For Quick Alerts
ALLOW NOTIFICATIONS  
For Daily Alerts

ರೈಲ್ವೇ ನಿಲ್ದಾಣದಲ್ಲಿ ಮಹಿಳೆಗೆ ಲೈಂಗಿಕ ಕಿರುಕುಳ ಕೊಟ್ಟ ಪೊಲೀಸ್! ವಿಡಿಯೋ ವೈರಲ್

|
ರೈಲ್ವೆ ಸ್ಟೇಷನ್ ನಲ್ಲಿ ಮಹಿಳೆಗೆ ಲೈಂಗಿಕ ಕಿರುಕುಳ ಕೊಡುತ್ತಿದ್ದ ಪೊಲೀಸ್ ವಿಡಿಯೋ ವೈರಲ್ | Oneindia Kannada

ಅದು ಮುಂಬೈನ ಕಲ್ಯಾಣ ರೈಲ್ವೇ ಸ್ಟೇಷನ್. ಮಧ್ಯರಾತ್ರಿಯ ಸಮಯದಲ್ಲಿ ಪ್ರಯಾಣಿಕರೆಲ್ಲರೂ ರೈಲ್ವೇಗಾಗಿ ಕಾಯುತ್ತಾ ಕುಳಿತಿದ್ದರು. ಅಲ್ಲಿ ನಡೆದ ಒಂದು ಆಶ್ಚರ್ಯಕರ ಸಂಗತಿ ಒಮ್ಮೆ ಎಲ್ಲರನ್ನೂ ನಿದ್ದೆಯಿಂದ ಎಬ್ಬಿಸಿತು. ನಿಜ, ಮಹಿಳೆಯರಿಬ್ಬರ ಪಕ್ಕದಲ್ಲಿ ಕುಳಿತ ಪೊಲೀಸ್ಅಧಿಕಾರಿಯೊಬ್ಬ ನಿದ್ರೆ ಮಾಡುತ್ತಿದ್ದಂತೆ ನಟಿಸುತ್ತಾ, ಮಹಿಳೆಯ ಬೆನ್ನನ್ನು ಸ್ಪರ್ಶಿಸುತ್ತಿದ್ದ. ಆಕೆಯ ಸ್ಪರ್ಶಿಸುವುದರ ಮೂಲಕವೇ ಒಂದಷ್ಟು ಸಂತೋಷವನ್ನು ಪಡೆಯುತ್ತಿದ್ದ ಎನ್ನುವುದನ್ನು ವಿಡಿಯೋ ನೋಡಿದರೆ ತಿಳಿಯುತ್ತದೆ... ಮುಂದೆ ಓದಿ....

ಕಳ್ಳ ನಾಟಕ ಮಾಡಲು ಶುರುಮಾಡಿದ...

ಕಳ್ಳ ನಾಟಕ ಮಾಡಲು ಶುರುಮಾಡಿದ...

ಬೆಕ್ಕು ಕಣ್ಣು ಮುಚ್ಚಿ ಹಾಲು ಕುಡಿದರೆ ಲೋಕಕ್ಕೆ ಕಾಣುವುದಿಲ್ಲ ಅಂದುಕೊಂಡಂತೆ... ಈತ ಸಹ ತಾನು ನಿದ್ರೆಯಲ್ಲಿ ಜಾರಿದ್ದೇನೆ, ತನ್ನ ಕೈಗಳಿಗೆ ಹಿಡಿತವಿಲ್ಲ ಎನ್ನುವಂತೆ ಅಥವಾ ತನ್ನ ಅರಿವಿಗೆ ಬರದಂತೆಯೇ ಮಹಿಳೆಯ ಬೆನ್ನಿಗೆ ತಾಗುತ್ತಿದೆ ಎನ್ನುವ ರೀತಿಯಲ್ಲಿ ವರ್ತಿಸುತ್ತಿದ್ದ. ತಾನು ಮಾಡುವ ಈ ನಾಟಕ ತನ್ನನ್ನು ಹೊರತು ಪಡಿಸಿ ಬೇರೆಯವರಿಗೆ ತಿಳಿಯುವುದಿಲ್ಲ ಎಂದು ಅಂದುಕೊಂಡಿದ್ದ. ಆದರೆ ಅವನ ಲೆಕ್ಕಾಚಾರವೆಲ್ಲಾ ತಪ್ಪಾಗಿತ್ತು.

ಇದನ್ನೆಲ್ಲಾ ಯಾರೋ ವಿಡಿಯೋ ಮಾಡುತ್ತಿದ್ದರು...

ಇದನ್ನೆಲ್ಲಾ ಯಾರೋ ವಿಡಿಯೋ ಮಾಡುತ್ತಿದ್ದರು...

ಪೊಲೀಸ್ ಸಮವಸ್ತ್ರದಲ್ಲಿ ಕುಳಿತು ಮಾಡುತ್ತಿದ್ದ ಕೃತ್ಯಗಳನ್ನು ಯಾರೋ ಒಬ್ಬ ವಿಡಿಯೋ ಮಾಡುತ್ತಿದ್ದ. ಸಾಕಷ್ಟು ಸಮಯದವರೆಗೆ ಗಮನಿಸಿದ ನಂತರ ವಿಡಿಯೋ ಮಾಡುತ್ತಿದ್ದಂತೆಯೇ ಪೊಲೀಸ್ ಪಕ್ಕದಲ್ಲಿಯೇ ಕುಳಿತ ವ್ಯಕ್ತಿಯೊಬ್ಬನಿಗೆ ಹೊಡೆಯಲು ಹೇಳಿದ್ದಾನೆ. ಇದನ್ನು ಕೇಳಿದ ಆ ವ್ಯಕ್ತಿ ಹಿಂದೆ ಮುಂದೆ ಯೋಚಿಸದೆ, ಪೊಲೀಸ್ ಎನ್ನುವ ಭಯಕ್ಕೆ ಒಳಗಾಗದೆಯೇ ಮೊದಲು ಕಪಾಳಕ್ಕೆ ಎರಡು ಹೊಡೆದಿದ್ದಾನೆ.

ಎಲ್ಲರಿಗೂ ಆವಾಜ್ ಹಾಕಲು ಶುರು ಮಾಡಿದ್ದಾನೆ!

ಎಲ್ಲರಿಗೂ ಆವಾಜ್ ಹಾಕಲು ಶುರು ಮಾಡಿದ್ದಾನೆ!

ಆಗ ನಿದ್ರೆಗೆ ಜಾರಿದಂತೆ ನಟಿಸುತ್ತಿದ್ದ ಪೊಲೀಸ್‍ಗೆ ಸರಿಯಾಗಿ ಎಚ್ಚರವಾಗಿದೆ. ಅಷ್ಟರಲ್ಲಿ ತಾನು ಮಾಡುತ್ತಿದ್ದ ತಪ್ಪು ಬೇರೆಯವರಿಗೆ ತಿಳಿದಿದೆ ಎಂದು ತಿಳಿದು ಎದ್ದು ಹೊರಟಿದ್ದಾನೆ... ಜೊತೆಗೆ ಹೋಗುವಾಗ ತನ್ನ ಅಧಿಕಾರದ ಪೌರುಷದಲ್ಲಿ ಬಾ ಮಾಡಿಸುತ್ತೇನೆ ಎನ್ನುವ ಮಾತುಗಳನ್ನು ಆಡುತ್ತಾ ಅಲ್ಲಿಂದ ಜಾರಿಕೊಂಡಿದ್ದಾನೆ.

ಎಲ್ಲರಿಗೂ ಆವಾಜ್ ಹಾಕಲು ಶುರು ಮಾಡಿದ್ದಾನೆ!

ಎಲ್ಲರಿಗೂ ಆವಾಜ್ ಹಾಕಲು ಶುರು ಮಾಡಿದ್ದಾನೆ!

ದೇಶದೆಲ್ಲೆಡೆ ಮಹಿಳೆಯರಿಗೆ ಸೂಕ್ತ ಗೌರವ ಹಾಗೂ ಭದ್ರತೆ ನೀಡಬೇಕು ಎನ್ನುವ ಕೂಗು ನಡೆಯುತ್ತಿದ್ದರೆ ಇಲ್ಲಿ "ಬೇಲಿಯೇ ಎದ್ದು ಹೊಲ ಮೆಂದಂತೆ" ಎನ್ನುವ ಹಾಗೆ ಸಮಾಜದ ರಕ್ಷಣೆಗಾಗಿ ಕಾರ್ಯ ನಿರ್ವಹಿಸುತ್ತಿದ್ದ ಪೊಲೀಸ್ಅಧಿಕಾರಿಯೇ ಮಹಿಳೆಯ ಮೇಲೆ ಕೈ ಆಡಿಸುತ್ತಿದ್ದಾನೆ... ಇದೊಂದು ಅಚ್ಚರಿಯ ಸಂಗತಿ ಎನಿಸುತ್ತದೆ. ಇನ್ನೊಂದೆಡೆ ಮಹಿಳೆಯ ರಕ್ಷಣೆ ಎಂದರೆ ಅದೊಂದು ಕನಸಿನ ಮಾತಿರಬಹುದು ಎನ್ನುವ ಸಂಶಯ ಮೂಡುವುದು ಸುಳ್ಳಲ್ಲ.

ಎಲ್ಲರಿಗೂ ಆವಾಜ್ ಹಾಕಲು ಶುರು ಮಾಡಿದ್ದಾನೆ!

ಈ ವಿಡಿಯೋ ನೋಡಿದಾಗ ಉಂಟಾಗುವ ಇನ್ನೊಂದು ಬೇಸರದ ಸಂಗತಿ ಎಂದರೆ, ಪೊಲೀಸ್‍ನ ಕೈಗಳು ತನ್ನ ಬೆನ್ನಿಗೆ ತಾಗುತ್ತಿದ್ದರೂ ಆ ಮಹಿಳೆ ಸುಮ್ಮನೆ ಕುಳಿತಿದ್ದಾಳೆ ಎನ್ನುವುದು. ಇದಕ್ಕೆ ಕಾರಣ ಆತ ಪೊಲೀಸ್ಎನ್ನುವ ಭಯ ಆಕೆಗೆ ಆಗಿರಬಹುದು ಅಥವಾ ತಾನು ಯಾವ ರೀತಿಯ ಧೈರ್ಯ ತೋರಿಸಿ ಪೊಲೀಸ್ ವಿರುದ್ಧ ನಿಲ್ಲಬೇಕು ಎನ್ನುವ ಗೊಂದಲ ಕಾಡಿರಬಹುದು. ಜನ ಜಂಗುಳಿಯಿಂದ ಕೂಡಿರುವ ಸಾರ್ವಜನಿಕ ಪ್ರದೇಶದಲ್ಲಿ ಮಹಿಳೆಯರು ಸಾಕಷ್ಟು ಲೈಂಗಿಕ ಕಿರುಕುಳಕ್ಕೆ ಒಳಗಾಗುತ್ತಲೇ ಇರುತ್ತಾರೆ. ಅಂತಹ ಸಂದರ್ಭದಲ್ಲಿ ಬಹುತೇಕ ಮಹಿಳೆಯರು ಮುಜಗರ ಮತ್ತು ಭಯಕ್ಕೆ ಒಳಗಾಗುವುದರ ಮೂಲಕ ಸುಮ್ಮನಾಗಿರುತ್ತಾರೆ. ಮೌನ ಹೊಂದುವುದರ ಮೂಲಕ ತಮ್ಮ ನೋವನ್ನು ನುಂಗಿಕೊಳ್ಳುವ ತಪ್ಪನ್ನು ಮಾಡಬಾರದು.

ಎಲ್ಲರಿಗೂ ಆವಾಜ್ ಹಾಕಲು ಶುರು ಮಾಡಿದ್ದಾನೆ!

ಎಲ್ಲರಿಗೂ ಆವಾಜ್ ಹಾಕಲು ಶುರು ಮಾಡಿದ್ದಾನೆ!

ಒಬ್ಬ ವ್ಯಕ್ತಿಯಿಂದ ಅಹಿತಕರ ವರ್ತನೆ ಉಂಟಾಗುತ್ತಿದೆ ಅಥವಾ ಲೈಂಗಿಕ ಕಿರುಕುಳ ಉಂಟಾಗುತ್ತಿದೆ ಎಂದಾಕ್ಷಣ ಅಲ್ಲಿರುವ ಎಲ್ಲಾ ವ್ಯಕ್ತಿಗಳಿಗೂ ಹೇಳಬೇಕು. ಇಲ್ಲವೇ ಮೊದಲು ನೀವು ಅದಕ್ಕೆ ಸೂಕ್ತ ಪ್ರತಿಕ್ರಿಯೆಯನ್ನು ತಕ್ಷಣದಲ್ಲಿಯೇ ನೀಡಬೇಕು. ಯಾವುದೇ ಭಯಕ್ಕೆ ಒಳಗಾಗಬಾರದು. ಆಗಲೇ ಸಮಾಜದಲ್ಲಿ ಹೆಚ್ಚುವ ಕಾಮುಕರನ್ನು ನಿಯಂತ್ರಿಸಲು ಸಾಧ್ಯ. ಈ ವಿಡಿಯೋ ನೋಡಿದ ನಂತರ ನಿಮ್ಮ ಅನಿಸಿಕೆ ಏನು ಎನ್ನುವುದನ್ನು ನಮ್ಮೊಂದಿಗೆ ಹಂಚಿಕೊಳ್ಳಿ.

English summary

video of police molesting a woman at railway station is viral

A video of a policeman touching a woman inappropriately is going viral for all reasons! The man in the video seems to be waiting for the train like the rest of the passengers when he suddenly decides to touch the woman who is seated next to him. In the video, it is seen on how many times the man touches the woman's back.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more
X