For Quick Alerts
ALLOW NOTIFICATIONS  
For Daily Alerts

ಆಗಸ್ಟ್ 12 ರಿಂದ 18ರ ವರೆಗಿನ ವಾರ ಭವಿಷ್ಯ- ನಿಮ್ಮದೂ ಪರಿಶೀಲಿಸಿಕೊಳ್ಳಿ

By Deepu
|

ಗ್ರಹಣ ಎನ್ನುವುದು ಸೂತಕದ ಸಂಕೇತ. ಇದು ಒಮ್ಮೆ ಖಗೋಳದಲ್ಲಿ ಸಂಭಿಸಿದಾಗ ಅನೇಕ ನಕಾರಾತ್ಮಕ ಬದಲಾವಣೆಗಳು ಉಂಟಾಗುತ್ತವೆ ಎಂದು ಹೇಳಲಾಗುವುದು. ಇಂತಹ ಒಂದು ವಿಪರ್ಯಾಸ ಉದ್ಭವಿಸಿದ ನಂತರ ಗ್ರಹಗಳ ಸ್ಥಾನ ಬದಲಾವಣೆ ಉಂಟಾಗುವುದು ಸಹ. ಗ್ರಹಗಳು ತಮ್ಮ ಸ್ಥಾನವನ್ನು ಬದಲಾಯಿಸುವುದರಿಂದ ವ್ಯಕ್ತಿಯ ಬದುಕಿನಲ್ಲಿ ಗಮನಾರ್ಹ ಬದಲಾವಣೆಗಳು ಉಂಟಾಗುತ್ತವೆ. ಇಂತಹ ಒಂದು ಬದಲಾವಣೆಯಿಂದ ವ್ಯಕ್ತಿ ಉನ್ನತ ಸ್ಥಾನವನ್ನು ಪಡೆದುಕೊಳ್ಳಬಹುದು ಅಥವಾ ಉನ್ನತ ಸ್ಥಾನದಿಂದ ಕೆಳಗಿಳಿಯುವ ಸಾಧ್ಯತೆಗಳು ಇರುತ್ತವೆ.

ಇಂತಹ ಒಂದು ಬದಲಾವಣೆಗಳು ಅವರವರ ರಾಶಿಚಕ್ರಕ್ಕೆ ಅನುಗುಣವಾಗಿ ನಡೆಯುತ್ತದೆ. ನಿಮ್ಮ ರಾಶಿಚಕ್ರಕ್ಕೆ ಅನುಗುಣವಾಗಿ ಬದುಕಿನಲ್ಲಿ ಯಾವ ರೀತಿಯ ಪರಿಣಾಮವನ್ನು ಎದುರಿಸಲಿದ್ದೀರಿ? ಎನ್ನುವುದನ್ನು ತಿಳಿಯಲು ಈ ಮುಂದೆ ವಿವರಿಸಿರುವ ವಾರ ಭವಿಷ್ಯದ ವಿಶ್ಲೇಷಣೆಯಿಂದ ಅರಿಯಿರಿ...

ಮೇಷ

ಮೇಷ

ಈ ವಾರ ನಿಮ್ಮ ವೇಳಾಪಟ್ಟಿಯಲ್ಲಿ ವ್ಯವಹಾರಕ್ಕೆ ಸಂಬಂಧಿಸಿದ ಅನೇಕ ವಿಷಯಗಳಲ್ಲಿ ಬದಲಾವಣೆಯನ್ನು ಕಾಣುವಿರಿ. ಬೇಹುಗಾರಿಕೆಗೆ ಸಂಬಂಧಿಸಿದಂತೆ ಶತ್ರುಗಳಿಂದ ಹಾನಿ ಉಂಟಾಗುವುದು. ಹಾಗಾಗಿ ಆದಷ್ಟು ಎಚ್ಚರಿಕೆಯಿಂದ ಇರಬೇಕು. ಆರೋಗ್ಯದಲ್ಲಿ ಏರುಪೇರು ಉಂಟಾಗುವುದು. ಆದರೆ ನೀವು ವಾರದ ಎರಡನೇ ಭಾಗದಲ್ಲಿ ಚೇತರಿಸಿಕೊಳ್ಳುತ್ತೀರ. ನೆನಪಿಡಿ ನೀವು ಯಾವಾಗಲೂ ಮಾಡುವ ಅದೇ ಉತ್ಸಾಹದಿಂದ ಕೆಲಸವನ್ನು ಪ್ರಾರಂಭಿಸಿ. ಔಷಧವನ್ನು ಬಿಡದಿರಿ. ಅಗತ್ಯವಿದ್ದರೆ ಒಂದು ದಿನದ ವಿಶ್ರಾಂತಿ ಪಡೆಯಿರಿ.

ವೃಷಭ

ವೃಷಭ

ಈ ವಾರ ನಿಮ್ಮ ಸೋಮಾರಿತನವನ್ನು ಬಿಟ್ಟು ಹೆಚ್ಚು ಕ್ರಿಯಾಶೀಲರಾಗಬೇಕು. ನಿಮ್ಮ ಶೈಕ್ಷಣಿಕ ಕಾರ್ಯಕ್ಷಮತೆಯನ್ನು ಸುಧಾರಿಸುವ ಅಗತ್ಯವನ್ನು ನೀವು ಅನುಭವಿಸುವಿರಿ. ವಾರದ ಎರಡನೇ ಭಾಗವು ನಿಮಗೆ ಸ್ವಲ್ಪ ಕಾರ್ಯ ನಿರತವಾಗಬಹುದು. ಒಂದು ಪೂಜೆಯ ಕಾರ್ಯಕ್ಕಾಗಿ ಕುಟುಂಬ ಸಂಗ್ರಹಣೆ ಸೂಚಿಸಲಾಗುತ್ತದೆ. ಹೆಚ್ಚುವರಿ ಕೆಲಸವು ನಿಮ್ಮ ಆರೋಗ್ಯದ ಮೇಲೆ ಪ್ರಭಾವ ಬೀರಬಹುದು. ವೈಯಕ್ತಿಕ ಸಂಬಂಧಗಳು ವಾರದ ದ್ವಿತೀಯಾರ್ಧದಲ್ಲಿ ಒಳ್ಳೆಯ ಮತ್ತು ವೃತ್ತಿಪರ ಕೆಲಸ ಹೆಚ್ಚಳವೆಂದು ತೋರುವುದು.

ಮಿಥುನ

ಮಿಥುನ

ಉತ್ತಮ ಜೀವನೋಪಾಯಕ್ಕಾಗಿ ನಿಮ್ಮ ಆಶಯವನ್ನು ಈ ವಾರ ಕಾಣುವಿರಿ. ನೀವು ಕುಟುಂಬ ಮತ್ತು ಆಸ್ತಿ-ಸಂಬಂಧಿಸಿದ ವಿಷಯಗಳಲ್ಲಿ ಹಣ ಹೂಡಿಕೆ ಮಾಡಬೇಕಾಗಬಹುದು. ಒಟ್ಟಾರೆಯಾಗಿ ನೀವು ಕಲೆ ಮತ್ತು ಸೃಜನಶೀಲತೆಗೆ ಸಂಬಂಧಿಸಿದ ಹಿನ್ನೆಲೆಯಲ್ಲಿ ಬಂದಿದ್ದರೆ ವಾರದ ಪ್ರಗತಿಗೆ ಹೆಚ್ಚಿನ ಅವಕಾಶ ದೊರೆಯುವುದು. ವಾರದ ನಂತರದ ಭಾಗದಲ್ಲಿ ಆರೋಗ್ಯವು ಸ್ವಲ್ಪ ಮಟ್ಟಿಗೆ ಪರಿಣಾಮ ಬೀರುತ್ತದೆ ಎಂದು ತೋರುತ್ತದೆ. ನೀವು ವೈದ್ಯರ ಭೇಟಿಯನ್ನು ಮಾಡಬೇಕಾಗಬಹುದು.

ಕರ್ಕ

ಕರ್ಕ

ಸರಿಯಾದ ನಿರ್ಧಾರಗಳನ್ನು ತೆಗೆದುಕೊಂಡರೂ ಮಾಡಬೇಕಾದ ರೀತಿಯಲ್ಲಿ ಕೆಲಸ ಮಾಡುವುದಿಲ್ಲ ಎಂದು ನೀವು ಭಾವಿಸಬಹುದು. ವಾರದ ಎರಡನೇ ಹಂತದಲ್ಲಿ ಅಂತಿಮವಾಗಿ ಉತ್ತಮಗೊಳ್ಳುತ್ತದೆ. ಸೇವೆಯಲ್ಲಿರುವವರಿಗಾಗಿ ಪ್ರಚಾರದ ಅವಕಾಶಗಳನ್ನು ಸೂಚಿಸಲಾಗಿದೆ. ವ್ಯವಹಾರವು ಕೆಲವು ಪ್ರಮುಖ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬಹುದು. ಆರೋಗ್ಯವು ಹೆಚ್ಚು ಪರಿಣಾಮ ಉಂಟಾಗದು.

ಸಿಂಹ

ಸಿಂಹ

ಈ ವಾರ ಆಸ್ತಿಯನ್ನು ಖರೀದಿಸಲು ನೀವು ಆಸಕ್ತಿ ತೋರಿಸುತ್ತೀರಿ. ಇದನ್ನು ಖರೀದಿಸುವುದರಿಂದ ನಿಮಗೆ ಶಕ್ತಿ ಬೇಕಾಗುತ್ತದೆ ಮಾನಸಿಕ ಮತ್ತು ವಿತ್ತೀಯ ಬೆಂಬಲ ಬೇಕಾಗುತ್ತದೆ. ಒಟ್ಟಾರೆ ಸಕಾರಾತ್ಮಕ ವಾತಾವರಣದೊಂದಿಗೆ ಕುಟುಂಬವು ನಿಮ್ಮನ್ನು ಬೆಂಬಲಿಸುತ್ತಿದೆ ಎಂದು ತೋರುತ್ತದೆ. ಸಹೋದ್ಯೋಗಿಗಳು ಪರೋಕ್ಷವಾಗಿ ಅಡಚಣೆ ಉಂಟುಮಾಡಬಹುದು. ನಿಮ್ಮ ಅತಿಯಾದ ಶ್ರಮದಿಂದ ಕೆಲಸದ ನಡುವೆ ಒಂದಿಷ್ಟು ದಣಿವು ಉಂಟಾಗಬಹುದು. ಹಾಗಂತ ಆರೋಗ್ಯದಲ್ಲಿ ಯಾವುದೇ ವ್ಯತ್ಯಯ ಉಂಟಾಗದು.

ಕನ್ಯಾ

ಕನ್ಯಾ

ಕೆಲಸ ಮತ್ತು ಉತ್ತಮ ಅವಕಾಶಗಳಿಗಾಗಿ ಹೆಚ್ಚಿನ ಉತ್ಸಾಹವನ್ನು ಈ ವಾರ ತೋರುವಿರಿ. ನೀವು ವ್ಯವಹಾರದ ನಿಮಿತ್ತ ಪ್ರವಾಸಕ್ಕೆ ಹೋಗಬೇಕಾಗಬಹುದು. ವಾರದ ಎರಡನೇ ಹಂತವು ಸೇವೆಯಲ್ಲಿರುವವರಿಗೆ ಸಕ್ರಿಯವಾದದ್ದು. ಆದಾಗ್ಯೂ, ವಾತಾವರಣವು ಸಕಾರಾತ್ಮಕವಾಗಿರುವುದಿಲ್ಲ. ವಾರ ಪೂರ್ತಿ ಆರೋಗ್ಯವು ಉತ್ತಮವಾಗಿರುತ್ತದೆ. ಕೆಲಸದ ಸಮಸ್ಯೆಗಳ ಕಾರಣ ವೈಯಕ್ತಿಕವಾಗಿ ಪರಿಣಾಮ ಬೀರಬಹುದು.

 ತುಲಾ:

ತುಲಾ:

ವಾರದ ಮೊದಲ ಹಂತವು ಉತ್ತಮವಾದದ್ದಲ್ಲ. ಏಕೆಂದರೆ ನಿಧಾನವಾಗಿ ಸಾಲಕ್ಕೆ ಸಂಬಂಧಿಸಿದಂತೆ ನಿರಂತರವಾದ ಚಿಂತೆಗಳು ಕಾಡಬಹುದು. ನಿಮ್ಮ ಮಾರ್ಗದಲ್ಲಿ ಬರಬಹುದಾದ ಕೆಲವು ಕಾನೂನು ಸಮಸ್ಯೆಗಳೂ ಸಹ ಇವೆ. ಎರಡನೆಯ ಹಂತವು ನಿಮಗೆ ಪರಿಹಾರವನ್ನು ನೀಡುತ್ತದೆ ಮತ್ತು ಆರೋಗ್ಯವು ಈ ವಿಷಯಗಳನ್ನು ನಿರ್ವಹಿಸಲು ನಿಮ್ಮನ್ನು ಬೆಂಬಲಿಸುತ್ತದೆ. ಶಾಂತವಾಗಿರಿ ಸಂಬಂಧಗಳ ಮೇಲೂ ಪರಿಣಾಮ ಬೀರುವುದು.

ವೃಶ್ಚಿಕ:

ವೃಶ್ಚಿಕ:

ಈ ವಾರ ಉತ್ತಮ ಮತ್ತು ಹೊಸ ವಿಷಯಗಳನ್ನು ಕಲಿಯಲು ನೀವು ಬಯಸುತ್ತೀರಿ. ಹೊಸ ಅವಕಾಶಗಳಿಗಾಗಿ ಅಥವಾ ಹೆಚ್ಚಿನ ಸಂಪತ್ತನ್ನು ಸಂಪಾದಿಸುವ ಹೊಸ ಮಾರ್ಗಗಳನ್ನು ನೀವು ನೋಡುತ್ತೀರಿ. ವಾರದ ಮೊದಲ ಹಂತದಲ್ಲಿ ಸಂಬಂಧಗಳು ಉತ್ತಮವಾಗಿರುತ್ತವೆ. ನೀವು ತಾಂತ್ರಿಕ ಕೌಶಲ್ಯಗಳ ಕಡೆಗೆ ಆಸಕ್ತಿಯನ್ನು ತೋರಿಸಬಹುದು. ಆರೋಗ್ಯವು ನಿಮಗೆ ಅನುಕೂಲಕರವಾಗಿರುವುದಿಲ್ಲ. ಸಂಗಾತಿಯೊಂದಿಗಿನ ಸಂಬಂಧವು ಈ ವಾರ ಕಿರಿಕಿರಿಯುಂಟುಮಾಡುವುದು. ನಂತರದ ಹಂತದಲ್ಲಿ ವಿಷಯಗಳನ್ನು ಉತ್ತಮವಾಗಿ ಪಡೆಯುವ ಕಾರಣ ಹೆಚ್ಚು ಚಿಂತೆ ಮಾಡುವ ಅಗತ್ಯವಿಲ್ಲ.

ಧನು:

ಧನು:

ವಾರದ ಪ್ರಾರಂಭದ ಹಂತದಿಂದ ಧನಾತ್ಮಕ ನಿರೀಕ್ಷೆಗಳನ್ನು ನೋಡುವಿರಿ. ನಾವು ಕಷ್ಟಕರ ಕೆಲಸಕ್ಕೆ ಸಲಹೆ ನೀಡುವುದಿಲ್ಲ. ಶ್ರಮ ಮತ್ತು ತಾಳ್ಮೆಯೊಂದಿಗೆ ಕೆಲಸವನ್ನು ನಿರ್ವಹಿಸಿದರೆ ಉತ್ತಮ ಫಲ ದೊರೆಯುವುದು. ಕುಟುಂಬ ವೆಚ್ಚಗಳು ಹೆಚ್ಚಾಗುತ್ತದೆ. ಅವುಗಳನ್ನು ಆದಷ್ಟು ನಿಯಂತ್ರಣದಲ್ಲಿ ಇಟ್ಟುಕೊಳ್ಳಲು ಪ್ರಯತ್ನಿಸಿ. ಆರೋಗ್ಯವು ಎಂದಿನಂತೆ ಇರುವುದು.

ಮಕರ

ಮಕರ

ನಿಮ್ಮ ಕೆಲಸದ ಜೀವನವನ್ನು ಉತ್ತಮಗೊಳಿಸಲು ಮತ್ತು ಹೆಚ್ಚು ಸಂಘಟಿತವಾಗಿಸಲು ನೀವು ಪ್ರೇರಣೆ ಪಡೆಯುತ್ತೀರಿ. ಪ್ರಗತಿ ಮತ್ತು ಉತ್ಸಾಹದ ಸಾಧ್ಯತೆಗಳನ್ನು ಸೂಚಿಸಲಾಗುತ್ತದೆ. ನಿಮ್ಮ ಮತ್ತು ನಿಮ್ಮ ತಾಯಿಯ ಆರೋಗ್ಯ ಋಣಾತ್ಮಕ ಪರಿಣಾಮಗಳನ್ನು ತೋರುತ್ತದೆ. ನೀವು ವೈದ್ಯರನ್ನು ಭೇಟಿ ಮಾಡಬೇಕಾಗಬಹುದು. ಕೆಲಸದಲ್ಲಿ ನೀವು ಉತ್ತಮವಾದ ದಾರಿ ಕಾಣುವಿರಿ. ಆದರೆ ಆರೋಗ್ಯ ಸಮಸ್ಯೆಗಳು ವಾರದ ಎರಡನೆಯ ಭಾಗದಿಂದಲೂ ಪರಿಹರಿಸಬಹುದು. ಹಂತದಿಂದ ಪರಿಹಾರ ಕಾಣುವುದು. ತೀರ್ಥಯಾತ್ರೆಯಿಂದ ಪ್ರೀತಿಯನ್ನು ಪಡೆದುಕೊಳ್ಳುವಿರಿ.

ಕುಂಭ

ಕುಂಭ

ಕೆಲಸದ ಕಡೆಗೆ ನೀವು ಹೆಚ್ಚು ಸಕ್ರಿಯತೆಯನ್ನು ತೋರಿಸುತ್ತೀರಿ. ಈ ವಾರ ನಿಮ್ಮ ಹಣವನ್ನು ವ್ಯರ್ಥ ಮಾಡುತ್ತಿರುವಂತೆ ನೀವು ನೋಡಬಹುದು. ಆದರೆ ನೀವು ಶಾಂತವಾಗಿದ್ದರೆ ಮಾಡಿದ ಶ್ರಮದ ಕೆಲಸವು ಉತ್ತಮ ಫಲಿತಾಂಶಗಳನ್ನು ತೋರಿಸುತ್ತದೆ. ಕೆಲವು ಕಾರಣದಿಂದ ಕೆಲಸದಲ್ಲಿ ಏಳು ಬೀಳು ಉಂಟಾಗಬಹುದು. ಅದರಿಂದ ನಿರಾಶೆಗೆ ಒಳಗಾಗದಿರಿ. ಆರೋಗ್ಯವು ಉತ್ತಮವಾಗಿರುತ್ತದೆ. ವಾರದ ದ್ವಿತೀಯಾರ್ಧದಲ್ಲಿ ನಿಮ್ಮ ಅದೃಷ್ಟವು ನಿಮ್ಮ ಮಾರ್ಗವಾಗಿ ಬರುತ್ತದೆ. ವಾರದಲ್ಲಿ ನಿಮಗೆ ಒಟ್ಟಾರೆ ಯಶಸ್ಸು ದೊರೆಯುವುದು.

 ಮೀನ

ಮೀನ

ಐಷಾರಾಮಿ ಮತ್ತು ಸೌಕರ್ಯಗಳನ್ನು ಹೆಚ್ಚಿಸಲು ನೀವು ಪ್ರಯತ್ನಿಸುತ್ತೀರಿ. ವೃತ್ತಿಜೀವನದ ಸುಧಾರಣೆಯ ಕುರಿತು ಯೋಚನೆಗಳು ಸಹ ಮನಸ್ಸಿಗೆ ಬರುತ್ತದೆ. ಆದಾಗ್ಯೂ, ಆಸ್ತಿಗೆ ಸಂಬಂಧಿಸಿದ ವಿಷಯಗಳು ನಿಮ್ಮ ಗಮನವನ್ನು ಗಮನಾರ್ಹವಾಗಿ ತೆಗೆದುಕೊಳ್ಳಬಹುದು. ಶಾಂತ ಮನಸ್ಸಿನಿಂದ ನಿಮ್ಮ ಚಿಂತನಶೀಲ ಮತ್ತು ಉತ್ತಮ ಪ್ರಯತ್ನಗಳು ಈ ವಿಷಯಗಳನ್ನು ಪರಿಹರಿಸಲು ನಿಮಗೆ ಸಹಾಯ ಮಾಡುತ್ತದೆ. ಆರೋಗ್ಯವು ಉತ್ತಮವಾಗಿರುತ್ತದೆ.

English summary

Weekly Predictions: August 12-18, 2018

The horoscope for the week from August 12 to August 18 is here, offering all that you want to know about your life during the week. While the planets are changing their positions after the eclipse, the effects of the eclipse do not seem to have gone away yet. Let us explore what the week has in store for you, in terms of both personal and professional life.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more