For Quick Alerts
ALLOW NOTIFICATIONS  
For Daily Alerts

ಈ ಊರಿನಲ್ಲಿ ವಿವಾಹವಾಗದೆ ಹುಡುಗ-ಹುಡುಗಿ, ಒಂದೇ ಮನೆಯಲ್ಲಿ ಒಟ್ಟಿಗಿರಬಹುದು!

|

ನಮ್ಮ ದೇಶ ಸಂಸ್ಕೃತಿ ಹಾಗೂ ಸಂಪ್ರದಾಯದ ವಿಚಾರದಲ್ಲಿ ಬಹಳ ಶ್ರೀಮಂತವಾದ ಸ್ಥಾನವನ್ನು ಪಡೆದುಕೊಂಡಿದೆ. ಕೆಲವು ಸಂಪ್ರದಾಯಗಳು ವಿಚಿತ್ರ ಹಾಗೂ ಅಸಮಾನ್ಯವಾದದ್ದು ಎನಿಸಬಹುದು. ಇನ್ನೂ ಕೆಲವು ಪವಿತ್ರತೆಯ ಪ್ರತೀಕವಾಗಿರುವುದು. ವಿವಿಧ ಜಾತಿ, ಜನಾಂಗದವರನ್ನು ಹೊಂದಿರುವ ನಮ್ಮ ರಾಷ್ಟ್ರದಲ್ಲಿ ಕಂಡು ಕೇಳರಿಯದಂತಹ ಸಂಪ್ರದಾಯಗಳು ಮತ್ತು ಪದ್ಧತಿಗಳಿವೆ.

ವಿವಾಹ ಎನ್ನುವುದು ಸಾಮಾನ್ಯವಾಗಿ ಎಲ್ಲಾ ಜಾತಿ ಧರ್ಮದಲ್ಲೂ ಒಂದು ಪವಿತ್ರವಾದ ಬಂಧನ. ಮಗ/ಮಗಳು ವಯಸ್ಸಿಗೆ ಬಂದಾಗ ಮನೆ ಮಂದಿಯವರೆಲ್ಲಾ ಒಟ್ಟಿಗೆ ಸೇರಿ ಅವರಿಗೆ ವಿವಾಹ ಮಾಡಿಸುವುದು ಒಂದು ಸಂಪ್ರದಾಯ. ಆದರೆ ಇಲ್ಲೊಂದು ಜನಾಂಗದವರ ವಿವಾಹ ಪದ್ಧತಿ ಅತ್ಯಂತ ವಿಚಿತ್ರವಾಗಿದೆ...

ಇದು 1000 ವರ್ಷಗಳಿಂದಲೂ ನಡೆದುಕೊಂಡು ಬಂದ ಪದ್ಧತಿ

ಇದು 1000 ವರ್ಷಗಳಿಂದಲೂ ನಡೆದುಕೊಂಡು ಬಂದ ಪದ್ಧತಿ

ಹೌದು, ರಾಜಸ್ಥಾನದ ವಾಯುವ್ಯ ರಾಜ್ಯದ ಗಾರಸ್ಯ ಬುಡಕಟ್ಟು ಜನಾಂಗದವರು ವಿವಾಹವಾಗದೆ ಸಂಬಂಧದಲ್ಲಿ ಇರುತ್ತಾರೆ. ಇದರ ಕುರಿತು ಅಥವಾ ಅವರ ಸಂಬಂಧಗಳ ಕುರಿತು ಯಾರೂ ಯಾರನ್ನೂ ಪ್ರಶ್ನಿಸುವುದಿಲ್ಲ ಎಂದು ಹೇಳಲಾಗುತ್ತದೆ. ಈ ಬುಡಕಟ್ಟು ಜನಾಂಗದವರ ಪದ್ಧತಿಯು 1000 ವರ್ಷಗಳಿಂದಲೂ ನಡೆದುಕೊಂಡು ಬಂದ ಪದ್ಧತಿ ಎನ್ನುತ್ತಾರೆ.

 ಮದುವೆ ಆಗುವ ಮುಂಚೆಯೇ ಒಟ್ಟಿಗೆ ವಾಸಿಸುತ್ತಾರೆ

ಮದುವೆ ಆಗುವ ಮುಂಚೆಯೇ ಒಟ್ಟಿಗೆ ವಾಸಿಸುತ್ತಾರೆ

ಗ್ಯಾರಸ್ಯ ಬುಡಕಟ್ಟಿನ ದಂಪತಿಗಳು ಒಟ್ಟಿಗೆ ವಾಸಿಸುತ್ತಾರೆ. ಪುರುಷರು ತಾವು ಉತ್ತಮ ಸಂಪಾದನೆಯನ್ನು ಹೊಂದಿ, ಕೈಯಲ್ಲಿ ಒಂದಿಷ್ಟು ಹಣದ ಸಂಪಾದನೆ ಆದ ನಂತರ ತಮ್ಮ ಪಾಲುದಾರರನ್ನು ಅಥವಾ ಸಂಗಾತಿಯನ್ನು ವಿವಾಹವಾಗುತ್ತಾರೆ. ಇದಕ್ಕೆ ಸಾಕ್ಷಿ ಎನ್ನುವಂತೆ 70 ವರ್ಷದ ನಾನಿಯಾ ಗಾರಸ್ಯ ಎನ್ನುವವನು ತನ್ನೊಂದಿಗೆ ಇಷ್ಟು ದಿನ ಇದ್ದ 60 ವರ್ಷದ ಕಾಲಿ ಎನ್ನುವವರನ್ನು ವಿವಾಹವಾದರು. ಇವರಿಗೆ ವಿವಾಹವಾಗದೆಯೇ ಮಕ್ಕಳು ಹುಟ್ಟಿದ್ದಾರೆ.

ಹುಡುಗಿಯ ಪಾಲಕರಿಗೆ ಹುಡುಗರು ಒಂದಿಷ್ಟು ಹಣವನ್ನು ನೀಡಬೇಕು!

ಹುಡುಗಿಯ ಪಾಲಕರಿಗೆ ಹುಡುಗರು ಒಂದಿಷ್ಟು ಹಣವನ್ನು ನೀಡಬೇಕು!

ಹದಿ ಹರೆಯದ ಮಕ್ಕಳು ಗುಜರಾತ್ ಮತ್ತು ರಾಜಸ್ಥಾನದ ಭಾಗದಲ್ಲಿ ನಡೆವ "ಎರಡು ದಿನಗಳ ಕಾಲ್ಪನಿಕ ನ್ಯಾಯಯೋಜಿತ" ಸಂಪ್ರದಾಯದ ಮೂಲಕ ತಮ್ಮ ಆಯ್ಕೆಯ ಪಾಲುದಾರರೊಂದಿಗೆ ಸ್ನೇಹ ಬೆಳೆಸುವ ಸಂಪ್ರದಾಯವನ್ನು ಹೊಂದಿದೆ. ನಂತರ ಅವರು ವಿವಾಹವಾಗದೆಯೇ ಒಟ್ಟಿಗೆ ಬಾಳಬಹುದು. ಇವರು ಹಿಂದಿರುಗುವಾಗ ಅಂದರೆ ಒಟ್ಟಿಗೆ ಬಾಳುವ ಮುನ್ನ ಹುಡುಗಿಯ ಪಾಲಕರಿಗೆ ಹುಡುಗರು ಒಂದಿಷ್ಟು ಹಣವನ್ನು ನೀಡಬೇಕು.

ಹುಡುಗನ ಮನೆಯವರೇ ಎಲ್ಲಾ ಖರ್ಚುಗಳನ್ನು ನೀಡಬೇಕು

ಹುಡುಗನ ಮನೆಯವರೇ ಎಲ್ಲಾ ಖರ್ಚುಗಳನ್ನು ನೀಡಬೇಕು

ಇದಲ್ಲದೆ ಈ ಬುಡಕಟ್ಟಿನ ವಿವಾಹದಲ್ಲಿ ಹುಡುಗಿ ಮನೆಯವರ ಖರ್ಚು ಏನೂ ಇರುವುದಿಲ್ಲ. ಹುಡುಗನ ಮನೆಯವರೇ ಎಲ್ಲಾ ಸಂಪ್ರದಾಯಗಳ ಖರ್ಚುಗಳನ್ನು ನಿರ್ವಹಿಸಬೇಕು. ಅಲ್ಲದೆ ವಿವಾಹ ಸಮಾರಂಭವು ಹುಡುಗನ ಮನೆಯಲ್ಲಿಯೇ ನಡೆಸಲಾಗುವುದು.

ಈ ಊರು ವರದಕ್ಷಿಣೆ, ಸಾವು ಮತ್ತು ಅತ್ಯಾಚಾರಗಳಿಂದ ಮುಕ್ತ

ಈ ಊರು ವರದಕ್ಷಿಣೆ, ಸಾವು ಮತ್ತು ಅತ್ಯಾಚಾರಗಳಿಂದ ಮುಕ್ತ

ಗಾರಸ್ಯ ಬುಡಕಟ್ಟಿನ ಜನರ ಈ ಅಭ್ಯಾಸ ಅಸಮಾನ್ಯ ಎಂದು ತೋರುತ್ತದೆಯಾದರೂ ಇವರ ಈ ಸಂಪ್ರದಾಯದಿಂದ ತಮ್ಮ ಸಮುದಾಯದಲ್ಲಿ ವರದಕ್ಷಿಣೆ, ಸಾವು ಮತ್ತು ಅತ್ಯಾಚಾರಗಳಿಂದ ದೂರ ಉಳಿದಿದೆ ಎಂದರೆ ನಿಮಗೆ ಆಶ್ಚರ್ಯ ಆಗಬಹುದು.

ಜ್ಞಾನಿ ರಾಜೀವ್ ಗುಪ್ತ ಅವರ ಪ್ರಕಾರ

ಜ್ಞಾನಿ ರಾಜೀವ್ ಗುಪ್ತ ಅವರ ಪ್ರಕಾರ

ಸಾಮಾಜಿಕ ವಿಜ್ಞಾನಿ ರಾಜೀವ್ ಗುಪ್ತ ಅವರ ಪ್ರಕಾರ "ಬುಡಕಟ್ಟು ಜನರ ಈ ಸಂಪ್ರದಾಯದಿಂದ ತಮ್ಮ ಹಕ್ಕುಗಳ ಆಯ್ಕೆ ಹಾಗೂ ತಿರಸ್ಕಾರವು ನಡೆಯುತ್ತದೆ. ಅವರು ಆಧುನಿಕ ಸಮಾಜದಲ್ಲಿ ನಡೆಯುವ ವಿವಾಹ ಪದ್ಧತಿಯು ಯೋಗ್ಯವಾದದ್ದು ಎಂದು ಭಾವಿಸಿಲ್ಲ. ಏಕೆಂದರೆ ಈ ವಿವಾಹ ಪದ್ಧತಿಯಲ್ಲಿ ಮಹಿಳೆಯರ ಮೇಲೆ ಅನೇಕ ನಿರ್ಬಂಧಗಳನ್ನು ಹೇರಲಾಗುತ್ತದೆ ಎಂದು ಭಾವಿಸುವರು.

English summary

Village, Men & Women Can Live In Even If They Aren’t Married

Our country's culture and traditions are known for its richness. However, some are unusual and strange while some are just plain awesome. For instance: Garasia tribe from the northwestern state of Rajasthan has allowed live-in relationships outside wedlock for 1000s of years.It was surprising for visitors when they witnessed the marriage of a 70 year old man Naniya Garasia with his 60 year old live-in partner Kaali. His three sons also married their live-in partners on the same day.
X
Desktop Bottom Promotion