For Quick Alerts
ALLOW NOTIFICATIONS  
For Daily Alerts

ಹೆಸರಿನ ಅಕ್ಷರದಲ್ಲಿ ಅಡಗಿದೆ ವ್ಯಕ್ತಿಯ ವ್ಯಕ್ತಿತ್ವ-ನಿಮ್ಮದೂ ಪರಿಶೀಲಿಸಿಕೊಳ್ಳಿ

By Lekhaka
|

ನಿಮ್ಮ ಹೆಸರು ನಿಮ್ಮ ವ್ಯಕ್ತಿತ್ವವನ್ನು ಹೊರಸೂಸುವ ದಿವ್ಯವರಪ್ರಸಾದವಾಗಿದ್ದು ನಿಮ್ಮ ಹೆಸರಿನಿಂದಲೇ ನೀವು ಎಂತಹ ವ್ಯಕ್ತಿತ್ವದವರು ಎಂಬುದನ್ನು ಕಂಡುಕೊಳ್ಳಬಹುದು ಎಂಬುದು ವೈದ್ಯ ಲೋಕ ತಿಳಿಪಡಿಸಿರುವ ವಿಧಾನವಾಗಿದೆ. ನಿಮ್ಮ ಹೆಸರಿನ ಪ್ರತಿಯೊಂದು ಅಕ್ಷರವೂ ಕೂಡ ನೀವು ಎಂತಹವರು ನಿಮ್ಮ ಸ್ವಭಾವವೇನು? ನಿಮ್ಮ ಗುಣವೇನು ಎಂಬುದನ್ನು ತಿಳಿಸುತ್ತದೆ.

ನಿಮ್ಮ ಹೆಸರಿನ ಒಳಗುಟ್ಟೇನು ಎಂಬುದನ್ನು ಬಲ್ಲಿರಾ?

your name affect your destiny

ನಮ್ಮ ವೇದ ಪುರಾಣದಲ್ಲಿ ಹೆಸರನ್ನಿಡುವುದಕ್ಕಾಗಿ ಒಂದು ಕಾರ್ಯಕ್ರಮವನ್ನೇ ಏರ್ಪಡಿಸುತ್ತಿದ್ದು ಇದಕ್ಕೆ ನಾಮಕರಣ ಶಾಸ್ತ್ರ ಎಂದು ಕರೆಯುತ್ತಾರೆ. ವೇದ ಗ್ರಂಥಗಳಿಂದ ಸೂಚಿಸಲಾದ ಇಲ್ಲವೇ ಗುರು ಹಿರಿಯರು ಮತ್ತು ಮಗುವಿನ ಹೆತ್ತವರು ಸಲಹೆ ಮಾಡಲಾದ ಹೆಸರುಗಳಿಂದ ಆ ಮಗುವನ್ನು ಕರೆಯುತ್ತಾರೆ. ಹೀಗೆ ಆ ಹೆಸರು ಮಗುವಿಗೆ ಒಂದು ಗುರುತನ್ನು ಒಂದು ಸ್ಥಾನವನ್ನು ತಂದುಕೊಡುತ್ತದೆ. ಆದರೆ ಹೆಸರಿನಲ್ಲಿರುವ ಅಕ್ಷರಗಳು ನಿಮ್ಮ ಸ್ವಭಾವವನ್ನು ತಿಳಿಯಪಡಿಸುತ್ತದೆ ಎಂಬುದು ನಿಮಗೆ ಗೊತ್ತೇ? ಹೌದು ಓದುಗರೇ ಇಂದಿನ ಲೇಖನದಲ್ಲಿ ಯಾವ ಅಕ್ಷರಗಳಿಂದ ನಿಮ್ಮ ಸ್ವಭಾವ ತಿಳಿಯಪಡುತ್ತದೆ ಮತ್ತು ಆ ಹೆಸರಿನ ಮಹತ್ವವೇನು ಎಂಬುದನ್ನು ತಿಳಿದುಕೊಳ್ಳೋಣ. ಒಮ್ಮೊಮ್ಮೆ ಹೆಸರಿನ ಅಕ್ಷರಗಳೂ ಕೂಡ ನಿಮ್ಮ ಸ್ವಭಾವವನ್ನು ಅಕ್ಷರಶಃವಾಗಿ ತಿಳಿಯಪಡಿಸುತ್ತದೆ....

ನಿಮ್ಮ ಹೆಸರಿನಲ್ಲಿರುವ ಅಕ್ಷರ ನಿಮ್ಮ ಜೀವನದ ಬಗ್ಗೆ ತಿಳಿಸುತ್ತದೆ

ನಿಮ್ಮ ಹೆಸರಿನಲ್ಲಿರುವ ಅಕ್ಷರ ನಿಮ್ಮ ಜೀವನದ ಬಗ್ಗೆ ತಿಳಿಸುತ್ತದೆ

ನಿಮ್ಮ ಹೆಸರನ್ನು ಸೂಚಿಸುವಲ್ಲಿ ಏಕೆ ಅಷ್ಟೊಂದು ಪರಿಶ್ರಮವಿರುತ್ತದೆ ಎಂಬುದು ನಿಮಗೆ ಗೊತ್ತೇ? ಬರೇ ಹೆಸರು ಹುಡುಕಲು ಜನರು ಏಕೆ ಸಮಯ ಕಳೆಯುತ್ತಿದ್ದಾರೆ ಎಂದು ನಿಮಗೆ ಅನ್ನಿಸಿರಬಹುದು ಆದರೆ ಈ ಹೆಸರು ಆ ವ್ಯಕ್ತಿಗೆ ಒಂದು ಗುರುತನ್ನು ಒದಗಿಸುತ್ತದೆ. ಆದ್ದರಿಂದ ಹೆಸರನ್ನು ಸೂಚಿಸುವಲ್ಲಿ ಸಾಕಷ್ಟು ಸಮಯ ಮತ್ತು ಪರಿಶೋಧನೆಯನ್ನು ಮಾಡಬೇಕಾಗುತ್ತದೆ.

ಹೆಸರಿನ ಅರ್ಥ ಮತ್ತು ವ್ಯಾಖ್ಯಾನ

ಹೆಸರಿನ ಅರ್ಥ ಮತ್ತು ವ್ಯಾಖ್ಯಾನ

ಅಂದರೆ ನಿರ್ದಿಷ್ಟವಾಗಿರುವಂತಹದ್ದು. ಒಟ್ಟಾರೆಯಾಗಿ ಹೇಳುವುದಾದರೆ ಹೆಸರು ಎಂಬುದು ಅಕ್ಷರಗಳ ಸಮೂಹವಾಗಿದೆ. ಇದು ವ್ಯಕ್ತಿಗೆ ಸ್ಥಾನಮಾನವನ್ನು ತಂದುಕೊಡುತ್ತದೆ. ವಿಶ್ವದಲ್ಲಿ ವ್ಯಕ್ತಿಗೆ ಇದು ನಿರ್ದಿಷ್ಟತೆಯನ್ನು ತಂದುಕೊಡುತ್ತದೆ.

ಹೆಸರು ಎಂದರೇನು?

ಹೆಸರು ಎಂದರೇನು?

ಪ್ರತಿಯೊಂದು ಹೆಸರೂ ಕೂಡ ಒಂದು ಅರ್ಥವನ್ನು ಹೊಂದಿದೆ. ಆದರೆ ಹೆತ್ತವರು ತಮ್ಮ ಮಗುವಿಗಾಗಿ ವ್ಯಕ್ತಿತ್ವವವನ್ನು ಬಣ್ಣಿಸುವ ಹೆಸರನ್ನು ಹುಡುಕುತ್ತಾರೆ. ಹಿಂದಿನ ಕಾಲಕ್ಕೆ ಹೋಲಿಸಿದಾಗ ಈಗ ಪೋಷಕರು ತಮ್ಮ ಮೆಚ್ಚಿನ ಸಿನಿಮಾ ನಟಿ ನಟರ ಹೆಸರನ್ನು ಮಗುವಿಗೆ ಇಡುತ್ತಿದ್ದಾರೆ.

ಹೆಸರನ್ನು ಆರಿಸುವುದು ಹೇಗೆ?

ಹೆಸರನ್ನು ಆರಿಸುವುದು ಹೇಗೆ?

ಕೆಲವರು ತಮ್ಮ ಹೆಸರನ್ನು ತಾವೇ ಆರಿಸಿಕೊಳ್ಳುತ್ತಾರೆ. ಹೆಚ್ಚಾಗಿ ತಮ್ಮ ಪೋಷಕರ ಹೆಸರುಗಳು ಇಲ್ಲವೇ ಕುಟುಂಬದವರ ಹೆಸರುಗಳನ್ನು ಆರಿಸುತ್ತಾರೆ. ಇದಕ್ಕಾಗಿ ನಾಮಕರಣ ಶಾಸ್ತ್ರವನ್ನು ಕೂಡ ಹಿರಿಯರು ಹಮ್ಮಿಕೊಳ್ಳುತ್ತಾರೆ. ಹಿಂದೆ ಹೆಸರು ನಮ್ಮ ಗುರುತನ್ನು ಒದಗಿಸುವ ಮೂಲವಾಗಿತ್ತು ಆದರೆ ಇಂದು ನಮ್ಮ ಹೆಸರು ನಮ್ಮ ಧರ್ಮ, ಸಮಾಜ ಮತ್ತು ಸ್ಥಳೀಯ ಮೌಲ್ಯಗಳನ್ನು ಪ್ರದರ್ಶಿಸುತ್ತದೆ.

ನಮ್ಮ ಹೆಸರಿನಲ್ಲಿರುವ ವೈವಿಧ್ಯತೆಗಳು

ನಮ್ಮ ಹೆಸರಿನಲ್ಲಿರುವ ವೈವಿಧ್ಯತೆಗಳು

ನಮ್ಮ ಹೆಸರಿನ ಪ್ರತಿಯೊಂದು ಅಕ್ಷರವೂ ಒಂದೊಂದು ವೈಬ್ರೇಶನ್ ಅನ್ನು ಹೊಂದಿದೆ. ಇದು ನಮ್ಮ ವ್ಯಕ್ತಿತ್ವದ ಪ್ರಧಾನ ಅಂಶವನ್ನು ತೋರ್ಪಡಿಸುತ್ತದೆ. ನಮ್ಮ ಹುಟ್ಟಿನಿಂದ ಸಾವಿನವರೆಗೆ ನಮ್ಮ ಹೆಸರು ಮಾತ್ರ ನಮ್ಮೊಂದಿಗೆ ಇರುತ್ತದೆ ನಮ್ಮ ಮರಣದ ನಂತರ ಕೂಡ ಹೆಸರು ನಮ್ಮೊಂದಿಗೆ ಶಾಶ್ವತವಾಗಿರುತ್ತದೆ. ಇನ್ನೂ ಕೆಲವರ ನಂಬಿಕೆಯ ಪ್ರಕಾರ ನಮ್ಮ ಹೆಸರು ನಮ್ಮ ಆತ್ಮದೊಂದಿಗೆ ಸಮ್ಮಿಲನವಾಗುತ್ತದೆ ಎಂದಾಗಿದೆ.

ಪ್ರಾರಂಭಿಸೋಣ

ಪ್ರಾರಂಭಿಸೋಣ

ನಮ್ಮ ಗುರುತನ್ನು ತಿಳಿಯಪಡಿಸುವ ನಮ್ಮ ಹೆಸರು ನಮ್ಮ ಜೀವನ, ಯಶಸ್ಸು ಮತ್ತು ಭವಿಷ್ಯದ ಮೇಲೂ ಪರಿಣಾಮ ಬೀರುತ್ತದೆ. ಹಾಗಿದ್ದರೆ ನಮ್ಮ ಹೆಸರಿನ ಮಹತ್ವವನ್ನು ತಿಳಿದುಕೊಳ್ಳೋಣ.

ಅಕ್ಷರಗಳು - ಡಿ, ಎಮ್ ಅಥವಾ ಟಿ

ಅಕ್ಷರಗಳು - ಡಿ, ಎಮ್ ಅಥವಾ ಟಿ

ವ್ಯಕ್ತಿಯ ಹೆಸರು ಈ ಅಕ್ಷರಗಳನ್ನು ಹೊಂದಿದ್ದರೆ ಅವರು ಪ್ರಯತ್ನಶೀಲರು ಎಂಬುದನ್ನು ಸೂಚಿಸುತ್ತದೆ. ಈ ಅಕ್ಷರವನ್ನು ಹೊಂದಿದ ಹೆಸರಿನವರು ವ್ಯಾಪಾರ ಜ್ಞಾನವನ್ನು ಹೊಂದಿರುತ್ತಾರೆ ಮತ್ತು ತಮ್ಮದೇ ಆದ ವೃತ್ತಿಯನ್ನು ಆರಂಭಿಸುವಲ್ಲಿ ಕೂಡ ನಿಷ್ಣಾತರಾಗಿರುತ್ತಾರೆ. ಯಶಸ್ಸು ಕೂಡ ಇವರಿಗೆ ಕಟ್ಟಿಟ್ಟ ಬುತ್ತಿಯಾಗಿದೆ.

ನಿಮ್ಮ ಹೆಸರು "S" ಅಕ್ಷರದಿಂದ ಪ್ರಾರಂಭವಾಗುತ್ತದೆಯೇ?

ಅಕ್ಷರಗಳು - ಇ, ಎನ್, ಎಚ್ ಅಥವಾ ಎಕ್ಸ್

ಅಕ್ಷರಗಳು - ಇ, ಎನ್, ಎಚ್ ಅಥವಾ ಎಕ್ಸ್

ಈ ಅಕ್ಷರಗಳಿರುವ ಹೆಸರಿನವರು ಪ್ರಸಿದ್ಧರಾಗಿರುತ್ತಾರೆ. ಹಣವನ್ನು ಉತ್ಪಾದಿಸಲು ನೀವು ತಲೆಕೆಡಿಸಿಕೊಳ್ಳಬೇಕಾದ ಅವಶ್ಯಕತೆಯೇ ಇಲ್ಲ. ಏಕೆಂದರೆ ಆರ್ಥಿಕ ಪ್ರಾಬಲ್ಯ ನಿಮ್ಮನ್ನು ಸಮೀಪಿಸುತ್ತದೆ. ನಿಮಗೆ ಮತ್ತು ಇತರರಿಗೂ ಉಳಿಸುವ ಮನೋಭಾವ ನಿಮ್ಮದಾಗಿರುತ್ತದೆ.

ಅಕ್ಷರಗಳು - ವಿ, ಯು, ಅಥವಾ ಡಬ್ಲ್ಯೂ

ಅಕ್ಷರಗಳು - ವಿ, ಯು, ಅಥವಾ ಡಬ್ಲ್ಯೂ

ಈ ಅಕ್ಷರವುಳ್ಳ ಹೆಸರಿನವರು ದೊಡ್ಡ ಖ್ಯಾತಿವಂತರಾಗಿರುತ್ತಾರೆ. ಇತರರಿಗೆ ಸಹಾಯ ಮಾಡುವುದರಲ್ಲಿ ಇವರೂ ಎಂದು ಮುಂದು. ತಮ್ಮ ಕುಟುಂಬದೊಂದಿಗೆ ಇವರು ಭಾವನಾತ್ಮಕವಾಗಿ ಸಂಪರ್ಕಹೊಂದಿದವರಾಗಿರುತ್ತಾರೆ. ಅದೃಷ್ಟ ಇವರ ಭಾಗದ್ದಾಗಿರುತ್ತದೆ.

ಅಕ್ಷರಗಳು - ಎ, ಐ, ಜೆ, ವೈ, ಅಥವಾ ಕ್ಯು

ಅಕ್ಷರಗಳು - ಎ, ಐ, ಜೆ, ವೈ, ಅಥವಾ ಕ್ಯು

ಇವರು ಹೆಚ್ಚಿನ ಗುರಿ ಹೊಂದಿದವರಾಗಿದ್ದು ತಮ್ಮ ಸಂಪೂರ್ಣ ಜೀವನದಲ್ಲಿ ಗುರಿ ಇದ್ದುಕೊಂಡು ಜೀವಿಸುವವರಾಗಿದ್ದಾರೆ. ತಮ್ಮ ಸ್ವಾತಂತ್ರ್ಯವನ್ನು ಇವರು ಪ್ರೀತಿಸುತ್ತಾರೆ ಮತ್ತು ಸಂತೋಷವನ್ನು ಹಂಚುತ್ತಾರೆ.

ಅಕ್ಷರಗಳು - ಬಿ, ಆರ್ ಅಥವಾ ಕೆ

ಅಕ್ಷರಗಳು - ಬಿ, ಆರ್ ಅಥವಾ ಕೆ

ಈ ಹೆಸರಿನವರು ತಮ್ಮ ಸ್ವಭಾವದಲ್ಲಿ ಕೊಂಚ ಸೂಕ್ಷ್ಮಪ್ರವೃತ್ತಿಯುಳ್ಳವರು. ಇವರು ಸ್ವಾರ್ಥಿಗಳೂ ಎಂದೇ ಹೇಳಬಹುದು. ಜೀವನದಲ್ಲಿ ಅಭದ್ರತೆ ಇವರನ್ನು ಕಾಡುತ್ತಿರುತ್ತದೆ.

ಅಕ್ಷರಗಳು - ಸಿ, ಜಿ, ಎಸ್ ಅಥವಾ ಎಲ್

ಅಕ್ಷರಗಳು - ಸಿ, ಜಿ, ಎಸ್ ಅಥವಾ ಎಲ್

ನಿಮ್ಮ ಹೆಸರು ಈ ಅಕ್ಷರಗಳಿಂದ ಆರಂಭವಾಗುತ್ತಿದ್ದರೆ ನಿಮ್ಮ ಒಳ್ಳೆಯ ಸ್ವಭಾವ ಮತ್ತು ಬುದ್ಧಿಮತ್ತೆಯನ್ನು ಇದು ಹೊರಸೂಸುತ್ತದೆ. ನಿಮ್ಮ ಮೃದುವಾದ, ಒಳ್ಳೆಯ, ಕಾಳಜಿ ಸ್ವಭಾವಕ್ಕೆ ನೀವು ಹೆಸರುವಾಸಿಯಾಗಿದ್ದೀರಿ. ಜನರ ಮೆಚ್ಚಿನವರಾಗಿ ನೀವು ಇರುತ್ತೀರಿ. ಇವರಲ್ಲಿ ಉತ್ತಮ ಬುದ್ಧಿವಂತಿಕೆ ಇರುತ್ತದೆ.

ಅಕ್ಷರಗಳು - ಒ ಅಥವಾ ಜೆಡ್

ಅಕ್ಷರಗಳು - ಒ ಅಥವಾ ಜೆಡ್

ನೀವು ಧರ್ಮದೊಂದಿಗೆ ಆಳವಾದ ಸಂಪರ್ಕವನ್ನು ಹೊಂದಿದವರಾಗಿದ್ದೀರಿ. ಧರ್ಮ ಕಾರ್ಯ ಮತ್ತು ಚಾರಿಟಿ ಕಾರ್ಯದಲ್ಲಿ ನೀವು ಯಾವಾಗಲೂ ತೊಡಗುತ್ತೀರಿ. ನೀವು ಆರ್ಥಿಕ ಸ್ಥಿತಿವಂತರಾಗಿರುತ್ತೀರಿ.

ಅಕ್ಷರಗಳು - ಪಿ ಅಥವಾ ಎಫ್

ಅಕ್ಷರಗಳು - ಪಿ ಅಥವಾ ಎಫ್

ಈ ಅಕ್ಷರವನ್ನು ಹೊಂದಿರುವ ವ್ಯಕ್ತಿಗಳು ಜೀವನದಲ್ಲಿ ಯಶಸ್ಸು ಪಡೆಯುವವರಾಗಿರುತ್ತಾರೆ. ನಿಮ್ಮ ವ್ಯಕ್ತಿತ್ವ ನಿಮ್ಮ ಸುತ್ತಲಿನವರ ಮೇಲೆ ಪ್ರಭಾವ ಬೀರುತ್ತದೆ.

English summary

The 'alphabets' in your name affect your life

Don’t you often wonder as to why there’s so much effort put in to decide one’s name? After all, it’s just a name, like a tag. Some people believe that it brings positive influence into their life, while others think of it as a unique identity
X
Desktop Bottom Promotion