For Quick Alerts
ALLOW NOTIFICATIONS  
For Daily Alerts

ಮಹಿಳೆಯ ಗರ್ಭಾಶಯದಲ್ಲಿದ್ದ ಅತೀ ದೊಡ್ಡ ಕ್ಯಾನ್ಸರ್ ಗಡ್ಡೆ ಹೊರ ತೆಗೆದ ವೈದ್ಯರು

|

ಕೆಲವರು ಚಿಕಿತ್ಸೆ ಭೀತಿಯಿಂದ ಅಥವಾ ಹಣವು ಹೆಚ್ಚಾಗಿ ಖರ್ಚಾಗುವುದು ಎನ್ನುವ ಕಾರಣಕ್ಕಾಗಿ ವೈದ್ಯರಲ್ಲಿಗೆ ತೆರಳಲು ಹಿಂಜರಿಯುವರು. ಆದರೆ ಇಲ್ಲೊಬ್ಬರು ಮಹಿಳೆ ಇದೇ ರೀತಿಯಾಗಿ ವೈದ್ಯರಲ್ಲಿಗೆ ತೆರಳಲು ಹೆದರಿಕೊಂಡು ಕುಳಿತ ಕಾರಣ ಆಕೆಯ ಗರ್ಭಾಶಯದಲ್ಲಿದ್ದ ದೊಡ್ಡ ಗಾತ್ರದ ಕ್ಯಾನ್ಸರ್ ಗಡ್ಡೆಯನ್ನು ಶಸ್ತ್ರಚಿಕಿತ್ಸೆ ನಡೆಸಿ ಹೊರತೆಗೆಯಬೇಕಾಗಿ ಬಂತು.

Worlds Heaviest Ovarian Cancer Tumour Was Removed By Doctors

ಶಸ್ತ್ರಚಿಕಿತ್ಸೆ ನಡೆಸಿರುವ ವೈದ್ಯರ ಪ್ರಕಾರ ಇದು ವಿಶ್ವದಲ್ಲೇ ಕಂಡುಬಂದಿರುವ ಅತೀದೊಡ್ಡ ಗಾತ್ರದ ಗಡ್ಡೆಯೆಂದು ಹೇಳಿದ್ದಾರೆ. ಇದರ ಬಗ್ಗೆ ಮತ್ತಷ್ಟು ತಿಳಿಯಿರಿ

ರೋಗಿಯ ಬಗ್ಗೆ

ರೋಗಿಯ ಬಗ್ಗೆ

ತಮಿಳುನಾಡಿನ ಊಟಿಯಲ್ಲಿ ವಸಂತ ಎಂಬಾಕೆಯು ಕೂಲಿಕಾರ್ಮಿಕೆಯಾಗಿ ಕೆಲಸ ಮಾಡುತ್ತಲಿದ್ದರು. ಹೊಟ್ಟೆಯು ಯಾವುದೇ ನೋವು ಅಥವಾ ಸಮಸ್ಯೆಯಿಲ್ಲದೆ ತನ್ನಷ್ಟಕ್ಕೆ ದೊಡ್ಡದಾಗುತ್ತಲಿದ್ದರೂ ಆಕೆ ಇದನ್ನು ಕಡೆಗಣಿಸಿದ್ದರು. ಅದಾಗ್ಯೂ, ಆಕೆಯ ಹೊಟ್ಟೆಯು ಅತಿಯಾಗಿ ದೊಡ್ಡದಾಯಿತು ಮತ್ತು ನೋವು ಕಾಣಿಸಿಕೊಳ್ಳಲು ಆರಂಭವಾಯಿತು.

ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಯಿತು

ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಯಿತು

ನೋವು ತಡೆದುಕೊಳ್ಳಲು ಸಾಧ್ಯವಾಗದೆ ಇರುವಾಗ ಆಕೆಯು ವೈದ್ಯರನ್ನು ಭೇಟಿಯಾದರು. ವೈದ್ಯರು ಕೆಲವೊಂದು ಪರೀಕ್ಷೆ ನಡೆಸಿದ ಬಳಿಕ ಇದು ಗರ್ಭಕೋಶದ ಗಡ್ಡೆ ಎಂಬುವುದನ್ನು ಸ್ಪಷ್ಟಪಡಿಸಿದರು. ಗಡ್ಡೆಯ ಗಾತ್ರ ನೋಡಿದ ವೈದ್ಯರು ಶಸ್ತ್ರಚಿಕಿತ್ಸೆ ಮಾಡಲು ಹಿಂಜರಿದರು. ಯಾಕೆಂದರೆ ಸಣ್ಣ ತಪ್ಪು ಕೂಡ ಮಹಿಳೆಯ ಪ್ರಾಣಕ್ಕೆ ಹಾನಿ ಉಂಟು ಮಾಡುತ್ತಲಿತ್ತು.

Most Read: ತನ್ನ ಬಾಯ್ ಫ್ರೆಂಡ್‌ನ ಶಿಶ್ನಕ್ಕೆ ಚಿಲ್ಲಿ ಸಾಸ್ ಹಾಕಿದ ಮಹಿಳೆ!!!

ವಸಂತ ಪರಿಸ್ಥಿತಿ ಚಿಂತಾಜನಕವಾಗಿತ್ತು!

ವಸಂತ ಪರಿಸ್ಥಿತಿ ಚಿಂತಾಜನಕವಾಗಿತ್ತು!

ವಸಂತಗೆ ನೋವು ತಡೆದುಕೊಳ್ಳಲು ಸಾಧ್ಯವಾಗದೆ ಇರುವ ಕಾರಣ ಆಕೆಯ ಪರಿಸ್ಥಿತಿಯು ಚಿಂತಾಜನಕವಾಗಿತ್ತು. ಆಕೆಗೆ ನಡೆದಾಡಲು, ಆಹಾರ ಸೇವಿಸಲು ಸಾಧ್ಯವಾಗುತ್ತಿರಲಿಲ್ಲ. ಕೆಲವು ಸಲ ಆಕೆಗೆ ಉಸಿರಾಡಲು ಕಷ್ಟವಾಗುತ್ತಿತ್ತು. ಆಕೆಗೆ ತುರ್ತು ಚಿಕಿತ್ಸೆ ಅಗತ್ಯವಿದ್ದ ಕಾರಣ ತಕ್ಷಣ ಶಸ್ತ್ರಚಿಕಿತ್ಸೆಗೆ ತಯಾರಾದರು. ಶಸ್ತ್ರಚಿಕಿತ್ಸೆಯು ಯಶಸ್ವಿಯಾಗಿದೆ ಮತ್ತು ಬಯೋಪ್ಸಿ ವರದಿಯ ಪ್ರಕಾರ ಇದು ಕ್ಯಾನ್ಸರ್ ಗಡ್ಡೆಯೆಂದು ತಿಳಿದುಬಂದಿದೆ.

ವೈದ್ಯರು ಹೇಳುವಂತೆ...

ವೈದ್ಯರು ಹೇಳುವಂತೆ...

ಮಹಿಳೆಯು ಇಲ್ಲಿ ಬಂದು ದಾಖಲಾದಾಗ ಆಕೆಯ ತೂಕವು 75 ಕೆ.ಜಿ. ಇತ್ತು. ಶಸ್ತ್ರಚಿಕಿತ್ಸೆ ನಡೆಸಿದ ಬಳಿಕ ಗಡ್ಡೆಯ ತೂಕ ಮಾಡಿದಾಗ ಅದು 33.5 ಕೆ.ಜಿ. ಇತ್ತು. ಬಯೋಸ್ಪಿ ವರದಿಯ ಬಳಿಕ ಇದು ಗರ್ಭಕೋಶದ ಕ್ಯಾನ್ಸರ್ ಗಡ್ಡೆಯೆಂದು ಸ್ಪಷ್ಟವಾಗಿದೆ.

Most Read: ನೀವು ಸೆಕ್ಸ್ ಬಗ್ಗೆ ತಿಳಿಯಬೇಕಾದ ಕೆಲವು ಸಂಗತಿಗಳು ಇಲ್ಲಿವೆ..

ಇದು ಅತೀ ಭಾರದ ಗರ್ಭಕೋಶದ ಕ್ಯಾನ್ಸರ್ ಗಡ್ಡೆ

ಇದು ಅತೀ ಭಾರದ ಗರ್ಭಕೋಶದ ಕ್ಯಾನ್ಸರ್ ಗಡ್ಡೆ

ವಿಶ್ವದೆಲ್ಲೆಡೆಯಲ್ಲಿ ಶಸ್ತ್ರಚಿಕಿತ್ಸೆ ನಡೆಸಿರುವುದಲ್ಲಿ ಇದು ಅತೀ ದೊಡ್ಡ ಗಾತ್ರದ ಗರ್ಭಕೋಶದ ಕ್ಯಾನ್ಸರ್ ಗಡ್ಡೆಯಾಗಿದೆ. ಇದು ದಾಖಲೆ ಕೂಡ ಆಗಿದೆ. ಹಿಂದಿನ ಗಡ್ಡೆಯು 20 ಕೆ.ಜಿ. ಇತ್ತು. ದೆಹಲಿ ಮತ್ತು ಪಾಂಡಿಚೇರಿಯಲ್ಲಿ ಹಿಂದಿನ ರೋಗಿಗಳ ಶಸ್ತ್ರಚಿಕಿತ್ಸೆ ನಡೆದಿತ್ತು.

English summary

World's Heaviest Ovarian Cancer Tumour Was Removed By Doctors

Doctors at a Coimbatore-based hospital in India operated on the "world's heaviest tumour." The surgeons were able to remove an ovarian tumour successfully. It is reported that a tumour weighed 33.5 kg. Doctors claim that a world record has been already set as they had got approval and certification from Indian Book of Records and also from Asian Book of Records.
X
Desktop Bottom Promotion