For Quick Alerts
ALLOW NOTIFICATIONS  
For Daily Alerts

ನೋಡಿ ಈ ಐದು ರಾಶಿಯವರಿಗೆ ಸ್ವಲ್ಪ ಜಂಭ ಜಾಸ್ತಿಯಂತೆ!

|

ಜಂಭ ಎನ್ನುವುದು ವ್ಯಕ್ತಿಯಲ್ಲಿ ಸೊಕ್ಕಿನ ಭಾವ ಮೂಡಿಸುತ್ತದೆ. ಜಂಬ/ಸೊಕ್ಕು ಹೆಚ್ಚಾದಾಗ ವ್ಯಕ್ತಿ ಅನರ್ಥದ ಕೆಲಸ ಮಾಡಲು ಮುಂದಾಗುತ್ತಾನೆ. ಜೊತೆಗೆ ಹುಂಬುತನದ ಧೈರ್ಯ ಹಾಗೂ ವರ್ತನೆಗಳು ಉದ್ಭವ ಆಗುವುದು. ಇದರ ಪರಿಣಾಮವಾಗಿ ಸುತ್ತಮುತ್ತಲ ವ್ಯಕ್ತಿಗಳ ಮೇಲೆ ಕೆಟ್ಟ ಪರಿಣಾಮ ಬೀರುವುದು. ಜೊತೆಗೆ ಸಮಾಜದಲ್ಲಿ ನಕಾರಾತ್ಮಕ ಚಿಂತನೆಗಳಿಂದ ಗುರುತಿಸಿಕೊಳ್ಳುವವರಾಗುತ್ತಾರೆ. ಇಂತಹವರಿಂದ ಜನರು ಸಾಕಷ್ಟು ದೂರ ಉಳಿಯಲು ಬಯಸುತ್ತಾರೆ.

ವ್ಯಕ್ತಿಯ ವರ್ತನೆ ಮೂಲತಃ ಬೆಳವಣಿಗೆ ಅವಧಿಯ ವಾತಾವರಣವನ್ನು ಅವಲಂಭಿಸಿರುತ್ತದೆ. ಕೆಲವು ಗುಣಗಳು ಇತರರ ಅನುಕರಣೆಯಿಂದ ಬರುವುದು. ಬಹುತೇಕ ಗುಣಗಳು ಅವರ ರಾಶಿಚಕ್ರದಿಂದ ಬರುತ್ತದೆ. ಅಂತಹ ಗುಣಗಳ ಪ್ರಮಾಣ ಕಡಿಮೆ ಮಾಡಿಕೊಳ್ಳ ಬಹುದೇ ಹೊರತು ಅವುಗಳನ್ನು ಸಂಪೂರ್ಣವಾಗಿ ಹತ್ತಿಕ್ಕಲು ಸಾಧ್ಯವಿಲ್ಲ. ಅವು ಅವರವರ ಗ್ರಹಗತಿಗಳಿಗೆ ಅನುಗುಣವಾಗಿ ಹೊಂದಿರುವ ಸ್ವಭಾವಗಳಾಗಿರುತ್ತವೆ ಎಂದು ಹೇಳಲಾಗುವುದು. ನಿಮ್ಮ ಹಾಗೂ ನಿಮ್ಮವರ ಸ್ವಭಾವದಲ್ಲಿ ಜಂಭ/ಸೊಕ್ಕಿನ ಗುಣವಿದೆಯೇ? ಸೊಕ್ಕಿನ ಗುಣ ಇರುವ ರಾಶಿಚಕ್ರಗಳ ಪಟ್ಟಿಯಲ್ಲಿ ನೀವಿದ್ದೀರಾ? ಎನ್ನುವುದನ್ನು ತಿಳಿಯಲು ಮುಂದಿರುವ ವಿವರಣೆಯನ್ನು ಪರಿಶೀಲಿಸಿ...

 ಸಿಂಹ

ಸಿಂಹ

ಸಿಂಹ ರಾಶಿಯ ವ್ಯಕ್ತಿಗಳು ಸಾಮಾನ್ಯವಾಗಿ ಜಂಭದ/ಸೊಕ್ಕಿನ ಗುಣವನ್ನು ಹೊಂದಿರುತ್ತಾರೆ. ಇವರು ಯಾಕೆ ಈ ಸ್ವಭಾವವನ್ನು ಹೊಂದಿರುತ್ತಾರೆ? ಎನ್ನುವುದನ್ನು ಯಾರೂ ತಿಳಿದಿಲ್ಲ. ಇವರಿಗೆ ಸಂತೋಷವುಂಟಾದಾಗ ಹಿರಿಹಿರಿ ಹಿಗ್ಗುತ್ತಾರೆ. ಜೊತೆಗೆ ಸಾಧನೆ ಹಾಗೂ ಎಲ್ಲವನ್ನೂ ಮಾಡಿದ್ದೇನೆ ಎಂದು ಜಂಭದ ಮೂಲಕ ತೋರಿಸಿಕೊಳ್ಳುತ್ತಾರೆ ಎನ್ನಲಾಗುವುದು. ಇವರ ಜಂಭದ ವರ್ತನೆ ಅಥವಾ ಗುಣದಿಂದಲೇ ಜನರ ಬಾಯಿಗೆ ಬೀಳುವ ಸಾಧ್ಯತೆಗಳು ಹೆಚ್ಚು ಎಂದು ಹೇಳಲಾಗುವುದು.

 ಮೇಷ

ಮೇಷ

ಜಂಭದ ಸ್ವಭಾವದ ವ್ಯಕ್ತಿಗಳ ಸಾಲಿನಲ್ಲಿ ಮೇಷ ರಾಶಿಯ ವ್ಯಕ್ತಿಗಳು ಬರುತ್ತಾರೆ. ಇವರಲ್ಲಿ ಯಾವಾಗಲೂ ತಾನೇ ಸರಿ ಎನ್ನುವ ಸ್ವಭಾವ ಇರುತ್ತದೆ. ಇತರರಿಗಿಂತ ತಾನೇ ಸರ್ವ ಶ್ರೇಷ್ಠ ಎನ್ನುವ ಭಾವನೆ ಇರುತ್ತದೆ. ಈ ಕಾರಣದಿಂದಲೇ ಅವರು ಜಂಭದ/ಸೊಕ್ಕಿನ ವರ್ತನೆಯನ್ನು ತೋರುತ್ತಾರೆ. ಈ ರಾಶಿಯವರ ಬಳಿ ಯಾವುದೇ ಕಾರಣಕ್ಕೂ ವಾದಕ್ಕೆ ಇಳಿಯ ಬಾರದು. ಇವರ ವಾದದಲ್ಲಿ ಯಾವುದೇ ಕಾರಣಕ್ಕೂ ಸೋಲನ್ನು ಒಪ್ಪಿಕೊಳ್ಳುವುದಿಲ್ಲ. ತಮ್ಮ ಜಂಬದ ಸ್ವಭಾವವನ್ನು ಸಾಮಾನ್ಯವಾಗಿ ಎಲ್ಲಾ ವಿಚಾರದಲ್ಲೂ ತೋರಿಸುತ್ತಾರೆ.

ವೃಷಭ

ವೃಷಭ

ವೃಷಭ ರಾಶಿಯವರು ತಮ್ಮ ವರ್ತನೆಯಲ್ಲಿಯೇ ಜಂಬದ ಗುಣವನ್ನು ತೋರಿಸಿಕೊಳ್ಳುತ್ತಾರೆ. ಮೊಂಡು ಸ್ವಭಾವದ ವ್ಯಕ್ತಿಗಳಾದ ಇವರು ಸದಾ ತಮ್ಮದೇ ಆದ ವಾದ ಮತ್ತು ವರ್ತನೆಯನ್ನು ಹೊಂದಿರುತ್ತಾರೆ. ಕೆಲವೊಮ್ಮೆ ಇವರ ವಿಲಕ್ಷಣವಾದ ಚಿಂತನೆ ಹಾಗೂ ಮನಃಸ್ಥಿತಿಯು ಇವರ ವರ್ತನೆಗೆ ಕಾರಣವಾಗಬಹುದು. ಅಲ್ಪ ಪ್ರಮಾಣದಲ್ಲಿ ಅನುಕೂಲತೆಯನ್ನು ಹೊಂದಿದ್ದರೂ ಅಧಿಕ ಪ್ರಮಾಣದ ಸಂಪತ್ತಿರುವಂತೆ ತೋರಿಸಿಕೊಳ್ಳುವರು.

ತುಲಾ

ತುಲಾ

ಈ ರಾಶಿಚಕ್ರದ ವ್ಯಕ್ತಿಗಳು ಮೇಷ ಮತ್ತು ವೃಷಭ ರಾಶಿಯವರಂತೆ ತೋರ್ಪಡಿಕೆ ಜಂಬವನ್ನು ಹೊಂದಿಲ್ಲದಿದ್ದರೂ ತಮ್ಮದೇ ಆದ ಆಕರ್ಷಣೆಯನ್ನು ಪ್ರದರ್ಶಿಸುವುದರ ಮೂಲಕ ಜಂಬವನ್ನು ಸಾದರ ಪಡಿಸಿಕೊಳ್ಳುತ್ತಾರೆ. ಇವರ ಸಮಸ್ಯೆ ಎಂದರೆ ಇವರಲ್ಲಿ ವ್ಯಕ್ತ ಪಡಿಸಲಾಗದ ಭಾವನೆಗಳು ಎನ್ನಬಹುದು. ಇವರು ಒಮ್ಮೆ ಸಿಟ್ಟು ಅಥವಾ ಮೊಂಡು ತನಕ್ಕೆ ಒಳಗಾದರೆ ಇವರ ಮನಃಸ್ಥಿತಿಯು ಸರಿಯಾಗಲು ಒಂದು ವಾರಗಳ ಸಮಯ ಬೇಕಾಗುವುದು. ಬುದ್ಧಿವಂತರು ಹಾಗೂ ಇತರರ ಸಮಸ್ಯೆಯನ್ನು ನಿವಾರಿಸುವಷ್ಟು ಕುಶಲತೆ ಇವರಲ್ಲಿದೆ. ಆದರೆ ಜಂಭ/ಸೊಕ್ಕಿನ ಸ್ವಭಾವವೂ ಅದರಲ್ಲಿ ಕೂಡಿದೆ ಎನ್ನುವುದನ್ನು ಮರೆಯುವಂತಿಲ್ಲ.

ಕನ್ಯಾ

ಕನ್ಯಾ

ಈ ರಾಶಿಯವರಿಗೆ ಜಂಭ ಎನ್ನುವುದು ಹೆಚ್ಚಿನ ಪ್ರಮಾಣದಲ್ಲಿಯೇ ಇದೆ ಎನ್ನಬಹುದು. ಇವರ ಅಸ್ತಿತ್ವದಲ್ಲಿಯೇ ಒಂದಾಗಿ ಉಳಿದುಕೊಂಡಿದೆ ಎಂದು ತೋರುವುದು. ಕೆಲವು ಕೆಟ್ಟ ಹವ್ಯಾಸಗಳು ಇವರ ಈ ಸ್ವಭಾವದ ಹುಟ್ಟಿಗೆ ಕಾರಣವಾಗುತ್ತದೆ ಎಂದು ಹೇಳಲಾಗುವುದು. ಇವರು ಎಲ್ಲವೂ ತಾವು ಅಂದುಕೊಂಡ ರೀತಿಯಲ್ಲಿಯೇ ಆಗಬೇಕು ಎಂದು ಬಯಸುತ್ತಾರೆ. ಕೆಲವು ಕೆಲಸವನ್ನು ತಮ್ಮದೇ ಆದ ಆದರ್ಶಗಳ ಮೂಲಕ ನೆರವೇರಿಸುತ್ತಾರೆ. ಆಗ ತಮ್ಮ ಹೆಮ್ಮೆ ಹಾಗೂ ಜಂಬದ ವರ್ತನೆಯನ್ನು ತೋರುವರು ಎಂದು ಹೇಳಲಾಗುವುದು.

English summary

The 5 Cockiest Zodiac Signs

When it comes to unappealing qualities, cockiness is right up there, close to the very top of the list. Cocky people actually make arrogant people look and feel tolerable, that’s just how awful a quality it is.But while some people deserve to be cocky, like whoever will be the first person to invent the time machine, those who are cocky without any reason to be cocky are pretty much the worst of the very worst. Since that’s the case, you owe it to yourself to stay faraway from these cocky types. Surely your horoscope will advise you as such. And that means staying away from the five cockiest zodiac signs, because, to put it mildly, ugh.
X
Desktop Bottom Promotion