For Quick Alerts
ALLOW NOTIFICATIONS  
For Daily Alerts

ಅಸೂಯೆಯಿಂದ ಸುಟ್ಟು ಹೋದ ಮಹಿಳೆಯ ಚೇತರಿಕೆಯ ಕಥೆ

By Hemanth
|

ಬೆಂಕಿಯಿಂದ ಸುಟ್ಟಿರುವಂತಹ ಗಾಯಗಳು ಸಂಪೂರ್ಣ ದೇಹದ ಸೌಂದರ್ಯ ಕೆಡಿಸುವುದು ಮಾತ್ರವಲ್ಲದೆ, ಇದರಿಂದ ಹೊರಗಡೆ ಹೋಗಲು ಕೆಲವರು ಹಿಂಜರಿಯುವಂತಹ ಪರಿಸ್ಥಿತಿ ನಿರ್ಮಾಣವಾಗುವುದು. ಆದರೆ ಇಲ್ಲೊಬ್ಬಾಕೆ ಬೆಂಕಿಯಿಂದ ದೇಹದ ಸೌಂದರ್ಯಕ್ಕೆ ಹಾನಿಯುಂಟಾದರೂ, ತನ್ನ ಮನೋಬಲದಿಂದ ಮತ್ತೆ ಎಲ್ಲವನ್ನು ಸರಿಪಡಿಸಿಕೊಂಡು ವಿಶ್ವವನ್ನೇ ದಂಗುಬಡಿಸಿದ್ದಾಳೆ.

ಇದು ಬೆಂಕಿಯಿಂದ ಸುಟ್ಟು ಈಗ ಸಂಪೂರ್ಣವಾಗಿ ಚೇತರಿಸಿಕೊಂಡಿರುವ ಡಾನಾ ಎಂಬಾಕೆಯ ಕಥೆ ಮತ್ತು ಈಗ ಆಕೆ ಇಂಟರ್ನೆಟ್ ಸೆನ್ಸೇಷನ್ ಆಗಿದ್ದಾಳೆ.

ದಾಳಿಕೋರರು ಆಕೆಯ ಮುಖಕ್ಕೆ ಸಂಪೂರ್ಣವಾಗಿ ಹಾನಿ ಮಾಡಿ, ಯಾರಿಗೂ ಗುರುತು ಸಿಗದಂತೆ ಮಾಡಿದ್ದರು. ಆಕೆಯ ಮನೋಬಲದಿಂದಾಗಿಯೇ ಇಂದು ಎಲ್ಲರ ಮುಂದೆ ಆಕೆ ತಲೆಯೆತ್ತಿ ನಿಂತಿದ್ದಾಳೆ. ಆಕೆಯ ಕಥೆ ಓದುತ್ತಾ ಸಾಗಿ....

ಅಸೂಯೆ ಪಡುತ್ತಿದ್ದ ಮಹಿಳೆಯಿಂದ ದಾಳಿ

ಅಸೂಯೆ ಪಡುತ್ತಿದ್ದ ಮಹಿಳೆಯಿಂದ ದಾಳಿ

ತನ್ನ ವಿಚ್ಛೇದಿತ ಪತಿಯೊಂದಿಗೆ ಡಾನಾ ಮಾತನಾಡುತ್ತಿದ್ದಾಳೆಂದು ತಿಳಿದ ಮಹಿಳೆಗೆ ಅಸೂಯೆಪಟ್ಟಳು. ಈ ಘಟನೆಯು ಹೊಸವರ್ಷದ ಪಾರ್ಟಿ ವೇಳೆ ನಡೆಯಿತು.

ಡಾನಾಗೆ ಮಾನಸಿಕ ಹಿಂಸೆ ನೀಡಲಾಯಿತು

ಡಾನಾಗೆ ಮಾನಸಿಕ ಹಿಂಸೆ ನೀಡಲಾಯಿತು

ಹಲವಾರು ಅವಹೇಳನಕಾರಿ ಫೋನ್ ಕರೆಯ ಮೂಲಕ ಡಾನಾಗೆ ಮಾನಸಿಕ ಹಿಂಸೆ ನೀಡಲಾಯಿತು. ಆಕೆಯ ಸುಂದರ ಮುಖಕ್ಕೆ ಹಾನಿ ಮಾಡುವುದಾಗಿ ದಾಳಿಕೋರೆ ಈ ಮೊದಲು ಕೂಡ ಎಚ್ಚರಿಸಿದ್ದಳು.

ಆಕೆಗೆ ಬೆಂಕಿ ಹಚ್ಚಳಾಯಿತು

ಆಕೆಗೆ ಬೆಂಕಿ ಹಚ್ಚಳಾಯಿತು

ಅಸೂಯೆ ಎನ್ನುವುದು ಎಲ್ಲವನ್ನು ನಾಶ ಮಾಡುವುದು ಎನ್ನುವುದಕ್ಕೆ ಈ ಘಟನೆಯೇ ಸಾಕ್ಷಿಯಾಯಿತು. ನತಾಲಿಯಾ ಡಿಮಿಟೊವಸ್ಕಾ ಎಂಬಾಕೆಯೇ ದಾಳಿ ಮಾಡಿದಾಕೆ. ವರದಿಗಳ ಪ್ರಕಾರ, ಡಾನಾ ಪ್ಲ್ಯಾಟ್ ಗೆ ಹೋದ ನತಾಲಿಯಾ ಅಲ್ಲಿ ಆಕೆಗೆ ಬೆಂಕಿ ಹಚ್ಚಿದಳು. ಆಕೆಯು ಮಾದಕ ದ್ರವ್ಯ ಸೇವನೆ ಮಾಡಿಕೊಂಡು ಈ ಕೆಲಸಕ್ಕೆ ಮುಂದಾದಳು ಎಂದು ಹೇಳಲಾಗಿದೆ.

ಶೇ.64ರಷ್ಟು ಸುಟ್ಟು ಹೋದಳು

ಶೇ.64ರಷ್ಟು ಸುಟ್ಟು ಹೋದಳು

ಅತ್ಯಂತ ಆಘಾತಕಾರಿ ಘಟನೆಯಲ್ಲಿ ಡಾನಾ ಗಂಭೀರವಾಗಿ ಗಾಯಗೊಂಡಳು ಮತ್ತು ಆಕೆಯ ದೇಹವು ಶೇ.64ರಷ್ಟು ಸುಟ್ಟು ಹೋಗಿದ್ದವು. ಕೆಲವು ಗಾಯಗಳು ಎಷ್ಟು ಗಂಭೀರವಾಗಿದ್ದವು ಎಂದರೆ ಆಕೆಯ ತಾಯಿ ಕೂಡ ಮಗಳನ್ನು ಗುರುತು ಹಿಡಿದಂತಾಗಿತ್ತು.

30 ತಿಂಗಳ ಕಾಲ ಮಾಸ್ಕ್ ಧರಿಸಿದ್ದಳು!!!

30 ತಿಂಗಳ ಕಾಲ ಮಾಸ್ಕ್ ಧರಿಸಿದ್ದಳು!!!

ವರದಿಯ ಪ್ರಕಾರ ವೈದ್ಯರು ಡಾನಾಗೆ 30 ತಿಂಗಳ ಕಾಲ ಮುಖಕ್ಕೆ ಮಾಸ್ಕ್ ಧರಿಸುವಂತೆ ಸೂಚಿಸಿದರು. ಇದರಿಂದ ಆಕೆ ಬೇಗನೇ ಚೇತರಿಸಿಕೊಳ್ಳಲು ನೆರವಾಗುತ್ತದೆ ಎಂದರು. ಜನರ ಮಧ್ಯೆ ಬೆರೆಯುವಾಗ ಆಕೆ ಇದನ್ನು ಧರಿಸಬೇಕೆಂದು ವೈದ್ಯರು ಸೂಚಿಸಿದರು. ಸಾರ್ವಜನಿಕವಾಗಿ ಮಾಸ್ಕ್ ಧರಿಸುವ ಕಾರಣದಿಂದ ತನ್ನ ಗುರುತು ಸಿಗುವುದಿಲ್ಲವೆಂದು ಆಕೆ ಬೇಸರಗೊಂಡಳು. ಸುಟ್ಟ ಗಾಯದಿಂದ ಚೇತರಿಸಿಕೊಳ್ಳುತ್ತಿರುವಾಗಲೇ ಆಕೆಗೆ ಮತ್ತೊಂದು ಆಘಾತ ಕಾದಿತ್ತು. ಗರ್ಭಕಂಠದ ಕ್ಯಾನ್ಸರ್ ಇದೆಯೆಂದು ಆಕೆಗೆ ವೈದ್ಯರು ತಿಳಿಸಿದರು. ಪ್ರಬಲ ಮನೋಬಲ ಹೊಂದಿದ್ದ ಡಾನಾ ಚೇತರಿಸಿಕೊಳ್ಳಲು ಪಣ ತೊಟ್ಟಳು ಮತ್ತು ಇದಕ್ಕೆ ಕ್ಯಾನ್ಸರ್ ಅಡ್ಡಿಯಾಗದಂತೆ ನೋಡಿಕೊಂಡಳು. ಆಕೆ ಬೇಕಾಗಿರುವ ಎಲ್ಲಾ ಚಿಕಿತ್ಸೆ ಪಡೆದುಕೊಂಡಳು ಮತ್ತು ಕ್ಯಾನ್ಸರ್ ಕೋಶಗಳನ್ನು ಕೂಡ ನಾಶಪಡಿಸಿದಳು.

ಮಾಸ್ಕ್ ಆಕೆಗೆ ಕಿರಿಕಿರಿ ಉಂಟು ಮಾಡಿತು!

ಮಾಸ್ಕ್ ಆಕೆಗೆ ಕಿರಿಕಿರಿ ಉಂಟು ಮಾಡಿತು!

ಸುಟ್ಟ ಗಾಯದಿಂದ ಸಂಪೂರ್ಣವಾಗಿ ಚೇತರಿಸಿಕೊಳ್ಳಲು ಡಾನಾ ಪ್ರಯತ್ನಿಸುತ್ತಿದ್ದ ವೇಳೆ ಆಕೆಯ ಮುಖವು ಮಾಸ್ಕ್ ನ ಒಳಗಡೆ ಇರುವುದು ದೊಡ್ಡ ಸಮಸ್ಯೆಯಾಗಿತ್ತು. ಜಗತ್ತಿನ ಮುಂದೆ ಮುಖವಿಲ್ಲದಂತೆ ಆಗಿದೆ ಎನ್ನುವ ಭಾವನೆಯು ಆಕೆಯಲ್ಲಿ ಮೂಡಿತ್ತು. ಒಂದು ದಿನ ಆಕೆ ಟಿವಿ ಕಾರ್ಯಕ್ರಮದಲ್ಲಿ ತನ್ನ ಮುಖವನ್ನು ತೋರಿಸಲು ಮುಂದಾದಳು. ಜನರು ಕೂಡ ಆಕೆಯ ಚೇತರಿಕೆ ಬಗ್ಗೆ ತುಂಬಾ ಕುತೂಹಲದಿಂದ ಇದ್ದರು.

ಜನರು ತನ್ನ ನಿಜವಾದ ಕಥೆ ತಿಳಿಯಬೇಕೆಂದು ಬಯಸಿದಳು

ಜನರು ತನ್ನ ನಿಜವಾದ ಕಥೆ ತಿಳಿಯಬೇಕೆಂದು ಬಯಸಿದಳು

ಟಿವಿ ಕಾರ್ಯಕ್ರಮದಲ್ಲಿ ಆಕೆ ಭಾಗವಹಿಸಿದ ಮೇಲೆ ತನ್ನ ನಿಜವಾದ ಕಥೆಯನ್ನು ಜಗತ್ತಿನ ಮುಂದಿಡಬೇಕೆಂದು ಬಯಸಿದಳು. ಕಠಿಣ ಪರಿಸ್ಥಿತಿ ವಿರುದ್ಧ ಹೋರಾಡುವಾಗ ಯಾವೆಲ್ಲಾ ಸಮಸ್ಯೆಗಳನ್ನು ಎದುರಿಸಬೇಕಾಯಿತು ಎನ್ನುವ ಬಗ್ಗೆ ಪ್ರತಿಯೊಬ್ಬರು ತಿಳಿಬೇಕೆಂದು ಬಯಸಿದಳು. ಚೇತರಿಸಿಕೊಳ್ಳಲು ತನ್ನ ಬದ್ಧತೆ ಮತ್ತು ತನಗೆ ಎದುರಾಗುತ್ತಿದ್ದ ಕಷ್ಟಗಳನ್ನು ಎದುರಿಸಲು ಬೇಕಾಗುವ ಮನೋಬಲ ಮತ್ತು ಧೈರ್ಯದ ಬಗ್ಗೆ ಆಕೆ ಬಹಿರಂಗಪಡಿಸಿದಳು.

ಆಕೆ ಕ್ಯಾಟ್ ವಾಕ್ ಮಾಡಿದಳು

ಆಕೆ ಕ್ಯಾಟ್ ವಾಕ್ ಮಾಡಿದಳು

ಡಾನಾ ಕಥೆಯು ವೈರಲ್ ಆದ ಬಳಿಕ ಆಕೆ ರ‍್ಯಾಂಪ್ ಮೇಲೆ ನಡೆಯಲು ಬಯಸಿದಳು. ತಾನು ಯಾವಾಗಲೂ ತುಂಬಾ ಆರೋಗ್ಯವಂತ ವ್ಯಕ್ತಿಯಾಗಿದ್ದೆ ಮತ್ತು ಅಪಘಾತವು ತನ್ನನ್ನು ಮತ್ತಷ್ಟು ಬಲಿಷ್ಠವಾಗಿಸಿದೆ ಎಂದು ಆಕೆ ಸಂದರ್ಶನವೊಂದರ ವೇಳೆ ಹೇಳಿದ್ದಾಳೆ.

English summary

Story Of The Burnt Victim Who Reconstructed Her Face

Burnt victim Dana from Australia became a viral sensation on the Internet after she removed the mask she had been wearing. Her attacker had brutally spoilt her face and had left her in an unrecognisable stand. It was only due to her willpower that she is where she stands now.This is the case of a woman who had been burnt,
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more