For Quick Alerts
ALLOW NOTIFICATIONS  
For Daily Alerts

ಹುಟ್ಟಿದ ದಿನಾಂಕವೇ ನಿಮ್ಮ ರಹಸ್ಯ ಸಂಗತಿಯನ್ನು ಬಹಿರಂಗಪಡಿಸುವುದು!

|

ಭವಿಷ್ಯ ಎನ್ನುವುದು ಒಂದು ವಿಶೇಷ ಹಾಗೂ ವಿಶಾಲವಾದ ಸಂಗತಿ. ಮಾನವನ ಹುಟ್ಟು ಹೇಗೆ ಪ್ರಕೃತಿಯಲ್ಲಿ ವಿಶೇಷವಾಗಿರುತ್ತದೆಯೋ ಹಾಗೆಯೇ ಪ್ರಕೃತಿಯಲ್ಲೂ ನಮ್ಮ ಊಹೆಗೂ ಮೀರಿರುವಂತಹ ವಿಶೇಷತೆಗಳು ಇರುತ್ತವೆ. ಅವುಗಳಲ್ಲಿ ಕೆಲವನ್ನು ನಾವು ಗುರುತಿಸಬಹುದು. ಇನ್ನೂ ಹಲವು ಬಗೆಯ ವಿಶೇಷತೆಯನ್ನು ನಾವು ಗುರುತಿಸುವಲ್ಲಿ ವಿಫಲರಾಗಿರಬಹುದು. ಅಂತಹ ವಿಚಿತ್ರ ಸಂಗತಿಗಳಲ್ಲಿ ಸಂಖ್ಯಾ ಶಾಸ್ತ್ರವೂ ಒಂದು ಎಂದು ಹೇಳಬಹುದು.

ಖಗೋಳದಲ್ಲಿರುವ ಗ್ರಹಗಳು ಅಂಖ್ಯೆ ಸಂಖ್ಯೆಗಳೊಂದಿಗೆ ನಿಖಟವಾದ ಸಂಬಂಧವನ್ನು ಪಡೆದುಕೊಂಡಿವೆ. ಅವುಗಳ ಆಧಾರದ ಮೇಲೆಯೂ ನಮ್ಮ ಭವಿಷ್ಯಗಳು ಬದಲಾವಣೆಯನ್ನು ಕಾಣುತ್ತಲೇ ಇರುತ್ತವೆ. ಹಾಗಾಗಿ ಕೆಲವು ವಿಶೇಷ ಕೆಲಸಗಳನ್ನು ಮಾಡುವಾಗ ಅಥವಾ ಯಾವುದೇ ಬದಲಾವಣೆಗೆ ಸಿದ್ಧರಾಗುವ ಮೊದಲು ಅಂಕೆ ಸಂಖ್ಯೆಗಳ ಆಧಾರದ ಮೇಲೆ ನಮಗೆ ಅದೃಷ್ಟ ಒಲಿಯುವುದೇ ಎನ್ನುವುದನ್ನು ತಿಳಿದುಕೊಳ್ಳಬಹುದು. ನಿಮಗೂ ಈ ಸಂಗತಿಯ ಬಗ್ಗೆ ಇನ್ನಷ್ಟು ವಿಚಾರವನ್ನು ತಿಳಿದುಕೊಳ್ಳಬೇಕು ಎನ್ನುವ ಆಶಯವಿದ್ದರೆ ಈ ಮುಂದೆ ವಿವರಿಸಲಾದ ವಿವರಣೆಯನ್ನು ಪರಿಶೀಲಿಸಿ.

ಜನ್ಮ ನಕ್ಷತ್ರ-ಹುಟ್ಟಿದ ದಿನಾಂಕ ಆಧರಿಸಿ ಹೇಳುವ 'ಸಂಖ್ಯಾಶಾಸ್ತ್ರ'

secrets about the date of birth

ಸಂಖ್ಯಾ ಶಾಸ್ತ್ರದಲ್ಲಿ ಹುಟ್ಟಿದ ದಿನಾಂಕ ಮತ್ತು ಜೀವನದ ಪಥಗಳ ಸಂಖ್ಯೆಗಳು ನಮ್ಮ ವ್ಯಕ್ತಿತ್ವ ಹಾಗೂ ಭವಿಷ್ಯವನ್ನು ತಿಳಿಸುತ್ತದೆ. ಉದಾಹರಣೆಗೆ ನಿಮ್ಮ ಜನನದ ದಿನಾಂಕವು 2 ಜನವರಿ 1986 ಆಗಿದ್ದರೆ ಅದನ್ನು ಹೀಗೆ ಲೆಕ್ಕಹಾಕಬೇಕು: 2+1+1986=27, 2+7=9. ಹೀಗೆಯೇ ನಿಮ್ಮ ಜನ್ಮ ದಿನಾಂಕವನ್ನು ಹೀಗೆ ಲೆಕ್ಕಮಾಡಿ, ಭವಿಷ್ಯವನ್ನು ಪರಿಶೀಲಿಸಬಹುದು.

ಜನನದ ಸಂಖ್ಯೆ 1 ಆಗಿದ್ದರೆ

ಜನನದ ಸಂಖ್ಯೆ 1 ಆಗಿದ್ದರೆ

ಇವರು ಹುಟ್ಟು ನಾಯಕತ್ವದ ಗುಣವನ್ನು ಪಡೆದವರಾಗಿರುತ್ತಾರೆ. ತಮ್ಮನ್ನು ತಾವು ಪರೀಕ್ಷಿಸಿಕೊಳ್ಳುವ ಇವರು ಬಹಳ ಶ್ರಮವನ್ನು ವಹಿಸಿ ಕೆಲಸವನ್ನು ನಿರ್ವಹಿಸುತ್ತಾರೆ. ಸ್ವಾಭಿಮಾನಿಗಳಾದ ಇವರು ಮಿತಿಯಿಲ್ಲದ ಶಕ್ತಿಯನ್ನು ಹೊಂದಿರುತ್ತಾರೆ. ಅತಿಯಾದ ಹುರುಪು, ಉತ್ಸಾಹ ಹಾಗೂ ಶಕ್ತಿ ಹೊಂದಿರುವುದರಿಂದ ಎಲ್ಲಾ ವಿಚಾರದಲ್ಲೂ ಮೊದಲ ಸ್ಥಾನವನ್ನು ಪಡೆದುಕೊಳ್ಳಲು ಬಯಸುವರು. ಹುಟ್ಟಿದ ಸಂಖ್ಯೆ ಮೊದಲನೆಯದಾದಂತೆ ಇವರ ಕೆಲಸವು ಹಾಗೂ ಮನಃಸ್ಥಿತಿಯು ಮೊದಲ ಸ್ಥಾನದಲ್ಲಿಯೇ ಇರಲು ಬಯಸುತ್ತದೆ. ಇವರು ಅದೃಷ್ಟವಂತ ವ್ಯಕ್ತಿಗಳಾಗಿರುತ್ತಾರೆ ಎನ್ನಬಹುದು. ಎಂತಹ ಅಡೆತಡೆಗಳು ಎದುರಾದರೂ ಅದನ್ನು ಮೀರಿ ಕೆಲಸವನ್ನು ನಿರ್ವಹಿಸುವರು ಹಾಗೂ ಸದಾ ಉತ್ತಮ ಕೆಲಸ ಮಾಡುವ ಗುರಿಯನ್ನು ಹೊಂದಿರುತ್ತಾರೆ.

ಜನನ ಸಂಖ್ಯೆ 2 ಆಗಿದ್ದರೆ

ಜನನ ಸಂಖ್ಯೆ 2 ಆಗಿದ್ದರೆ

ಈ ಸಂಖ್ಯೆಯನ್ನು ಹೊಂದಿರುವ ವ್ಯಕ್ತಿಗಳು ಸದಾ ಶಾಂತಿ ಹಾಗೂ ಸಾಮರಸ್ಯವನ್ನು ಹೊಂದಿರಲು ಬಯಸುತ್ತಾರೆ. ಸ್ವಭಾವದಲ್ಲಿ ಕೊಂಚ ನಾಚಿಕೆ ಸ್ವಭಾವವನ್ನು ಹೊಂದಿರುವ ವ್ಯಕ್ತಿಗಳಾಗಿರುತ್ತಾರೆ. ಹಾಗಾಗಿ ಇವರು ಮರೆಯಲ್ಲಿ ಅಥವಾ ವ್ಯಕ್ತಿಯ ಹಿಂದೆ ಉಳಿದುಕೊಂಡು ಕೆಲಸ ಮಾಡಲು ಬಯಸುವರು. ಉತ್ತಮ ರೀತಿಯ ಕೆಲಸ ನಿರ್ವಾಹಕರು ಹಾಗೂ ಉತ್ತಮ ಆಟಗಾರರೂ ಹೌದು ಎಂದು ಹೇಳಲಾಗುವುದು.

ಜನನ ಸಂಖ್ಯೆ 3 ಆಗಿದ್ದರೆ

ಜನನ ಸಂಖ್ಯೆ 3 ಆಗಿದ್ದರೆ

ಜನನ ಸಂಖ್ಯೆ 3 ಆಗಿದ್ದರೆ ಆ ವ್ಯಕ್ತಿಯು ಸ್ವ-ಅಭಿವ್ಯಕ್ತ ಗುಣವನ್ನು ಹೊಂದಿರುತ್ತಾರೆ. ಕತ್ತಲಾದಂತಹ ಸ್ಥಳದಲ್ಲಿ ಬೆಳಕನ್ನು ಚೆಲ್ಲುವಂತಹ ವ್ಯಕ್ತಿತ್ವವನ್ನು ಹೊಂದಿರುವ ವ್ಯಕ್ತಿಗಳಾಗಿರುತ್ತಾರೆ. ಇವರಲ್ಲಿ ಉತ್ತಮ ಸೃಜನಶೀಲತೆ ಹಾಗೂ ಭಾವನೆಯನ್ನು ವ್ಯಕ್ತಪಡಿಸುವಂತಹ ಸಾಮಥ್ರ್ಯವನ್ನು ಹೊಂದಿರುತ್ತಾರೆ ಎಂದು ಹೇಳಲಾಗುವುದು. ಉತ್ತಮ ಸಂವಹನ ಕೌಶಲ್ಯ ಹಾಗೂ ಕಾರ್ಯ ಕ್ಷಮತೆಯನ್ನು ಹೊಂದಿರುವ ವ್ಯಕ್ತಿಗಳಾಗಿರುತ್ತಾರೆ. ಇವರು ಸಂತೋಷದಲ್ಲಿರುವಾಗ ಸದಾ ಇತರರಿಗೆ ಮನರಂಜನೆಯನ್ನು ನೀಡುತ್ತಲಿರುತ್ತಾರೆ. ಆಶಾದಾಯಕ ಹಾಗೂ ಉದಾರವಾದ ಒಲವನ್ನು ತೋರುವರು.

ಜನನ ಸಂಖ್ಯೆ 4 ಆಗಿದ್ದರೆ

ಜನನ ಸಂಖ್ಯೆ 4 ಆಗಿದ್ದರೆ

ಹೆಚ್ಚು ಪರಿಶ್ರಮದಿಂದ ಕೆಲಸ ನಿರ್ವಹಿಸುವ ವ್ಯಕ್ತಿಗಳಾಗಿರುತ್ತಾರೆ. ಕಷ್ಟಪಟ್ಟು ದುಡಿಯುವ ಸ್ವಭಾವವನ್ನು ಹೊಂದಿರುವ ಇವರು ನಿಷ್ಠಾವಂತರು ಹಾಗೂ ಉತ್ತಮ ನಿರ್ಧಾರ ಕೈಗೊಳ್ಳುವ ಸಾಮಥ್ರ್ಯವನ್ನು ಹೊಂದಿರುತ್ತಾರೆ ಎಂದು ಹೇಳಲಾಗುವುದು. ಇನ್ನೊಂದೆಡೆ ಇವರು ವಿಪರೀತ ನಿಯಂತ್ರಣ ಹೇರುವ ಗುಣವನ್ನು ಹೊಂದಿರಬಹುದು. ಕಾರ್ಯ ತಂತ್ರ ಚಿಂತಕರು ಹಾಗೂ ಸ್ವಲ್ಪ ಸೋಮಾರಿಯಾಗಿಯೂ ಆಗಿರುತ್ತಾರೆ.

ಜನನ ಸಂಖ್ಯೆ 5 ಆಗಿದ್ದರೆ

ಜನನ ಸಂಖ್ಯೆ 5 ಆಗಿದ್ದರೆ

ಇವರು ಬಹಳ ಚಟಪಟಿಕೆಯನ್ನು ವ್ಯಕ್ತಪಡಿಸುವ ವ್ಯಕ್ತಿಗಳಾಗಿರುತ್ತಾರೆ. ಇವರು ಅತ್ಯಂತ ಪ್ರಕ್ಷುಬ್ಧ ವ್ಯಕ್ತಿಗಳು ಎನ್ನಬಹುದು. ಸ್ವತಂತ್ರ ಮನೋಭಾವದವರಾದ ಇವರು ಹೊರಗಿನ ಅನುಭವವನ್ನು ಅನುಭವಿಸಲು ಬಯಸುವರು. ಇನ್ನೊಂದೆಡೆ ಇವರು ಸಮಸ್ಯೆಗಳನ್ನು ಅವಿರತ ಪರಿಶ್ರಮದಿಂದ ನಿವಾರಿಸುವರು. ಕೆಲವೊಮ್ಮೆ ಬಹು ಸುಲಭವಾಗಿ ಬೇಸರಕ್ಕೆ ಒಳಗಾಗಬಹುದು.

ಜನನ ಸಂಖ್ಯೆ 6 ಆಗಿದ್ದರೆ

ಜನನ ಸಂಖ್ಯೆ 6 ಆಗಿದ್ದರೆ

ಇವರು ಅತ್ಯುತ್ತಮ ಸೇವಾ ಭಾವನೆಯನ್ನು ಹೊಂದಿರುವ ವ್ಯಕ್ತಿಗಳಾಗಿರುತ್ತಾರೆ. ಇವರು ಸೇವೆ, ಪ್ರೀತಿ ಹಾಗೂ ಕುಟುಂಬದ ವಿಚಾರದಲ್ಲಿ ಹೆಚ್ಚು ಗಮನವನ್ನು ಕೇಂದ್ರೀಕರಿಸುವರು. ಸ್ವಭಾವತಃ ಸಹಾಯಕರಾಗಿರುತ್ತಾರೆ. ಪಾಲನೆಯನ್ನು ಮಾಡುವ ಇವರು ಎಂತಹ ಪರಿಸರವನ್ನಾದರೂ ಆರಾಮದಾಯಕವಾಗಿರುವಂತೆ ಮಾಡುತ್ತಾರೆ. ಅಂದರೆ ಅಲ್ಲಿ ಸಂತೋಷ ಇರುವಂತೆ ಮಾಡುವರು.

ಜನನ ಸಂಖ್ಯೆ 7 ಆಗಿದ್ದರೆ

ಜನನ ಸಂಖ್ಯೆ 7 ಆಗಿದ್ದರೆ

ಇವರು ಅತ್ಯಂತ ನಿಗೂಢ ಸ್ವಭಾವನ್ನು ಹೊಂದಿರುತ್ತಾರೆ. ಇವರು ತಮ್ಮ ಭಾವನೆಯನ್ನು ತಮ್ಮಲ್ಲಿಯೇ ಇರಿಸಿಕೊಳ್ಳುವರು. ಇವರನ್ನು ಸುಲಭವಾಗಿ ಅರ್ಥಮಾಡಿಕೊಳ್ಳುವುದು ಕಷ್ಟ ಎನ್ನಬಹುದು. ಎಲ್ಲಾ ವಿಚಾರವನ್ನು ವಿಶ್ಲೇಷಿಸುವ ಇವರು ವಿಜ್ಞಾನ ಮತ್ತು ಬೌದ್ಧಿಕ ಚಟುವಟಿಕೆಯಲ್ಲಿ ಅದ್ಭುತ ಕೆಲಸವನ್ನು ನಿರ್ವಹಿಸಬಲ್ಲರು.

ಜನನ ಸಂಖ್ಯೆ 8 ಆಗಿದ್ದರೆ

ಜನನ ಸಂಖ್ಯೆ 8 ಆಗಿದ್ದರೆ

ಇವರು ಅಧಿಕಾರವನ್ನು ಆಶಿಸುವ ವ್ಯಕ್ತಿಗಳು ಎನ್ನಬಹುದು. ಇವರು ಹುಟ್ಟು ವ್ಯಾಪಾರ, ಹಣಕಾಸು ಹಾಗೂ ರಾಜಕೀಯ ಕ್ಷೇತ್ರದಲ್ಲಿ ನಾಯಕರಾಗಿರುತ್ತಾರೆ. ಇವರು ವ್ಯಾಪಾರ ವಹಿವಾಟುಗಳಲ್ಲಿ ಉತ್ತಮ ನಿರ್ಣಯವನ್ನು ಕೈಗೊಳ್ಳುವ ಶಕ್ತಿಯನ್ನು ಹೊಂದಿರುವ ವ್ಯಕ್ತಿಗಳಾಗಿರುತ್ತಾರೆ. ಇವರು ಆಧ್ಯಾತ್ಮಿಕತೆಯ ಬಗ್ಗೆ ಹೆಚ್ಚು ಒಲವನ್ನು ತೋರುವರು. ಹಣಕಾಸಿನ ವಿಚಾರದಲ್ಲೂ ಹೆಚ್ಚು ಒಲವು ತೋರುವರು.

ಜನನ ಸಂಖ್ಯೆ 9 ಆಗಿದ್ದರೆ

ಜನನ ಸಂಖ್ಯೆ 9 ಆಗಿದ್ದರೆ

ಹುಟ್ಟಿದಾಗಿನಿಂದಲೇ ನಾಯಕತ್ವ ಗುಣವನ್ನು ಹೊಂದಿರುವ ಇವರು ಅತ್ಯುತ್ತಮ ಮಾನವೀಯತೆ ಗುಣವನ್ನು ಹೊಂದಿರುತ್ತಾರೆ. ಇವರು ಒಬ್ಬ ಸಹಾನುಭೂತಿ ಹೊಂದಿರುವ ವ್ಯಕ್ತಿಗಳು ಎಂದು ಹೇಳಲಾಗುವುದು. ಬಹು ಪ್ರತಿಭಾವಂತರು ಹಾಗೂ ಆದರ್ಶಗಳನ್ನು ಹೊಂದಿರುವ ವ್ಯಕ್ತಿಗಳು ಹೌದು. ಜೀವನದಲ್ಲಿ ಹೊಸ ಹೊಸ ಅನುಭವಗಳಿಂದ ವಿಚಾರಗಳನ್ನು ತಿಳಿದುಕೊಳ್ಳುವರು. ತಾವು ಪ್ರೀತಿಸುವ ವ್ಯಕ್ತಿಗಳಿಗಾಗಿ ಹಂಬಲಿಸುವರು.

English summary

The Hidden Secrets About Date Of Birth

According to numerology, your life path number has its importance. From finding out what your number reveals about your life path and the personality, there is a lot that one needs to learn. These numbers are calculated based on your date of birth and the year which are later summed up to get a single number.
X
Desktop Bottom Promotion