For Quick Alerts
ALLOW NOTIFICATIONS  
For Daily Alerts

ಸಾರ್ವಜನಿಕ ಅನಿರೀಕ್ಷಿತ ಮುಟ್ಟಿನ ಸ್ರಾವವನ್ನು ನಿರ್ವಹಿಸಿದ ಬಗೆಯನ್ನು ಹಂಚಿಕೊಂಡ ಮಹಿಳೆಯರು

|

ಪ್ರೌಢಾವಸ್ಥೆ ತಲುಪಿದ ಪ್ರತಿ ಯುವತಿಗೂ ಎದುರಾಗುವ ನಿಸರ್ಗನಿಯಮವಾದ ಮಾಸಿಕ ಸ್ರಾವ ಹೆಚ್ಚಿನ ಸಂದರ್ಭದಲ್ಲಿ ಅನಿರೀಕ್ಷಿತವಾಗಿ ಕೆಲಸಮಯದ ಮೊದಲೇ ಪ್ರಾರಂಭವಾಗಿಬಿಡಬಹುದು. ಇದಕ್ಕೆ ಹೊತ್ತು, ಸಮಯ, ವ್ಯಕ್ತಿ ಇರುವ ಸ್ಥಳ, ಸಂದರ್ಭ, ದಿಕ್ಕು ಇದುವುದರ ಪರಿವೆಯೇ ಇರುವುದಿಲ್ಲ. ಹಲವು ಸಂದರ್ಭಗಳಲ್ಲಿ ಈ ಪರಿಸ್ಥಿತಿಗೆ ಎದುರಾಗದೇ ಇರುವ ಮಹಿಳೆಯರು ಅನಿರೀಕ್ಷಿತವಾಗಿ ಈ ಕ್ರಿಯೆ ಪ್ರಾರಂಭವಾಗಿಯೇ ಬಿಟ್ಟಾಗ ಇದನ್ನು ನಿರ್ವಹಿಸುವುದು ಹೇಗೆ ಎಂಬುದನ್ನು ಮನಗಾಣದೇ ದಿಗ್ಭ್ರಮೆಗೊಳ್ಳುತ್ತಾರೆ.

ಉದಾಹರಣೆಗೆ ರೋಲರ್ ಕೋಸ್ಟರ್ ಒಂದರಲ್ಲಿ ಸವಾರಿ ಮಾಡುತ್ತಿದ್ದಾಗ ಅತಿವೇಗದಲ್ಲಿಯೇ ಹೀಗಾಯಿತು ಅಂದುಕೊಳ್ಳೋಣ, ಆಗ ಇಡಿಯ ಶರೀರವೇ ಸ್ರಾವದಿಂದ ಮುಳುಗಿಹೋಗಬಹುದು. ಇನ್ನೊಂದು ಸಂದರ್ಭದಲ್ಲಿ ನಿಮ್ಮ ಕನಸಿನ ಕೆಲಸಕ್ಕೆ ಸೇರುವ ಅತಿಮುಖ್ಯ ಸಂದರ್ಶನವೊಂದಕ್ಕೆ ಸರತಿಯಲ್ಲಿ ಕಾಯುತ್ತಿದ್ದ ಸಮಯದಲ್ಲಿ ಎದುರಾದರೆ? ಆಗ ನೀವು ತೊಟ್ಟಿದ್ದ ದುಬಾರಿ ಉಡುಗೆಯೇ ಮಲಿನಗೊಳ್ಳಬಹುದು, ಇದಕ್ಕೂ ಹೆಚ್ಚಾಗಿ ಜನರ ನಡುವೆ ನಿಲ್ಲಲೂ ಸಾಧ್ಯವಾಗದೇ ಹೋಗಬಹುದು. ಇಂತಹ ಸಂದರ್ಭವನ್ನು ತಾವು ಹೇಗೆ ಎದುರಿಸಿದೆವು ಎಂಬುದನ್ನು ದಿಟ್ಟವಾಗಿ ತಿಳಿಸಿದ ಏಳು ಮಹಿಳೆಯರ ಅನುಭವಗಳನ್ನು ಈಗ ನೋಡೋಣ:

ಒಂದು ಟ್ಯಾಕ್ಸಿ ಬಾಡಿಗೆಗೆ ಪಡೆದು ಮನೆಗೆ ಬಂದೆ

ಒಂದು ಟ್ಯಾಕ್ಸಿ ಬಾಡಿಗೆಗೆ ಪಡೆದು ಮನೆಗೆ ಬಂದೆ

ನಾವೊಂದು ಪಾರ್ಟಿಗೆ ಹೋಗುತ್ತಿದ್ದೆವು, ಇದರಲ್ಲಿ ಪುರುಷರೂ ಇದ್ದರು. ಅಂದು ನನಗೆ ಮಾಸಿಕ ಸ್ರಾವದ ನಾಲ್ಕನೆಯ ದಿನವಾಗಿದ್ದು ಹೆಚ್ಚಿನದೆಲ್ಲಾ ಹೋಗಿ ಇಂದೇನೂ ಹೆಚ್ಚಿರಲಿಕ್ಕಿಲ್ಲ ಎಂದು ನನ್ನ ಎಣಿಕೆಯಾಗಿತ್ತು. ಆದರೆ ನನ್ನ ನಂಬಿಕೆಗೆ ವ್ಯತಿರಿಕ್ತವಾಗಿ ನಾಲ್ಕನೆಯ ದಿನವೂ ಮೊದಲ ದಿನದಂತೆಯೇ ಭಾರೀ ಪ್ರಮಾಣದ ಸ್ರಾವ ನನ್ನಿಂದ ಹರಿಯತೊಡಗಿತು. ಸಾಮಾನ್ಯ ಸ್ರಾವವಾಗಬಹುದೆಂಬ ನಿರೀಕ್ಷೆಯಿಂದ ಮಧ್ಯಮ ಪ್ರಾಬಲ್ಯದ ಪ್ಯಾಡ್ ಧರಿಸಿಕೊಂಡು ಬಂದಿದ್ದರೂ ಕೆಲವೇ ಕ್ಷಣಗಳಲ್ಲಿ ಇದು ಪೂರ್ಣವಾಗಿ ತೋಯ್ದು ನಾನು ತೊಟ್ಟ ಶರಾಯಿಯಿಂದ ಹೊರಸೋರತೊಡಗಿತು. ಆಗ ತಕ್ಷಣ ನಾನೇನು ಮಾಡಿದೆ ಎಂದರೆ ನಾನು ಮನೆಗೆ ಹೋಗುತ್ತಿದ್ದೇನೆ ಎಂದು ನನ್ನ ಸ್ನೇಹಿತೆಯರಿಗೆ ತಿಳಿಸಿ ತಕ್ಷಣವೇ ಹೊರಬಂದು ಟ್ಯಾಕ್ಸಿಯೊಂದನ್ನು ಹಿಡಿದು ನೇರವಾಗಿ ಮನೆಗೆ ಬಂದೆ. ಅಂದು ಪಾರ್ಟಿಯಲ್ಲಿ ಮಂದ ಬೆಳಕಿದ್ದುದು ಹಾಗೂ ನಾನೂ ಗಾಢವರ್ಣದ ದಿರಿಸನ್ನು ಧರಿಸಿದ್ದುದು ಇತರರಿಗೆ ಈ ತೊಂದರೆಯನ್ನು ಕಾಣದಿರಲು ಸಾಧ್ಯವಾಗಿತ್ತು. ಯಾರೂ ನೋಡಿರಲಿಕ್ಕಿಲ್ಲ ಎಂದು ನನ್ನ ಭಾವನೆ.

ನಾನು 'ಕುಛ್ ಕುಛ್ ಹೋತಾ ಹೈ' ಚಿತ್ರದ ಮಾದರಿಯಲ್ಲಿ ಮೇಲುಡುಪನ್ನು ಕಟ್ಟಿಕೊಂಡು ಪಾರಾದೆ

ನಾನು 'ಕುಛ್ ಕುಛ್ ಹೋತಾ ಹೈ' ಚಿತ್ರದ ಮಾದರಿಯಲ್ಲಿ ಮೇಲುಡುಪನ್ನು ಕಟ್ಟಿಕೊಂಡು ಪಾರಾದೆ

'ಕುಛ್ ಕುಛ್ ಹೋತಾ ಹೈ' ನಮಗೆ ಹಲವಾರು ಸಂಗತಿಗಳನ್ನು ಕಲಿಸಿದೆ. ಇದರಲ್ಲಿ ಎರಡು ನನಗೆ ಹೆಚ್ಚು ಪ್ರಿಯವಾಗಿವೆ. ಮೊದಲನೆಯದು ಸ್ನೇಹ. ಇನ್ನೊಂದು ಅನಿರೀಕ್ಷಿತ ಸ್ರಾವದ ಸಮಯದಲ್ಲಿ ನಿಮ್ಮ ಮೇಲುಡುಪನ್ನು ಸೊಂಟಕ್ಕೆ ಕಟ್ಟಿಕೊಂಡು ಮುಜುಗರದಿಂದ ಪಾರಾಗುವುದು. ಶರೀರದ ಮೇಲ್ಭಾಗದಲ್ಲಿ ತೊಡುವ ಉಡುಪನ್ನು ಲುಂಗಿಯ ರೀತಿಯಲ್ಲಿ ಸೊಂಟಕ್ಕೆ ಸುತ್ತಿಕೊಳ್ಳುವ ಮೂಲಕ ಸ್ರಾವದಿಂದ ತೋಯ್ದಿದ್ದ ಹಿಂಭಾಗವನ್ನು ಈ ಮೂಲಕ ಮರೆಮಾಚಿದಂತಾಯಿತು. ಒಮ್ಮೆಯಂತೂ ಕಾಲೇಜಿನಿಂದ ಹೊರಬರುವಾಗ ಸ್ರಾವದಿಂದ ಉಡುಪು ಮಲಿನಗೊಂಡಿತ್ತು. ಆಗ ಇದೇ ವಿಧಾನ ಬಳಸಿ ಮುಜುಗರದಿಂದ ಪಾರಾದೆ.

Most Read: ಪುರುಷರಿಗಿಂತ ಮಹಿಳೆಯರಿಗೆಯೇ ಸೆಕ್ಸ್‌ನಲ್ಲಿ ಆಸಕ್ತಿ ಜಾಸ್ತಿಯಂತೆ! ಇದಕ್ಕೆ ಕಾರಣಗಳು ಇಲ್ಲಿದೆ ನೋಡಿ

ಒಂದು ಹೊಸ ಪ್ಯಾಂಟ್ ಖರೀದಿಸಿ ಬದಲಿಸಿಕೊಂಡೆ

ಒಂದು ಹೊಸ ಪ್ಯಾಂಟ್ ಖರೀದಿಸಿ ಬದಲಿಸಿಕೊಂಡೆ

ಒಮ್ಮೆ ಮಾಲ್ ಒಂದರಲ್ಲಿ ಖರೀದಿ ಮಾಡುತ್ತಿದ್ದಾಗ ಅನಿರೀಕ್ಷಿತವಾಗಿ ಸ್ರಾವ ಎದುರಾಗಿತ್ತು. ಅಂದೇ ನನ್ನ ಮಾಸಿಕ ದಿನಗಳು ಪೂರ್ಣ ಭರಾಟೆಯಿಂದ ಪ್ರಾರಂಭವಾಗಿತ್ತು. ಸ್ರಾವದ ಕಾರಣ ನಾನು ತೊಟ್ಟ ಜೀನ್ಸ್ ಸಹಾ ತೋಯತೊಡಗಿತು. ಹೆಚ್ಚು ಸಮಯ ಕಳೆಯದೇ ತಕ್ಷಣವೇ ಸಮೀಪದ ಅಂಗಡಿಯೊಂದರಿಂದ ನೈರ್ಮಲ್ಯ ಪ್ಯಾಡ್ ಗಳನ್ನೂ ಹೊಸ ಜೀನ್ಸ್ ಒಂದನ್ನೂ, ಒಳ ಉಡುಪನ್ನೂ ತಕ್ಷಣವೇ ಖರೀದಿಸಿ ಪಕ್ಕದಲ್ಲಿದ್ದ ಶೌಚಾಲಯದಲ್ಲಿ ತಕ್ಷಣವೇ ಬದಲಿಸಿಕೊಂಡೆ. ಹಾಗಾಗಿ ನನಗೆ ಮುಜುಗರಕ್ಕೆ ಒಳಗಾಗುವ ಸಂದರ್ಭ ಎದುರಾಗಲಿಲ್ಲ.

ಮೊದಲ ಸ್ರಾವವಾಗಿದ್ದರೂ ಹೆಚ್ಚೇನೂ ತೊಂದರೆಯಾಗಲಿಲ್ಲ

ಮೊದಲ ಸ್ರಾವವಾಗಿದ್ದರೂ ಹೆಚ್ಚೇನೂ ತೊಂದರೆಯಾಗಲಿಲ್ಲ

ಅಂದು ನಾನು ನನ್ನ ಮೆಚ್ಚಿನ ಜೀನ್ಸ್ ತೊಟ್ಟು ನನ್ನ ಸ್ನೇಹಿತೆಯರೊಂದಿಗೆ ಕೆಫೆಯೊಂದಕ್ಕೆ ಹೋಗಿದ್ದೆ. ಅಂದೇ ಅನಿರೀಕ್ಷಿತವಾಗಿ ನನ್ನ ಮಾಸಿಕ ಸ್ರಾವ ಪ್ರಾರಂಭವಾಗಿತ್ತು. ಮೊದಲ ದಿನ ಸಾಮಾನ್ಯವಾಗಿ ಅಷ್ಟು ಸ್ರಾವವಿರುವುದಿಲ್ಲವಾದರೂ ಅಂದು ಬಹಳವೇ ಸ್ರಾವವಾಗಿತ್ತು. ಆದರೂ, ಪ್ರಾಮಾಣಿಕವಾಗಿ ಹೇಳಬೇಕೆಂದರೆ, ಇದು ಅಸಹಜ ಎಂದೆನಿಸಲಿಲ್ಲ. ವಾಸ್ತವವಾಗಿ ದೇಹದ ಇತರ ಯಾವುದೋ ಅಂಗಕ್ಕೆ ಗಾಯವಾದಾಗ ಒಸರುವ ರಕ್ತದಿಂದ ನಮಗೆ ಮುಜುಗರ ಎದುರಾಗುತ್ತದೆಯೇ? ಹಾಗಿದ್ದಾಗ ನಿಸರ್ಗನಿಯಮದ ಈ ಸ್ರಾವಕ್ಕೇಕೆ ನಾವು ಮುಜುಗರ ಅನುಭವಿಸಬೇಕು? ಇದರ ಮೂಲಕ ಬಟ್ಟೆಗಳು ತೋಯುವುದು ಅನಿವಾರ್ಯ. ಇದರಲ್ಲಿ ತೊಂದರೆಯೆಲ್ಲಿ ಬಂತು? ಅಂದು ನಾನು ನಿರಾಳವಾಗಿಯೇ ಹೊಸ ಪ್ಯಾಡ್ ಗೆ ಬದಲಿಸಿಕೊಂಡೆ. ತೊಟ್ಟಿದ್ದ ಜೀನ್ಸ್ ಕಳಚಿ ಕಲೆಯಿದ್ದಲ್ಲಿ ನೀರಿನಿಂದ ಚೆನ್ನಾಗಿ ತೊಳೆದು ಇದನ್ನೇ ತೊಟ್ಟು ಸುಮಾರು ಒಂದು ಘಂಟೆಯ ಕಾಲ ಪ್ಲಾಸ್ಟಿಕ್ಕಿನ ಕುರ್ಚಿಯೊಂದರ ಮೇಲೆ ಕುಳಿತೆ. ಅಲ್ಲದೇ ಯಾವುದೇ ಕಲೆ ಉಳಿಯದಂತೆ ಸ್ವಚ್ಛಗೊಳಿಸಿ ಬಳಿಕ ಅಲ್ಲಿಂದ ನಿರ್ಗಮಿಸಿದೆ.

ಬೀದಿಕಾಮುಕರ ಟೀಕೆ ಎದುರಿಸಬೇಕಾಗಿ ಬಂದು ನನ್ನನ್ನೇ ಹಳಿದುಕೊಂಡೆ

ಬೀದಿಕಾಮುಕರ ಟೀಕೆ ಎದುರಿಸಬೇಕಾಗಿ ಬಂದು ನನ್ನನ್ನೇ ಹಳಿದುಕೊಂಡೆ

ಕೆಲವು ವರ್ಷಗಳ ಹಿಂದೆ ನನಗಿನ್ನೂ ಚಿಕ್ಕ ವಯಸ್ಸಾಗಿದ್ದು ಮಾಸಿಕ ಸ್ರಾವದ ಬಗ್ಗೆ ಮುಜುಗರವಿತ್ತು. ಅಂದು ನನ್ನ ಚಿಕ್ಕ ತಂಗಿಯನ್ನು ಶಾಲೆಯಿಂದ ಕರೆತರಲು ಹೋಗಿ ಹಿಂದಿರುಗುತ್ತಿದ್ದಾಗ ಅನಿರೀಕ್ಷಿತವಾಗಿ ಸ್ರಾವ ಎದುರಾಗಿತ್ತು. ಇದರ ಕಲೆ ಪ್ರಕಟಗೊಳ್ಳುತ್ತಿದ್ದಂತೆಯೇ ಅಲ್ಲಿದ್ದ ಬೀದಿಕಾಮುಕರ ಗುಂಪೊಂದು ಇದನ್ನು ಗಮನಿಸಿ ಟೀಕೆ ಮಾಡತೊಡಗಿದರು. 'ಈ ಕೆಲೆ ತೊಲಗಿಸಲು ಈಗ ಟೈಡ್ ಡಿಟರ್ಜೆಂಟೇ ಬೇಕು' ಎಂಬೆಲ್ಲಾ ಮಾತುಗಳನ್ನು ಆಡತೊಡಗಿದರು. ಈ ಟೀಕಾಪ್ರಹಾರಗಳನ್ನು ಎದುರಿಸಲಾಗದೇ ಹಿಂದಿರುಗಿ ಹೆಚ್ಚೂ ಕಡಿಮೆ ಓಡಿಯೇ ಮನೆಗೆ ಬಂದಿದ್ದೆ. ಆದರೆ ಅಂದು ಆ ಗುಂಪಿಗೆ ಸರಿಯಾಗಿ ಬುದ್ದಿ ಕಲಿಸಬೇಕಿತ್ತು ಎಂದು ಈಗ ಅನ್ನಿಸುತ್ತಿದೆ.

ನನ್ನ ಸ್ನೇಹಿತೆಯರು ನನ್ನನ್ನು ಮುಂದಿರಿಸಿ ಹಿಂದಿನಿಂದ ಹಿಂಬಾಲಿಸಿದರು

ನನ್ನ ಸ್ನೇಹಿತೆಯರು ನನ್ನನ್ನು ಮುಂದಿರಿಸಿ ಹಿಂದಿನಿಂದ ಹಿಂಬಾಲಿಸಿದರು

ಒಮ್ಮೆ ಶಾಲೆಯ ತರಗತಿಯಲ್ಲಿ ಬಿಳಿ ಸಮವಸ್ತ್ರ ಧರಿಸಿದ್ದ ದಿನ ನನಗೆ ಅನಿರೀಕ್ಷಿತವಾಗಿ ಸ್ರಾವ ಪ್ರಾರಂಭವಾಯಿತು. ನಾನು ನಿಂತಾಗ ನನ್ನ ಹಿಂದಿದ್ದ ಸ್ನೇಹಿತೆ ನನ್ನ ಸ್ಕರ್ಟ್ ಮಲಿನವಾಗಿದೆ ಎಂದು ತಿಳಿಸಿದಳು. ಈ ಸಂದರ್ಭವನ್ನು ಮುಜುಗರಕ್ಕೆ ಎದುರಾಗಲು ಇಚ್ಛಿಸದ ನನ್ನ ಸ್ನೇಹಿತೆಯರು ನನ್ನನ್ನು ಮುಂದಿರಿಸಿ ತಾವು ಹಿಂದಿನಿಂದ ನನ್ನನ್ನು ಹಿಂಬಾಲಿಸತೊಡಗಿದರು. ಹಾಗಾಗಿ ಇತರರು ಇದನ್ನು ನೋಡುವುದರಿಂದ ರಕ್ಷಣೆ ಪಡೆದಂತಾಯಿತು ರಸ್ತೆಗೆ ಬಂದ ಬಳಿಕ ರಿಕ್ಷಾವೊಂದನ್ನು ಹತ್ತಿ ನೇರವಾಗಿ ಮನೆಗೆ ಬಂದಿದ್ದೆ.

Most Read: ಮಹಿಳೆಯರು ಸೆಕ್ಸ್ ವಿಚಾರದ ಬಗ್ಗೆ ಕೇಳಲು ಮುಜುಗರ ಪಡುವ ಪ್ರಶ್ನೆಗಳು

ನನ್ನ ಟೀ-ಶರ್ಟ್ ಅನ್ನು ಕೆಳಕ್ಕೆಳೆದುಕೊಂಡಿದ್ದೆ

ನನ್ನ ಟೀ-ಶರ್ಟ್ ಅನ್ನು ಕೆಳಕ್ಕೆಳೆದುಕೊಂಡಿದ್ದೆ

ಅಂದು ನನ್ನ ಮಾಸಿಕ ದಿನಗಳ ಮೂರನೆಯ ದಿನವಾಗಿತ್ತು ಹಾಗೂ ಅಂದು ಹೆಚ್ಚಿನ ಸ್ರಾವವನ್ನು ನಿರೀಕ್ಷಿಸಿರಿರಲಿಲ್ಲ. ಆದರೂ ಅಂದು ನಿರೀಕ್ಷೆಗೂ ಮೀರಿದ ಸ್ರಾವವಾಗಿ ನನ್ನ ಸ್ಕರ್ಟ್ ತೋಯತೊಡಗಿತು. ಅಂದು ನಾನು ಹಳೆಯ ವಸ್ತುಗಳನ್ನು ಮಾರಾಟ ಮಾಡುವ ಸ್ಥಳದಲ್ಲಿದ್ದೆ ಹಾಗೂ ಸಮೀಪದಲ್ಲೆಲ್ಲೂ ಶೌಚಾಲಯವೂ ಇರಲಿಲ್ಲ. ಈ ಸಂದರ್ಭದಲ್ಲಿ ನನಗೆ ಹೊಳೆದದ್ದೆಂದರೆ ನಾನು ತೊಟ್ಟಿದ್ದ ಟೀ ಶರ್ಟ್ ಅನ್ನು ಕೆಳಕ್ಕೆಳೆದು ತೋಯ್ದ ಭಾಗವನ್ನು ಮರೆಮಾಚಿಕೊಂಡಿದ್ದೆ.

English summary

Womens Share How They Handled Period Leaks In Public

Periods are savage; they have no sense of time, place and direction. Many-a-times, we are in a situation where a period leak should be the last thing to happen to not just you but anyone. Imagine yourself on a roller coaster that turns into a bloody whirlwind, or worse, imagine you are lined up for an interview at your dream company and you stain your luxe trousers. What will you do? We get seven women getting candid about how they handled the case of a period leak in public.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more