For Quick Alerts
ALLOW NOTIFICATIONS  
For Daily Alerts

ಯಾವ್ಯಾವ ರಾಶಿಯವರಿಗೆ ಯಶಸ್ಸು ಹೇಗೆ ದೊರೆಯಲಿದೆ ಎಂಬುದನ್ನು ನೋಡಿ...

|

ಸತತ ಪ್ರಯತ್ನ ಹಾಗೂ ಶ್ರಮದಿಂದ ಯಶಸ್ಸು ಎನ್ನುವುದು ದೊರೆಯುವುದು. ಯಶಸ್ಸಿನ ಹಿಂದೆ ಓಡುವವರು ಸಾಕಷ್ಟು ಕಷ್ಟಗಳನ್ನು ಎದುರಿಸಿ ಮುಂದೆ ಸಾಗುತ್ತಾರೆ. ಆದರೆ ಕೆಲವೊಮ್ಮೆ ಅದೃಷ್ಟ ಅನುಕೂಲಕರ ಸ್ಥಿತಿಯಲ್ಲಿಲ್ಲ ಎಂದಾಗ ಪರಿಶ್ರಮಕ್ಕೆ ಸೂಕ್ತ ಫಲಿತಾಂಶ ದೊರೆಯದೆ ಇರಬಹುದು. ಅಂತಹ ಸಂದರ್ಭದಲ್ಲಿ ಮಾನಸಿಕ ಸ್ಥಿತಿ ಕುಂದುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ.

ಯಶಸ್ಸು ಎನ್ನುವುದು ಕೇವಲ ನಾವು ಅಂದುಕೊಂಡ ತಕ್ಷಣ ದೊರೆಯುವುದಿಲ್ಲ. ಎಷ್ಟರ ಮಟ್ಟಿಗೆ ಯಶಸ್ಸು ದೊರೆಯುವುದು? ಎಲ್ಲಿಯವರೆಗೆ ನಮಗೆ ಯಶಸ್ಸನ್ನು ಅನುಭವಿಸುವ ಅವಕಾಶ ಇರುವುದು? ಎಲ್ಲವೂ ನಮ್ಮ ರಾಶಿಚಕ್ರ ಹಾಗೂ ಕುಂಡಲಿಗೆ ಅನುಗುಣವಾಗಿ ಲಭಿಸುವುದು ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ. ನಿಮಗೆ ನಿಮ್ಮ ಯಶಸ್ಸು ಹಾಗೂ ಜೀವನದ ಕುರಿತು ತಿಳಿದುಕೊಳ್ಳುವ ಕುತೂಹಲವಿದ್ದರೆ ಈ ಮುಂದೆ ವಿವರಿಸಲಾದ ವಿವರಣೆಯನ್ನು ಪರಿಶೀಲಿಸಿ...

ಮೇಷ

ಮೇಷ

ಧೈರ್ಯಶಾಲಿ, ಆತ್ಮವಿಶ್ವಾಸ ಹೊಂದಿದವರು ಹಾಗೂ ಶಕ್ತಿಯುತವಾದವರು ಮೇಷರಾಶಿಯವರು. ಇವರು ಉತ್ತಮ ರೀತಿಯ ಕಾರ್ಯ ನಿರ್ವಹಣೆಯ ಸಾಮಥ್ರ್ಯವನ್ನು ಹೊಂದಿದ ವ್ಯಕ್ತಿಗಳಾಗಿರುತ್ತಾರೆ. ಹಾಗಾಗಿ ಇವರು ಎಲ್ಲಾ ಸಂಗತಿಯನ್ನು ಕ್ರಮಬದ್ಧವಾಗಿ ಇರಿಸಿಕೊಳ್ಳಬಲ್ಲರು. ದೊಡ್ಡ ದೊಡ್ಡ ಕನಸುಗಳನ್ನು ಹೊಂದಿದ ಇವರು. ಸರ್ವಕಾಲಿಕವಾಗಿ ಉತ್ಸಾಹದಿಂದ ಕೂಡಿರುತ್ತಾರೆ. ಇವರು ತಮ್ಮ ವೃತ್ತಿ ಕ್ಷೇತ್ರದಲ್ಲಿ ಮುಖ್ಯಸ್ಥರಾಗಿ ಅಥವಾ ಮೇಲ್ದರ್ಜೆಯ ಸ್ಥಾನವನ್ನು ಪಡೆದುಕೊಳ್ಳುತ್ತಾರೆ.

ವೃಷಭ

ವೃಷಭ

ಶ್ರಮದಿಂದ ದುಡಿಯುವ ಸ್ವಭಾವದವರಾದ ಇವರು ಅದ್ಭುತವಾದ ನಾಯಕತ್ವ ಗುಣವನ್ನು ಹೊಂದಿರುತ್ತಾರೆ. ಹಠಮಾರಿಯ ಸ್ವಭಾವದವರಾದ ಇವರು ಹಿಡಿದ ಕೆಲಸವನ್ನು ಅಷ್ಟು ಸುಲಭವಾಗಿ ಬಿಡುವುದಿಲ್ಲ. ಹಣಕಾಸು ನಿರ್ವಹಣೆಯನ್ನು ಸುಲಭವಾಗಿ ನಿರ್ವಹಿಸಬಲ್ಲರು. ಅಂತಿಮವಾಗಿ ಉತ್ತಮ ಹಣಕಾಸು ಸ್ಥಿತಿಯನ್ನು ಹಾಗೂ ಭೂಮಿಯನ್ನು ಪಡೆದುಕೊಳ್ಳುವರು.

ಮಿಥುನ

ಮಿಥುನ

ಇವರು ಹೆಚ್ಚು ಆರಾಮದಾಯಕವಾಗಿರುವುದನ್ನು ಇಷ್ಟಪಡುತ್ತಾರೆ. ಇವರು ಕೆಲವೊಮ್ಮೆ ಬಹಳ ಸಕ್ರಿಯವಾಗಿ ಕಾಣುತ್ತಾರೆ. ಒಂದೇ ಸ್ಥಳದಲ್ಲಿ ಇರದ ಇವರು ಆಗಾಗ ಕೆಲಸದಲ್ಲಿ ವಿರಾಮವನ್ನು ಪಡೆದುಕೊಳ್ಳುತ್ತಾರೆ. ದೀರ್ಘಾವಧಿಯ ನಂತರ ತಮ್ಮ ಕೆಲಸವನ್ನು ಪೂರ್ಣ ಗೊಳಿಸುವುದರ ಮೂಲಕ ಯಶಸ್ಸನ್ನು ಪಡೆದು ಕೊಳ್ಳುವರು.

ಕರ್ಕ

ಕರ್ಕ

ಈ ವ್ಯಕ್ತಿಗಳು ಭಾವನಾತ್ಮಕ ಜೀವಿಗಳು. ಇವರು ಎಲ್ಲಾ ವ್ಯವಹಾರಗಳಲ್ಲೂ ನಿಷ್ಠಾವಂತರಾಗಿರುತ್ತಾರೆ. ಇವರು ಬಹುಬೇಗ ಕೆಲಸದಲ್ಲಿ ಬೇಸರವನ್ನು ಅನುಭವಿಸುವರು. ಹಾಗಾಗಿ ಇವರಿಗೆ ನಿರಂತರವಾಗಿ ಪ್ರೇರಣೆ ದೊರೆಯುತ್ತಲೇ ಇರಬೇಕಾಗುವುದು. ಆರೈಕೆಯ ವಿಚಾರದಲ್ಲಿ ಇವರು ಅದ್ಭುತವಾಗಿ ಕಾರ್ಯ ನಿರ್ವಹಿಸುತ್ತಾರೆ. ಇವರು ಸಾಮಾಜಿಕ ಕೆಲಸವನ್ನು ಬಹಳ ಹೃದಯಪೂರ್ವಕವಾಗಿ ನಿರ್ವಹಿಸುವರು. ಇವರು ಮಕ್ಕಳ ಆರೈಕೆಯನ್ನು ಬಹಳ ಇಷ್ಟಪಟ್ಟು ಮಾಡುವರು.

ಸಿಂಹ

ಸಿಂಹ

ಈ ರಾಶಿಯವರು ಮಾಡುವ ಕೆಲಸದಲ್ಲಿ ತುಂಬಾ ಖಚಿತತೆಮತ್ತು ಭಾವೋದ್ರಿಕ್ತರಾಗಿ ಇರುತ್ತಾರೆ. ತಮ್ಮ ಕೆಲಸದ ವಿಚಾರದಲ್ಲಿ ಬಹಳ ನಿಷ್ಠೆ ಹಾಗೂ ಸಮರ್ಪಕತೆಯನ್ನು ತೋರುತ್ತಾರೆ. ಉತ್ತಮ, ಕಲಾಕಾರರಾದ ಇವರು ಈ ಕಲೆಗೆ ಸಂಬಂಧಿಸಿದ ಕ್ಷೇತ್ರದಲ್ಲಿ ಕೆಲಸ ಮಾಡುವುದರಿಂದ ಬಹುಬೇಗ ಮೆಚ್ಚುಗೆ ಮತ್ತು ಯಶಸ್ಸನ್ನು ಪಡೆದುಕೊಳ್ಳುತ್ತಾರೆ.

ಕನ್ಯಾ

ಕನ್ಯಾ

ತರ್ಕಬದ್ಧ, ವಿಶ್ಲೇಷಣಾತ್ಮಕ ಮತ್ತು ಶೋಧಕ ಜೀವಿಗಳು. ಇವರು ಸಾಕಷ್ಟು ಪ್ರಾಯೋಗಿಕವಾಗಿ ಚಿಂತನೆ ನಡೆಸುತ್ತಾರೆ. ಭಾವನೆಗಳ ವಿಚಾರದಲ್ಲಿ ಬಹಳ ಆಳವಾದ ಭಾವನೆಯನ್ನು ಹೊಂದಿರುತ್ತಾರೆ. ಸಂಶೋಧಕ ವ್ಯಕ್ತಿತ್ವದವರಾದ ಇವರು ಪತ್ತೆದಾರರು, ವಕೀಲರು, ಸಂಪಾದಕರು, ಸಂಶೋಧಕರಾಗಿ ಕೆಲಸ ನಿರ್ವಹಿಸಿದರೆ ಬಹುಬೇಗ ಹಾಗೂ ನಿರಂತರ ಯಶಸ್ಸನ್ನು ಪಡೆದುಕೊಳ್ಳುವರು.

ತುಲಾ

ತುಲಾ

ಭಾವನಾತ್ಮಕ ಜೀವಿಯಾದ ಇವರು ಸನ್ನಿವೇಶ ಹಾಗೂ ವಿಷಯಗಳನ್ನು ಅದ್ಭುತವಾಗಿ ನಿರ್ವಹಿಸಬಲ್ಲರು. ಯೋಜನೆ ಮತ್ತು ವಿನ್ಯಾಸಕ್ಕೆ ಸಂಬಂಧಿಸಿದ ಕಲೆಗಳಿಗೆ ಸಂಬಂಧಿಸಿದ ಕ್ಷೇತ್ರದಲ್ಲಿ ಬಹುಬೇಗ ಸಾಧನೆ ಮಾಡುವರು. ಮದುವೆಯ ಸಂಯೋಜಕರು, ಆಂತರಿಕ ವಿನ್ಯಾಸಗಾರರು, ಗ್ರಾಹಕರ ಸೇವೆ, ಟ್ರಾವೆಲ್ ಏಜೆಂಟ್‍ಗಳಾಗಿ ಕಾರ್ಯ ನಿರ್ವಹಿಸಿದರೆ ನಿರಂತರ ಯಶಸನ್ನು ಪಡೆದುಕೊಳ್ಳುವರು.

ವೃಶ್ಚಿಕ

ವೃಶ್ಚಿಕ

ಇವರು ಕೆಲಸದಲ್ಲಿ ಸವಾಲುಗಳನ್ನು ಸ್ವೀಕರಿಸಲು ಇಷ್ಟಪಡುವರು. ಸಂಶೋಧನೆ ಅಗತ್ಯವಿಲ್ಲದ ಕೆಲಸವನ್ನು ಇವರು ಇಷ್ಟಪಡದೆ ಇರಬಹುದು. ಹಾಗಾಗಿ ಇವರು ಸಂಶೋಧಕರು ಹಾಗೂ ಪತ್ತೆದಾರಿ ಕೆಲಸದಲ್ಲಿ ಯಶಸ್ಸುಕಾಣುವರು.

ಧನು

ಧನು

ಇವರು ಉದಾರ ಗುಣದವರು. ಯಾವುದೇ ನಿಯಮಗಳಿಂದ ಇವರನ್ನು ನಿರ್ಬಂಧಿಸಿದರೆ ಅದನ್ನು ಇಷ್ಟಪಡರು. ಇದರಿಂದ ಅವರ ಸಾಮಥ್ರ್ಯಕ್ಕೆ ಸೀಮೆಯನ್ನು ಹಾಕಿದಂತಾಗುವುದು. ಇವರು ತಾಳ್ಮೆ ಹಾಗೂ ಸಮಾಲೋಚನೆಯನ್ನು ಹೊಂದಿರುವರು. ಪ್ರವಾಸೋದ್ಯಮ ಕ್ಷೇತ್ರದಲ್ಲಿ ಕೆಲಸ ಮಾಡುವುದರಿಂದ ಉತ್ತಮ ಯಶಸ್ಸು ಕಂಡುಕೊಳ್ಳುವರು.

ಮಕರ

ಮಕರ

ಇವರು ಮಹತ್ವಕಾಂಕ್ಷಿಗಳು. ಯಶಸ್ಸನ್ನು ಸಾಧಿಸಲು ಸಾಕಷ್ಟು ಶ್ರಮವನ್ನು ವಹಿಸುವರು. ಅದರಲ್ಲಿ ಅವರಿಗೊಂದು ಮಿತಿ ಎನ್ನುವುದು ಇರುವುದಿಲ್ಲ. ಮನಸ್ಸನ್ನು ಸಾಕಷ್ಟು ಸಮಯಗಳ ಕಾಲ ನಿಯಂತ್ರಣದಲ್ಲಿ ಇಟ್ಟುಕೊಳ್ಳುವ ಶಕ್ತಿಯನ್ನು ಹೊಂದಿದವರಾಗಿರುತ್ತಾರೆ. ವಾಸ್ತುಶಿಲ್ಪ ಅಥವಾ ಇಂಜಿನಿಯರಿಂಗ್ ಕ್ಷೇತ್ರದಲ್ಲಿ ವೃತ್ತಿಜೀವನದ ಆಯ್ಕೆ ಮಾಡಿಕೊಂಡರೆ ಸಾಕಷ್ಟು ಸಾಧನೆ ಮಾಡಬಹುದು.

ಕುಂಭ

ಕುಂಭ

ಸಾಂಪ್ರದಾಯಿಕ ಪರಿಸರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವವರು ಇವರು. ಇವರು ಯಾವುದೇ ಪ್ರಾಬಲ್ಯ ಹೊಂದಲು ಇಷ್ಟಪಡುವುದಿಲ್ಲ. ಉತ್ತಮ ಕೇಳುಗರಾದ ಇವರು ಜೀವನ ಮತ್ತು ಅದರ ಸಮಸ್ಯೆಗಳನ್ನು ಪರಿಹರಿಸುವಲ್ಲಿ ತಮ್ಮದೇ ಆದ ವಿಧಾನವನ್ನು ಅನುಸರಿಸುತ್ತಾರೆ. ಇವರು ಯಾವುದೇ ಕೆಲಸದಲ್ಲಾದರೂ ಕೆಲಸ ನಿರ್ವಹಿಸುವುದರ ಮೂಲಕ ಯಶಸ್ಸನ್ನು ಕಂಡುಕೊಳ್ಳುವರು.

ಮೀನ

ಮೀನ

ಇವರು ಕೆಲವೊಮ್ಮೆ ಕಲಾತ್ಮಕ ರೀತಿಯಲ್ಲಿ ಇರುತ್ತಾರೆ. ಇವರ ಬಗ್ಗೆ ಖಚಿತವಾದ ವಿಚಾರಗಳನ್ನು ಹೇಳಬೇಕು ಎಂದರೆ, ಇತರರು ತಮ್ಮ ಬಗ್ಗೆ ಹೇಗೆ ಚಿಂತಿಸುತ್ತಾರೆ ಎನ್ನುವುದನ್ನು ಯೋಚಿಸುವುದಿಲ್ಲ. ತಮಗೆ ಬೇಕಾದದ್ದನ್ನು ಪಡೆದುಕೊಳ್ಳಲು ಮುಂದಾಗುತ್ತಾರೆ. ಜೊತೆಗೆ ಅವರ ಸಹಾಯಕ್ಕಾಗಿ ಸನ್ನಿವೇಶಗಳನ್ನು ಬಳಸಿಕೊಳ್ಳುವರು. ಹೆಚ್ಚಿನ ಸಮಯವನ್ನು ಇವರು ಬಿಡುವಿನ ಸಮಯವಾಗಿ ಕಳೆಯುವುದಿಲ್ಲ. ಔಷಧ ಮತ್ತು ಆರೋಗ್ಯ ಕ್ಷೇತ್ರಕ್ಕೆ ಇವರು ಸೂಕ್ತರಾಗಿರುತ್ತಾರೆ.

English summary

Success Predictions Based On Your Zodiac Sign

Ever wondered how much success you are going to achieve? Or where you are going to land after a few years? Or what should be the ideal job title for you and whether the position you are working at, today, is all you are going to achieve in the long run? Well, here are the answers to all such questions. A brief insight into the success predictions based on your zodiac sign. Take a look.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more