Just In
Don't Miss
- Finance
ತಿಂಗಳಲ್ಲಿ ಮೊದಲ ಬಾರಿಗೆ ಪೆಟ್ರೋಲ್ ಬೆಲೆಯಲ್ಲಿ ಇಳಿಕೆ
- Movies
ಬಿಗ್ ಬಾಸ್ ವೇದಿಕೆಯಲ್ಲಿ ಕಿಚ್ಚ ಸುದೀಪ್ ಜೊತೆ ಸಲ್ಮಾನ್ ಖಾನ್!
- News
ತೆಲಂಗಾಣ ಎನ್ಕೌಂಟರ್ ಬಗ್ಗೆ ಸುಪ್ರೀಂಕೋರ್ಟ್ ಸಿಜೆಐ ಹೇಳಿದ್ದೇನು?
- Automobiles
ಗ್ರಾಹಕರ ಬೇಡಿಕೆಯೆಂತೆ 6, 7, 8 ಸೀಟರ್ ಸೌಲಭ್ಯದೊಂದಿಗೆ ಬರಲಿದೆ ಕಿಯಾ ಕಾರ್ನಿವಾಲ್
- Sports
ಭಾರತ vs ವಿಂಡೀಸ್: ಟೀಮ್ ಇಂಡಿಯಾದ ಮೇಲೆ ಗುಡುಗಿದ ಯುವರಾಜ!
- Technology
ಫೋಕಸ್ ಮೂಡ್ ಆಯ್ಕೆ ಪರಿಚಯಿಸಿದ ಗೂಗಲ್!
- Education
ರೆಪ್ಕೊ ಬ್ಯಾಂಕ್ ನಲ್ಲಿ 15 ಹುದ್ದೆಗಳ ನೇಮಕಾತಿ
- Travel
ಹಿಮಾಚಲ ಪ್ರದೇಶದ ಈ ಜಲಪಾತಗಳು ನಿಮ್ಮನ್ನು ಬೇರೊಂದು ರಮ್ಯಲೋಕಕ್ಕೆ ಕೊಂಡೊಯ್ಯುವುದು ಖಂಡಿತ
ಈ ಐದು ರಾಶಿಯವರು ಒಳ್ಳೆಯ ತಮಾಷೆಯ ಸ್ವಭಾವ ಹೊಂದಿರುವ ವ್ಯಕ್ತಿಗಳು!
ನಿಮ್ಮ ಸ್ನೇಹಿತರ ಬಳಗದಲ್ಲಿ ಅಥವಾ ಕುಟುಂಬದಲ್ಲಿ ಯಾರಾದರೂ ನಿಮ್ಮನ್ನು ಯಾವಾಗಲೂ ನಗುವಂತೆ ಮಾಡುತ್ತಲಿದ್ದರೆ, ಆಗ ಅವರು ನಮಗೆ ತುಂಬಾ ಮೆಚ್ಚುಗೆಯವರಾಗುವರು. ತಮಾಷೆಯ ಸ್ವಭಾವವು ಎಲ್ಲರಿಗೂ ಬರುವುದಿಲ್ಲ.
ಆದರೆ ಪ್ರತಿಯೊಬ್ಬರು ಇಚ್ಛಿಸುವಂತಹ ವ್ಯಕ್ತಿಯ ವ್ಯಕ್ತಿತ್ವಕ್ಕೆ ಇದು ಒಂದು ರೀತಿಯ ಕಲೆ ನೀಡುವುದು. ರಾಶಿ ಚಕ್ರಗಳಿಗೆ ಅನುಗುಣವಾಗಿ ಕೆಲವರಲ್ಲಿ ತಮಾಷೆಯ ಗುಣವು ಬಂದಿರುವುದು ಎಂದು ಜ್ಯೋತಿಷಿಗಳು ಹೇಳುವರು. ಒಳ್ಳೆಯ ತಮಾಷೆಯ ಗುಣ ಹೊಂದಿರುವ ರಾಶಿ ಚಕ್ರಗಳ ಬಗ್ಗೆ ನಾವು ಈ ಲೇಖನದಲ್ಲಿ ನಿಮಗೆ ತಿಳಿಸಿಕೊಡಲಿದ್ದೇವೆ.

1.ಮೇಷ: ಮಾ.21- ಎ.20
ಮೇಷ ರಾಶಿಯವರು ಮಾಡುವಂತಹ ಕೆಲವೊಂದು ತಮಾಷೆಯು ಎಲ್ಲರಿಗೂ ಅರ್ಥವಾಗಲ್ಲ. ಇವರು ಬೇರೆಯವರನ್ನು ಹೀಯಾಳಿಸದೆ ಒಳ್ಳೆಯ ತಮಾಷೆ ಮಾಡುವರು. ಮೇಷ ರಾಶಿಯವರು ಎಲ್ಲರನ್ನು ತಮಾಷೆ ಮಾಡುವರು. ಇವರ ಶಬ್ಧಗಳು ಮಾತ್ರವಲ್ಲ, ಅದರ ಟೈಮಿಂಗ್ ಕೂಡ ಸರಿಯಾಗಿರುವುದು. ತುಂಬಾ ಗಂಭೀರ ಸ್ವಭಾವದ ವ್ಯಕ್ತಿಗಳು ಕೂಡ ಇವರ ತಮಾಷೆಗೆ ನಗಬಹುದು.

2.ವೃಷಭ: ಎ.21-ಮೇ 21
ವೃಷಭ ರಾಶಿಯವರು ಸ್ವಲ್ಪ ಮಟ್ಟಿಗೆ ಗಂಭೀರ ಸ್ವಭಾವದವರು. ಆದರೆ ಇವರೊಳಗೆ ತಮಾಷೆಯ ಸಾಗರವೇ ಅಡಗಿರುವುದು. ಇವರು ಯಾರನ್ನಾದರೂ ಹೀಯಾಳಿಸಲು ಯಾವುದೇ ಗಡಿದಾಟಬಲ್ಲರು. ಇವರು ನಗುವರು ಮತ್ತು ಬೇರೆಯವರನ್ನು ಕೂಡ ನಗಿಸುವರು. ಆದರೆ ಕೆಲವೊಂದು ಸಲ ಇವರು ತುಂಬಾ ಒಳ್ಳೆಯ ಜೋಕ್ ಹೇಳಿದರೂ ಅದಕ್ಕೆ ಅವರೇ ನಗುವುದಿಲ್ಲ ಎನ್ನುವುದು ದೊಡ್ಡ ವಿಚಿತ್ರ.

3.ಮಿಥುನ: ಮೇ 22-ಜೂನ್ 21
ಮಿಥುನ ರಾಶಿಯವರು ಒಳ್ಳೆಯ ಜೋಕ್ ಸಿಡಿಬಲ್ಲರು. ಆದರೆ ಇವರು ಗುರಿಯಾಗಿರಿಸಿಕೊಂಡಿರುವ ವ್ಯಕ್ತಿಯ ಮುಂದೆ ಇದನ್ನು ಹೇಳುವುದಿಲ್ಲ. ಇವರು ಆಕ್ರಮಣಕಾರಿಯಲ್ಲವಾದರೂ ತಮ್ಮ ಜೋಕ್ ನಿಂದಾಗಿ ಜಗಳವಾಗುವುದು ಬೇಡವೆಂದು ಬಯಸುವರು. ಮಿಥುನ ರಾಶಿಯವರು ಜೋಕ್ ತುಂಬಾ ಸರಳ ಮತ್ತು ನೇರವಾಗಿ ಅರ್ಥ ಮಾಡಿಕೊಳ್ಳಬಹುದಾಗಿದೆ. ಇದರಿಂದ ಮಗು ಕೂಡ ಇವರ ಜೋಕ್ ಅರ್ಥ ಮಾಡಿಕೊಳ್ಳಬಹುದು.

4.ಸಿಂಹ: ಜುಲೈ23-ಆ.21
ಸಿಂಹ ರಾಶಿಯವರು ತುಂಬಾ ಸಂತೋಷ ಹಾಗೂ ಸಂಭ್ರಮದಿಂದ ಇರುವವರು. ಇವರು ಯಾವಾಗಲೂ ಪಾರ್ಟಿಯ ಜೀವವಾಗಿರುವರು. ಯಾಕೆಂದರೆ ಇವರಲ್ಲಿ ಇರುವಂತಹ ತಮಾಷೆಯ ಗುಣವು ಪ್ರತಿಯೊಬ್ಬರ ಹೃದಯದಲ್ಲಿ ಇವರಿಗೊಂದು ಸ್ಥಾನ ಮಾಡಿಕೊಡುವುದು. ಇವರು ಜೋಕ್ ಸಿಡಿಸಿದಾಗ ಇದರ ಟೈಮಿಂಗ್ ಕೂಡ ಅದ್ಭುತವಾಗಿರುವುದು. ಇವರ ಎಲ್ಲಾ ಜೋಕ್ ಗಳು ಆರೋಗ್ಯಕರವಾಗಿರಲ್ಲ. ಪ್ರೌಢ ಮತ್ತು ಬೆಳೆದಿರುವವರು ಮಾತ್ರ ಇದನ್ನು ಅರ್ಥ ಮಾಡಿಕೊಳ್ಳಬಹುದು.

5.ವೃಶ್ಚಿಕ: ಅ.23-ನ.22
ಜೋಕ್ ಸಿಡಿಸುವುದು ಅಥವಾ ಯಾರನ್ನಾದರೂ ಟ್ರೋಲ್ ಮಾಡುವುದರಲ್ಲಿ ವೃಶ್ಚಿಕ ರಾಶಿಯವರದ್ದು ಎತ್ತಿದ ಕೈ. ಟ್ರೋಲ್ ಮಾಡುವಂತಹ ಸ್ಪರ್ಧೆಯಿದ್ದರೆ ಇವರು ಖಂಡಿತವಾಗಿಯೂ ಎಲ್ಲರನ್ನು ಸೋಲಿಸುವರು. ಆದರೆ ಇವರನ್ನು ಬೇರೆಯವರು ಟ್ರೋಲ್ ಮಾಡಿದರೆ ಸಹಿಸಿಕೊಳ್ಳುವುದಿಲ್ಲ ಮತ್ತು ತುಂಬಾ ಕೆಟ್ಟ ಟೀಕೆ ಮಾಡಬಹುದು. ವೃಶ್ಚಿಕ ರಾಶಿಯವರು ಮಾಡುವಂತಹ ಜೋಕ್ ಗಳಿಗೆ ನೀವು ಪ್ರತಿಕ್ರಿಯೆ ನೀಡುವ ಬದಲು ನಕ್ಕುಬಿಡಿ ಸಾಕು.