For Quick Alerts
ALLOW NOTIFICATIONS  
For Daily Alerts

ರಿಯಲ್ ಲೈಫ್ ಸ್ಟೋರಿ: ಬೆಂಗಳೂರಿನ ಕೆರೆಯನ್ನು ಸ್ವಚ್ಛಗೊಳಿಸುವ ಸೀನಪ್ಪ

By Deepu
|
Seenappa The Man Who Cleans The Lake! | Boldsky

ಒಂದು ಕಾಲದಲ್ಲಿ ಕೆರೆಗಳಿಂದ ತುಂಬಿ ತುಳುಕಾಡುತ್ತಿದ್ದ ಬೆಂಗಳೂರಿನಲ್ಲಿ ಇಂದು ಬೆರಳೆಣಿಕೆಯ ಕೆರೆಗಳು ಮಾತ್ರ ಕಾಣಸಿಗುತ್ತಿವೆ. ಇದರಲ್ಲಿ ಕೆಲವು ಕೆರೆಗಳು ಹೂಳು ತುಂಬಿಕೊಂಡು ಜೌಗು ಪ್ರದೇಶವಾಗಿದೆ. ಇದನ್ನು ಸ್ವಚ್ಛ ಮಾಡುವಂತಹ ಕೆಲಸವು ನಮ್ಮ ಆಡಳಿತ ವರ್ಗದಿಂದ ಆಗುತ್ತಲೇ ಇಲ್ಲ. ಆದರೆ ಇಲ್ಲೊಬ್ಬರು ಏಕಾಂಗಿಯಾಗಿಯೇ ಕೆರೆಯೊಂದನ್ನು ಸ್ವಚ್ಛಗೊಳಿಸಿ ನಮಗೆಲ್ಲರಿಗೂ ಮಾದರಿಯಾಗಿದ್ದಾರೆ.

ಈ ಮಹಾನ್ ವ್ಯಕ್ತಿ ಸೀನಪ್ಪ ಎಂಬವರು. ತುಂಬು ಕುಟುಂಬದಲ್ಲಿ ಹುಟ್ಟಿದ ಸೀನಪ್ಪ ಶ್ರೀನಿವಾಸ್ ಬೆಂಗಳೂರಿನ ಸಾಮಾನ್ಯ ವ್ಯಕ್ತಿ. ಹಿರಿಯ ಮಗನವಾಗಿದ್ದರೂ ಸಮಯಕ್ಕೆ ಅನುಗುಣವಾಗಿ ತಾನು ಪತ್ನಿಯ ಜತೆಗೆ ಬಾಡಿಗೆ ಮನೆಯಲ್ಲಿ ವಾಸ. ಕಳೆದ 18 ವರ್ಷಗಳಿಂದ ರಬ್ಬರ್ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿರುವ ಸೀನಪ್ಪ ಅವರಿಗೆ ಸಿಗುತ್ತಿರುವುದು ಕೇವಲ ಮೂರು ಸಾವಿರ ರೂ. ಮಾತ್ರ!

Seenappa’s

ತನ್ನ ಉದ್ಯೋಗದಿಂದ ಸ್ವಲ್ಪ ತೃಪ್ತಿಯಿಲ್ಲದೆ ಇದ್ದರೂ ಕುಟುಂಬ ನಿರ್ವಹಣೆಗಾಗಿ ಇದನ್ನು ಮಾಡುವುದು ಅವರಿಗೆ ಅನಿರ್ವಾಯವಾಗಿತ್ತು. ಆದರೆ ಕೆಲವು ದಿನಗಳ ಬಳಿಕ ಅವರನ್ನು ಜೌಗು ಪ್ರದೇಶ(ಅಂಬಲಿಪುರ ಕೆರೆ) ಸ್ವಚ್ಛಗೊಳಿಸುವ ಕೆಲಸಕ್ಕೆ ಕರೆಯಲಾಯಿತು. ಅಪಾರ್ಟ್ ಮೆಂಟ್ ನಿಂದ ಸುತ್ತಿಕೊಂಡಿರುವ ಇದರ ಸ್ವಚ್ಛತೆಗಾಗಿ ಇತರ ಮೂವರು ಕಾರ್ಮಿಕರು ಕೂಡ ಬಂದಿದ್ದರು. ಆದರೆ ಕೆಸರು ಮತ್ತು ವಿಷಕಾರಿ ಹಾವುಗಳನ್ನು ನೋಡಿದ ಬೇರೆ ಕಾರ್ಮಿಕರು ಅರ್ಧದಲ್ಲೇ ಬಿಟ್ಟು ಹೋದರು.

ಆದರೆ ಪ್ರಕೃತಿ ಕಡೆ ಪ್ರೀತಿ ಬೆಳೆಸಿಕೊಂಡಿದ್ದ ಸೀನಪ್ಪ ಅವರು ಈ ಕೆಸರುಮಯ ಪ್ರದೇಶವನ್ನು ಸುಂದರ ಕೆರೆಯಾಗಿ ಪರಿವರ್ತಿಸಲು ಬಯಸಿದರು. ಕೆಸರು ತೆಗೆದು, ಗಿಡಗಳಿಗೆ ನೀರು ಹಾಕಿ, ಆ ಪ್ರದೇಶವನ್ನು ಸಂಪೂರ್ಣವಾಗಿ ಸ್ವಚ್ಛ ಮಾಡಿದರು ಮತ್ತು ಜನರಿಗೆ ನಡೆದಾಡಲು ದಾರಿ ಮಾಡಿದರು. ವರ್ಷಗಳ ಕಾಲ ಇಲ್ಲಿ ಕೆಲಸ ಮಾಡಿದ ಸೀನಪ್ಪ ಅವರು ಕೆಸರುಮಯ ಜಾಗವನ್ನು ಸುಂದರ ಕೆರೆಯನ್ನಾಗಿಸಿದರು.

ಸವಾಲಾಗಿ ಸ್ವೀಕರಿಸಿ ಕೆಲಸ ಮಾಡಿದ ಸೀನಪ್ಪ ಅವರು ತುಂಬಾ ಪ್ರಾಮಾಣಿಕತೆ ಹಾಗೂ ಬದ್ಧತೆಯಿಂದ ಕೆಲಸ ಮಾಡಿದರು. ದೇವರು ಕೂಡ ಅವರಿಗೆ ನೆರವು ನೀಡಿ ವಿಷಕಾರಿ ಜೀವಜಂತುಗಳಿಂದ ಅವರನ್ನು ರಕ್ಷಿಸಿದ. ಸರ್ಜಾಪುರದಲ್ಲಿರುವ ಅಂಬಲಿಪುರ ಕೆರೆ ಸ್ವಚ್ಛಗೊಳಿಸಲು ಅವರಿಗೆ 14 ಸಾವಿರ ರೂ. ಸಂಬಳ ನೀಡಲಾಗುತ್ತಿತ್ತು. ಇದರಲ್ಲಿ 12 ಸಾವಿರ ರೂ. ಮನೆ ಬಾಡಿಗೆ ಮತ್ತು ಉಳಿದ ಎರಡು ಸಾವಿರ ರೂ.ಯಿಂದ ಜೀವನ ನಿರ್ವಹಣೆ.

ಇಂದು ಈ ಕೆರೆ ಮತ್ತು ಅದರ ಸುತ್ತಲಿನ ಪ್ರದೇಶ ನೋಡಲು ಎಲ್ಲಾ ವಯೋವರ್ಗದವರು ಬಂದು ಸಮಯ ಕಳೆಯುತ್ತಾರೆ. ಕೆಸರುಮಯವಾಗಿದ್ದ ಪ್ರದೇಶವನ್ನು ನಾನು ಏಕಾಂಗಿಯಾಗಿ ಕೆರೆ ಮಾಡಿದ್ದೇನೆ ಮತ್ತು ಜನರು ಇದನ್ನು ನೋಡಿ ಖುಷಿಪಡುತ್ತಿರುವುದು ನನಗೆ ತುಂಬಾ ಸಂತೋಷವನ್ನುಂಟು ಮಾಡಿದೆ'ಎಂದು ಅವರು ಹೇಳುತ್ತಾರೆ. ಈ ಕಥೆಯು ಬೇರೆ ಕಾರ್ಮಿಕರಿಗೆ ಕೂಡ ಪ್ರೇರಣೆ. ಕಠಿಣ ಪರಿಶ್ರಮ ಮತ್ತು ಬದ್ಧತೆಯು ಜೀವನವನ್ನು ಹೇಗೆ ಬದಲಾಯಿಸುತ್ತದೆ ಎನ್ನುವುದಕ್ಕೆ ಉದಾಹರಣೆಯಾಗಿದೆ. ಕಮಲ ಅರಳುವುದು ಕೆಸರಿನಲ್ಲೇ ಎನ್ನುವುದಕ್ಕೆ ಈ ಕಥೆಯೇ ಸಾಕ್ಷಿ...

English summary

Seenappa’s Devotion To Duty Defines His Life!

Seenappa Srinivas from Bangalore who is like any other ordinary family man. he was determined to stay as he was passionate towards nature, so decided to transform the swamp into a beautiful lake. He started working on that swamp, watering plants, cleaning the area and also cleaning the passage area for people to walk.
X
Desktop Bottom Promotion