For Quick Alerts
ALLOW NOTIFICATIONS  
For Daily Alerts

ಮಹಿಳೆಯರೇ, ಜನನಾಂಗಕ್ಕಿರುವ ಈ ಒಂಬತ್ತು ಸಾಮರ್ಥ್ಯಗಳ ಬಗ್ಗೆ ನಿಮಗೆ ಗೊತ್ತೇ?

|

ಮಹಿಳಾ ಜನನಾಂಗ ಒಂದು ಪ್ರಬಲ, ಬಲು ಪ್ರಬಲವಾದ ಅಂಗವಾಗಿದೆ. ಇದಕ್ಕೆ ಹಲವಾರು ಸಾಮರ್ಥಗಳಿವೆ ಹಾಗೂ ಬೆರಗುಗೊಳಿಸುವ ಕಾರ್ಯಗಳನ್ನು ನಿರ್ವಹಿಸಬಲ್ಲುದು. ಈ ಸಾಮರ್ಥ್ಯಗಳಲ್ಲಿ ಹೆಚ್ಚಿನವುಗಳ ಬಗ್ಗೆ ನಿಮಗೆ ತಿಳಿದಿರಲಿಕ್ಕಿಲ್ಲ.

ಉದಾಹರಣೆಗೆ, ಪ್ರವೇಶಪಡೆದ ಶಿಶ್ನವನ್ನು ಹಿಡಿದಿಟ್ಟುಕೊಳ್ಳುವಷ್ಟು ಇದರ ಸ್ನಾಯುಗಳು ಬಲಯುತವಾಗಿವೆ ಎಂದು ನಿಮಗೆ ಗೊತ್ತಿತ್ತೇ? ಇಂತಹ ಇನ್ನೂ ಹಲವಾರು ಚಕಿತಗೊಳಿಸುವ ಸಂಗತಿಗಳಲ್ಲಿ ಪ್ರಮುಖವದವು ಇಲ್ಲಿವೆ:

ನಿಮ್ಮ ಯೋನಿ ತನ್ನನ್ನು ತಾನೇ ಸ್ವಚ್ಛಗೊಳಿಸುವ ಗುಣ ಹೊಂದಿದೆ!

ನಿಮ್ಮ ಯೋನಿ ತನ್ನನ್ನು ತಾನೇ ಸ್ವಚ್ಛಗೊಳಿಸುವ ಗುಣ ಹೊಂದಿದೆ!

ಮುಂದಿನ ಬಾರಿ ನಿಮ್ಮ ಜನನಾಂಗದಿಂದ ಒಸರುವ ಬಿಳಿಯಾದ ದ್ರವವನ್ನು ಕಂಡರೆ ಗಾಬರಿಯಾಗದಿರಿ. ಇದು ಅತ್ಯಂತ ಆರೋಗ್ಯಕರ ಹಾಗೂ ನೈಸರ್ಗಿಕ ವಿಧಾನವಾಗಿದ್ದು ತನ್ನನ್ನು ತಾನೇ ಸ್ವಚ್ಛಗೊಳಿಸುವ ಕ್ರಮವೇ ಆಗಿದೆ. ಜನನಾಂಗವನ್ನು ಸ್ವಚ್ಛಗೊಳಿಸಲು ಹಲವಾರು ಪ್ರಸಾದನಗಳು ಲಭ್ಯವಿದ್ದರೂ ಇವು ಹೊರಭಾಗವನ್ನು ಸ್ವಚ್ಛಗೊಳಿಸಲು ಹಾಗೂ ನೈರ್ಮಲ್ಯವನ್ನು ಕಾಪಾಡಿಕೊಳ್ಳಲು ನೆರವಾಗುತ್ತವೆಯೇ ಹೊರತು ಒಳಭಾಗವನ್ನು ಸ್ವಚ್ಛಗೊಳಿಸಲು ದೇಹದಲ್ಲಿಯೇ ಅಂತರ್ಗತ ಸಾಮರ್ಥ್ಯವೊಂದಿದೆ. ಇದೇ ಬಿಳಿಸ್ರಾವ. ಈ ಸ್ರಾವದ ಜೊತೆಗೇ ಜನನಾಂಗದ ಒಳಭಾಗದಲ್ಲಿದ್ದ ಬ್ಯಾಕ್ಟೀರಿಯಾಗಳನ್ನು ನಿವಾರಿಸುತ್ತದೆ ಹಾಗೂ ರೋಕಕಾರಕ ಕ್ರಿಮಿಗಳು ಈ ತೇವಭಾಗದ ಮೂಲಕ ಗರ್ಭಾಶಯವನ್ನು ಪ್ರವೇಶಿಸುವುದನ್ನು ತಡೆಯುತ್ತದೆ.

ಶಿಶ್ನವನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ

ಶಿಶ್ನವನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ

ಯೋನಿಯ ಸ್ನಾಯುಗಳು ಇಷ್ಟೊಂದು ಬಲಯುತವಾಗಿವೆ ಎಂದರೆ ತನ್ನಲ್ಲಿ ಪ್ರವೇಶ ಪಡೆದ ಶಿಶ್ನವನ್ನು ಇದು ಹೊರತೆಗೆಯಲು ಸಾಧ್ಯವಾಗದಷ್ಟು ಗಟ್ಟಿಯಾಗಿ ಹಿಡಿದಿಟ್ಟುಕೊಳ್ಳಬಲ್ಲುದು. ಹೌದು, ಈ ಬಲಯುತ ಸ್ನಾಯುಗಳು ಐಚ್ಛಿಕ ನಿಯಂತ್ರಣ ಹೊಂದಿದ್ದು ಮಹಿಳೆ ಬಯಸಿದರೆ ಇವುಗಳ ಮೇಲೆ ಪೂರ್ಣವಾದ ಬಲನೀಡಿ ಶಿಶ್ನದ ಮೇಲೆ ಗಟ್ಟಿಯಾದ ಹಿಡಿತ ಸಾಧಿಸಬಹುದು.

Most Read: ಮಹಿಳೆಯರಿಗೆ ಕಾಡುವ ಯೋನಿ ನೋವಿಗೆ ಐದು ಅಚ್ಚರಿಯ ಕಾರಣಗಳು

ಶಿಶ್ನದಂತೆಯೇ ಯೋನಿಯೂ ಉದ್ರೇಕಗೊಳ್ಳುತ್ತದೆ

ಶಿಶ್ನದಂತೆಯೇ ಯೋನಿಯೂ ಉದ್ರೇಕಗೊಳ್ಳುತ್ತದೆ

ಉದ್ರೇಕಗೊಂಡ ಪುರುಷನ ಜನನಾಂಗ ಪಡೆಯುವ ನಿಮಿರುತನದಂತೆಯೇ ಮಹಿಳೆಯರೂ ಉದ್ರೇಕಿತರಾದಾಗ ಯೋನಿಯಲ್ಲಿರುವ ಚಂದ್ರನಾಡಿಯೂ ಉಬ್ಬುತ್ತದೆ. ವ್ಯತ್ಯಾಸವೆಂದರೆ ಪುರುಷರು ಶೀಘ್ರವೇ ಉದ್ರೇಕಗೊಂಡರೆ ಮಹಿಳೆಯರು ಪೂರ್ಣವಾಗಿ ಉದ್ರೇಕಗೊಳ್ಳಲು ಕೊಂಚ ಹೆಚ್ಚು ಸಮಯ ತೆಗೆದುಕೊಳ್ಳುತ್ತಾರೆ. ಉಳಿದ ಸಮಯದಲ್ಲಿ ಚಿಕ್ಕದಾಗಿರುವ ಚಂದ್ರನಾಡಿ ಉದ್ರೇಕಿತ ಸಮಯದಲ್ಲಿ ತನ್ನ ಗಾತ್ರವನ್ನು ಹೆಚ್ಚಿಸಿಕೊಳ್ಳುವುದು ಮಾತ್ರವಲ್ಲ, ಹೆಚ್ಚು ಸೂಕ್ಷ್ಮಸಂವೇದಿಯೂ ಆಗುತ್ತದೆ.

ವ್ಯಾಮಾಯದ ಸಮಯದಲ್ಲಿಯೂ ಕಾಮಪರಾಕಾಷ್ಠೆಯನ್ನು ಪಡೆಯಬಹುದು

ವ್ಯಾಮಾಯದ ಸಮಯದಲ್ಲಿಯೂ ಕಾಮಪರಾಕಾಷ್ಠೆಯನ್ನು ಪಡೆಯಬಹುದು

ವಿಚಿತ್ರ ಅಂದೆನ್ನಿಸಿದರೂ ಇದು ನಿಜವಾಗಿದ್ದು ಇದನ್ನು ಅನುಭವಿಸಿದ ಮಹಿಳೆಯರು ಮುಜುಗರ ಅನುಭವಿಸಿದ್ದಾರೆ. ಈ ಪರಿಯ ಕಾಮಪರಾಕಾಷ್ಠೆಗೆ 'ವ್ಯಾಯಾಮ-ಪ್ರೇರಿತ-ಪರಾಕಾಷ್ಠೆ' (exercise-induced orgasm) ಎಂದು ಕರೆಯುತ್ತಾರೆ. ಸಾಮಾನ್ಯವಾಗಿ ಈ ಸ್ಥಿತಿ ಒಂದು ನಿರ್ದಿಷ್ಟ ಗುರಿಯನ್ನು ಹಿಂದಿರುವ ಕ್ರೀಡೆಗಳಾದ ಸೈಕ್ಲಿಂಗ್, ಸ್ಪಿನ್ನಿಂಗ್ (ಹಗ್ಗ ಜಿಗಿದಾಟ), ಭಾರ ಎತ್ತುವಿಕೆ ಹಾಗೂ ಕಂಭ/ಹಗ್ಗಗಳನ್ನು ಏರುವ ವ್ಯಾಯಾಮಗಳಲ್ಲಿ ಎದುರಾಗುತ್ತದೆ.

ಯೋನಿ ತನ್ನ ಬಣ್ಣ ಬದಲಾಯಿಸಿಕೊಳ್ಳಬಹುದು

ಯೋನಿ ತನ್ನ ಬಣ್ಣ ಬದಲಾಯಿಸಿಕೊಳ್ಳಬಹುದು

ಈ ಮಾಹಿತಿ ನಂಬಲಿಕ್ಕೆ ಕಷ್ಟವಾಗಿದ್ದರೂ ಕೆಲವಾರು ಅಂಶಗಳು ಈ ಬಣ್ಣದ ಬದಲಾವಣೆಗೆ ಕಾರಣವಾಗುತ್ತವೆ. ವಯಸ್ಸು ಹೆಚ್ಚುತ್ತಿದ್ದಂತೆಯೇ ಯೋನಿಯ ಬಣ್ಣ ತಿಳಿಯಾಗುತ್ತಾ ಹೋಗುತ್ತದೆ. ಆದರೆ ಉದ್ರೇಕಿತ ಸಮಯದಲ್ಲಿ ರಕ್ತಸಂಚಾರ ಹೆಚ್ಚಾದರೆ ಈ ಬಣ್ಣ ಗಾಢವಾಗುತ್ತದೆ.

Most Read: ಗರ್ಭಾವಸ್ಥೆಯ ಸಂದರ್ಭದಲ್ಲಿ ಯೋನಿ ವಿಸರ್ಜನೆ ಬಗ್ಗೆ ಕೇಳಿದಿರಾ?

ನಿಮ್ಮ ಯೋನಿ ದೊಡ್ಡದಾಗುವ ಕ್ಷಮತೆ ಹೊಂದಿದೆ

ನಿಮ್ಮ ಯೋನಿ ದೊಡ್ಡದಾಗುವ ಕ್ಷಮತೆ ಹೊಂದಿದೆ

ಉದ್ರೇಕಗೊಂಡ ಸಮಯದಲ್ಲಿ ಯೋನಿಯ ಭಾಗಕ್ಕೆ ಹೆಚ್ಚಿನ ರಕ್ತಸಂಚಾರವಾಗುವ ಕಾರಣ ರಕ್ತನಾಳಗಳು ಉಬ್ಬಿಕೊಳ್ಳುತ್ತವೆ. ತನ್ಮೂಲಕ ಯೋನಿಯ ಮೇಲ್ಭಾಗ (genitopelvic area) ಉಬ್ಬಿಕೊಳ್ಳುತ್ತದೆ. ಇದಕ್ಕೆ vaginal tenting ಎಂದು ಕರೆಯುತ್ತಾರೆ. ಹಾಗಾಗಿ ಉದ್ರೇಕಗೊಂಡ ಸಮಯದಲ್ಲಿ ನಿಮ್ಮ ಯೋನಿ ಇತರ ಸಮಯಕ್ಕಿಂತ ಗಾತ್ರದಲ್ಲಿ ದೊಡ್ಡದಾಗಿರುತ್ತದೆ.

ನಿಮ್ಮ ಯೋನಿ ತನ್ನನ್ನು ತಾನೇ ರಕ್ಷಿಸಿಕೊಳ್ಳುವ ಕ್ಷಮತೆ ಪಡೆದಿದೆ

ನಿಮ್ಮ ಯೋನಿ ತನ್ನನ್ನು ತಾನೇ ರಕ್ಷಿಸಿಕೊಳ್ಳುವ ಕ್ಷಮತೆ ಪಡೆದಿದೆ

ಜನನಾಂಗ ಹಾಗೂ ಗರ್ಭಾಶಯದ ನಡುವಣ ಕೊಳವೆಯೇ ಯೋನಿಯಾಗಿದ್ದು ಇವುಗಳ ನಡುವೆ ಸಂಪರ್ಕ ಒದಗಿಸುತ್ತದೆ. ಒಂದು ವೇಳೆ ಜನನಾಂಗದೊಳಗೆ ತೂರಿಸಿಕೊಳ್ಳುವ ಸಾಧನ, ಮಾಸಿಕ ಸ್ರಾವ ಸಂಗ್ರಹಿಸುವ ಕಪ್ ಅಥವಾ ಕಾಂಡಂ ಮೊದಲಾದವು ಯೋನಿಯ ಒಳಭಾಗದಲ್ಲಿ ಸಿಲುಕಿಕೊಂಡರೆ ಚಿಂತಿಸದಿರಿ, ಗರ್ಭಕಂಠ ಇವು ಇನ್ನಷ್ಟು ಒಳತೂರದಂತೆ ತಡೆಯುತ್ತದೆ ಹಾಗೂ ಇವುಗಳಿಂದ ಯಾವುದೇ ಹಾನಿಯಾಗದಂತೆ ತನ್ನನ್ನು ತಾನೇ ರಕ್ಷಿಸಿಕೊಳ್ಳುತ್ತದೆ.

Most Read: ಯೋನಿಯಲ್ಲಿ ತುರಿಕೆ-ಇಲ್ಲಿದೆ ನೋಡಿ ಸರಳ ಮನೆಮದ್ದುಗಳು

ಯೋನಿಯೂ ತನ್ನ ತೊಂದರೆಗಳನ್ನು ಹೇಳಿಕೊಳ್ಳುತ್ತದೆ

ಯೋನಿಯೂ ತನ್ನ ತೊಂದರೆಗಳನ್ನು ಹೇಳಿಕೊಳ್ಳುತ್ತದೆ

ನಮ್ಮ ದೇಹದ ಅಂಗಗಳಿಗೆ ಎದುರಾಗುವ ತೊಂದರೆಗಳನ್ನು ನೋವಿನ ಮೂಲಕ ಹೇಳಿಕೊಳ್ಳುತ್ತವೆ. ಅಂತೆಯೇ ಯೋನಿ ಸಹಾ. ತನಗೇನಾದರೂ ತೊಂದರೆಯಾದರೆ ಇದು ನೋವು, ಉರಿ ಅಥವಾ ಸಂವೇದನೆಯ ಮೂಲಕ ಹೇಳಿಕೊಳ್ಳುತ್ತದೆ. ತಕ್ಷಣವೇ ತಜ್ಞರ ಸಲಹೆ ಪಡೆಯುವುದು ಅವಶ್ಯ.

ನಾಲ್ಕು ಬಗೆಯ ಪರಾಕಾಷ್ಠೆಯಲ್ಲಿ ಸಂಭೋಗ ಪರಾಕಾಷ್ಠೆಯೂ ಒಂದು ಮಾತ್ರ

ನಾಲ್ಕು ಬಗೆಯ ಪರಾಕಾಷ್ಠೆಯಲ್ಲಿ ಸಂಭೋಗ ಪರಾಕಾಷ್ಠೆಯೂ ಒಂದು ಮಾತ್ರ

ಕಾಮಪರಾಕಾಷ್ಠೆಯನ್ನು ನಾಲ್ಕು ಬಗೆಯಲ್ಲಿ ಪಡೆಯಬಹುದಾಗಿದ್ದು ಶಿಶ್ನ ಯೋನಿ ಪ್ರವೇಶಿದ ಪರಿಣಾಮವಾಗಿ ಪಡೆಯುವ ಪರಾಕಾಷ್ಠೆ ಒಂದು ಬಗೆಯದ್ದಾಗಿದೆ. ಈ ಪರಾಕಾಷ್ಠೆಗೆ ಚಂದ್ರನಾಡಿಯ ಸಂವೇದನೆ ಇಲ್ಲದೇ ಇರಬಹುದು ಅಥವಾ ತೀರಾ ಕಡಿಮೆ ಇರಬಹುದು.

English summary

these 9 things you did not know your vagina could do!

Vagina is a powerful, powerful thing. It can take some serious pounding and do some astounding things, which you sure are not aware of. Did you know it could trap a penis? In all likelihood, no. Below is a list of things that you probably don't know your vagina can do.
Story first published: Monday, November 19, 2018, 16:49 [IST]
X
Desktop Bottom Promotion