For Quick Alerts
ALLOW NOTIFICATIONS  
For Daily Alerts

ತಮ್ಮ ಡ್ರೆಸ್ ಸ್ಟೈಲ್‌ನಿಂದಲೇ ಇತರರನ್ನು ಆಕರ್ಷಿಸುವ ರಾಶಿಚಕ್ರದವರು!

|

ಉಡುಗೆ ಎನ್ನುವುದು ನಮ್ಮ ಮಾನವನ್ನು ಮುಚ್ಚುವ ಒಂದು ವಸ್ತುವಾಗಿರಬಹುದು. ಆದರೆ ಅದರಿಂದಲೂ ನಮ್ಮ ಸೌಂದರ್ಯ ಹೆಚ್ಚುವುದು. ನಮ್ಮ ಉಡುಗೆ ತೊಡುಗೆಯಿಂದಲೂ ಸಮಾಜದಲ್ಲಿ ನಮ್ಮನ್ನು ಗುರುತಿಸಿಕೊಳ್ಳಬಹುದು. ನಮ್ಮ ಬಗ್ಗೆ ಇತರರು ಗೌರವ ಅಥವಾ ಪ್ರೀತಿ-ವಿಶ್ವಾಸವನ್ನು ತೋರಬೇಕು ಎಂದಾದರೆ ನಮ್ಮ ಉಡುಗೆ ತೊಡುಗೆ ಸೂಕ್ತವಾಗಿರಬೇಕು. ಉತ್ತಮ ಸ್ಥಾನದಲ್ಲಿ ನಾವಿದ್ದು, ನಮ್ಮ ಉಡುಗೆ ಕಳಪೆ ಮಟ್ಟದಲ್ಲಿದ್ದರೂ ನಮ್ಮ ಸುತ್ತಲಿನ ಜನರು ನಮ್ಮ ಬಗ್ಗೆ ಕೆಟ್ಟ ಭಾವನೆಯನ್ನು ತೋರಬಹುದು. ಹಾಗಾಗಿಯೇ ಊಟ ನಮ್ಮ ಇಷ್ಟಕ್ಕೆ ಮಾಡಿದರೂ, ತೊಡುವ ಉಡುಗೆ ಇತರರಿಗೆ ಅಸಹ್ಯ ಮೂಡದಂತೆ ಇರಬೇಕು ಎನ್ನುತ್ತಾರೆ.

ಜೀವನದಲ್ಲಿ ಕೌಶಲ್ಯ ಎನ್ನುವುದು ಕೇವಲ ದೊಡ್ಡ ದೊಡ್ಡ ವಿಚಾರಗಳಿಗೆ ಸೀಮಿತವಾಗಿರುವುದಿಲ್ಲ. ಸಣ್ಣ-ಪುಟ್ಟ ವಿಷಯಗಳ ಬಗ್ಗೆಯೂ ನಮಗೆ ಸೂಕ್ತ ಜ್ಞಾನ ಹಾಗೂ ಕೌಶಲ್ಯ ವಿದ್ದರೆ ಸಾಕಷ್ಟು ಉತ್ತಮ ಕೆಲಸ ಮಾಡಬಹುದು. ಅಲ್ಲದೆ ನಮ್ಮ ಜೀವನದಲ್ಲಿ ಯಾವುದು ಋಣಾತ್ಮಕವಾದದ್ದು? ಯಾವುದು ಧನಾತ್ಮಕವಾದದ್ದು ಎನ್ನುವುದನ್ನು ಗುರುತಿಸಲು ಸಾಧ್ಯವಾಗುತ್ತದೆ. ಸಮಾಜದಲ್ಲಿ ನಾವು ಏನು ಓದಿದ್ದೇವೆ? ಯಾವ ಕೆಲಸವನ್ನು ಮಾಡುತ್ತೇವೆ? ನಮ್ಮ ವರ್ತನೆ ಇತರರೊಂದಿಗೆ ಹೇಗಿರಬೇಕು? ಎನ್ನುವುದರ ಜೊತೆಗೆ ನಾವು ಹೇಗೆ ವಿಷಯವನ್ನು ಪರಿಶೀಲಿಸುತ್ತೇವೆ? ಅದನ್ನು ಹೇಗೆ ಅವುಗಳನ್ನು ನಮ್ಮ ಜೀವನದಲ್ಲಿ ಅನುಸರಿಸಿಕೊಳ್ಳುತ್ತೇವೆ ಎನ್ನುವುದು ಬಹು ಮುಖ್ಯ ಸಂಗತಿಯಾಗಿರುತ್ತದೆ.

ಹೆಣ್ಣಿಗೆ ಕೈಬಳೆ, ಕಿವಿಯೋಲೆ, ಹಣೆ ಬಟ್ಟು, ಕಣ್ಣಿಗೆ ಹಚ್ಚುವ ಕಾಡಿಗೆ ಹೀಗೆ ಸೂಕ್ಷ್ಮವಾದ ಸೌಂದರ್ಯ ಸಲಕರಣೆಯನ್ನು ಹೇಗೆ ಬಳಸ ಬೇಕು ಎನ್ನುವ ಸೂಕ್ಷ್ಮವಾದ ಕೌಶಲ್ಯ ತಿಳಿದಿರಬೇಕೋ ಹಾಗೆ ಪ್ರತಿಯೊಬ್ಬರಿಗೂ ಪ್ರತಿಯೊಂದು ಸಣ್ಣ ಪುಟ್ಟ ವಿಚಾರದ ಬಗ್ಗೆಯೂ ಸೂಕ್ತ ಮಾಹಿತಿ ತಿಳಿದಿರಬೇಕು. ಅದನ್ನು ನಾವು ನಮ್ಮ ಜೀವನದಲ್ಲಿ ಹೇಗೆ ಅನುಸರಿಸಿಕೊಳ್ಳುತ್ತೇವೆ ಎನ್ನುವುದರ ಬಗ್ಗೆ ಸರಿಯಾದ ಸ್ಪಷ್ಟತೆ ಇರಬೇಕಾಗುತ್ತದೆ. ಇಲ್ಲವಾದರೆ ಗೊಂದಲವಾದ ಮನಸ್ಸು ಅಥವಾ ಬುದ್ಧಿಯು ನಮ್ಮನ್ನು ತಪ್ಪು ದಾರಿಗೆ ಕರೆದೊಯ್ಯಬಹುದು.

ಅಂತಹ ಒಂದು ಉತ್ತಮ ಕೌಶಲ್ಯ ಅಥವಾ ದಿನನಿತ್ಯಕ್ಕೆ ಅಗತ್ಯವಾದ ವಿಚಾರಗಳಲ್ಲಿ ತೊಡುವ ಉಡುಗೆಯೂ ಒಂದು. ನಾವು ಧರಿಸುವ ಉಡುಗೆ ಸಂದರ್ಭಕ್ಕೆ ಹಾಗೂ ಸಮಯಕ್ಕೆ ಸೂಕ್ತ ರೀತಿಯಲ್ಲಿ ಇರಬೇಕು. ನಮ್ಮ ಸ್ಥಿತಿಗೆ ತಕ್ಕಂತಹ ಉಡುಗೆ ತೊಡುವುದು ಅಥವಾ ನಮ್ಮ ಕೆಲಸ ಕಾರ್ಯಗಳಿಗೆ ಅನುಗುಣವಾಗಿ ಬಟ್ಟೆ ಧರಿಸುವುದು ಒಂದು ಕೌಶಲ್ಯ. ಅದು ಎಲ್ಲರೂ ಉತ್ತಮವಾಗಿ ನಿರ್ವಹಿಸುತ್ತಾರೆ ಎನ್ನಲಾಗುವುದಿಲ್ಲ. ಕೆಲವರು ತಮ್ಮ ಉಡುಗೆಯನ್ನು ಹೇಗೆ ಧರಿಸಬೇಕು? ಯಾವ ಸಂದರ್ಭದಲ್ಲಿ ಹೇಗಿರಬೇಕು? ನಮ್ಮ ಉಡುಗೆಯಿಂದ ಇತರರು ಹೇಗೆ ಪ್ರಭಾವಿತರಾಗುತ್ತಾರೆ? ನಾಲ್ಕು ಜನರ ನಡುವೆ ನಾವು ಹೇಗೆ ಕೇಂದ್ರ ಬಿಂದುವಿನಂತೆ ಆಕರ್ಷಿತರಾಗುತ್ತೇವೆ ಎನ್ನುವುದನ್ನು ತಿಳಿದಿರುತ್ತಾರೆ.

ಇಂತಹ ಒಂದು ಅಪರೂಪದ ಕೌಶಲ್ಯವು ಎಲ್ಲರಿಗೂ ಒಲಿಯುವುದಿಲ್ಲ. ಕೆಲವು ವ್ಯಕ್ತಿಗಳು ಮಾತ್ರ ತಿಳಿದಿರುತ್ತಾರೆ. ಇಂತಹ ಒಂದು ಕೌಶಲ್ಯವು ಅವರವರ ರಾಶಿಚಕ್ರ ಹಾಗೂ ಗ್ರಹಗತಿಗಳ ಪ್ರಭಾವದಿಂದ ಕರಗತವಾಗಿರುತ್ತದೆ. ಹಾಗಾದರೆ ಆ ರಾಶಿಚಕ್ರದವರು ಯಾರು? ಅವರ ಕೌಶಲ್ಯ ಏನು ಎನ್ನುವುದನ್ನು ತಿಳಿಯಲು ಮುಂದಿರುವ ರಾಶಿಚಕ್ರದ ವಿವರಣೆಯನ್ನು ಪರಿಶೀಲಿಸಿ.

ವೃಷಭ

ವೃಷಭ

ಈ ರಾಶಿಯ ವ್ಯಕ್ತಿಗಳು ಅದ್ಭುತವಾದ ವೈಯಕ್ತಿಕ ಶೈಲಿಯನ್ನು ಹೊಂದಿರುತ್ತಾರೆ. ಇವರು ನಾಲ್ಕು ಗೋಡೆಯ ನಡುವೆ ಇರುವಾಗ ಇದನ್ನು ಗುರುತಿಸಲು ಸಾಧ್ಯವಿಲ್ಲ. ಮನೆಯಲ್ಲಿ ಇರುವಾಗ ಇವರು ಸಾಧಾರಣ ಉಡುಗೆಯಲ್ಲಿ ಇರುತ್ತಾರೆ. ಆದರೆ ಮನೆಯಿಂದ ಆಚೆ ಹೋಗುವಾಗ ಅಥವಾ ಸಮಾಜಕ್ಕೆ ತಮ್ಮನ್ನು ತಾವು ತೆರೆದುಕೊಳ್ಳುವಾಗ ಅದ್ಭುತವಾದ ಉಡುಗೆ ಶೈಲಿಯನ್ನು ಅನುಸರಿಸುವರು. ಇವರ ಇಡುಗೆ ಅನಗತ್ಯದ ಸಂದರ್ಭದಲ್ಲಿ ಇತರರಿಗೆ ಕಂಬಳಿ, ಹೊದಿಕೆಯ ಬಟ್ಟೆಯಂತೆ ಕಾಣಬಹುದು. ಆದರೆ ಇವರ ಫ್ಯಾಷನ್ ಅಭಿರುಚಿ ಅದ್ಭುತವಾದದ್ದು. ಇವರು ಅಸಾಧಾರಣ ನೋಟವನ್ನು ನೀಡುವರು. ಫ್ಯಾಷನ್ ಎನ್ನುವುದು ಇವರಿಗೆ ಅಂತರ್ಗತವಾಗಿಯೇ ಬಂದಂತಹ ಕಲೆಯಾಗಿರುತ್ತದೆ.

Most Read: ದೈಹಿಕ ಸ್ಪರ್ಶದಿಂದ ಪ್ರೀತಿ ವ್ಯಕ್ತಪಡಿಸುವ ರಾಶಿಯವರು

ಸಿಂಹ

ಸಿಂಹ

ಸುಂದರವಾಗಿ ಕಾಣುವುದಕ್ಕಾಗಿ ಸ್ವಲ್ಪ ಹಣವನ್ನು ಖರ್ಚುಮಾಡುವುದಕ್ಕೆ ಯಾವುದೇ ಬೇಸರ ಅಥವಾ ಚಿಂತೆಯನ್ನು ಮಾಡುವುದಿಲ್ಲ. ಇವರು ಅತ್ಯಂತ ಹೊಸ ಶೈಲಿಯ ಅಥವಾ ಆಧುನಿಕ ಬಟ್ಟೆಯನ್ನು ಧರಿಸುತ್ತಾರೆ. ಅತ್ಯಾವಶ್ಯಕ ಬಟ್ಟೆಗಳ ಆಯ್ಕೆ ಮಾಡುವರು. ಧರಿಸುವ ಉಡುಗೆಯು ಸೂಕ್ತ ಗುಣಮಟ್ಟದ್ದಾಗಿರಬೇಕು. ಇವರು ತಮ್ಮದೇ ಆದ ವಿಶೇಷ ಶೈಲಿಯೊಂದಿಗೆ ಸಮಾಜಕ್ಕೆ ಅಥವಾ ಇತರರ ಮುಂದೆ ವ್ಯಕ್ತಪಡಿಸುತ್ತಾರೆ. ಇವರ ಉಡುಗೆಯನ್ನು ನೋಡಿದವರು ಅಥವಾ ಆಕರ್ಷಕರಾದವರು ಇವರನ್ನು ಹೊಗಳುವರು. ಅವರ ಶೈಲಿಯನ್ನು ಮೆಚ್ಚುಗೆ ಪಡಿಸುವುದರ ಜೊತೆಗೆ ಸಂತೋಷಗೊಳ್ಳುವರು ಎನ್ನಲಾಗುತ್ತದೆ. ಕೆಲವೊಮ್ಮೆ ಇವರು ಹೆಮ್ಮೆಗೆ ಒಳಗಾದಾಗ ಅತಿರೇಕದ ಉಡುಗೆಯನ್ನು ತೊಡುವ ಸಾಧ್ಯತೆಗಳು ಇರುತ್ತವೆ. ಇವರ ಉಡುಗೆಯ ಆಧಾರದ ಮೇಲೆಯೇ ಇವರ ವ್ಯಕ್ತಿತ್ವವನ್ನು ಗುರುತಿಸುವಂತೆ ಇರುತ್ತದೆ.

ತುಲಾ

ತುಲಾ

ಈ ರಾಶಿಯ ವ್ಯಕ್ತಿಗಳು ಫ್ಯಾಷನ್ ಅನ್ನು ಆನಂದಿಸುತ್ತಾರೆ. ಇವರು ತಮ್ಮ ಪ್ರವೃತ್ತಿಯನ್ನು ಅತ್ಯಂತ ಜಾಗರೂಕತೆಯಿಂದ ಇರುತ್ತಾರೆ. ತಮ್ಮ ವೈಯಕ್ತಿಕ ಶೈಲಿಯನ್ನು ತೋರಿಸಲು ಹೆಚ್ಚು ಆಶಿಸುತ್ತಾರೆ. ನೂತನ ಹಾಗೂ ಆಧುನಿಕ ಶೈಲಿಯ ಉಡುಗೆಯಲ್ಲಿ ಇತರರನ್ನು ಆಕರ್ಷಿಸುವರು. ಇವರ ಫ್ಯಾಷನ್ ಅಲ್ಲಿ ಸಾಂಪ್ರದಾಯಿಕ ಹಾಗೂ ಆಧುನಿಕ ಶೈಲಿಯ ಮಿಶ್ರಣಗಳನ್ನು ಕಾಣಬಹುದು ಎಂದು ಹೇಳಲಾಗುವುದು. ಇವರು ಇತರರನ್ನು ಅನುಕರಣೆ ಮಾಡುವ ಬದಲು ತಮ್ಮದೇ ಆದ ಹೊಸ ಶೈಲಿಯನ್ನು ಪ್ರದರ್ಶಿಸಲು ಇಚ್ಛಿಸುವರು.

ಕುಂಭ

ಕುಂಭ

ಈ ರಾಶಿಯ ವ್ಯಕ್ತಿಯವರಲ್ಲಿ ಉಡುಗೆಗೆ ಸಂಬಂಧಿಸಿದಂತೆ ವಿಶೇಷ ಜ್ಞಾನ ಹಾಗೂ ಚಿಂತನೆಗಳನ್ನು ಹೊಂದಿರುತ್ತಾರೆ. ಇವರ ಈ ಜ್ಞಾನದಿಂದಲೆ ಉತ್ತಮ ಉಡುಗೆಯ ಆಯ್ಕೆ ನಡೆಯುವುದು. ಇವರು ತಮ್ಮ ನೂತನ ಶೈಲಿಯ ಉಡುಗೆಯ ಮೂಲಕ ಅತ್ಯಂತ ಆಕರ್ಷಕ ವ್ಯಕ್ತಿತ್ವವನ್ನು ಪ್ರದರ್ಶನ ಮಾಡುವರು. ಇವರ ಉಡುಗೆಗೆ ಹೊಂದುವ ಪಾದರಕ್ಷೆಗಳನ್ನು ಧರಿಸುವುದರ ಮೂಲಕ ಆಕರ್ಷಣೆಯನ್ನು ವಿಶೇಷ ಗೊಳಿಸುವರು. ಇವರು ಸರಳ ಮತ್ತು ಶಾಶ್ವತ ವಿಷಯಗಳ ಆದ್ಯತೆಯ ಮೇರೆಗೆ ಉಡುಗೆಯನ್ನು ಆಯ್ಕೆ ಮಾಡುತ್ತಾರೆ. ವೃತ್ತಿಗೆ ಅನುಗುಣವಾದ ಪ್ರವೃತ್ತಿ ಹಾಗೂ ಅದಕ್ಕೆ ಹೋಲುವ ಉಡುಗೆಯೊಂದಿಗೆ ಸಮಾಜದಲ್ಲಿ ಹೆಚ್ಚು ಆಕರ್ಷಣೆಗೆ ಒಳಗಾಗುತ್ತಾರೆ.

Most Read: ನವೆಂಬರ್ ತಿಂಗಳ ಮುಂದಿನ ವಾರದಲ್ಲಿ ಈ 3 ರಾಶಿಚಕ್ರದವರಿಗೆ ಎಲ್ಲವೂ ಒಳ್ಳೆಯದಾಗಲಿದೆ!

ಮೇಷ

ಮೇಷ

ಮೇಷ ರಾಶಿಯವರ ಫ್ಯಾಷನ್ ಅಥವಾ ಉಡುಗೆಯ ವಿಧವು ಅದ್ಭುತವನ್ನು ಹೊಂದಿರುತ್ತದೆ. ಇವರು ಏನನ್ನಾದರೂ ಖರೀದಿಸಿ ತೊಡುವುದು ಹಾಗೂ ಹೊಸ ನೋಟ ಹೊಂದುವುದರ ಮೂಲಕ ಅಸಹ್ಯಕ್ಕೆ ಒಳಗಾಗುವುದನ್ನು ಇಷ್ಟಪಡುವುದಿಲ್ಲ. ಇಂತಹ ವಿಚಾರವು ಇವರಿಗೆ ಭಯವನ್ನುಂಟುಮಾಡುತ್ತದೆ ಎಂದು ಹೇಳಬಹುದು. ತಮ್ಮದೇ ಆದ ಶೈಲಿಯ ಉಡುಗೆಯ ಆಯ್ಕೆ ಮಾಡುತ್ತಾರೆ. ತೊಡುವ ಉಡುಗೆಯು ತಮಗೆ ಹೆಚ್ಚು ಸುಂದರವಾಗಿ ಕಾಣುವಂತೆ ಮಾಡಬೇಕು ಎಂದು ಬಯಸುತ್ತಾರೆ. ಇವರು ಏನನ್ನಾದರೂ ಆಯ್ಕೆ ಮಾಡಿ ಧರಿಸಿದರೆ ಅದು ಅವರನ್ನು ಅತ್ಯಂತ ಆಕರ್ಷಕವಾಗಿ ಕಾಣುವಂತೆ ಮಾಡುವುದು.

Most Read: ಎಲ್ಲಾ ವಿಚಾರದಲ್ಲೂ ಅತಿಯಾಗಿ ಚಿಂತನೆ ನಡೆಸುವ ರಾಶಿಯವರು

ಮಿಥುನ

ಮಿಥುನ

ಈ ರಾಶಿಯ ವ್ಯಕ್ತಿಗಳು ಬಹಳ ಸೊಗಸಾದ ಉಡುಗೆಯ ಆಯ್ಕೆ ಮಾಡುವರು. ಒಂದು ಬಗೆಯ ಉಡುಗೆಯನ್ನು ತೊಡಬೇಕು ಎಂದಾಗ ಅದಕ್ಕೆ ಅಗತ್ಯವಾದ ಇತರ ಪರಿಕರಗಳನ್ನು ಹಾಗೂ ಸೌಂದರ್ಯ ವರ್ಧಕಗಳನ್ನು ಹೊಂದಲು ಬಯಸುತ್ತಾರೆ. ಅಜ್ಜಿಯಿಂದ ಪಡೆದ ಆಸ್ತಿಯಂತೆ ತಮ್ಮ ಸಂಪೂರ್ಣ ಸೌಂದರ್ಯದ ನೋಟವನ್ನು ತಾವು ಧರಿಸುವ ಉಡುಗೆಯಿಂದಲೇ ವ್ಯಕ್ತಪಡಿಸುತ್ತಾರೆ. ಇವರು ಆಯ್ಕೆ ಮಾಡುವ ಉಡುಗೆಯು ಆಧುನಿಕ ಹಾಗೂ ಹೊಸತನದಿಂದ ಕೂಡಿರುತ್ತದೆ. ಇದು ಎಂದಿಗೂ ಮುಜುಗರದ ಹಂತದಲ್ಲಿ ಇರುವುದಿಲ್ಲ. ಇವರು ಧರಿಸುವ ಉಡುಗೆ ಉತ್ತಮ ಗುಣಮಟ್ಟದಲ್ಲಿ ಇರುವಂತೆ ನೋಡಿಕೊಳ್ಳುತ್ತಾರೆ.

English summary

Stylish Zodiac Signs Who Always Know How To Dress To Impress

Are you one of those people who naturally knows what things to put together to make a fabulous outfit? Do you follow trends but aren’t at the mercy of them? If you do, you're one of the stylish zodiac signs. And although style can be something we’re born with, it's something we can teach ourselves. And what better way to do so than with astrology and subsequent horoscopes? Now, you may not have any style but then you go somewhere like Paris and Rome and you start to pay attention to things like fabrics, accessories, and shoes. Or maybe there’s someone in your family who has style and you learn from them.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more