For Quick Alerts
ALLOW NOTIFICATIONS  
For Daily Alerts

ರಾಶಿಚಕ್ರದ ಪ್ರಕಾರ, ಯಾವ್ಯಾವ ರಾಶಿಯವರೊಂದಿಗೆ ನಿಮಗೆ ಹೊಂದಾಣಿಕೆ ಕಷ್ಟವಾಗುವುದು?

|

ಒಬ್ಬ ವ್ಯಕ್ತಿಯೊಂದಿಗೆ ಉತ್ತಮ ಸ್ನೇಹ ಅಥವಾ ಸಂಬಂಧವನ್ನು ಬೆಳೆಸಬೇಕು ಎಂದರೆ ಅಲ್ಲಿ ಒಂದು ಉತ್ತಮ ಹೊಂದಾಣಿಕೆಯ ಸ್ವಭಾವ ಇರಬೇಕು. ಮೃದುವಾದ ಒಂದು ನಗು, ಕುಶಲವಾದ ಮಾತುಕತೆ, ಸಹಾಯದ ಗುಣ ಎಲ್ಲವೂ ಒಂದು ಅಪರೂಪದ ಬಾಂಧವ್ಯವನ್ನು ಸೃಷ್ಟಿಸುತ್ತದೆ. ಆ ಸಂಬಂಧಗಳಲ್ಲಿ ಒಂದು ಬಗೆಯ ಹಿತವಾದ ಭಾವನೆ, ಸಂತೋಷ, ಮನದಾಳದ ಮಾತು ಎಲ್ಲವೂ ತೆರೆದುಕೊಳ್ಳುವುದು. ಪರಸ್ಪರ ತ್ಯಾಗ, ಪ್ರೀತಿ, ಕಾಳಜಿ, ರಕ್ಷಣೆ, ಆರೈಕೆ ಎನ್ನುವ ಸಂವೇದನೆಗಳು ಅಲ್ಲಿ ತೆರೆದುಕೊಳ್ಳುತ್ತವೆ. ಆ ಸಂಬಂಧ ಅಥವಾ ಬಾಂಧವ್ಯ ಆಗ ಗಟ್ಟಿಯಾಗಿ ಬೆಳಗುವುದು.

ಕೆಲವರು ತಮ್ಮಲ್ಲಿರುವ ಅಹಂ ಹಾಗೂ ಸ್ವಾರ್ಥದ ಭಾವನೆಯಿಂದ ಯಾರನ್ನೂ ಅಷ್ಟಾಗಿ ಹಚ್ಚಿಕೊಳ್ಳುವುದಿಲ್ಲ. ಅವರೇ ಬಂದು ನನ್ನನ್ನು ಮಾತನಾಡಿಸಲಿ ಎನ್ನುವ ಭಾವ ಹೊಂದಿರುತ್ತಾರೆ. ಅವರಿಂದ ಒಂದು ಸುಂದರ ನಗು ಅಥವಾ ಮಾತನ್ನು ಪಡೆಯಲು ಸಾಧ್ಯವಾಗದೆ ಹೋಗಬಹುದು. ಅಂತಹ ಸ್ವಭಾವ ಹೊಂದಿದ್ದರೆ ಯಾರೂ ತಮ್ಮ ಆತ್ಮೀಯ ವ್ಯಕ್ತಿಯನ್ನಾಗಿ ಸ್ವೀಕರಿಸುವುದಿಲ್ಲ. ಬದಲಿಗೆ ಆದಷ್ಟು ಅವರನ್ನು ದೂರ ಇಡಲು ಪ್ರಯತ್ನಿಸುತ್ತಾರೆ. ಅಲ್ಲದೆ ಮಾನಸಿಕವಾಗಿ ಸಾಕಷ್ಟು ನೋವನ್ನು ಅನುಭವಿಸಬೇಕಾಗುವುದು....

ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳುವ ಪ್ರಕಾರ

ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳುವ ಪ್ರಕಾರ

ಹೊಂದಾಣಿಕೆ ಎನ್ನುವದು ಪ್ರಮುಖವಾಗಿ ವಿವಾಹದ ಬಾಂಧವ್ಯದಲ್ಲಿ ಅಥವಾ ದಂಪತಿಗಳ ನಡುವೆ ಅತ್ಯಮೂಲ್ಯ ವಾದದ್ದು. ಆ ಒಂದು ಗುಣ ಇಲ್ಲ ಎಂದಾದರೆ ಸಂಬಂಧ ಚಿರ ಕಾಲ ಉಳಿಯಲು ಸಾಧ್ಯವಿಲ್ಲ. ಸಣ್ಣ ಪುಟ್ಟ ಕಾರಣಗಳಿಂದಾಗಿ ಬಹುಬೇಗ ಮುರಿದು ಬೀಳುವ ಸಾಧ್ಯತೆಗಳೇ ಹೆಚ್ಚಾಗಿರುತ್ತವೆ. ಸಂಗಾತಿಗಳಿಬ್ಬರೂ ಬೇರೆ ಬೇರೆ ವಾತಾವರಣ ಹಾಗೂ ಸಂಸ್ಕಾರದಲ್ಲಿ ಬೆಳೆದು ಬಂದಿರುತ್ತಾರೆ. ಅಂತಹವರು ಒಂದೇ ಸೂರಿನ ಅಡಿಯಲ್ಲಿ ಒಟ್ಟಾಗಿ ಬಾಳಬೇಕು ಎಂದರೆ ಅಲ್ಲಿ ಸಾಕಷ್ಟು ವಿಚಾರಗಳಿಗೆ ಹೊಂದಾಣಿಕೆ, ತ್ಯಾಗ ಹಾಗೂ ಪರಸ್ಪರ ಪ್ರೀತಿಯ ಕಾಳಜಿ ತೋರಿಸಬೇಕಾಗುವುದು. ಇಲ್ಲವಾದರೆ ಆ ಸಂಬಂಧದಲ್ಲಿ ಸಾಮರಸ್ಯ ಅಥವಾ ಬಾಂಧವ್ಯ ಬೆಳೆಯಲು ಸಾಧ್ಯವಿಲ್ಲ.ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳುವ ಪ್ರಕಾರ ಪ್ರತಿಯೊಂದು ರಾಶಿಚಕ್ರದವರು ವಿವಿಧ ಬಗೆಯ ವ್ಯಕ್ತಿತ್ವವನ್ನು ಹೊಂದಿರುತ್ತಾರೆ. ಆ ವ್ಯಕ್ತಿತ್ವಕ್ಕೆ ಹೋಲುವ ಅಥವಾ ಹೊಂದಾಣಿಕೆಯಾಗುವ ರಾಶಿಚಕ್ರದ ವ್ಯಕ್ತಿಗಳು ಮಾತ್ರ ಹೆಚ್ಚಿನ ಹೊಂದಾಣಿಕೆ ಗುಣವನ್ನು ತೋರುತ್ತಾರೆ. ರಾಶಿಚಕ್ರಗಳಿಗೆ ಅನುಗುಣವಾಗಿ ಹೊಂದಾಣಿಕೆಯ ವ್ಯಕ್ತಿಗಳು ದೊರೆತರೆ ಅಂತಹವರ ನಡುವೆ ಅತ್ಯುತ್ತಮ ಹೊಂದಾಣಿಕೆ ಹಾಗೂ ಪ್ರೀತಿಯ ಭಾವವು ಸ್ವಾಭಾವಿಕವಾಗಿಯೇ ಹುಟ್ಟಿಕೊಳ್ಳುವುದು ಎಂದು ಹೇಳಲಾಗುವುದು.ಈ ನಿಟ್ಟಿನಲ್ಲಿಯೇ ಯಾವ ರಾಶಿಚಕ್ರದವರಿಗೆ ಯಾವ ರಾಶಿಚಕ್ರದ ವ್ಯಕ್ತಿಗಳು ಕನಿಷ್ಠ ಪ್ರಮಣದ ಹೊಂದಾನಿಕೆಯನ್ನು ತೋರುವರು? ಅವರ ನಡುವೆ ಹೊಂದಾಣಿಕೆ ಏಕೆ ಕಷ್ಟವಾಗುವುದು? ಯಾವೆಲ್ಲಾ ಸ್ವಭಾವಗಳು ಹೊಂದಾಣಿಕೆಯನ್ನು ಸೃಷ್ಟಿಸಲು ಅಡ್ಡಿಪಡಿಸುವುದು? ಎನ್ನುವುದನ್ನು ಬೋಲ್ಡ್ ಸ್ಕೈ ಲೇಖನದ ಮುಂದಿನ ಭಾಗದಲ್ಲಿ ವಿವರಿಸಿದೆ. ನಿಮಗೂ ನಿಮ್ಮ ರಾಶಿಚಕ್ರಕ್ಕೆ ಅನುಗುಣವಾಗಿ ಯಾವ ರಾಶಿಯ ವ್ಯಕ್ತಿಗಳೊಂದಿಗೆ ಕನಿಷ್ಠ ಹೊಂದಾಣಿಕೆಯನ್ನು ಕಂಡುಕೊಳ್ಳುವಿರಿ? ಎನ್ನುವುದನ್ನು ತಿಳಿದುಕೊಳ್ಳಬೇಕು ಎನ್ನುವ ಕುತೂಹಲವಿದ್ದರೆ ಲೇಖನದ ಮುಂದಿನ ಭಾಗವನ್ನು ಪರಿಶೀಲಿಸಿ.

ಮೇಷ

ಮೇಷ

ಅಗ್ನಿ ಅಥವಾ ಬೆಂಕಿಯ ಚಿಹ್ನೆಯನ್ನು ಹೊಂದಿರುವ ರಾಶಿಚಕ್ರ ಮೇಷ. ಈ ರಾಶಿಯ ವ್ಯಕ್ತಿಗಳು ಸಾಮಾನ್ಯವಾಗಿ ಸ್ವತಂತ್ರ ವ್ಯಕ್ತಿಗಳಾಗಿ ಇರಲು ಬಯಸುವರು. ಇವರದ್ದು ಅತ್ಯಂತ ಬಹಿರ್ಮುಖಿ ವ್ಯಕ್ತಿತ್ವ ಎಂದು ಹೇಳಲಾಗುತ್ತದೆ. ಸ್ವಭಾವತಃ ಅತ್ಯಂತ ಪ್ರಭಲವಾದ ಶಕ್ತಿ ಹಾಗೂ ಗುಣವನ್ನು ಹೊಂದಿರುತ್ತಾರೆ. ಇವರ ಸ್ವಭಾವವು ಕರ್ಕ ರಾಶಿಯವರ ಸ್ವಭಾವಕ್ಕೆ ತದ್ವಿರುದ್ಧವಾಗಿರುತ್ತದೆ. ಹಾಗಾಗಿ ಮೇಷರಾಶಿಯವರು ಕರ್ಕ ರಾಶಿಯವರೊಂದಿಗೆ ಉತ್ತಮ ಹೊಂದಾಣಿಕೆ ಕಂಡುಕೊಳ್ಳಲು ಸಾಧ್ಯವಿಲ್ಲ. ಇವರರಿಬ್ಬರು ಯಾವುದೇ ಕೆಲಸದಲ್ಲೂ ಪರಸ್ಪರ ಹೊಂದಾಣಿಕೆ ಅಥವಾ ಸಾಮ್ಯತೆಯನ್ನು ಕಂಡುಕೊಳ್ಳಲು ಸಾಧ್ಯವಿಲ್ಲ. ಇವರ ಸ್ವಭಾವಗಳು ವಿರುದ್ಧ ದಿಕ್ಕಿನಲ್ಲಿ ಇರುತ್ತವೆ. ಮೇಷ ರಾಶಿಯವರೊಂದಿಗೆ ವೃಷಭ ರಾಶಿಯವರು ಕನಿಷ್ಠ ಹೊಂದಾಣಿಕೆಯನ್ನು ಕಂಡುಕೊಳ್ಳುವರು ಎಂದು ಹೇಳಲಾಗುವುದು.

ವೃಷಭ

ವೃಷಭ

ವೃಷಭ ರಾಶಿಯು ಭೂಮಿಯ ಚಿಹ್ನೆಯನ್ನು ಹೊಂದಿದೆ. ಈ ರಾಶಿಯ ವ್ಯಕ್ತಿಗಳು ಸಾಮಾನ್ಯವಾಗಿ ಸ್ಥಿರತೆ ಹಾಗೂ ಶಾಂತ ಸ್ವಭಾವವನ್ನು ಹೊಂದಿರುತ್ತಾರೆ. ತತ್ ಕ್ಷಣದಲ್ಲಿ ತೆಗೆದುಕೊಳ್ಳುವ ನಿರ್ಧಾರಗಳು ಇವರಿಗೆ ಇಷ್ಟವಾಗದು. ಇವರು ಮೊದಲು ಯೋಜನೆಯ ಪಟ್ಟಿಯನ್ನು ತಯಾರಿಸಿ, ನಂತರ ಕೆಲಸವನ್ನು ಕೈಗೊಳ್ಳುವರು. ಇವರ ಈ ಗುಣಗಳಿಗೆ ವಿರುದ್ಧವಾದ ವರ್ತನೆ ಹೊಂದಿರುವ ವ್ಯಕ್ತಿಗಳು ಎಂದರೆ ಧನು ರಾಶಿಯ ವ್ಯಕ್ತಿಗಳು. ಧನು ರಾಶಿಯವರು ಅತ್ಯಂತ ಸ್ವಾತಂತ್ರ್ಯ ಹಾಗೂ ಅತಿಯಾದ ಪ್ರಯಾಣವನ್ನು ಕೈಗೊಳ್ಳುವರು. ಸದಾ ಸಾಹಸದ ಕೆಲಸದಲ್ಲಿ ತೊಡಗಿರುತ್ತಾರೆ. ಇವರು ಹಠಾತ್‍ನೆ ತೆಗೆದುಕೊಳ್ಳುವ ನಿರ್ಧಾರಗಳನ್ನು ನಿಭಾಯಿಸಲು ವೃಷಭ ರಾಶಿಯವರಿಗೆ ಕಷ್ಟವಾಗುವುದು. ಈ ಎರಡು ರಾಶಿಯವರ ವರ್ತನೆ ಹಾಗೂ ಸ್ವಭಾವಗಳು ವಿಭಿನ್ನವಾಗಿರುತ್ತವೆ. ಹಾಗಾಗಿ ಇವರ ನಡುವೆ ಎಂದಿಗೂ ಹೊಂದಾಣಿಕೆ ಎನ್ನುವುದು ಹುಟ್ಟಿಕೊಳ್ಳದು. ವೃಷಭ ರಾಶಿಯವರೊಂದಿಗೆ ಕನಿಷ್ಠ ಹೊಂದಾಣಿಕೆ ಸಾಧಿಸುವ ರಾಶಿಚಕ್ರವೆಂದರೆ ಮಿಥುನ ರಾಶಿಯ ವ್ಯಕ್ತಿಗಳು.

ಮಿಥುನ

ಮಿಥುನ

ಸದಾ ಸಾಮಾಜಿಕ ಕೆಲಸದಲ್ಲಿ ಸಕ್ರಿಯವಾಗಿ ತೊಡಗಿಕೊಳ್ಳುವ ವ್ಯಕ್ತಿಗಳು ಎಂದರೆ ಮಿಥುನ ರಾಶಿಯವರು. ಹಾಗಾಗಿಯೇ ಇವರನ್ನು ಸಾಮಾಜಿಕ ಪ್ರಾಣಿ ಎಂತಲೂ ಕರೆಯಲಾಗುವುದು. ಇವರ ಗುಣಗಳು ಹಾಗೂ ಕನ್ಯಾ ರಾಶಿಯವರ ಗುಣಗಳು ತದ್ವಿರುದ್ಧವಾಗಿರುತ್ತದೆ. ಇವರು ಎಂದಿಗೂ ಪರಸ್ಪರ ಅಂಟಿಕೊಳ್ಳುವ ಸ್ವಭಾವವನ್ನು ಹೊಂದಿರುವುದಿಲ್ಲ. ಕನ್ಯಾ ರಾಶಿಯವರ ವಿಶ್ಲೇಷಣಾತ್ಮಕ ಗುಣಗಳು ಮಿಥುನ ರಾಶಿಯವರಿಗೆ ಅಷ್ಟಾಗಿ ಇಷ್ಟವಾಗದು. ಕನ್ಯಾರಾಶಿವರು ಸಾಕಷ್ಟು ಜಾಣ್ಮೆ ಹಾಗೂ ವಿನೋದವನ್ನು ಮಾಡುವರು. ಅದು ಮಿಥುನ ರಾಶಿಯವರಿಗೆ ನಿರಸ ಹಾಗೂ ಬೇಸರವನ್ನು ಉಂಟುಮಾಡುವುದು.

 ಕರ್ಕ

ಕರ್ಕ

ಈ ರಾಶಿಯ ವ್ಯಕ್ತಿಗಳು ಸಾಮಾನ್ಯವಾಗಿ ಸಹಾನೂಭೂತಿ ಮತ್ತು ಪ್ರಚೋದಾತ್ಮಕ ವರ್ತನೆಯನ್ನು ಅಥವಾ ಸ್ವಭಾವವನ್ನು ಹೊಂದಿರುತ್ತಾರೆ. ಇವರು ಸಾಕಷ್ಟು ವಿಷಯಗಳಲ್ಲಿ ಸ್ಥಿರತೆಯನ್ನು ಕಾಣಲು ಬಯಸುತ್ತಾರೆ. ಎಲ್ಲಾ ಸಂಗತಿಗಳಿಗೂ ಹೃದಯಪೂರ್ವಕವಾಗಿ ಚಿಂತನೆ ನಡೆಸುತ್ತಾರೆ. ಜೊತೆಗೆ ಇತರರಿಗೆ ಸಾಕಷ್ಟು ಸಹಾಯ ಮಾಡಲು ಮುಂದಾಗುವರು. ಇವರ ವರ್ತನೆಗಳಿಗೆ ಹಾಗೂ ಭಾವನೆಗಳಿಗೆ ಕನಿಷ್ಠ ಹೊಂದಾಣಿಕೆ ಕಂಡುಕೊಳ್ಳುವವರು ಕುಂಭ ರಾಶಿಯವರು. ಕುಂಭ ರಾಶಿಯವರು ಭಾವನಾತ್ಮಕವಾಗಿ ಯಾವುದೇ ಪ್ರದರ್ಶನವನ್ನು ಆನಂದಿಸುವುದಿಲ್ಲ. ಕುಂಭ ರಾಶಿಯವರು ಯಾವುದೇ ಸಂಗತಿಯಲ್ಲೂ ತಮ್ಮದೇ ಆದ ನಿಭಾಯಿಸುವ ಸಾಮಥ್ರ್ಯ ಹೊಂದಿರುವುದಿಲ್ಲ ಎಂದು ಕರ್ಕ ರಾಶಿಯವರು ಭಾವನಾತ್ಮಕವಾಗಿ ಭಾವಿಸುತ್ತಾರೆ.

 ಸಿಂಹ

ಸಿಂಹ

ಸಿಂಹ ರಾಶಿಯ ವ್ಯಕ್ತಿಗಳು ಸಾಮಾನ್ಯವಾಗಿ ಧೈರ್ಯ ವಂತರು ಎಂದು ಹೇಳಲಾಗುವುದು. ಸಾಮಾಜಿಕ ಕ್ಷೇತ್ರದಲ್ಲಿ ಕೇಂದ್ರ ಬಿಂದುವಾಗಿ ಕಾಣಿಸಿಕೊಳ್ಳಲು ಬಯಸುವರು. ಯಾವುದೇ ವಿಷಯದಲ್ಲಾದರೂ ತಮ್ಮದೇ ಆದ ರೀತಿಯಲ್ಲಿ ಸ್ವಂತ ನಿರ್ಧಾರ ಹಾಗೂ ಕಾರ್ಯವನ್ನು ಕೈಗೊಳ್ಳಲು ಬಯಸುವರು. ಇವರು ಮೇಷರಾಶಿಯ ವ್ಯಕ್ತಿಗಳೊಂದಿಗೆ ಕನಿಷ್ಠ ಹೊಂದಾಣಿಕೆಯನ್ನು ಮಾಡಿಕೊಳ್ಳುವರು. ಮೇಷ ಹಾಗೂ ಸಿಂಹ ರಾಶಿಯವರ ಸ್ವಭಾವವು ಸ್ವಲ್ಪ ಮೊಂಡುತನವನ್ನು ಹೊಂದಿರುವುದರಿಂದ ಇಬ್ಬರ ನಡುವೆಯು ನಿರಂತರವಾದ ಹಲ್ಲೆ ನಡೆಯುತ್ತಲೇ ಇರುತ್ತದೆ. ಮೇಷ ರಾಶಿಯವರು ಇವರ ಪ್ರತಿಯೊಂದು ಹಂತದಲ್ಲೂ ಸ್ಪರ್ಧಿಯಾಗಿ ನಿಲ್ಲುತ್ತಾರೆ. ಇವರು ಸಿಂಹ ರಾಶಿಯವರ ಎಲ್ಲಾ ವಿಜಯಗಳನ್ನು ಅಳಿಸುವ ಸಾಧ್ಯತೆಗಳಿರುತ್ತವೆ. ಅಲ್ಲದೆ ಯಾವುದೇ ರೀತಿಯ ಪ್ರಚಾರವನ್ನು ಪಡೆದುಕೊಳ್ಳಲು ಸಾಧ್ಯವಾಗುವುದಿಲ್ಲ ಎಂದು ಹೇಳಲಾಗುವುದು.

 ಕನ್ಯಾ

ಕನ್ಯಾ

ಕನ್ಯಾ ರಾಶಿಯವರು ಸ್ವಭಾವತಃ ಸೂಕ್ಷ್ಮ ಹಾಗೂ ಭಾವನಾತ್ಮಕ ವ್ಯಕ್ತಿಗಳಾಗಿರುತ್ತಾರೆ. ಆದರೆ ಪ್ರತಿಯೊಂದು ವಿಷಯ ಹಾಗೂ ವ್ಯಕ್ತಿಯ ಬಗ್ಗೆಯೂ ಅತಿಯಾದ ವಿಶ್ಲೇಷಣೆ ಹಾಗೂ ವಿಚಾರವನ್ನು ಪಡೆದುಕೊಳ್ಳಲು ಆಸಕ್ತರಾಗಿರುತ್ತಾರೆ. ಇವರ ಈ ಸ್ವಭಾವಗಳು ಧನು ರಾಶಿಯವರೊಂದಿಗೆ ಹೊಂದಾಣಿಕೆ ಆಗುವುದಿಲ್ಲ. ಕನ್ಯಾ ರಾಸಿಯವರು ಹಾಗೂ ಧನು ರಾಶಿಯವರು ಪರಸ್ಪರ ಕಣ್ಣುಗಳ ನೋಟವನ್ನು ಸಂಧಿಸಲು ಸಾಧ್ಯವಿಲ್ಲ ಎಂದು ಹೇಳಲಾಗುವುದು. ಧನುರಾಶಿಯವರಿಗೆ ಕನ್ಯಾ ರಾಶಿಯವರು ಅತ್ಯಂತ ಎತ್ತರದ ಹಾಗೂ ಕಠಿಣವಾದ ವ್ಯಕ್ತಿಗಳಂತೆ ತೋರ್ಪಡುವರು. ಇವರ ನಡುವೆ ಪರಸ್ಪರ ವಿರೋಧಾಭಾಸಗಳು ಉಂಟಾಗುತ್ತವೆ. ಕನ್ಯಾ ರಾಶಿಯವರು ಒಂದೆಡೆ ಇರಲು ಬಯಸಿದರೆ ಧನು ರಾಶಿಯವರು ಪ್ರಪಂಚವನ್ನು ಅನ್ವೇಷಿಸಲು ಪ್ರೀತಿಸುತ್ತಾರೆ ಎಂದು ಹೇಳಲಾಗುವುದು.

 ತುಲಾ

ತುಲಾ

ಎಲ್ಲಾ ವಿಷಯಗಳಲ್ಲೂ ತುಲಾ ರಾಶಿಯವರು ಸಾಮಾನ್ಯವಾಗಿ ಸಮತೋಲನವನ್ನು ಹೊಂದಲು ಬಯಸುತ್ತಾರೆ. ಎಲ್ಲಾ ವಿಷಯದಲ್ಲೂ ಮಿತವನ್ನು ಹೊಂದಿರಬೇಕು ಎಂದು ಹೇಳುವರು. ಇವರು ಸಾಮಾಜಿಕವಾಗಿ ಘರ್ಷಣೆ ಮಾಡುವುದು ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ತೋರುವ ಅನುಚಿತ ವರ್ತನೆಗಳನ್ನು ವಿರೋಧಿಸುವರು. ಇವರ ಇಂತಹ ಸ್ವಭಾವಗಳಿಗೆ ವಿರುದ್ಧವಾದ ಭಾವನೆ ಹೊಂದಿದವರು ಹಾಗೂ ಇವರೊಂದಿಗೆ ಕನಿಷ್ಠ ಹೊಂದಾಣಿಕೆ ಹೊಂದುವ ವ್ಯಕ್ತಿಗಳು ಎಂದರೆ ಮೀನ ರಾಶಿಯ ವ್ಯಕ್ತಿಗಳು. ಭಾವನಾತ್ಮಕ ಹಾಗೂ ಕಲ್ಪನಾ ಲೋಕದಲ್ಲಿ ತೋರುವ ವ್ಯಕ್ತಿಗಳಾದ ಮೀನ ರಾಶಿಯವರಿಗೆ ತುಲಾ ರಾಶಿಯವರ ವರ್ತನೆಗಳು ಇಷ್ಟವಾಗದು. ಅವರ ವಾಸ್ತವಿಕ ಚಿಂತನೆ ಹಾಗೂ ವರ್ತನೆಗಳು ಇಷ್ಟಪಡದ ವ್ಯಕ್ತಿಗಳಾಗಿರುತ್ತಾರೆ.

ವೃಶ್ಚಿಕ

ವೃಶ್ಚಿಕ

ವೃಶ್ಚಿಕ ರಾಶಿಯವರಲ್ಲಿ ಮೊಂಡುತನದ ಸ್ವಭಾವ ಹಾಗೂ ಶಕ್ತಿಯುತವಾದ ಸ್ವಭಾವ ಸಾಮಾನ್ಯವಾಗಿ ಇರುತ್ತದೆ. ವೃಶ್ಚಿಕ ರಾಶಿಯವರು ಎಂದಿಗೂ ಹೋರಾಟದಲ್ಲಿ ತಲೆ ತಗ್ಗಿಸುವುದಿಲ್ಲ. ಇವರು ಜೀವನದಲ್ಲಿ ಸಾಕಷ್ಟು ಕಷ್ಟಪಟ್ಟು ಹಾಗೂ ಯಶಸ್ಸನ್ನು ಹೊಂದಲು ಬಯಸುವರು. ಇವರು ಯಾವುದೇ ಪ್ರಯತ್ನವಿಲ್ಲದೆ ವ್ಯಕ್ತಿಯ ದಾರಿಯನ್ನು ತಪ್ಪಿಸಬಹುದು. ಇವರ ಸ್ವಭಾವಗಳು ಸಿಂಹ ರಾಶಿಯವರೊಂದಿಗೆ ಕನಿಷ್ಠ ಹೊಂದಾಣಿಕೆಯನ್ನು ಕಂಡುಕೊಳ್ಳುವುದು. ಈ ಎರಡು ರಾಶಿಯವರ ನಡುವೆ ಪ್ರತಿಯೊಂದು ವಿಷಯದ ಕುರಿತು ಸಾಕಷ್ಟು ಗೊಂದಲ ಹಾಗೂ ಘರ್ಷಣೆ ಏರ್ಪಡುವುದು.

ಧನು

ಧನು

ಧನು ರಾಶಿಯವರು ಸಾಮಾನ್ಯವಾಗಿ ಜೀವನದಲ್ಲಿ ಅತ್ಯಂತ ಉತ್ಸಾಹದಲ್ಲಿ ಇರಲು ಬಯಸುತ್ತಾರೆ. ಇವರ ಉತ್ಸಾಹವು ಇವರಿಗೆ ಕೆಲಸದಲ್ಲಿ ಮುಂದುವರಿಯಲು ಶಕ್ತಿ ನೀಡುವುದು. ಇವರು ಸದಾ ಪಕ್ಷಿಯಂತೆ ಹರಾಡುತ್ತಿರಲು ಬಯಸುವರು. ಯಾವುದೇ ನಿರ್ಬಂಧ ಹಾಗೂ ಕಟ್ಟುಪಾಡುಗಳನ್ನು ಇಷ್ಟಪಡದ ವ್ಯಕ್ತಿಗಳಾಗಿರುತ್ತಾರೆ. ಇವರೊಂದಿಗೆ ಸ್ಥಿರ ಸ್ವಭಾವದ ಮಕರ ರಾಶಿಯ ವ್ಯಕ್ತಿಗಳಿಗೆ ಹೊಂದಾಣಿಕೆಯಿಂದ ಇರಲು ಕಷ್ಟವಾಗುವುದು. ಹಾಗಾಗಿ ಇವರೊಂದಿಗೆ ಕನಿಷ್ಠ ಹೊಂದಾಣಿಕೆ ಹೊಂದುವ ವ್ಯಕ್ತಿಗಳು ಮಕರ ರಾಶಿಯ ವ್ಯಕ್ತಿಗಳಾಗಿರುತ್ತಾರೆ ಎನ್ನಲಾಗುವುದು.

ಮಕರ

ಮಕರ

ಕ್ರಮಬದ್ಧವಾದ ಹಾಗೂ ವಸ್ತುನಿಷ್ಟವಾದ ರೀತಿಯಲ್ಲಿ ಕೆಲಸ ನಿರ್ವಹಿಸಲು ಬಯಸುವ ವ್ಯಕ್ತಿಗಳು ಮಕರ ರಾಶಿಯ ವ್ಯಕ್ತಿಗಳಾಗಿರುತ್ತಾರೆ. ಇವರ ಸ್ವಭಾವ ಹಾಗೂ ಭಾವನೆಗಳಿಗೆ ತದ್ವಿರುದ್ಧವಾದ ಗುಣವನ್ನು ಹೊಂದಿರುವ ವ್ಯಕ್ತಿಗಳು ಎಂದರೆ ಕರ್ಕ ರಾಶಿಯ ವ್ಯಕ್ತಿಗಳು. ಸೂಕ್ಷ್ಮ ಭಾವನೆಗಳು ಹಾಗೂ ದಿರ್ಘ ಕಾಲದ ಯೋಜನೆಯೊಂದಿಗೆ ಕೆಲಸ ನಿರ್ವಹಿಸುವ ಕರ್ಕ ರಾಶಿಯವರು ಇವರೊಂದಿಗೆ ಕನಿಷ್ಠ ಹೊಂದಾಣಿಕೆಯನ್ನು ಹೊಂದುವ ವ್ಯಕ್ತಿಗಳಾಗಿರುತ್ತಾರೆ.

ಕುಂಭ

ಕುಂಭ

ಇವರು ಸ್ವತಂತ್ರ ಪ್ರಿಯರು ಸದಾ ಸೃಜನಾತ್ಮಕ ರೀತಿಯಲ್ಲಿ ಹಾಗೂ ಬದಲಾದ ಆಲೋಚನೆಗಳಿಂದ ಕೆಲಸವನ್ನು ನಿರ್ವಹಿಸಲು ಬಯಸುವರು. ತಮಗೆ ಒಂದಷ್ಟು ಪ್ರತ್ಯೇಕತೆ ಹಾಗೂ ಒಂಟಿಯಾಗಿರಲು ಒಂದಷ್ಟು ಸಮಯವನ್ನು ಬಯಸುವರು. ಇವರು ಕನಿಷ್ಠ ಹೊಂದಾಣಿಕೆ ಹೊಂದುವ ವ್ಯಕ್ತಿಗಳು ಎಂದರೆ ವೃಶ್ಚಿಕ ರಾಶಿಯ ವ್ಯಕ್ತಿಗಳಾಗಿರುತ್ತಾರೆ. ವೃಶ್ಚಿಕ ರಾಶಿಯವರು ಸ್ವಲ್ಪ ಅಹಂ ಭಾವ ಹೊಂದಿರುತ್ತಾರೆ. ಈ ಭಾವನೆಯು ಇಬ್ಬರಲ್ಲೂ ಸದಾ ನೈಸರ್ಗಿಕವಾಗಿ ಘರ್ಷಣೆ ಉಂಟಾಗುವಂತೆ ಮಾಡುವುದು.

ಮೀನ

ಮೀನ

ಭಾವನಾತ್ಮಕ ಸ್ವಭಾವದವರಾದ ಮೀನ ರಾಶಿಯವರು ಸ್ಥಿರತೆ ಮತ್ತು ಭದ್ರತೆಯ ಭಾವನೆಯನ್ನು ಪ್ರೀತಿಸುತ್ತಾರೆ. ಸದಾ ಇತರರಿಗೆ ಸಹಾಯ ಹಾಗೂ ಸಹಾನುಭೂತಿ ತೋರುವ ವ್ಯಕ್ತಿಗಳು. ಇವರ ಸ್ವಭಾವಗಳಿಗೆ ವಿರುದ್ಧವಾದ ಗುಣ ಹಾಗೂ ವರ್ತನೆ ಹೊಂದಿದವರು ಎಂದರೆ ಕುಂಭ ರಾಶಿಯ ವ್ಯಕ್ತಿಗಳು. ಈ ಎರಡು ರಾಶಿಯವರು ಕನಿಷ್ಠ ಹೊಂದಾಣಿಕೆ ಹೊಂದಿದ ವ್ಯಕ್ತಿಗಳಾಗಿರುತ್ತಾರೆ. ಇವರನ್ನು ಒಟ್ಟಿಗೆ ಬಿಟ್ಟರೆ ಘರ್ಷಣೆಯೇ ಸಂಭವಿಸುತ್ತದೆ ಎಂದು ಹೇಳಲಾಗುವುದು.

English summary

which Zodiac signs who will never adjust with all people?

Astrology is as fascinating as it gets. It holds answers to question that you haven’t asked yet. Zodiac signs can tell you a lot about a person and their likes and dislikes. Each zodiac sign has certain specific traits and if those specific traits don’t mesh well with one another then problems and clashes arise.
X
Desktop Bottom Promotion