For Quick Alerts
ALLOW NOTIFICATIONS  
For Daily Alerts

ಜುಲೈ 24 ಇಂದ 30ರ ವರೆಗಿನ ವಾರ ಭವಿಷ್ಯ

By Deepu
|

ಜಾತಕ, ಭವಿಷ್ಯ, ಹಸ್ತ ಮುದ್ರಿಕೆ, ಸಂಖ್ಯಾ ಶಾಸ್ತ್ರ ಎಲ್ಲವೂ ಪ್ರಾಚೀನಕಾಲದಿಂದಲೂ ಚಾಲ್ತಿಯಲ್ಲಿರುವ ವಿಧಾನ. ಈ ವಿಧಾನದಿಂದಲೇ ವ್ಯಕ್ತಿ ತನ್ನ ಜೀವನದ ಆಗು ಹೋಗುಗಳನ್ನು ತಿಳಿದುಕೊಳ್ಳುತ್ತಾನೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ವ್ಯಕ್ತಿಗೆ ಪ್ರತಿಯೊಂದು ಕ್ಷಣವೂ ವಿಶೇಷವಾದದ್ದೇ ಆಗಿರುತ್ತದೆ. ಪ್ರತಿ ಕ್ಷಣದಿಂದ ವರ್ಷಗಳ ವರೆಗೂ ಬದಲಾವಣೆ ಎನ್ನುವುದು ನಿರಂತರವಾಗಿ ನಡೆಯುತ್ತಲೇ ಇರುತ್ತವೆ.

ನಿಮ್ಮ ರಾಶಿಚಕ್ರದ ಪ್ರಕಾರ ಈ ತಿಂಗಳು 24ರಿಂದ 30ರ ವರೆಗಿನ ದಿನಗಳಲ್ಲಿ ನಿಮ್ಮ ವಿವಾಹ ವಿಚಾರ, ವಿದ್ಯೆ, ಉದ್ಯೋಗ, ಆರೋಗ್ಯ, ಸಂಪತ್ತು ಹಾಗೂ ಸಂಬಂಧಗಳು ಹೇಗಿರುತ್ತವೆ ಎನ್ನುವುದನ್ನು ತಿಳಿದುಕೊಳ್ಳಬೇಕು ಎಂದುಕೊಂಡಿದ್ದರೆ ಈ ಮುಂದೆ ಬೋಲ್ಡ್ ಸ್ಕೈ ವಿವರಿಸಿರುವ ರಾಶಿ ಭವಿಷ್ಯದ ವಿವರಣೆಯನ್ನು ಓದಿ...

ಮೇಷ

ಮೇಷ

ರಾಶಿಚಕ್ರಗಳಲ್ಲಿ ಮೇಷ ರಾಶಿಯು ತುಂಬಾ ಶಕ್ತಿಶಾಲಿ ರಾಶಿಯಾಗಿದೆ. ಇವರಲ್ಲಿ ಶಕ್ತಿ ಹಾಗೂ ಅತ್ಯುತ್ಸಾಹವು ಕುದಿಯುತ್ತಿರುವುದು. ಇವರು ತುಂಬಾ ತೀಕ್ಷ್ಣ ಹಾಗೂ ಅನ್ವೇಷಿಸುವವರು. ಇವರಲ್ಲಿ ಇರುವಂತಹ ಅದಮ್ಯ ಸ್ಫೂರ್ತಿಯು ಯಾವುದೇ ರೀತಿಯ ಅಡೆತಡೆಗಳನ್ನು ಪುಡಿ ಮಾಡಬಲ್ಲದು. ಇನ್ನು ಈ ರಾಶಿಯವರು ಸಾಮಾಜಿಕ ಜೀವನದ ಬಹು ಭಾಗಗಳಿಂದಲೂ ವಿವಿಧ ಅವಕಾಶಗಳನ್ನು ಪಡೆದುಕೊಳ್ಳುವಿರಿ. ಈ ವಾರ ನಿಮ್ಮ ಜೀವನದಲ್ಲಿ ನಡೆಯುವ ಬದಲಾವಣೆಯನ್ನು ಅನುಭವಿಸಲು ನಿಮ್ಮ ಅಭಿಪ್ರಾಯಗಳನ್ನುಬದಲಿಸಿ ಕೊಳ್ಳಬೇಕಾಗುವುದು. ಹೆಚ್ಚು ಸಂತೋಷಕರವಾದ ಸಮಯವನ್ನು ಕಳೆಯಬೇಕು ಎಂದುಕೊಂಡಿದ್ದರೆ ಹಳೆಯ ಸ್ನೇಹಿತರನ್ನು ಭೇಟಿಯಾಗಿ, ಸಮಯವನ್ನು ಕಳೆಯಿರಿ.

ವೃಷಭ

ವೃಷಭ

ನೀವು ನಿಮ್ಮ ಚಿಂತನೆ ಹಾಗೂ ಗಮನವನ್ನು ಆದಷ್ಟು ಬೇರೆಡೆಗೆ ಬದಲಾಯಿಸಿಕೊಳ್ಳಬೇಕು. ಇಲ್ಲವಾದರೆ ಬೇಸರ ಉಂಟಾಗುವುದು. ಈ ಸಮಸ್ಯೆ ದೀರ್ಘ ಸಮಯದವರೆಗೆ ಉಳಿಯದು. ಕೆಲವು ಸವಾಲಿನ ಕೆಲಸವನ್ನು ಕೈಗೆತ್ತಿಕೊಳ್ಳುವುದರ ಬಗ್ಗೆ ಹೆಚ್ಚು ತಲ್ಲೀನತೆಯನ್ನು ವಹಿಸಬೇಕಾಗುವುದು. ಇಲ್ಲದಿದ್ದರೆ ಮುಂದೆ ಏನಾಗುವುದು ಎನ್ನುವುದನ್ನು ನೀವು ನಿರೀಕ್ಷಿಸಲು ತೊಂದರೆಗೆ ಒಳಗಾಗುವಿರಿ.

ಮಿಥುನ

ಮಿಥುನ

ಈ ವಾರ ನಿಮ್ಮ ಉತ್ತಮ ಆಲೋಚನೆಗಳು ನಿಮ್ಮೊಂದಿಗೆ ಇರುತ್ತದೆ. ಹೊಸ ಯೋಜನೆಯನ್ನು ಕೈಗೊಂಡಾಗ ತೊಂದರೆ ಎದುರಾದರೂ ಅದನ್ನು ನಿವಾರಿಸುವ ಶಕ್ತಿಯನ್ನು ನೀವು ಹೊಂದುವಿರಿ. ಹಣಕಾಸಿಗೆ ಸಂಬಂಧಿಸಿದ ಕೆಲಸವನ್ನು ಕೈಗೊಳ್ಳಲು ಹಾಗೂ ಕಾನೂನು ಬದ್ಧ ವಿಷಯಗಳನ್ನು ಪಡೆದುಕೊಳ್ಳಲು ಇದು ಉತ್ತಮವಾದ ಸಮಯ.

ಕರ್ಕ

ಕರ್ಕ

ಯಾವುದೇ ವ್ಯವಸ್ಥೆಯ ಬಗ್ಗೆ ಒಪ್ಪಂದ ಅಥವಾ ಒಪ್ಪಿಗೆಯನ್ನು ಸಲ್ಲಿಸುವಾಗ ನಿಮ್ಮ ಭಾವನೆಗಳನ್ನು ನೀವು ಹತೋಟಿಯಲ್ಲಿಟ್ಟುಕೊಂಡಿರಬೇಕು. ನೀವು ಬಯಸದ ಚಿಂತನೆಗಳನ್ನು ಬಲವಂತವಾಗಿ ಮಾಡಬೇಕಾದ ಪರಿಸ್ಥಿತಿ ಒದಗಿ ಬರಬಹುದು. ಈ ಪ್ರಕ್ರಿಯೆಯಿಂದ ನಿಮಗೆ ಒಂದಷ್ಟು ತೊಂದರೆ ಉಂಟಾಗಬಹುದು. ನೀವು ಆದಷ್ಟು ಶಾಂತತೆಯ ವರ್ತನೆ ಹೊಂದಿರುವುದು ಸೂಕ್ತ.

ಸಿಂಹ

ಸಿಂಹ

ಕೆಲವು ದೇಶೀಯ ಸಮಸ್ಯೆಗಳಿಂದ ನೀವು ಜಂಜಾಟಕ್ಕೆ ಒಳಗಾಗಬಹುದು. ಆದಷ್ಟು ಜಾಗರೂಕರಾಗಿರುವುದನ್ನು ಮರೆಯಬಾರದು. ಉದ್ವೇಗವನ್ನು ನಿಯಂತ್ರಿಸಿಕೊಳ್ಳಿ. ಸನ್ನಿವೇಶಗಳನ್ನು ಜಾಣ್ಮೆಯಿಂದ ನಿಭಾಯಿಸುವ ಪ್ರಯತ್ನ ಮಾಡಬೇಕು. ಇದರಿಂದಲೇ ನಿಮ್ಮ ಮುಂದಿನ ಭವಿಷ್ಯ ನಿರ್ಧಾರವಾಗುವುದು ಎಂದು ಹೇಳಲಾಗುವುದು.

ಕನ್ಯಾ

ಕನ್ಯಾ

ವೃತ್ತಿಯ ಕ್ಷೇತ್ರದಲ್ಲಿ ನಿಮ್ಮ ಕ್ರಮಗಳನ್ನು ಪರಿಶೀಲಿಸಲಾಗುವುದು. ಹಾಗಾಗಿ ನೀವು ಏನು ಮಾಡುತ್ತೀರಿ ಎನ್ನುವುದನ್ನು ಬಹಳ ವಿವೇಕದಿಂದ ಮಾಡಬೇಕಾಗುವುದು. ನಿಮ್ಮ ಮನಸ್ಸಿನ ಆಳದಲ್ಲಿರುವ ಭಾವನೆಗಳನ್ನು ನಿಮಗೆ ಬೇಕಾದ ವ್ಯಕ್ತಿಯ ಮುಂದೆ ವ್ಯಕ್ತಪಡಿಸಲು ಇದೊಂದು ಉತ್ತಮವಾದ ಸಮಯ ಎಂದು ಹೇಳಲಾಗುವುದು. ಕುಟುಂಬದಲ್ಲಿ ಸ್ತ್ರೀಯರಿಂದ ಸಹಾನುಭೂತಿಯನ್ನು ಪಡೆದುಕೊಳ್ಳುವಿರಿ. ಜೊತೆಗೆ ಒಂದಿಷ್ಟು ಉತ್ತಮ ಆರೋಗ್ಯವನ್ನು ಅನುಭವಿಸುವಿರಿ. ಇನ್ನು ಮುಂಬರಲಿರುವ ದಿನಗಳಲ್ಲಿ ಕನ್ಯಾ ರಾಶಿಯವರು ವೈಯಕ್ತಿಕವಾಗಿ ಮಹತ್ವದ ಬದಲಾವಣೆ ಕಾಣಲಿದ್ದಾರೆ. ಇದು ಅವರಿಗೆ ಒಳ್ಳೆಯದನ್ನು ಉಂಟು ಮಾಡಲಿದೆ. ಅವರು ತುಂಬಾ ಸೂಕ್ಷ್ಮತೆಯಿಂದ ನಿರ್ವಹಿಸಲು ತಮ್ಮ ಪ್ರವೃತ್ತಿಯನ್ನು ಅಳವಡಿಸುವರು. ಅಸುರಕ್ಷಿತ ಭಾವವು ಅವರಿಂದ ದೂರವಾಗುವುದು.

ತುಲಾ

ತುಲಾ

ಮೂರನೇ ವ್ಯಕ್ತಿ ತನ್ನ ಉಪಯೋಗಕ್ಕಾಗಿ ನಿಮ್ಮನ್ನು ಬಳಸಿಕೊಳ್ಳುವ ಸಾಧ್ಯತೆಗಳಿವೆ. ಅವರು ಹೇಗೆ ಸದುಪಯೋಗ ಪಡಿಸಿಕೊಳ್ಳುವರು ಎನ್ನುವುದು ನಿಮಗೆ ಸ್ಪಷ್ಟವಾದ ಮಾಹಿತಿ ದೊರೆಯದು. ನಿಮಗೆ ಕೆಲವು ವಿಚಾರದಲ್ಲಿ ಹಠಾತ್ ಒತ್ತಡ ಉಂಟಾಗುವುದು. ಇದರಿಂದ ಒಂದಿಷ್ಟು ಗೊಂದಲ ಹಾಗೂ ಸಮಸ್ಯೆ ಉಂಟಾಗುವ ಸಾಧ್ಯತೆಗಳಿವೆ. ನಿಮ್ಮ ಮೇಲಾಧಿಕಾರಿಗಳೊಂದಿಗೆ ಸದಾ ಶಾಂತವಾದ ವರ್ತನೆಯನ್ನು ತೋರಿ.

ವೃಶ್ಚಿಕ

ವೃಶ್ಚಿಕ

ನಿಯಮಿತವಾದ ಕೆಲಸವನ್ನು ಪ್ರಯೋಗಿಸಲು ನೀವು ನಿಜವಾಗಲೂ ಪ್ರೇರೇಪಿತರಾಗಬಹುದು. ಗುಂಪು ಚಟುವಟಿಕೆಯಲ್ಲಿ ನಿಮ್ಮ ಪಾಲುದಾರರು ಬಾಗಿಯಾಗುವುದನ್ನು ನೀವು ನೋಡುವಿರಿ. ವಾರದ ಅಂತ್ಯದ ವೇಳೆಯಲ್ಲಿ ಒಂದಿಷ್ಟು ಶುಭ ಫಲವನ್ನು ಪಡೆದುಕೊಳ್ಳುವಿರಿ. ಇನ್ನು ರಾಶಿಗಳಲ್ಲಿ ವೃಶ್ಚಿಕ ರಾಶಿಯವರು ತುಂಬಾ ಪ್ರಭಾವಶಾಲಿಗಳು ಎಂದು ನಂಬಲಾಗಿದೆ. ಅವರ ನಡತೆಯು ಇದನ್ನು ತೋರಿಸಿಕೊಡುವುದು. ಅವರ ಒಳಮನಸ್ಸನ್ನು ತಿಳಿಯಬೇಕಾದರೆ ಅವರು ನಿಮ್ಮನ್ನು ಸಂಪೂರ್ಣವಾಗಿ ಅರ್ಥ ಮಾಡಿಕೊಳ್ಳಬೇಕು. ನಿಮ್ಮನ್ನು ಅವರು ನಂಬಿದರೆ ಸಂಪೂರ್ಣ ಹೃದಯದಿಂದ ನಂಬುವರು. ಇದರಿಂದಾಗಿ ಇತರ ರಾಶಿಯವರಿಗಿಂತ ಅವರು ತುಂಬಾ ಭಿನ್ನ.

ಧನು

ಧನು

ನೀವು ಈ ವಾರ ವಸ್ತು, ಹಣ ಹಾಗೂ ಕಾನೂನು ವಿಚಾರಗಳಲ್ಲಿ ಹೆಚ್ಚಿನ ಅದೃಷ್ಟವನ್ನು ಹೊಂದುವಿರಿ. ಹಣಕ್ಕೆ ಸಂಬಂಧಿಸಿದ ಸಮಸ್ಯೆಗಳು ಪರಿಹಾರವನ್ನು ಕಂಡುಕೊಳ್ಳುವುದು. ಇವು ಕೆಲವು ಒತ್ತಡವನ್ನುಂಟು ಮಾಡಬಹುದು. ನಿಮ್ಮ ಸಕಾರಾತ್ಮಕ ವಿಚಾರಗಳಿಂದ ನೀವು ಪ್ರತಿಸ್ಪರ್ಧಿಗಳನ್ನು ನೀವು ಎದುರಿಸಬೇಕಾಗುವುದು. ಕಠಿಣವಾದ ಮುಂದಿನ ಜೀವನಕ್ಕೆ ಇದು ಆಸ್ಪದ ಮಾಡಿಕೊಡುವುದು.

ಮಕರ

ಮಕರ

ಮುಂದಿನ ದಿನಗಳಲ್ಲಿ ಸತ್ಯ ಎನ್ನುವುದು ಬಹಳ ವ್ಯಕ್ತಿನಿಷ್ಠವಾಗಿರುತ್ತದೆ ಎನ್ನುವುದನ್ನು ತಿಳಿದುಕೊಳ್ಳುವಿರಿ. ಕೆಲವು ಸನ್ನಿವೇಶಗಳಲ್ಲಿ ನೀವು ಸಿಲುಕಿಕೊಳ್ಳುವ ಸಾಧ್ಯತೆಗಳಿವೆ. ಪುರಾವೆಗಳ ಮುಖಾಂತರ ನಿಮ್ಮ ನಂಬಿಕೆ ಮತ್ತು ಅಭಿಪ್ರಾಯಗಳು ಪರಿಷ್ಕರಿಸಲ್ಪಡುವುದು.

ಕುಂಭ

ಕುಂಭ

ಈ ವಾರ ಹೆಚ್ಚಿನ ಉತ್ಸಾಹವನ್ನು ನೀವು ಅನುಭವಿಸುವಿರಿ. ವೈಯಕ್ತಿಕ ವಿಚಾರದಲ್ಲಿ ಒಂದಿಷ್ಟು ಹಿಡಿತವನ್ನು ಅನುಭವಿಸುವ ಸಾಧ್ಯತೆಗಳಿವೆ. ನಿಮಗೆ ಕೆಲವು ಉತ್ತಮ ಲಾಭವನ್ನು ತಂದುಕೊಡುವುದು. ಅಲ್ಲದೆ ನಿಮ್ಮ ಶತ್ರುಗಳು ನಿಮ್ಮ ಹಿಂದೆಯೇ ಇರುತ್ತಾರೆ ಎನ್ನುವುದನ್ನು ನೀವು ತಿಳಿದುಕೊಳ್ಳಬೇಕು.

ಮೀನ

ಮೀನ

ಇವರು ಎಲ್ಲಾ ವಿಚಾರದಲ್ಲಿ ಯಶಸ್ಸನ್ನು ಪಡೆದುಕೊಳ್ಳಲು ಬಯಸುವರು. ಆದರೆ ಯಾವುದು ಅಷ್ಟು ಸಲೀಸಾಗಿ ಉಂಟಾಗದು ಎನ್ನುವುದನ್ನು ತಿಳಿದುಕೊಳ್ಳಬೇಕು. ನಿಮ್ಮ ಜೀವನ ಮತ್ತು ಜೀವನ ಶೈಲಿಯಲ್ಲಿ ನೀವು ಮಾಡಲು ಬಯಸುವ ಒಂದು ಬದಲಾವಣೆಯನ್ನು ಸಹ ಕಷ್ಟಪಟ್ಟು ಮಾಡಬೇಕಾಗುವುದು. ಕಷ್ಟಕರವಾದ ವಿಚಾರದಿಂದ ಆದಷ್ಟು ದೂರವಿರಿ. ಕೆಲಸದಲ್ಲಿ ಅಭಿವೃದ್ಧಿಯನ್ನು ಕಾಣುವಿರಿ.

English summary

Weekly Predictions: July 24nd-30th,2018

Horoscope is considered to be a mode of ancient astrology, which is made while keeping in mind a date, time and place of the birth of a person.According to astrology, in our daily horoscope, it is often predicted about the everyday events, while the weekly horoscope includes all the prediction made for the complete week.
Story first published: Tuesday, July 24, 2018, 15:39 [IST]
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more