Latest Updates
-
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು
ಕಣ್ಣೀರು ತರಿಸುವ ಸ್ಟೋರಿ: ಈಕೆ ಮಗುವಿಗೆ ಜನ್ಮ ನೀಡಿ ಸಾವನ್ನಪ್ಪಿದರೂ 50 ಜನರ ಪ್ರಾಣ ಉಳಿಸಿದಳು!
ಜೀವನ ನಶ್ವರ ಎನ್ನುವುದು ತಿಳಿದಿದ್ದರೂ ಮನುಷ್ಯ ಮಾತ್ರ ದುರಾಸೆ ಹಾಗೂ ತನ್ನ ಕ್ರೌರ್ಯದಿಂದ ಮರೆಯುತ್ತಲೇ ಇರುತ್ತಾನೆ. ಇಂತಹ ಜನರ ಮಧ್ಯೆಯು ಹಲವಾರು ಮಂದಿ ಒಳ್ಳೆಯ ಜನರು ಇರುತ್ತಾರೆ. ಕೆಲವು ಮಂದಿ ಇದರಲ್ಲಿ ಗುರುತಿಸಲ್ಪಟ್ಟರೆ ಇನ್ನು ಕೆಲವು ಮಂದಿ ಹಾಗೆ ಉಳಿದುಬಿಡುವರು. ನಾವು ನೇತ್ರದಾನ ಮಾಡಿದರೆ ಅದರಿಂದ ಇಬ್ಬರಿಗೆ ದೃಷ್ಟಿ ಸಿಗುವುದು ಎನ್ನುವ ಮಾತಿದೆ. ಅದೇ ರೀತಿಯಲ್ಲಿ ನಮಗೆ ಸಾವು ಸಂಭವಿಸಿದಾಗ ದೇಹದ ವಿಭಿನ್ನ ಅಂಗಾಂಗಗಳನ್ನು ದಾನ ಮಾಡಿದರೆ ಅದರಿಂದ ಹಲವಾರು ಜನರ ಪ್ರಾಣ ಉಳಿಯುವುದು.
ಕೆಲವೊಂದು ಸಲ ಹೃದಯ, ಲಿವರ್ ಇತ್ಯಾದಿಗಳನ್ನು ದಾನ ಮಾಡಿ ಪ್ರಾಣ ಕಾಪಾಡಿದವರ ಬಗ್ಗೆ ನಾವು ಕೇಳಿದ್ದೇವೆ. ಆದರೆ ಈ ಲೇಖನದಲ್ಲಿ ನಾವು ನಿಮಗೆ ಹೇಳಲು ಹೊರಟಿರುವುದು ಮಗುವಿನ ಜನ್ಮ ನೀಡಿದ ಕೆಲವೇ ಗಂಟೆಗಳಲ್ಲಿ ಕೊನೆಯುಸಿರೆಳೆದ ಮಹಿಳೆಯರು ಸುಮಾರು 50 ಮಂದಿಯ ಪ್ರಾಣ ಕಾಪಾಡಿದ್ದಾರೆ. ಇಂತಹ ಜನರು ಇರುವ ಕಾರಣದಿಂದಾಗಿ ಹಲವಾರು ಮಂದಿಗೆ ಪುನರ್ಜನ್ಮ ಸಿಕ್ಕಿದೆ. ಇದರ ಬಗ್ಗೆ ನೀವು ಇನ್ನಷ್ಟು ತಿಳಿಯಲು ಮುಂದೆ ಓದುತ್ತಾ ಸಾಗಿ... ಮೆಗಾನ ಮೊಸ್ ಜಾನ್ಸನ್ ಎಂಬ ಮಹಿಳೆಯೇ ಮಗುವಿಗೆ ಜನ್ಮ ನೀಡಿದ ಬಳಿಕ ಪ್ರಾಣ ಬಿಟ್ಟಿರುವವರು. ಆದರೆ ಆಕೆಯ ಸಾವಿನಿಂದ 50 ಜನರ ಪ್ರಾಣ ಉಳಿದಿದೆ.

ಬಾಲ್ಯದಲ್ಲೇ ಆಕೆಗೆ ಸಮಸ್ಯೆಯಿತ್ತು
ಮೆಗಾನ ಮೊಸ್ ಜಾನ್ಸನ್ ಗೆ ಬಾಲ್ಯದಲ್ಲಿ ಅನಾರೋಗ್ಯದ ಸಮಸ್ಯೆಯಿತ್ತು. 15 ವರ್ಷದ ಹರೆಯದಲ್ಲಿ ಆಕೆಗೆ ಮಯೋಕಾರ್ಡಿಟಿಸ್ ಎನ್ನುವ ಹೃದಯದ ಉರಿಯೂತದ ಸಮಸ್ಯೆಯಿತ್ತು. ಆದರೆ ಆಕೆಗೆ ಒಬ್ಬ ದಾನಿ ಸಿಕ್ಕಿದ ಕಾರಣದಿಂದ ಆಕೆ ಪುನರ್ಜನ್ಮ ಪಡೆದುಕೊಂಡಳು.

ಇದರ ಬಳಿಕ ಆಕೆ ಕೂಡ ಅಂಗಾಂಗ ದಾನ ಮಾಡಲು ನಿರ್ಧರಿಸಿದಳು
ಮೆಗಾನ ಮೊಸ್ ಜಾನ್ಸನ್ ದಾನಿಯಿಂದಾಗಿ ಪುನರ್ಜನ್ಮ ಪಡೆದ ಬಳಿಕ ಆಕೆ ಕೂಡ ತನ್ನ ದೇಹದ ಅಂಗಾಂಗಳನ್ನು ದಾನ ಮಾಡಬೇಕೆಂದು ನಿರ್ಧರಿಸಿದಳು. ತನ್ನ ಅಂಗಾಂಗಳನ್ನು ದಾನ ಮಾಡಿ ಹಲವಾರು ಮಂದಿಗೆ ಜೀವದಾನ ಮಾಡಬೇಕೆಂದು ಆಕೆ ನಿರ್ಧರಿಸಿದಳು.

ಆಕೆಯ ಜೀವನ ಸುಂದರವಾಗಿತ್ತು
ಮೆಗಾನ ಮೊಸ್ ಸುಂದರ ಜೀವನ ಸಾಗಿಸುತ್ತಿದ್ದರು. ಆಕೆ ಸಂಗೀತಗಾರ ನಥನ್ ಜಾನ್ಸನ್ ಎಂಬವರನ್ನು ಮದುವೆಯಾಗಿದ್ದರು. ಆಕೆಯ ವೈವಾಹಿಕ ಜೀವನವು ಸುಂದರವಾಗಿತ್ತು. ಇದರ ಬಳಿಕ ಆಕೆ ಆರೋಗ್ಯಕರವಾಗಿ ಗರ್ಭಿಣಿಯಾದರು.

ಮಗುವಿಗೆ ಜನ್ಮ ನೀಡಿದ ಬಳಿಕ ಎಲ್ಲವೂ ಬದಲಾಯಿತು
ತಮ್ಮ ಮೊದಲ ಮಗು ಈಲಿ ಕೇಟ್ ಗೆ ಜನ್ಮ ನೀಡಿದ ಬಳಿಕ ಈ ದಂಪತಿಯು ತುಂಬಾ ಸಂತೋಷವಾಗಿತ್ತು. ಆದರೆ ದುರಾದೃಷ್ಟದಿಂದ ಈ ಸಂತೋಷ ಮಾತ್ರ ಹೆಚ್ಚು ಸಮಯ ಉಳಿಯಲಿಲ್ಲ. ಮೆಗಾನ ಮಗುವಿಗೆ ಜನ್ಮ ನೀಡಿದ ಎಂಟು ಗಂಟೆ ಬಳಿಕ ಪ್ರಾಣ ಕಳೆದುಕೊಂಡಳು. ಸಾವಿಗೆ ಕಾರಣವೇನೆಂದು ಇದುವರೆಗೆ ಸ್ಪಷ್ಟವಾಗಿ ತಿಳಿದಿಲ್ಲ. ಆದರೆ ವರದಿಗಳು ಹೇಳುವಂತೆ ಆಕೆ ಕೋಮಾವಸ್ಥೆ ತಲುಪಿದ್ದಳು ಮತ್ತು ಮತ್ತೆ ಎದ್ದೇಳಲೇ ಇಲ್ಲ.

ಆಕೆ ಅಂಗಾಂಗಳನ್ನು ದಾನ ಮಾಡಲಾಯಿತು
ಮೆಗಾನ ಅಧಿಕೃತವಾಗಿ ಅಂಗಾಂಗ ದಾನಿಯಾಗಿದ್ದ ಕಾರಣದಿಂದಾಗಿ ಆಕೆಯ ಎರಡು ಕಣ್ಣುಗಳು ಇಬ್ಬರು ಜನರಿಗೆ ದೃಷ್ಟಿ ನೀಡಿತು ಮತ್ತು ಇತರ ಅಂಗಾಂಗಗಳಿಂದ ಸುಮಾರು 50 ಮಂದಿಯ ಪ್ರಾಣ ಉಳಿಯಿತು. ಆಕೆ ತುಂಬಾ ಕಡಿಮೆ ವರ್ಷ ಬದುಕಿದರೂ ಸಾವಿನಲ್ಲೂ ಆಕೆ ಬೇರೆಯವರಿಗೆ ಮಾದರಿಯಾಗಿದ್ದಾರೆ. ಈ ಬಗ್ಗೆ ನಿಮ್ಮ ಅನಿಸಿಕೆಗಳು ಏನು ಎಂದು ನಮಗೆ ಕಮೆಂಟ್ ಬಾಕ್ಸ್ ನಲ್ಲಿ ಬರೆಯಲು ಮರೆಯಬೇಡಿ.



Click it and Unblock the Notifications

