರ್ಯಗ್ರಹಣದಿಂದಾಗಿ ಮೀನ ರಾಶಿಯವರ ಮೇಲೆ ಯಾವುದೇ ಮಹತ್ತರ ಪರಿಣಾಮಗಳು ಆಗದು. ರಾಶಿಚಕ್ರಗಳ ಮೇಲೆ ಗ್ರಹಣದ ಸಂಕ್ಷಿಪ್ತ ಪರಿಣಾಮ ಈ ಲೇಖನದಲ್ಲಿ ನೀಡಲಾಗಿದೆ. ಇನ್ನಷ್ಟು ವಿವರವಾದ ಮಾಹಿತಿಗಳು ಮುಂದೆ ನಿರೀಕ್ಷಿಸುತ್ತಾ ಇರಿ.

English summary

You Need To Know About The Solar Eclipse On Aug 11, 2018

Just fifteen days after the longest lunar eclipse of the century and the biggest of the year, we are to witness another eclipse very soon. It will be a partial solar eclipse, to be witnessed in North America, Europe and parts of Asia, in the morning hours of August 11, according to the Universal Time. It will also leave some impact on a majority of the zodiacs.
Story first published: Thursday, August 9, 2018, 8:30 [IST]
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more