Latest Updates
-
ದೆಹಲಿ-ಎನ್ಸಿಆರ್ನಲ್ಲಿ ಮಳೆ ಅಬ್ಬರ: ಟ್ರಾಫಿಕ್ ಕಿರಿಕಿರಿ ತಪ್ಪಿಸಲು ನೀವು ಮಾಡಬೇಕಾದ್ದೇನು? -
ಮುಂಬೈ ಸೆಕೆ ಮತ್ತು ಆರ್ದ್ರತೆ: ಹೊರಗೆ ಹೋಗಿ ಸುಸ್ತಾಗುವ ಬದಲು ಮನೆಯಲ್ಲೇ ಫಿಟ್ ಆಗಿರಲು ಈ ಟಿಪ್ಸ್ ಫಾಲೋ ಮಾಡಿ! -
ಇಂದು ರಾತ್ರಿ ದೆಹಲಿ-ಎನ್ಸಿಆರ್ನಲ್ಲಿ ಭೀಕರ ಮಳೆ: ಹೊರಗೆ ಹೋಗುವ ಪ್ಲಾನ್ ಇದೆಯಾ? ಎಚ್ಚರ! -
ಮಳೆಗಾಲದಲ್ಲಿ ಮನೆ ಹಾಳಾಗದಂತೆ ತಡೆಯುವುದು ಹೇಗೆ? ತೇವಾಂಶ ಮತ್ತು ಬೂಸು ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
'ಹೆಲ್ದಿ' ಆಹಾರದ ಹೆಸರಿನಲ್ಲಿ ಮೋಸ ಹೋಗ್ತಿದ್ದೀರಾ? FSSAI ಹೊಸ ನಿಯಮದ ಅಸಲಿಯತ್ತು ಇಲ್ಲಿದೆ! -
UGC NET 2026 ಅಡ್ಮಿಟ್ ಕಾರ್ಡ್ ಬಿಡುಗಡೆ: ಪರೀಕ್ಷಾ ಕೇಂದ್ರಕ್ಕೆ ಹೋಗುವ ಮುನ್ನ ಈ ನಿಯಮಗಳನ್ನು ಮಿಸ್ ಮಾಡ್ಬೇಡಿ! -
ಬೆಂಗಳೂರು, ಕರಾವಳಿಯಲ್ಲಿ ಭಾರಿ ಮಳೆ: ಹೊರಗೆ ಹೋಗುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ರಾಜ ಪರ್ಬ 2026: ಮಹಿಳೆಯರಿಗೆ ವಿಶ್ರಾಂತಿ ನೀಡುವ ಈ ಹಬ್ಬದ ಆಚರಣೆ ಮತ್ತು ವಿಶೇಷತೆಗಳೇನು? -
ದೆಹಲಿ ಮಾಲಿನ್ಯದ ಆತಂಕ: ನಿಮ್ಮ ಮನೆಯನ್ನು ವಿಷಕಾರಿ ಗಾಳಿಯಿಂದ ರಕ್ಷಿಸಲು ಈ ಸರಳ ಕ್ರಮಗಳನ್ನು ಪಾಲಿಸಿ -
ಖರ್ಜೂರದಲ್ಲಿ ಹುಳುಗಳ ಆತಂಕ: ಆನ್ಲೈನ್ನಲ್ಲಿ ಆರ್ಡರ್ ಮಾಡುವ ಮುನ್ನ ಈ ತಪ್ಪು ಮಾಡಬೇಡಿ!
ಅಚ್ಚರಿ ಆದರೂ ನಿಜ...ಈ ದೇವಸ್ಥಾನದ ವಿಗ್ರಹಗಳು ರಾತ್ರಿಯ ವೇಳೆ ಪರಸ್ಪರ ಮಾತನಾಡುತ್ತವೆ!!
ಭಾರತದ ದೇಶ ವಿವಿಧ ಜಾತಿ-ಧರ್ಮಗಳನ್ನು ಒಳಗೊಂಡ ದೇಶ. ಇಲ್ಲಿ ಅನೇಕ ಪವಿತ್ರ ದೇಗುಲಗಳಿವೆ. ಒಂದೊಂದು ಸಹ ವಿಶೇಷ ಪುರಾಣ ಹಿನ್ನೆಲೆಯನ್ನು ಒಳಗೊಂಡಿವೆ. ಅಲ್ಲದೆ ಕೆಲವು ದೇಗುಲವು ದೇವಾಲಯಗಳಲ್ಲಿ ಅದ್ಭುತ ಪವಾಡಗಳು ನಡೆಯುತ್ತವೆ. ಇವು ಭಕ್ತರ ಏಳಿಗೆಗಾಗಿ ಎಂದು ಸಹ ಹೇಳಲಾಗುವುದು. ಇಂತಹ ಒಂದು ವಿಶೇಷ ಹಿನ್ನೆಲೆ ಹಾಗೂ ಪವಾಡವನ್ನು ಒಳಗೊಂಡಿರುವ ದೇವಾಲಯಗಳಲ್ಲಿ ರಾಜೇಶ್ವರಿ ತ್ರಿಪುರ ಸುಂದರಿ ದೇಗುಲವು ಒಂದು! ಮುಂದೆ ಓದಿ..

ರಾಜರಾಜೇಶ್ವರಿ ತ್ರಿಪುರ ಸುಂದರಿ ದೇವಸ್ಥಾನ
ಬಿಹಾರದ ಬಸ್ಟರ್ ಎಂಬಲ್ಲಿರುವ ರಾಜರಾಜೇಶ್ವರಿ ತ್ರಿಪುರ ಸುಂದರಿ ದೇವಸ್ಥಾನವು ನಿತ್ಯವೂ ಸಾವಿರಾರು ಭಕ್ತರನ್ನು ಆಕರ್ಷಿಸುತ್ತದೆ. ಗುರ್ಗಾದೇವಿಗೆ ಸಮರ್ಪಿತವಾದ ಈ ದೇವಸ್ಥಾನದಲ್ಲಿ ವಿವಿಧ ಆಚಾರ ವಿಚಾರಗಳಿರುವುದು ವಿಶೇಷ. ತ್ರಿಗರಾ, ಧುಮಾವತಿ, ಬಾಗುಲುಖಿ, ತಾರಾ, ಕಾಳಿ, ಚಿನ್ ಮಸ್ತಾ, ಶೋಡಸಿ, ಮಾತಂಗಿ, ಕಮಲಾ, ಉಗ್ರಹ ತಾರಾ, ಭುವನೇಶ್ವರಿ ಸೇರಿದಂತೆ ರಾಜೇಶ್ವರಿ ದೇವಿಯ ವಿವಿಧ ಅವತಾರಗಳ ವಿಗ್ರಹಗಳು ಇಲ್ಲಿವೆ.

400 ವರ್ಷಗಳ ಇತಿಹಾಸ ಹೊಂದಿರುವ ಈ ದೇವಸ್ಥಾನ
400 ವರ್ಷಗಳ ಇತಿಹಾಸವನ್ನು ಹೊಂದಿರುವ ಈ ದೇಗುಲವನ್ನು ಭವಾನಿ ಮಿಶ್ರಾ ಎನ್ನುವವರು ಸ್ಥಾಪಿಸಿದ್ದರು ಎಂದು ಹೇಳಲಾಗುತ್ತದೆ. ಇಲ್ಲಿಯ ಒಂದು ಅದ್ಭುತ ವಿಚಾರವೆಂದರೆ ದೇವಾಲಯದ ರಾಜರಾಜೇಶ್ವರಿ ತ್ರಿಪುರ ಸುಂದರಿ ವಿಗ್ರಹವನ್ನು ಹೊರತುಪಡಿಸಿ ಉಳಿದ ವಿಗ್ರಹಗಳು ಪರಸ್ಪರ ಮಾತನಾಡುತ್ತವೆ ಎಂದು ಹೇಳಲಾಗುವುದು. ಅದರಲ್ಲಿ ವಿಶೇಷವಾಗಿ ಬಾತುಕುಬಿಹಿ, ತಾರಗಳ ವಿಗ್ರಹಗಳು, ಬತುಕ್ ಭೈರವ, ದತ್ತಾತ್ರೇಯ ಭೈರವ, ಅನ್ನಪೂರ್ಣ ಭೈರವ, ಕಲಾ ಭೈರವ ಮತ್ತು ಮುಂಗಾಡಿ ಭೈರವ ವಿಗ್ರಹಗಳು ರಾತ್ರಿಯ ಸಮಯದಲ್ಲಿ ಮಾತನಾಡುತ್ತವೆ ಎಂದು ಹೇಳಲಾಗುವುದು.

ವಿಜ್ಞಾನಿಗಳಿಗೂ ಸೋತು ಬಿಟ್ಟರು!
ಈ ವಿಚಾರವನ್ನು ಪರಿಶೀಲಿಸಲು ವಿಜ್ಞಾನಿಗಳ ತಂಡವೊಂದು ಈ ಸ್ಥಳಕ್ಕೆ ಭೇಟಿ ನೀಡಿತ್ತು. ಇವರ ಸಂಶೋಧನೆಯ ಪ್ರಕಾರವೂ ವಿಗ್ರಹಗಳು ರಾತ್ರಿಹೊತ್ತು ಮಾತನಾಡುತ್ತವೆ ಎನ್ನುವುದನ್ನು ದೃಢಪಡಿಸಿದ್ದರು ಎನ್ನಲಾಗುತ್ತದೆ. ಯಾವುದೇ ಮನುಷ್ಯರ ಸಂಚಾರ ಇಲ್ಲದೆ ಇರುವಾಗ ವಿಗ್ರಹಗಳ ಪರಸ್ಪರ ಮಾತುಗಳನ್ನು ಕೇಳಬಹುದು ಎಂದು ಹೇಳಲಾಗುತ್ತದೆ. ದೇವಸ್ಥಾನದ ಒಳಗೆ ಏಕೆ ಮಾತುಗಳು ಕೇಳಿ ಬರುತ್ತವೆ ಎನ್ನುವುದು ವಿಜ್ಞಾನಿಗಳಿಗೂ ಸೂಕ್ತ ಮಾಹಿತಿ ದೊರೆಯಲಿಲ್ಲ ಎಂದು ಹೇಳಲಾಗುವುದು.

ಇಂದಿಗೂ ಇದು ಬಗೆಯರಿಯದ ವಿಚಾರ
ಈ ವಿಚಾರವನ್ನು ನೀವು ನಂಬಬಹುದು ಅಥವಾ ಬಿಡಬಹುದು. ಈ ಅತೀಂದ್ರಿಯ ವಿದ್ಯಮಾನವು ಏಕೆ ನಡೆಯುತ್ತದೆ ಎನ್ನುವುದು ಇಂದಿಗೂ ಬಗೆಹರಿಯದ ವಿಚಾರವಾಗಿಯೇ ಉಳಿದಿದೆ. ಈ ಮಾತುಗಳು ಏಕೆ ಇಂದಿಗೂ ಮನುಷ್ಯನಿಗೆ ಕೇಳುತ್ತಿಲ್ಲ ಎನ್ನುವುದು ತಿಳಿದಿಲ್ಲ. ಬಹುಶಃ ಇದು ದೇವತೆಗಳು ಮನುಷ್ಯ ಕುಲಕ್ಕೆ ಹೇಳುವ ಯಾವುದೋ ವಿಶೇಷ ವಿಚಾರವಾಗಿರಬಹುದು. ಅದು ಮನುಷ್ಯನಿಗೆ ಈ ವರೆಗೆ ತಿಳಿಯದೆ ಇರುವ ಸಂಗತಿಯಾಗಿರಬಹುದು. ಒಟ್ಟಿನಲ್ಲಿ ಈ ದೇಗುಲದ ದೈವಭಕ್ತಿ ಜನರಲ್ಲಿ ತುಂಬಿದೆ.



Click it and Unblock the Notifications