For Quick Alerts
ALLOW NOTIFICATIONS  
For Daily Alerts

ಹಾರುವ ಸ್ಕೂಟರ್ ಕಂಡುಹಿಡಿದ ಚೀನಾದ ವ್ಯಕ್ತಿ! ವಿಡಿಯೋ ನೋಡಿ

By Hemanth
|

ಚೀನಾದವರು ಯಂತ್ರ, ಆಟಿಕೆಗಳ ನಿರ್ಮಾಣದಲ್ಲಿ ನಿಪುಣರು. ತುಂಬಾ ಕಡಿಮೆ ಖರ್ಚಿನಲ್ಲಿ ಇದನ್ನು ತಯಾರಿಸಿ, ವಿಶ್ವಮಾರುಕಟ್ಟೆಯಲ್ಲಿ ಪ್ರಾಬಲ್ಯ ಮೆರೆದಿದ್ದಾರೆ. ಅದೇ ಈಗ ಚೀನಾದ ವ್ಯಕ್ತಿಯೊಬ್ಬ ನಿರ್ಮಿಸಿರುವಂತಹ ಹಾರುವ ಯಂತ್ರದ ವಿಡಿಯೋ ಈಗ ವೈರಲ್ ಆಗುತ್ತಿದೆ. ಝಾವೋ ಡೆಲಿ ಎಂಬಾತ ತಯಾರಿಸಿರುವ ಈ ಯಂತ್ರವನ್ನು ಹಾರುವ ಸ್ಕೂಟರ್' ಎಂದು ಕರೆಯಲಾಗುತ್ತಿದೆ. ಈತ ಬಾಲ್ಯದಿಂದಲೇ ಇಂತಹ ಒಂದು ಯಂತ್ರವನ್ನು ಕಂಡುಹಿಡಿಬೇಕೆಂದು ಕನಸು ಕಂಡಿದ್ದ. ಈಗ ಈತನ ವಯಸ್ಸು 40 ಆಗಿದ್ದರೂ ಹಾರುವ ಸ್ಕೂಟರ್ ನ್ನು ಯಶಸ್ವಿಯಾಗಿ ನಿರ್ಮಿಸಿ, ಪರೀಕ್ಷಿಸಿದ್ದಾನೆ.

ಚೀನಾದ ಗುವಾಂಗ್ಡಾಂಗ್ ಪ್ರಾಂತ್ಯದ ಡೊಂಗ್ಗುವಾನ್ ಸಿಟಿಯಲ್ಲಿ ಝಾವೋ ಡೆಲಿ ಸ್ವತಃ ಹಾರುವ ಯಂತ್ರವನ್ನು ಪರೀಕ್ಷೆ ಮಾಡುತ್ತಿರುವುದನ್ನು ಚಿತ್ರೀಕರಿಸಲಾಗಿದೆ. ಹಾರುವ ಸ್ಕೂಟರ್ ನ ಸಾಮರ್ಥ್ಯವನ್ನು ಆತ ತೋರಿಸಲು ಬಯಸಿದ್ದ ಮತ್ತು ಇದರಲ್ಲಿ ಒಬ್ಬ ವ್ಯಕ್ತಿ ಕುಳಿತುಕೊಳ್ಳಬಹುದು ಮತ್ತು ಇದು ಒಂದು ರೀತಿಯಲ್ಲಿ ಡ್ರೋನ್ ನಂತೆ ಕಾಣಿಸುವುದು. ಝಾವೋ ಡೆಲಿ ಪ್ರಕಾರ ಈ ಹಾರುವ ಯಂತ್ರವು 45 ಕಿ.ಮೀ. ವೇಗದಲ್ಲಿ ಸುಮಾರು 220 ಪೌಂಡ್ ಭಾರ ಹೊರಬಲ್ಲದು. ಹಾರುವ ಸ್ಕೂಟರ್ ನ ಯಂತ್ರಗಳಲ್ಲಿ ಕೇಂದ್ರದಲ್ಲಿರಿಸಲಾಗಿದೆ ಮತ್ತು ಇದರಿಂದ ಇದು ಮತ್ತಷ್ಟು ಲಘುವಾಗಿದೆ.'

First Flying Scooter

ಈ ಯಂತ್ರಕ್ಕೆ ಜಿನ್ ಡೋ ಯುನ್'ಎಂದು ಹೆಸರಿಡಲಾಗಿದೆ. ಚೀನಾದ ಸೂಪರ್ ಹೀರೊ ಮಂಕಿಕಿಂಗ್ ನ ಸವಾರಿಯ ಒಂದು ಮೋಡ'ಎಂದರ್ಥ. ಸುಮಾರು ಒಂದು ಸಾವಿರಕ್ಕೂ ಹೆಚ್ಚು ಸಲ ಈ ಯಂತ್ರವನ್ನು ಪರೀಕ್ಷಿಸಿ ವಿಫಲವಾದ ಬಳಿಕ ಝಾವೋ ಡೆಲಿಗೆ ಅಂತಿಮವಾಗಿ ಯಶಸ್ಸು ಸಿಕ್ಕಿದೆ. ಯಲ್ಲೋ ರಿವರ್ ನ ಮೇಲಿನಿಂದ ತನ್ನ ಹಾರು ಸ್ಕೂಟರ್ ನ್ನು ಚಲಾಯಿಸಲು ಝಾವೋ ಡೆಲಿ ಇಚ್ಛಿಸಿದ್ದಾನೆ. ಆತನ ಸಾಧನೆಯನ್ನು ನಿಜವಾಗಿಯೂ ಒಪ್ಪಿಕೊಳ್ಳಬೇಕಲ್ಲವೇ? ಇದರ ಬಗ್ಗೆ ನಿಮ್ಮ ಅಭಿಪ್ರಾಯವನ್ನು ಕಮೆಂಟ್ ಬಾಕ್ಸ್ ಗೆ ಹಾಕಿ.

English summary

This Is China’s 'First Flying Scooter'

A video of a Chinese inventor showing off his homemade flying machine is going viral. He has dubbed it the world's first "flying scooter." Zhao Deli was born in the countryside, and local media said he had harboured dreams of inventing the flying machine since childhood. Even though he is a 40-year-old man, he tasted success by creating the first 'flying scooter.' Deli was born in the countryside, and local media said he had harboured dreams of inventing the flying machine since childhood. Even though he is a 40-year-old man, he tasted success by creating the first 'flying scooter.'
Story first published: Thursday, August 9, 2018, 15:04 [IST]
X
Desktop Bottom Promotion