For Quick Alerts
ALLOW NOTIFICATIONS  
For Daily Alerts

ಅಚ್ಚರಿ ಜಗತ್ತು: ನಡೆಯುತ್ತಿರುವಾಗಲೇ ಈ ಗ್ರಾಮದ ಜನರು ನಿದ್ರಿಸುವರು!

By Hemanth
|

ನೀವು ನಡೆಯುತ್ತಿರುವಾಗ ಅಥವಾ ಮಾತನಾಡುತ್ತಿರುವ ನಿದ್ರೆಗೆ ಜಾರಿದರೆ ಹೇಗಿರಬಹುದು ಎಂದು ಊಹಿಸಿ. ಇದು ತುಂಬಾ ವಿಚಿತ್ರವೆನಿಸುತ್ತದೆ. ಈ ವಿಚಿತ್ರ ಹಾಗೂ ಅಪರೂಪದ ಕಾಯಿಲೆಯು ಕಝಕಿಸ್ತಾನದ ರಾಷ್ಟ್ರದ ಹಳ್ಳಿಯೊಂದರಲ್ಲಿ ಕಾಣಿಸಿಕೊಂಡಿದೆ.

ಕಝಾಕಿಸ್ತಾನದ ಕಲಾಚಿಯ ಕಝಖ್ ಗ್ರಾಮದ ಜನರು ತುಂಬಾ ವಿಚಿತ್ರ ಕಾಯಿಲೆಯಿಂದ ಬಳಲುತ್ತಿದ್ದಾರೆ. ಇಲ್ಲಿನ ಜನರು ಯಾವುದೇ ಸಮಯದಲ್ಲೂ ನಿದ್ರೆಗೆ ಜಾರುವರು ಮತ್ತು ಹಲವಾರು ದಿನಗಳ ಕಾಲ ಪ್ರಜ್ಞಾಹೀನ ಸ್ಥಿತಿಗೆ ತಲುಪುವರು. ಕಝಕಿಸ್ತಾನದ ಅಕ್ಮೊಲಾ ಪ್ರಾಂತ್ಯದ ಎಸಿಲ್ ಜಿಲ್ಲೆಯಲ್ಲಿರುವ ಕಲಾಚಿ ಗ್ರಾಮಸ್ಥರಲ್ಲಿ ಸುಮಾರು ಮುಕ್ಕಾಲು ಭಾಗದಷ್ಟು ಜನರು ಈ ವಿಚಿತ್ರ ರೋಗಕ್ಕೀಡಾಗಿದ್ದಾರೆ. 2013ರಲ್ಲಿ ಮಾರ್ಚ್ ನಲ್ಲಿ ಈ ವಿಚಿತ್ರ ಕಾಯಿಲೆ ಬಗ್ಗೆ ಮೊದಲ ಸಲ ತಿಳಿದುಬಂದಿತ್ತು. ಈ ಕಾಯಿಲೆಯಲ್ಲಿ ಆಯಾಸ, ನಿಶ್ಯಕ್ತಿ, ಸಮನ್ವಯದ ಕೊರತೆ, ತಲೆನೋವು ಮತ್ತು ನೆನಪಿನ ಶಕ್ತಿ ಅರ್ಧ ಕಳೆದುಕೊಳ್ಳುವುದು ಕಂಡುಬರುವುದು...

ಬೀದಿಯಲ್ಲಿ ನಡೆದುಕೊಂಡು ಹೋಗುತ್ತಿರುವ ವೇಳೆ ವ್ಯಕ್ತಿ ನಿದ್ರೆಗೆ ಜಾರುವನು!

ಬೀದಿಯಲ್ಲಿ ನಡೆದುಕೊಂಡು ಹೋಗುತ್ತಿರುವ ವೇಳೆ ವ್ಯಕ್ತಿ ನಿದ್ರೆಗೆ ಜಾರುವನು!

ಈ ಕಾಯಿಲೆಯು ಯಾರಿಗೆ ಬೇಕಾದರೂ ಬರಬಹುದು. ಇದಕ್ಕೆ ವಯಸ್ಸು, ಲಿಂಗ ಅಥವಾ ಜಾತಿ, ಆರೋಗ್ಯ ಪರಿಸ್ಥಿತಿ ಯಾವುದೂ ಅನ್ವಯಿಸುವುದಿಲ್ಲ. ಯಾವುದೇ ಕ್ಷಣದಲ್ಲಿ ಬೇಕಾದರೂ ಈ ಕಾಯಿಲೆಯು ಕಾಡಬಹುದು. ಬೀದಿಯಲ್ಲಿ ನಡೆದುಕೊಂಡು ಹೋಗುತ್ತಿರುವ ವೇಳೆ ವ್ಯಕ್ತಿ ನಿದ್ರೆಗೆ ಜಾರಬಹುದು, ತಿನ್ನುವಾಗ, ಮಾತನಾಡುವಾಗ ನಿದ್ರೆಗೆ ಜಾರಬಹುದು ಮತ್ತು ಹಲವಾರು ದಿನಗಳ ಕಾಲ ಹೀಗೆ ಇರಬಹುದು. ನಿದ್ರೆಯಿಂದ ಎದ್ದ ಬಳಿಕ ಆ ವ್ಯಕ್ತಿಯು ತುಂಬಾ ನಿಶ್ಯಕ್ತಿ ಮತ್ತು ಗೊಂದಲದಲ್ಲಿರುವಂತೆ ಕಾಣುವನು. ಪ್ರಾಣಿಗಳ ಮೇಲೂ ಇದರ ಪರಿಣಾಮವಾಗುವುದು. ಕೆಲವೊಂದು ಸಲ ಪ್ರಾಣಿಗಳು ಕೂಡ ನಿದ್ರೆಯಿಂದ ಎದ್ದ ಬಳಿಕ ತುಂಬಾ ಅತಿಯಾದ ಚಟುವಟಿಕೆ ತೋರಿಸಿರುವುದು ಕಂಡುಬಂದಿದೆ.

ಕೆಲವರಿಗೆ ಇಲ್ಲಿ ಅಮಲೇರಿದಂತೆ ಆಗುವುದು!

ಕೆಲವರಿಗೆ ಇಲ್ಲಿ ಅಮಲೇರಿದಂತೆ ಆಗುವುದು!

ವಿಚಿತ್ರ ಕಾಯಿಲೆ ಭಾದಿಸುವ ಕೆಲವರು ಸಂಪೂರ್ಣವಾಗಿ ನಿದ್ರೆ ಮಾಡಲ್ಲ, ಇವರಿಗೆ ಅಮಲೇರಿದಂತೆ ಆಗುವುದು. ಇದರಿಂದ ಅವರು ತುಂಬಾ ಗೊಂದಲದಿಂದ ಇರುವರು ಮತ್ತು ಸರಿಯಾಗಿ ನಿಂತುಕೊಳ್ಳಲು ಆಗಲ್ಲ. ನಿದ್ರೆಯ ವಿಚಿತ್ರ ರೋಗವು ತುಂಬಾ ಕೆಟ್ಟ ರೀತಿಯಲ್ಲಿ ಪರಿಣಾಮ ಬೀರುತ್ತಿದೆ ಎಂದು ಸ್ಥಳೀಯರು ಹೇಳಿದ್ದಾರೆ. ಒಂದೇ ಗಂಟೆಯಲ್ಲಿ ಎಂಟು ಮಕ್ಕಳು ನಿದ್ರೆಗೆ ಜಾರಿದ ಘಟನೆಯು ಶಾಲೆಯೊಂದರಲ್ಲಿ ನಡೆದಿದೆ. ಒಂದೇ ದಿನದಲ್ಲಿ ಸುಮಾರು 60 ಮಂದಿಗೆ ಈ ಕಾಯಿಲೆ ಭಾದಿಸಿರುವುದು ಇದೆ.

ಈ ಕಾಯಿಲೆಯ ರಹಸ್ಯ ಪತ್ತೆಹಚ್ಚಲು ತಜ್ಞರು ಸಾಕಷ್ಟು ಪ್ರಯತ್ನಿಸಿದ್ದಾರೆ

ಈ ಕಾಯಿಲೆಯ ರಹಸ್ಯ ಪತ್ತೆಹಚ್ಚಲು ತಜ್ಞರು ಸಾಕಷ್ಟು ಪ್ರಯತ್ನಿಸಿದ್ದಾರೆ

ಈ ರೋಗದ ಮೂಲ ಪತ್ತೆ ಮಾಡಲು ಕಲಾಚಿ ನಗರಕ್ಕೆ ಹಲವಾರು ಮಂದಿ ವಿಜ್ಞಾನಿಗಳು, ವೈದ್ಯರು, ವೈರಾಲಜಿ ತಜ್ಞರು, ವಿಕಿರಣ ತಜ್ಞರು ಮತ್ತು ವಿಷ ತಜ್ಞರು ಭೇಟಿ ನೀಡಿದ್ದಾರೆ. ವೈರಸ್ ಅಥವಾ ಬ್ಯಾಕ್ಟೀರಿಯಾ ಸೋಂಕಿನಿಂದ ಇದು ಬರುವುದಿಲ್ಲವೆಂದು ಸ್ಪಷ್ಟವಾಗಿದೆ. ಇಲ್ಲಿನ ಮಣ್ಣು ಹಾಗೂ ನೀರನ್ನು ಪರೀಕ್ಷೆಗೊಳಪಡಿಸಿದಾಗ ಅದರಲ್ಲಿ ಕೂಡ ಯಾವುದೇ ರೀತಿಯ ರಾಸಾಯನಿಕಗಳು ಕಂಡುಬಂದಿಲ್ಲ. ಕೆಲವು ವೈದ್ಯರ ಪ್ರಕಾರ ಇಲ್ಲಿನ ಜನರು ಎನ್ಸೆಫಲೋಪತಿಯಿಂದ ಬಳಲುತ್ತಿದ್ದಾರೆ. ಇದು ಒಂದು ರೀತಿಯ ಮೆದುಳಿನ ಕಾಯಿಲೆಯಾಗಿದೆ. ಮೆದುಳಿನ ಸ್ಕ್ಯಾನಿಂಗ್ ನಡೆಸಿದಾಗ ಅತಿಯಾದ ದ್ರವ ಶೇಖರಣೆಯು ಕಂಡುಬಂದಿದೆ. ಈ ಪರಿಸ್ಥಿತಿಗೆ ಒಡಿಮಾ ಎನ್ನಲಾಗುತ್ತದೆ. ಮೆದುಳಿನ ಕಾಯಿಲೆಗೆ ಮೂಲ ಕಾರಣವೇನೆಂದು ಮಾತ್ರ ಸ್ಪಷ್ಟವಾಗಿಲ್ಲ.

ಈ ಕಾಯಿಲೆಯ ರಹಸ್ಯ ಪತ್ತೆಹಚ್ಚಲು ತಜ್ಞರು ಸಾಕಷ್ಟು ಪ್ರಯತ್ನಿಸಿದ್ದಾರೆ

ಈ ಕಾಯಿಲೆಯ ರಹಸ್ಯ ಪತ್ತೆಹಚ್ಚಲು ತಜ್ಞರು ಸಾಕಷ್ಟು ಪ್ರಯತ್ನಿಸಿದ್ದಾರೆ

ನಿದ್ರೆಗೆ ಜಾರುವ ಕಾಯಿಲೆಗೆ ರಷ್ಯಾದಿಂದ ಅನಾಥವಾಗಿ ಬಿಟ್ಟಿರುವಂತಹ ಯುರೇನಿಯಂ ಗಣಿಗಳು ಕಾರಣವೆಂದು ಸ್ಥಳೀಯರು ದೂರಿದ್ದಾರೆ. 1990ರಲ್ಲಿ ಮುಚ್ಚಲ್ಪಟ್ಟ ಕ್ರಾಸ್ನೋಗರ್ಸ್ಕಿ ಯುರೇನಿಯಂ ಗಣಿ ಗ್ರಾಮದೊಳಗಡೆಯೇ ಇತ್ತು. ಗ್ರಾಮದೊಳಗಿನ ವಿಕಿರಣ ಮಟ್ಟ ಮತ್ತು ಗಣಿ ಪ್ರದೇಶದ ವಿಕಿರಣ ಮಟ್ಟವು ಸಾಮಾನ್ಯವಾಗಿದೆ ಎಂದು ಪರೀಕ್ಷೆಗಳು ಹೇಳಿವೆ. ಗಣಿಕಾರ್ಮಿಕರಿಗೆ ಈ ಕಾಯಿಲೆಯು ಭಾದಿಸಿಲ್ಲ!

ಕಾರ್ಬನ್ ಮೊನೊಕ್ಸೈಡ್ ವಿಷವು ಈ ವಿಚಿತ್ರ ಕಾಯಿಲೆಗೆ ಕಾರಣವೇ?

ಕಾರ್ಬನ್ ಮೊನೊಕ್ಸೈಡ್ ವಿಷವು ಈ ವಿಚಿತ್ರ ಕಾಯಿಲೆಗೆ ಕಾರಣವೇ?

ಉನ್ನತ ಮಟ್ಟದ ರೇಡಾನ್ ಈ ಗ್ರಾಮದಲ್ಲಿ ಪತ್ತೆಯಾಗಿದೆ. ಇದು ಸಾಮಾನ್ಯಕ್ಕಿಂತ ನಾಲ್ಕೈದು ಪಟ್ಟು ಹೆಚ್ಚಾಗಿದೆ. ಆದರೆ ಈ ಮಟ್ಟ ಮತ್ತು ಕಾಯಿಲೆಯ ಲಕ್ಷಣಗಳಿಗೆ ಯಾವುದೇ ಹೊಂದಾಣಿಕೆಯಾಗುತ್ತಿಲ್ಲವೆಂದು ವೈದ್ಯರು ತಿಳಿಸಿದ್ದಾರೆ. ವಿಕಿರಣದಿಂದಾಗಿ ಇದು ಬರುತ್ತಿದೆ ಎನ್ನುವುದನ್ನು ತಳ್ಳಿ ಹಾಕಲಾಗಿದೆ. ಕಾರ್ಬನ್ ಮೊನೊಕ್ಸೈಡ್ ವಿಷವು ಇದಕ್ಕೆ ಕಾರಣವಾಗಿರುವ ಸಾಧ್ಯತೆಗಳು ಇವೆ.

ನಿದ್ರೆಗೆ ಜಾರುವ ಕಾಯಿಲೆಯನ್ನು ಭೇದಿಸಲು ಇದುವರೆಗೂ ಸಾಧ್ಯವಾಗಿಲ್ಲವಂತೆ!

ನಿದ್ರೆಗೆ ಜಾರುವ ಕಾಯಿಲೆಯನ್ನು ಭೇದಿಸಲು ಇದುವರೆಗೂ ಸಾಧ್ಯವಾಗಿಲ್ಲವಂತೆ!

ಗ್ರಾಮದ ಪ್ರಾದೇಶಿಕತೆ ಮತ್ತು ಹವಾಮಾನಕ್ಕೆ ಅನುಗುಣವಾಗಿ ಇಲ್ಲಿ ಚಿಮಿಣಿಗಳನ್ನು ಕಳೆಮುಖವಾಗಿ ಭೂಮಿಯೊಳಗೆ ಇಡಲಾಗಿದೆ. ಇದರಿಂದ ಈ ಗ್ರಾಮದಲ್ಲಿ ಉನ್ನತ ಮಟ್ಟದ ಕಾರ್ಬನ್ ಮೊನೋಕ್ಸೈಡ್ ನಿರ್ಮಾಣವಾಗುತ್ತದೆ. ಕಾರ್ಬನ್ ಮೊನೋಕ್ಸೈಡ್ ನಿಂದಾಗಿ ತಲೆನೋವು, ವಾಂತಿ ಮತ್ತು ಆಯಾಸವು ಕಾಡುವುದು. ಈ ಕೆಲವು ಲಕ್ಷಣಗಳು ನಿದ್ರೆಗೆ ಜಾರುವ ವಿಚಿತ್ರ ಕಾಯಿಲೆಗಳಿಗೆ ಸಮನವಾಗಿದೆ. ಕಲಾಚಿ ಗ್ರಾಮದ ನಿದ್ರೆಗೆ ಜಾರುವ ಕಾಯಿಲೆಯ ರಹಸ್ಯವನ್ನು ಭೇದಿಸಲು ಇದುವರೆಗೆ ಸಾಧ್ಯವಾಗಿಲ್ಲ ಮತ್ತು ಇಲ್ಲಿನ ಜನರನ್ನು ಬೇರೆಡೆ ಹೋಗಿ ನೆಲೆಸುವಂತೆ ಸೂಚಿಸಲಾಗಿದೆ.

ಜನರು ಹಠಾತ್ ಆಗಿ ನಿದ್ರೆಗೆ ಜಾರುವರು!

ಜನರು ಹಠಾತ್ ಆಗಿ ನಿದ್ರೆಗೆ ಜಾರುವರು!

ಕಝಕಿಸ್ತಾನದ ಗ್ರಾಮದಲ್ಲಿ ಜನರು ಹಠಾತ್ ಆಗಿ ನಿದ್ರೆಗೆ ಜಾರುವರು, ಯಾವುದೇ ಸಮಯದಲ್ಲೂ ಇವರು ನಿದ್ರೆಗೆ ಜಾರುವರು ಮತ್ತು ನೆನಪಿನ ಶಕ್ತಿ ಕಳೆದುಕೊಂಡಂತೆ ನಿದ್ರೆಯಿಂದ ಎದ್ದೇಳುವರು ಎನ್ನುವ ಸುದ್ದಿಯು ಮಾರ್ಚ್ ನಲ್ಲಿ ವಿಶ್ವದೆಲ್ಲೆಡೆ ಹಬ್ಬಿತ್ತು. 2014ರಲ್ಲಿ ಆರ್ ಟಿ ನಿರ್ಮಿಸಿದ ಸಾಕ್ಷ್ಯಚಿತ್ರ `ವಿಚಿತ್ರ ಪ್ಲೇಗ್ ಅಲೆಗಳ ಮೂಲಕ ಬರುವುದು':ಮಾರ್ಚ್ 2013, 2014, ಮೇ 2014ನಲ್ಲಿ ಬಂದಿದ್ದವು. 2015ರಲ್ಲೂ ಇದು ಬಂದಿತ್ತು. ವಿಚಿತ್ರ ಕಾಯಿಲೆಯನ್ನು ಗಂಭೀರವಾಗಿ ಪರಿಗಣಿಸಿರುವ ವೈದ್ಯ ಹಾಗೂ ವಿಜ್ಞಾನ ಲೋಕವು ಇಲ್ಲಿನ ಮಣ್ಣು, ನೀರು ಮತ್ತು ಗಾಳಿ, ರೋಗಿಗಳ ರಕ್ತ, ಕೂದಲು ಮತ್ತು ಉಗುರಿನ ಏಳು ಸಾವಿರಕ್ಕೂ ಹೆಚ್ಚಿನ ಪರೀಕ್ಷೆಗಳನ್ನು ನಡೆಸಿದೆ. ಆದರೆ ಯಾವುದೇ ರೀತಿಯ ಯಶಸ್ಸು ಸಿಕ್ಕಿಲ್ಲ. ನೆಲದೊಳಗೆ ಹೋಗುವ ಧೂಮ ಮತ್ತು ಮೊಬೈಲ್ ಫೋನ್ ಟವರ್ ಗಳನ್ನು ನಿಲ್ಲಿಸಲಾಯಿತು. ರೇಡನ್ ಗ್ಯಾಸ್, ಅಧಿಕ ವಿಕಿರಣ ಮಟ್ಟ, ಖನಿಜದ ಮಟ್ಟ, ಲೆಕ್ಕವಿಲ್ಲದಷ್ಟು ಬ್ಯಾಕ್ಟೀರಿಯಾ ಮತ್ತು ವೈರಸ್ ಪರೀಕ್ಷೆಗಳನ್ನು ನಡೆಸಲಾಗಿದೆ. ಯಾವುದು ಕೂಡ ಪ್ರಯೋಜವಾಗಿಲ್ಲ.

ಕೊನೆಗೂ ಈ ರೋಗಕ್ಕೆ ಮೂಲ ಕಾರಣವೇನೆಂದು ಇದುವರೆಗೆ ಪತ್ತೆಯಾಗಿಲ್ಲ

ಕೊನೆಗೂ ಈ ರೋಗಕ್ಕೆ ಮೂಲ ಕಾರಣವೇನೆಂದು ಇದುವರೆಗೆ ಪತ್ತೆಯಾಗಿಲ್ಲ

ಈ ವಿಚಿತ್ರ ಕಾಯಿಲೆ ಬಗ್ಗೆ ಸೆರ್ಬಿಯನ್ ಟೈಮ್ಸ್ ನೊಂದಿಗೆ ಮಾತನಾಡಿರುವ ಡಾ. ಕಬ್ದಾಶಿತ್ ಅಲ್ಮಾಂಬಂಬೆಟೊವ್ ಅವರು, ದುರಾದೃಷ್ಟವೆಂದರೆ ಈ ರೋಗಕ್ಕೆ ಮೂಲ ಕಾರಣವೇನೆಂದು ಇದುವರೆಗೆ ಪತ್ತೆಯಾಗಿಲ್ಲ. ಎಲ್ಲಾ ರೀತಿಯ ಸೋಂಕು, ರಕ್ತ ಹಾಗೂ ಬೆನ್ನುಮೂಳೆಯ ದ್ರವ ಎಲ್ಲವನ್ನು ಪರೀಕ್ಷೆ ಮಾಡಿದ್ದೇವೆ. ಆದರೆ ಏನೂ ಕಂಡುಬಂದಿಲ್ಲ. ವಿಷಕಾರಿ ಎನ್ಸೆಫಲೋಪತಿ ಎಂದು ಇದನ್ನು ಪರಿಗಣಿಸಿದ್ದೇವೆ. ಆದರೆ ವಿಷಕಾರಿ ಎನ್ನುವುದು ಕೇವಲ ಊಹೆ ಮತ್ತು ಎನ್ಸೆಫಲೋಪತಿ ಮೆದುಳಿನ ಕಾಯಿಲೆಗೆ ನೀಡಿರುವ ಪದ ಮಾತ್ರ ಎಂದು ಅವರು ಹೇಳಿದ್ದಾರೆ.

English summary

The Mystery Behind a Kazakh Town’s Sleeping Sickness

The villagers of Kazakh village of Kalachi are suffering from a strange ailment. At any time of the day they just fall asleep and remain unconscious for many days. Kalachi is a village located in Esil District of Akmola Region in Kazakhstan. Almost one fourth of the villagers have suffered atleast once from the sleeping sickness. The first case of this mysterious illness was reported in March 2013. The symptoms include tiredness, drowsiness, loss of coordination, headaches and partial loss of memory.
X
Desktop Bottom Promotion