Latest Updates
-
ಡೆಂಗ್ಯೂ ಜ್ವರದಿಂದ ಬೇಗ ಚೇತರಿಸಿಕೊಳ್ಳಬೇಕೇ? ನಿಮ್ಮ ಆಹಾರದಲ್ಲಿ ಇರಲಿ ಈ ಪೌಷ್ಟಿಕಾಂಶಗಳು! -
ಡೆಂಗ್ಯೂ ಜ್ವರದ ಬಳಿಕ ಸುಸ್ತು ಕಾಡುತ್ತಿದೆಯೇ? ಬೇಗ ಚೇತರಿಸಿಕೊಳ್ಳಲು ಈ ಆಹಾರಕ್ರಮ ಪಾಲಿಸಿ, ಮನೆಯಲ್ಲೇ ORS ಮಾಡಿ -
ಓಣಂ ಸದ್ಯದ ಹಬ್ಬದೂಟಕ್ಕೆ ಭಾರಿ ಬೇಡಿಕೆ: ಬೆಂಗಳೂರು-ಕೊಚ್ಚಿಯಲ್ಲಿ ಸ್ಲಾಟ್ಗಳು ಫುಲ್, ಈಗಲೇ ಬುಕ್ ಮಾಡಿ! -
ವರಮಹಾ ಲಕ್ಷ್ಮಿ ವ್ರತ 2026: ಆಗಸ್ಟ್ 21 ಅಥವಾ 28? ದಿನಾಂಕದ ಗೊಂದಲಕ್ಕೆ ಇಲ್ಲಿದೆ ಪರಿಹಾರ! -
ಕಂಟೆಂಟ್ ಕ್ರಿಯೇಟರ್ಗಳೇ ಗಮನಿಸಿ: ಫೋಟೊ ಶೂಟ್ ವೇಳೆ ನೋವು ಮರೆಯಾಗಲು ಈ 12 ನಿಮಿಷದ ವರ್ಕೌಟ್ ಸಾಕು! -
ಫೋಟೋಗ್ರಾಫರ್ಗಳೇ ಎಚ್ಚರ! ನೋವಿಲ್ಲದೆ ಅದ್ಭುತ ಫೋಟೋ ಕ್ಲಿಕ್ಕಿಸಲು ಈ 7 ನಿಮಿಷದ ಮೊಬಿಲಿಟಿ ರಿಸೆಟ್ ಟ್ರೈ ಮಾಡಿ -
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್!
ತರಬೇತುದಾರನ ಅಚಾತುರ್ಯದಿಂದ ಪ್ರಾಣ ಕಳೆದುಕೊಂಡ ಹುಡುಗಿ!
ಕಾಲೇಜು ದಿನಗಳಲ್ಲಿ ನಾವು ಡ್ರಿಲ್ ಮೊದಲಾದ ಕೌಶಲ್ಯ ತರಬೇತಿ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಆಪತ್ತಿನಿಂದ ತಪ್ಪಿಸಿಕೊಳ್ಳುವುದು ಹೇಗೆ ಎಂಬುದರ ಬಗ್ಗೆ ಶಿಕ್ಷಣವನ್ನು ಪಡೆದುಕೊಂಡಿರುತ್ತೇವೆ. ಈ ಸಮಯದಲ್ಲಿ ನಾವು ಈ ತರಬೇತಿ ಕಾರ್ಯಕ್ರಮಗಳಲ್ಲಿ ಇರುವಂತಹ ಸರಿ ತಪ್ಪು, ಅಪಾಯಗಳ ಕಡೆಗೆ ಗಮನ ಹರಿಸುವುದಿಲ್ಲ. ಏನೋ ಒಂದು ಹುರುಪಿನಿಂದ ಇದಕ್ಕೆ ಮುಂದಡಿ ಇಡುತ್ತೇವೆ. ಹೀಗೆಯೇ ತರಬೇತಿ ನಡೆಯುತ್ತಿದ್ದ ಸಮಯದಲ್ಲಿ ಕಾಲೇಜು ವಿದ್ಯಾರ್ಥಿನಿಯೊಬ್ಬಳು ಸೂಕ್ತ ಮುನ್ನೆಚ್ಚರಿಕೆಗಳು ಇಲ್ಲದೇ ಇದ್ದುದರಿಂದ ಸಾವನ್ನಪ್ಪಿರುವ ಘಟನೆ ವರದಿಯಾಗಿದೆ.

ಹಾರುವ ಸಮಯದಲ್ಲಿ ಈಕೆ ಕಂಗೆಟ್ಟಿದ್ದರು ಮತ್ತು ಕಾಲುಗಳು ತಣ್ಣಗಾಗಿದ್ದವು ಅಂತೆಯೇ ನಿರ್ದೇಶಕರ ಸೂಚನೆಗಳನ್ನು ಪಾಲಿಸುವ ಸಮಯದಲ್ಲಿ ಆಕೆ ಹೆದರಿದರು. ಆದ್ದರಿಂದಲೇ ಈ ಘಟನೆ ಸಂಭವಿಸಿದೆ. ಎರಡನೆಯ ಮಹಡಿಯಿಂದ ಜಿಗಿಯುವ ಸಮಯದಲ್ಲಿ ಆಕೆ ಹೆದರಿದ್ದೇ ಆಕೆಯ ಪ್ರಾಣಕಳೆದುಕೊಳ್ಳಲು ಕಾರಣವಾಯಿತು. ಆಕೆ ಧೈರ್ಯವಾಗಿದ್ದಾಳೆ ಎಂದು ತಿಳಿದ ತರಬೇತುದಾರ ಆಕೆಯನ್ನು ಕೆಳಕ್ಕೆ ನೂಕಿದ್ದರು, ಆದರೆ ಆದದ್ದೇ ಬೇರೆ. ಕೆಳಕ್ಕೆ ಬೀಳುವ ಸಮಯದಲ್ಲಿ ತಲೆ ನೆಲಕ್ಕೆ ಬಡಿದು ಆಕೆಯ ಪ್ರಾಣ ಪಕ್ಷಿ ಹಾರಿ ಹೋಯಿತು.
19 ರ ಹರೆಯದ ಲೋಕೇಶ್ವರಿ ಹೆಸರಿನ ಹೆಣ್ಣು ಮಗಳೇ ಮೃತಳಾದ ದುರ್ದೈವಿಯಾಗಿದ್ದಾರೆ. ಕೊಯಂಬತ್ತೂರು ಕಾಲೇಜಿನಲ್ಲಿ ರಕ್ಷಣಾ ತರಬೇತಿಯನ್ನು ನಡೆಸುವ ಸಮಯದಲ್ಲಿ ಈ ಅನಾಹುತ ನಡೆದಿದ್ದು ಯುವತಿ ಪ್ರಾಣವನ್ನು ಕಳೆದುಕೊಂಡಿದ್ದಾರೆ. ತರಬೇತಿ ಸಮಯದಲ್ಲಿ ತರಬೇತುದಾರ ಆಕೆಯನ್ನು ಎರಡನೇ ಮಹಡಿಯಿಂದ ತಳ್ಳಿದ್ದಾರೆ ಮತ್ತು ಭಯಭೀತಗೊಂಡ ಆಕೆ ಹೆದರಿ ಕೆಳಕ್ಕೆ ಜಿಗಿದಿದ್ದು ಪ್ರಾಣ ಕಳೆದುಕೊಂಡಿದ್ದಾರೆ. ಇದನ್ನು ಆದಷ್ಟು ಜಾಲತಾಣಗಳಲ್ಲಿ ಹಂಚಿಕೊಳ್ಳಿ ಇದರಿಂದ ಆ ತರಬೇತುದಾರನನ್ನು ಹಿಡಿಯುವಂತಾಗಲಿ.
ಆಕೆಯನ್ನು ಕೂಡಲೇ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತಾದರೂ ಆಕೆ ಮೆದುಳು ಸಾವಿನಿಂದ ಮರಣವನ್ನು ಹೊಂದಿದ್ದಾರೆ. ಇನ್ನು ಮುಂದೆ ಇಂತಹ ಚಟುವಟಿಕೆಗಳಲ್ಲಿ ನೀವು ಸ್ವಯಂಸೇವಕರಾಗಿ ಪಾಲ್ಗೊಳ್ಳುತ್ತಿದ್ದೀರಿ ಎಂದಾದಲ್ಲಿ ಭದ್ರತಾ ವ್ಯವಸ್ಥೆಯನ್ನು ಚೆನ್ನಾಗಿ ಪರಿಶೀಲಿಸಿಕೊಳ್ಳಿ.



Click it and Unblock the Notifications