Latest Updates
-
ಅಂತರಾಷ್ಟ್ರೀಯ ಸ್ನೇಹ ದಿನ: ಗೆಳೆಯರೊಂದಿಗೆ 'ಬಡ್ಡಿ ವರ್ಕೌಟ್' ಮಾಡಿ ಆರೋಗ್ಯ ಮತ್ತು ಬಾಂಧವ್ಯ ಹೆಚ್ಚಿಸಿಕೊಳ್ಳಿ! -
ಐಟಿಆರ್ ಸಲ್ಲಿಕೆ ಗಡುವು ಹತ್ತಿರ: ದಂಪತಿಗಳು ಒಟ್ಟಾಗಿ ಕುಳಿತು ಈ ಕೆಲಸ ಮಾಡಿದರೆ ಟೆನ್ಷನ್ ಫ್ರೀ! -
ಬೆಂಗಳೂರಿಗರೇ ಗಮನಿಸಿ: ಇಂದು 6 ಗಂಟೆ ಪವರ್ ಕಟ್, ಈ ಮುನ್ನೆಚ್ಚರಿಕೆ ಮರೆಯದಿರಿ! -
ಶ್ರಾವಣ ಉಪವಾಸದಲ್ಲಿ ದಿನವಿಡೀ ಎನರ್ಜಿಯಿಂದ ಇರಬೇಕೆ? ಈ ಹೈ-ಪ್ರೋಟೀನ್ ಸಾತ್ವಿಕ ಆಹಾರ ಪದ್ಧತಿ ಫಾಲೋ ಮಾಡಿ! -
ಗುರು ಪೂರ್ಣಿಮೆ 2026: ಸರಳ ಪೂಜಾ ವಿಧಿ ಮತ್ತು ಕಡಿಮೆ ಬಜೆಟ್ನಲ್ಲಿ ಗುರುಗಳಿಗೆ ನೀಡಬಹುದಾದ ಬೆಸ್ಟ್ ಗಿಫ್ಟ್ ಐಡಿಯಾಗಳು! -
10 ನಿಮಿಷದ 'ಟೈಗರ್ ಫ್ಲೋ': ಬೆನ್ನುನೋವಿಗೆ ಮುಕ್ತಿ ನೀಡುವ ಅದ್ಭುತ ವ್ಯಾಯಾಮ ಇಲ್ಲಿದೆ! -
ಪ್ರತಿಭಟನೆಯಲ್ಲಿ ಪ್ರೀತಿ: 'ಪ್ರೊಟೆಸ್ಟ್ ನೇ ಬನಾ ದಿ ಜೋಡಿ' ಟ್ರೆಂಡ್ ಹಿಂದೆ ಅಡಗಿದೆ ದೊಡ್ಡ ಅಪಾಯ! -
ಮಳೆಗಾಲದಲ್ಲಿ ಮನೆಯಲ್ಲಿ ಬೂಷ್ಟು ಹರಡುತ್ತಿದೆಯೇ? ಈ 20 ನಿಮಿಷದ ಟಿಪ್ಸ್ ಪಾಲಿಸಿ, ಮನೆ ಫ್ರೆಶ್ ಆಗಿಡಿ! -
ಕೇವಲ 200 ರೂಪಾಯಿಯಲ್ಲಿ ಪರಿಸರ ಸ್ನೇಹಿ ಊಟ: ವಿಶ್ವ ಪ್ರಕೃತಿ ಸಂರಕ್ಷಣಾ ದಿನಕ್ಕೆ ನಿಮ್ಮ ಅಡುಗೆಮನೆಯೇ ಮೊದಲ ಹೆಜ್ಜೆ! -
CWG 2026: 6ನೇ ದಿನ ಭಾರತದ ಪದಕದ ಬೇಟೆ; ಮನೆಯಲ್ಲೇ ಕಮ್ಮಿ ಬಜೆಟ್ನಲ್ಲಿ ಅದ್ಭುತ ವಾಚ್ ಪಾರ್ಟಿ ಪ್ಲಾನ್!
ರಾಶಿಭವಿಷ್ಯ: ಜೂನ್ 11-17ರವರೆಗಿನ ಹನ್ನೆರಡು ರಾಶಿಗಳ ವಾರ ಭವಿಷ್ಯ
ದಿನಭವಿಷ್ಯದಂತೆ ಪ್ರತಿ ವಾರ ನೋಡುವಂತಹ ವಾರ ಭವಿಷ್ಯವು ತುಂಬಾ ಮುಖ್ಯವಾಗಿರುವುದು. ಹೆಚ್ಚಿನವರು ವಾರ ಭವಿಷ್ಯ ನೋಡಿ ತಮ್ಮ ವಾರವನ್ನು ಶುಭಾರಂಭ ಮಾಡುವರು. ಹೀಗೆ ವಾರ ಭವಿಷ್ಯ ನೋಡಿದರೆ ಆಗುವಂತಹ ಅಡೆತಡೆಗಳ ನಿವಾರಣೆ ಮಾಡಬಹುದು. ಈ ಲೇಖನದಲ್ಲಿ ಪ್ರತೀ ರಾಶಿಚಕ್ರಗಳ ಬಗ್ಗೆ ಜೋತಿಷ್ಯರು ತಿಳಿಸಿಕೊಟ್ಟಿದ್ದಾರೆ.
ಮುಂದಿನ ವಾರದಲ್ಲಿ ನಿಮ್ಮ ಗ್ರಹಗತಿಯು ಯಾವ ರೀತಿಯಲ್ಲಿರಲಿದೆ ಮತ್ತು ಸಮಸ್ಯೆಗಳನ್ನು ಹೇಗೆ ನಿಭಾಯಿಸಬಹುದು ಮತ್ತು ಆರ್ಥಿಕ ಪರಿಸ್ಥಿತಿಯು ಹೇಗಿರಲಿದೆ ಎಂದು ತಿಳಿಯಬಹುದು....

ಮೇಷ: ಮಾ.21- ಎ.19
ನಂಬಿಕೆ ಮತ್ತು ಆಸಕ್ತಿಯು ಬೆಳವಣಿಗೆಯಾಗಲಿದೆ. ಎಲ್ಲವನ್ನು ಕಡೆಗಣಿಸುವಂತಹ ನಿಮ್ಮ ಗುಣವು ಸಮಸ್ಯೆಗೆ ಸಿಲುಕಿಸಬಹುದು. ಇನ್ನೊಂದು ಬದಿಯಲ್ಲಿ ನಿಮ್ಮ ಮನಸ್ಥಿತಿಯು ಹಠಾತ್ ಆಗಿ ಬದಲಾಗುವುದು. ದೊಡ್ಡ ಸಮಸ್ಯೆಗಳು, ಜಾಗತಿಕ ಚಿಂತೆಗಳು ಮತ್ತು ಸಮಸ್ಯೆಗಳ ಬಗ್ಗೆ ಕೆಲಸ ಮಾಡಿದರೆ ನಿಮಗೆ ತೃಪ್ತಿ ಹಾಗೂ ನೆಮ್ಮದಿ ಸಿಗುವುದು.

ವೃಷಭ: ಎ.20-ಮೇ 20
ಹೊಸ ಶಕ್ತಿಯನ್ನು ನೀವು ಅನುಭವಿಸಲಿದ್ದೀರಿ. ಬೆಳವಣಿಗೆ ಮತ್ತು ವಿಸ್ತರಣೆಯು ಸಂಪೂರ್ಣವಾಗಿ ಈ ವಾರ ನಿಮ್ಮ ತಲೆಯಲ್ಲಿ ತಿರುತ್ತಲಿರುವುದು. ನೀವಾಗಿಯೇ ಕೆಲವೊಂದು ಪ್ರಯತ್ನಪಟ್ಟು ಸಾಧಿಸುವ ಬದಲು ತಂತ್ರಗಳನ್ನು ಬದಲಾಯಿಸುವುದು ಒಳ್ಳೆಯದು. ನೀವು ತಂಡದ ಜತೆಯಾಗಿ ಕೆಲಸ ಮಾಡಿ. ಇನ್ನೊಂದು ಕಡೆಯಲ್ಲಿ ಗುಂಪಿನೊಂದಿಗೆ ಮತ್ತು ತಂಡದೊಂದಿಗೆ ಕೆಲಸ ಮಾಡುವುದು ಈ ವಾರ ಮುಖ್ಯವಾಗಲಿದೆ. ಇದು ತುಂಬಾ ಫಲದಾಯಕ ಹಾಗೂ ಲಾಭದಾಯಕ.ಇದನ್ನು ಹೊರತುಪಡಿಸಿ ಹೆಚ್ಚಿನ ಸಂತೋಷವು ಸಿಗಲಿದೆ. ನಿಮಗೆ ಅನಿರೀಕ್ಷಿತವಾದ ಧನಲಾಭವಾಗಲಿದೆ.

ಮಿಥುನ: ಮೇ 21- ಜೂನ್ 20
ನಿಮ್ಮ ಸುತ್ತಲು ಇರುವಂತಹ ಪರಿಸ್ಥಿತಿಯಲ್ಲಿ ನೀವು ಕೆಲವೊಂದು ಬದಲಾವಣೆಗಳನ್ನು ಮಾಡಿಕೊಳ್ಳಬೇಕು. ವೈವಾಹಿಕ ಜೀವನದಲ್ಲಿ ಇರುವಂತಹವರು ಈ ವಾರ ತಮ್ಮ ಕುಟುಂಬದೊಂದಿಗೆ ಒಳ್ಳೆಯ ಸಮಯ ಕಳೆಯಲಿದ್ದಾರೆ.

ಕರ್ಕಾಟಕ: ಜೂನ್ 21-ಜುಲೈ 22
ಗಂಭೀರ, ಪ್ರೌಢ ಮತ್ತು ಉಲ್ಲಾಸಿತರಾಗಿರುವುದು ನಿಮ್ಮ ವೃತ್ತಿ ಜೀವನಕ್ಕೆ ತುಂಬಾ ನೆರವಾಗುವುದು. ಮುಕ್ತ ಮನಸ್ಸು ಮತ್ತು ಪ್ರೌಢತೆಯು ಸಾಮಾಜಿಕ ಮತ್ತು ವೈವಾಹಿಕವಾದ ಹಲವಾರು ಸಮಸ್ಯೆಗಳು ಮತ್ತು ವಿವಾದಗಳನ್ನು ಬಗೆಹರಿಸುವುದು.

ಸಿಂಹ: ಜುಲೈ 23-ಆ.23
ನೀವು ಮಾಡುವಂತಹ ಪ್ರತಿಯೊಂದು ಕೆಲಸದಲ್ಲಿ ಯಶಸ್ಸು ಪಡೆಯಬೇಕೆಂಬ ಆಕಾಂಕ್ಷೆಯು ನಿಮ್ಮಲ್ಲಿ ಮೂಡುವುದು. ಆದರೆ ಅದೆಲ್ಲವೂ ಸುಲಭವಲ್ಲ. ಅಧಿಕಾರವು ಯಾರಿಗೂ ಅಷ್ಟು ಸುಲಭವಾಗಿ ಸಿಗದು. ನಿಮ್ಮ ಉದ್ಯೋಗದ ಸ್ಥಳದಲ್ಲಿ ಕಠಿಣ ಪರಿಸ್ಥಿತಿಯು ನಿರ್ಮಾಣವಾಗುವುದು ಮತ್ತು ಇದನ್ನು ನೀವು ತುಂಬಾ ತಂತ್ರಗಾರಿಕೆಯಿಂದ ಬಗೆಹರಿಸಬೇಕು. ಇನ್ನೊಂದು ಬದಿಯಲ್ಲಿ ಹಠಾತ್ ಆಗಿ ಧನಾಗಮನವಾಗಬಹುದು. ಇದಕ್ಕೆ ನೀವು ಕೆಲವು ಅಪಾಯಕಾರಿ ಹೂಡಿಕೆ ಮಾಡಬೇಕು.

ಕನ್ಯಾ: ಆ.24-ಸೆ.23
ನೀವು ತುಂಬಾ ಹಣ ಖರ್ಚು ಮಾಡುತ್ತಲಿದ್ದರೂ ನಿಮ್ಮ ಆದಾಯ ಮತ್ತು ಖರ್ಚು ಸರಿದೂಗುವ ಕಾರಣದಿಂದ ನೀವು ತುಂಬಾ ಅದೃಷ್ಟವಂತರು. ಈ ವಾರ ನೀವು ಬೇರೆಯವರಿಗೆ ನೆರವಾಗಲು ಎಲ್ಲವನ್ನೂ ಮೀರಿ ನಡೆಯಲಿದ್ದೀರಿ. ಇನ್ನೊಂದು ಕಡೆಯಲ್ಲಿ ಅತಿಯಾಗಿ ಯಾವುದನ್ನಾದರೂ ಮಾಡುವುದರಿಂದ ಒತ್ತಡ ಮತ್ತು ಆರೋಗ್ಯದ ಸಮಸ್ಯೆ ಬರಬಹುದು. ನೀವು ಸಾಲ ಪಡೆಯುವುದು ಮತ್ತು ನೀಡುವುದನ್ನು ನಿಲ್ಲಿಸಬೇಕು. ತುಂಬಾ ಆರಾಮವಾಗಿ, ಒತ್ತಡ ಮುಕ್ತರಾಗಿರಬೇಕು.

ತುಲಾ: ಸೆ.24-ಅ.23
ನಿಮ್ಮ ಗ್ರಹಗತಿಗಳು ನಿಮಗೆ ನೆರವಾಗಲಿದೆ ಮತ್ತು ಈ ವಾರವು ನಿಮಗೆ ತುಂಬಾ ಅದೃಷ್ಟ ಮತ್ತು ಫಲಪ್ರದವಾಗಿರುವುದು. ಇದನ್ನು ಹೊರತುಪಡಿಸಿ ನಿಮಗೆ ಲೌಕಿಕ ಸಂತೋಷ ಮತ್ತು ಉನ್ನತ ವ್ಯಕ್ತಿಯೊಬ್ಬರಿಂದ ಲಾಭವಾಗಲಿದೆ. ಸಾಮಾಜಿಕವಾಗಿ ಬೆರೆಯುವುದು ಕೂಡ ನಿಮಗೆ ಸಂತೋಷ ನೀಡಲಿದೆ. ನೀವು ಈ ವಾರಪೂರ್ತಿ ಶಕ್ತಿಯಿಂದ ಇರಲಿದ್ದೀರಿ.

ವೃಶ್ಚಿಕ: ಅ.24-ನ.22
ಸಂಪನ್ಮೂಲಗಳ ಸ್ವಭಾವದಿಂದಾಗಿ ನೀವು ಆಸೆಗಳನ್ನು ಪೂರೈಸಲು ಮಾರ್ಗಗಳನ್ನು ಹುಡುಕಲಿದ್ದೀರಿ. ನೀವು ಹಿಂದಿಗಿಂತಲೂ ಹೆಚ್ಚು ಶ್ರಮ ವಹಿಸಿ ಕೆಲಸ ಮಾಡಬೇಕು. ಇನ್ನೊಂದು ಬದಿಯಲ್ಲಿ ನೀವು ಸರಿಯಾಗಿ ಆರಾಮ ಮಾಡಬೇಕು ಮತ್ತು ಭಾವನೆಗಳು ಮೇಲೈಸುವುದನ್ನು ತಡೆಯಲು ಹೆಚ್ಚು ಆರಾಮ ಮಾಡಬೇಕು. ಕಚೇರಿಯಿಂದ ಮನೆಗೆ ಕೆಲಸದ ಒತ್ತಡವನ್ನು ತಂದರೆ ಅದು ಸಂಬಂಧದ ಮೇಲೆ ಪರಿಣಾಮ ಬೀರಬಹುದು.

ಧನು: ನ.23-ಡಿ.22
ಈ ವಾರವು ಆರ್ಥಿಕತೆ ದೃಷ್ಟಿಯಿಂದ ನಿಮಗೆ ಶ್ರೇಷ್ಠವಾಗಿರಲಿದೆ. ಆದರೆ ನೀವು ಸವಾಲುಗಳನ್ನು ಸ್ವೀಕರಿಸಬೇಕು ಮತ್ತು ಸವಾಲು ಸ್ವೀಕರಿಸಿದರೆ ಆಗ ನಿಮಗೆ ವಾರದ ಶ್ರೇಷ್ಠ ಸಮಯವು ಸಿಗಲಿದೆ. ವೈರಿಗಳು ಮತ್ತು ಅಸೂಯೆಯು ನಿಮ್ಮ ಯೋಜನೆಗಳ ಮೇಲೆ ಪರಿಣಾಮ ಬೀರಬಹುದು. ಕಠಿಣ ಪರಿಶ್ರಮದೊಂದಿಗೆ ನೀವು ತುಂಬಾ ಎಚ್ಚರಿಕೆ ವಹಿಸಬೇಕು. ಇದರ ಹೊರತಾಗಿ ನೀವು ಸ್ವಲ್ಪ ನಗದನ್ನು ತೆಗೆದಿಡಿ, ಇದು ಮುಂದೆ ನಿಮಗೆ ನೆರವಿಗೆ ಬರಲಿದೆ. ವಾರಾಂತ್ಯದಲ್ಲಿ ಹಠಾತ್ ಆಗಿ
ಖರ್ಚು ಬರಬಹುದು.

ಮಕರ: ಡಿ.23-ಜ.20
ಈ ವಾರ ನಿಮ್ಮ ಕಚೇರಿಯಲ್ಲಿ ಬಿಡುವಿಲ್ಲದ ಕೆಲಸವಿದ್ದರೂ ನೀವು ಇದನ್ನು ಆನಂದಿಸಲಿದ್ದೀರಿ. ಮನೆಯ ಸುಧಾರಣೆಯಲ್ಲಿ ನೀವು ತೊಡಗಿಕೊಳ್ಳಲಿದ್ದೀರಿ. ಇನ್ನೊಂದು ಬದಿಯಲ್ಲಿ ನಿಮ್ಮ ಸಾಮಾಜಿಕ ಭಾವನೆಯಲ್ಲಿರಬಹುದು ಮತ್ತು ಬೇರೆಡೆ ಹೋಗಲು ಮನಸ್ಸಾಗಬಹುದು. ಈ ವಾರ ನಿಮ್ಮ ಖರ್ಚು ಸ್ವಲ್ಪ ಮಟ್ಟಿಗೆ ಹೆಚ್ಚಾಗುವಂತಹ ಸಾಧ್ಯತೆಗಳು ಇವೆ.

ಕುಂಭ: ಜ.21- ಫೆ.18
ಗ್ರಹಗತಿಯ ಪ್ರಕಾರ ಈ ವಾರ ನಿಮಗೆ ಹೆಚ್ಚಿನ ಹಣ ಹರಿದುಬರಲಿದೆ. ಈ ವಾರ ನೀವು ಜತೆಗಾರಿಕೆಯಲ್ಲಿ ತೊಡಗಿಕೊಳ್ಳುವಿರಿ. ಇದು ನಿಮಗೆ ಭವಿಷ್ಯದಲ್ಲಿ ನೆರವಾಗುವುದು. ನೀವು ತುಂಬಾ ಖುಷಿಯಾದ ಭಾವನೆಯಲ್ಲಿರಲಿದ್ದೀರಿ. ಈ ವಾರ ನಿಮಗೆ ಹೆಚ್ಚಿನ ಶಾಂತಿ ಹಾಗೂ ಸೌಹಾರ್ದತೆ ಸಿಗಲಿದೆ.

ಮೀನ: ಫೆ.19-ಮಾ.20
ನಿಮಗೆ ಕೆಲಸದಿಂದ ತುಂಬಾ ವಿಶೇಷ ಮತ್ತು ತೃಪ್ತಿ ಸಿಗಲಿದೆ. ದೀರ್ಘಕಾಲದಿಂದ ಉಳಿದಿರುವಂತಹ ಕನಸುಗಳು ಈಡೇರಲಿದೆ. ವಾರದ ಮಧ್ಯದಲ್ಲಿ ನಿಮ್ಮ ಆರ್ಥಿಕ ಪರಿಸ್ಥಿತಿಯು ತುಂಬಾ ಎತ್ತರಕ್ಕೇರಲಿದೆ.



Click it and Unblock the Notifications