For Quick Alerts
ALLOW NOTIFICATIONS  
For Daily Alerts

ರಾಶಿಚಕ್ರದ ಪ್ರಕಾರ: ನಿಮ್ಮ ಸಾಮರ್ಥ್ಯ ಹಾಗೂ ದೌರ್ಬಲ್ಯ ಏನೆಂಬುದನ್ನು ನೋಡಿ...

By Hemanth
|

ಪ್ರತಿಯೊಬ್ಬರು ತಮ್ಮದೇ ಆದ ವಿಶೇಷ ಸಾಮಥ್ರ್ಯ ಹಾಗೂ ದೌರ್ಬಲ್ಯವನ್ನು ಹೊಂದಿರುತ್ತಾರೆ. ಇಂತಹ ಎರಡು ಗುಣಗಳಿಂದಲೇ ಎಷ್ಟೋ ಬಾರಿ ವ್ಯಕ್ತಿಯನ್ನು ಗುರುತಿಸಲಾಗುವುದು. ಅಲ್ಲದೆ ಬಹುತೇಕ ಸಂದರ್ಭದಲ್ಲಿ ವ್ಯಕ್ತಿಯ ದೌರ್ಬಲ್ಯವನ್ನು ಬಳಸಿಕೊಂದು ತಾವು ಬೀಗುವ ಜನರು ನಮ್ಮ ನಡುವೆ ಇರುತ್ತಾರೆ. ಹಾಗೆಯೇ ವ್ಯಕ್ತಿಯ ಸಾಮರ್ಥ್ಯ ಎನ್ನುವುದು ಅವನ ಸ್ಥಾನವನ್ನು ಎತ್ತರದಲ್ಲಿ ಇರಿಸುತ್ತದೆ. ಆದರ ಗೌರವವನ್ನು ತಂದುಕೊಡುತ್ತದೆ.

ನಾವು ಬೇರೆಯವರಲ್ಲಿರುವ ದೌರ್ಬಲ್ಯ ಹಾಗೂ ಸಾಮರ್ಥ್ಯವನ್ನು ಗುರುತಿಸಿ ಮಾತನಾಡುತ್ತ ಸಮಯ ಕಳೆಯುವುದರಲ್ಲಿಯೇ ಇರುತ್ತೇವೆ. ಅದೇ ನಮ್ಮಲ್ಲಿರುವ ಸಾಮರ್ಥ್ಯ ಏನು? ದೌರ್ಬಲ್ಯ ಏನು ಎನ್ನುವುದನ್ನು ಗುರುತಿಸಿಕೊಂಡರೆ ಬಹುಬೇಗ ಸಾಧನೆಯನ್ನು ಮಾಡಬಹುದು. ಸಾಮರ್ಥ್ಯ ಹಾಗೂ ದೌರ್ಬಲ್ಯ ಎನ್ನುವುದು ಪ್ರತಿಯೊಬ್ಬ ವ್ಯಕ್ತಿಗೆ ಇರುವ ಎರಡು ಮುಖಗಳು. ಇವು ಅವರ ರಾಶಿಚಕ್ರಕ್ಕೆ ಅನುಗುಣವಾಗಿ ಇರುತ್ತದೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ. ನಿಮಗೆ ನಿಮ್ಮ ಅಥವಾ ನಿಮ್ಮವರ ಸಾಮರ್ಥ್ಯ ಹಾಗೂ ದೌರ್ಬಲ್ಯ ಏನು ಎನ್ನುವುದನ್ನು ತಿಳಿದುಕೊಳ್ಳುವ ಕುತೂಹಲವಿದ್ದರೆ ಈ ಮುಂದೆ ಬೋಲ್ಡ್ ಸ್ಕೈ ವಿವರಿಸಿರುವ ರಾಶಿಚಕ್ರ ಸಾಮರ್ಥ್ಯ ವಿವರಣೆಯನ್ನು ಪರಿಶೀಲಿಸಿ...

ಮೇಷ:

ಮೇಷ:

ಸಾಮರ್ಥ್ಯ ಆತ್ಮವಿಶ್ವಾಸ ; ದೌರ್ಬಲ್ಯ: ಹಠತ್ ಪ್ರವೃತ್ತಿ

ಈ ರಾಶಿಯವರಿಗೆ ಎಲ್ಲವೂ ಸ್ಪರ್ಧಾತ್ಮಕವಾಗಿಯೇ ಇರುತ್ತವೆ. ಎಲ್ಲಾ ವಿಚಾರದಲ್ಲೂ ಮುಂದೆ ಬರಲು ಪ್ರಯತ್ನಿಸುವರು. ಜೊತೆಗೆ ತಮ್ಮಲ್ಲಿರುವ ಆತ್ಮ ವಿರ್ಶವಾಸದಿಂದಲೇ ಎಲ್ಲವನ್ನು ಜಯಿಸುವರು. ಕೆಲವೊಮ್ಮೆ ಕಾರ್ಯ ಕೈಗೊಂಡಾಗ ಅಥವಾ ಕೆಲಸ ಮುಂದುವರಿಸುತ್ತಿರುವಾಗ ಏನೋ ಒಂದನ್ನು ಕಳೆದುಕೊಂಡಂತೆ ಭಾವಿಸುವರು. ಅಂತಹ ಸಂದರ್ಭದಲ್ಲಿ ನಿಮ್ಮಲ್ಲಿ ಉಂಟಾದ ಬದಲಾವಣೆಯಿಂದ ಇತರರಿಗೆ ಹೇಗೆ ಪ್ರಭಾವ ಬೀರುವುದು ಅಥವಾ ಏನು ಭಾವಿಸುವರು ಎನ್ನುವುದನ್ನು ಯೋಚಿಸದೆಯೇ ದುರ್ಬಲ ರೀತಿಯಲ್ಲಿ ವರ್ತಿಸುವರು. ಹಾಗಾಗಿ ಯಾವುದೇ ಕೆಲಸವನ್ನು ಕೈಗೊಳ್ಳುವ ಮೊದಲು ಸೂಕ್ತ ಚಿಂತನೆ ನಡೆಸುವುದು ಉತ್ತಮ.

ವೃಷಭ

ವೃಷಭ

ಸಾಮರ್ಥ್ಯ ಜವಾಬ್ದಾರಿ; ದೌರ್ಬಲ್ಯ: ಅಸ್ವಾಭಾವಿಕ

ಈ ರಾಶಿಚಕ್ರದವರ ದೊಡ್ಡ ಸಾಮರ್ಥ್ಯ ಎಂದರೆ ಜವಾಬ್ದಾರಿಯನ್ನು ನಿರ್ವಹಿಸುವ ಗುಣ. ಇವರು ಬಹುತೇಕ ಸಂಗತಿಗಳನ್ನು ಹೆಚ್ಚು ಸ್ಥಿರ ಮತ್ತು ವಾಸ್ತವಿಕವಾಗಿರುವಂತೆ ಬಯಸುತ್ತಾರೆ. ಇವರು ಎಂದಿಗೂ ಯೋಜನೆಯ ಪ್ರಕಾರ ಹೋಗುವುದಿಲ್ಲ. ಇವರು ಕೆಲವು ವ್ಯಸನಕ್ಕೆ ಒಳಗಾಗಿರುತ್ತಾರೆ. ಇದರ ಪರಿಣಾಮದಿಂದಾಗಿ ಕೆಲವು ಪ್ರಾಥಮಿಕ ದೌರ್ಬಲ್ಯಗಳು ಇವರನ್ನು ಕಾಡುವುದು. ನಿಮ್ಮ ದಿನಚರಿಯು ಆಕರ್ಷಕವಾಗಿದ್ದಾಗ ಹರಿವಿನೊಂದಿಗೆ ಹೋಗುವುದು ಉತ್ತಮ.

ಮಿಥುನ

ಮಿಥುನ

ಸಾಮರ್ಥ್ಯ ಹೊಂದಿಕೊಳ್ಳುವುದು; ದೌರ್ಬಲ್ಯ: ಮುಗಿಸಲಾಗದ

ಈ ರಾಶಿಯವರು ಸ್ವಭಾವತಃ ಕುತೂಹಲದಿಂದ ಕೂಡಿರುತ್ತಾರೆ. ಪ್ರಶ್ನೆಗಳನ್ನು ಕೇಳಲು ಮತ್ತು ವಿಷಯದಿಂದ ವಿಷಯಕ್ಕೆ ಬದಲಾವಣೆಯನ್ನು ಇವರು ಪ್ರೀತಿಸುತ್ತಾರೆ. ಹೊಸ ಸಂದರ್ಭದಲ್ಲಿ ಜನರಿಗೆ ಸುಲಭವಾಗಿ ಹೊಂದಿಕೊಳ್ಳುವರು. ಯಾವುದೇ ಹೊಸ ಬದಲಾವಣೆಗೆ ಹೆದರುವುದಿಲ್ಲುತ್ತೇಜಕ ವಿಷಯಗಳ ಕಲಿಕೆಗೆ ಸಿದ್ಧರಾಗಿರುತ್ತಾರೆ. ಕೆಲವೊಮ್ಮೆ ನಿರ್ಧಾರವನ್ನು ಕೈಗೊಳ್ಳಲು ಕಷ್ಟಪಡುವರು. ಅಸಾಧ್ಯವಾದ ವಿಚಾರದ ಬಗ್ಗೆ ಹೆಚ್ಚು ಚಿಂತಿಸದೆ ಮರೆತು ಬಿಡುವುದು ಸೂಕ್ತ.

ಕರ್ಕ

ಕರ್ಕ

ಸಾಮರ್ಥ್ಯ ಸಹಾನುಭೂತಿ; ದೌರ್ಬಲ್ಯ: ಸೂಕ್ಷ್ಮ ಪ್ರವೃತ್ತಿ

ಈ ರಾಶಿಯವರಿಗೆ ಭಾವನೆಗಳೇ ಎಲ್ಲವನ್ನು ನೀಡುತ್ತವೆ. ನಿಮ್ಮ ಸ್ನೇಹಿತರ ಬಳಗಕ್ಕೆ ನೀವೇ ಒಂದು ಅದ್ಭುತ ವ್ಯಕ್ತಿಯಾಗಿರುತ್ತೀರಿ. ಸಹಾನೂ ಭೂತಿ ಹೊಂದಿರುವ ಇವರು ತಮ್ಮ ಮನಸ್ಸಿನ ಸಂಗತಿಯನ್ನು ಹಂಚಿಕೊಳ್ಳುವರು. ಕೆಲವೊಮ್ಮೆ ಇತರರು ತಮ್ಮ ಹಾಗೆಯೇ ಭಾವನಾತ್ಮಕವಾದ ವ್ಯಕ್ತಿಗಳು ಎಂದು ಪರಿಗಣಿಸುವುದರ ಮೂಲಕ ಮೋಸ ಹೋಗುವ ಸಾಧ್ಯತೆಗಳಿರುತ್ತವೆ. ದಿನವಿಡೀ ಇವರೊಂದಿಗೆ ಭಾವನೆಗಳನ್ನು ಹಂಚಿಕೊಳ್ಳಲು ಸ್ನೇಹಿತರು ಬಯಸುವರು. ಅಂತಹ ಸಂದರ್ಭದಲ್ಲಿ ಭಾವನೆಗಳನ್ನು ಸಮನಾಗಿ ಹಂಚಿಕೊಳ್ಳುವುದು ಉತ್ತಮ.

ಸಿಂಹ

ಸಿಂಹ

ಸಾಮರ್ಥ್ಯ ಭಾವೋದ್ರಿಕ್ತ; ದೌರ್ಬಲ್ಯ: ಹಠಮಾರಿ

ಇವರು ಎಲ್ಲರೆದುರು ಆಕರ್ಷಿತ ವ್ಯಕ್ತಿಯಾಗಬೇಕೆಂದು ಬಯಸುವವರು. ಆದರೆ ತಮ್ಮ ಮಕ್ಕಳು, ಕುಟುಂಬ ಹಾಗೂ ಸ್ನೇಹಿತರನ್ನು ಹೆಚ್ಚು ಪ್ರೀತಿಸುವವರು. ಸಾಹಸ ಕೆಲಸಗಳಲ್ಲಿ ಸೇರಿದಂತೆ ಬಹುತೇಕ ಕೆಲಸ ಕಾರ್ಯಗಳಲ್ಲಿ ಉತ್ಸಾಹ ಭರಿತರಾಗಿಯೇ ಇರುತ್ತಾರೆ. ಕೆಲವೊಮ್ಮೆ ಭಾವೋದ್ರಿಕ್ತರಾಗಿ ವರ್ತಿಸುವರು. ಕೆಲವೊಮ್ಮೆ ಇವರ ಉತ್ಸಾಹವು ಹಠಮಾರಿ ತನದಿಂದ ಕೂಡಿರುವುದು. ಇತರರ ಅಭಿಪ್ರಾಯವನ್ನು ಕಡೆಗಣಿಸದಿರಿ. ಕೆಲವು ಪ್ರಮುಖ ಚಿಂತನೆಗಳಿಂದ ಕೂಡಿರುತ್ತವೆ.

ಕನ್ಯಾ

ಕನ್ಯಾ

ಸಾಮರ್ಥ್ಯ ಶ್ರಮ ಜೀವಿ; ದೌರ್ಬಲ್ಯ: ಸ್ವಯಂ ನಿರ್ಣಯ.

ಈ ರಾಶಿಯವರು ಎಲ್ಲಾ ಕೆಲಸ ಕಾರ್ಯಗಳನ್ನು ಬಹಳ ಅಚ್ಚುಕಟ್ಟಾಗಿ ಮಾಡಿ ಮುಗಿಸುವ ಸಾಮಥ್ರ್ಯವನ್ನು ಹೊಂದಿರುತ್ತಾರೆ. ಇವರು ಅತ್ಯಂತ ಶ್ರಮಜೀವಿಗಳಾಗಿರುವುದರಿಂದಲೇ ಗುರಿ ಸಾಧನೆಯ ಕೆಲಸವನ್ನು ಬಹುಬೇಗ ಮುಗಿಸುವರು. ಎಲ್ಲಾ ಸಮಯದಲ್ಲೂ ಪರಿಪೂರ್ಣತೆಯಿಂದ ಕೂಡಿರಬೇಕು ಎಂದು ಬಯಸುವರು. ಬಹುತೇಕ ಸಂದರ್ಭದಲ್ಲಿ ಇವರು ತಾವೇ ಸ್ವಯಂ ನಿರ್ಣಯವನ್ನು ಕೈಗೊಳ್ಳುವರು. ಇದರಿಂದ ಅಹಿತರಕ ಪರಿಣಾಮವನ್ನು ಅನುಭವಿಸುವ ಸಾಧ್ಯತೆಗಳಿರುತ್ತವೆ.

ತುಲಾ

ತುಲಾ

ಸಾಮರ್ಥ್ಯ ಸಾಮಾಜಿಕ: ದೌರ್ಬಲ್ಯ: ಚಿಂತೆ

ಇವರು ಸಾಮಾಜಿಕ ಕ್ಷೇತ್ರದಲ್ಲಿ ತೊಡಗಿಕೊಂಡಿರುವ ವ್ಯಕ್ತಿಗಳಾಗಿರುತ್ತಾರೆ. ಎಲ್ಲಿಗೆ ಹೋದರೂ ಅಲ್ಲಿ ಉತ್ತಮ ಸ್ನೇಹಿತರನ್ನು ಹೊಂದುವ ಶಕ್ತಿಯನ್ನು ಪಡೆದುಕೊಂಡು ಬರುತ್ತಾರೆ. ಒಂದು ಕಿರುನಗೆಯ ಮೂಲಕವೇ ಸ್ನೇಹಿತರನ್ನು ಪಡೆಯುವ ಸಾಮಥ್ರ್ಯ ಇವರಿಗಿದೆ. ಸಾಮಾಜಿಕವಾಗಿಯೂ ಅಧಿಕ ಜನರು ಇವರನ್ನು ನಂಬುತ್ತಾರೆ. ಸಮಯವನ್ನು ಸೂಕ್ತ ರೀತಿಯಲ್ಲಿ ವಿನಿಯೋಗಿಸಿಕೊಳ್ಳದೆ ಇರುವಾಗ ಅಥವಾ ಏನಾದರೂ ಅಹಿತಕರ ಸಂಗತಿ ಉಂಟಾದರೆ ಆ ಕುರಿತು ಅಧಿಕ ಚಿಂತೆಯನ್ನು ಮಾಡುವರು. ಕೆಲವೊಮ್ಮೆ ಚಿಂತೆಯಿಂದಲೇ ಅನೇಕ ಸಂಗತಿಗಳಿಂದ ದೂರವಾಗುವ ಸಾಧ್ಯತೆಗಳು ಹೆಚ್ಚಿರುತ್ತದೆ.

ವೃಶ್ಚಿಕ

ವೃಶ್ಚಿಕ

ಸಾಮರ್ಥ್ಯ ಧೈರ್ಯ: ದೌರ್ಬಲ್ಯ: ವಿಶ್ವಾಸ ಇಲ್ಲದೆ ಇರುವುದು.

ಇವರೊಬ್ಬ ಹೋರಾಟಗಾರರು. ಇವರ ನಂಬಿಕೆಯನ್ನು ಉಳಿಸಿಕೊಂಡ ವ್ಯಕ್ತಿಗಳಿಗಾಗಿ ಸದಾ ಸಿದ್ಧರಾಗಿರುತ್ತಾರೆ. ನಿಜವಾಗಿಯೂ ಇವರೊಬ್ಬ ಅದ್ಭುತ ಗುಣಮಟ್ಟವನ್ನು ಹೊಂದಿದ ವ್ಯಕ್ತಿಗಳಾಗಿರುತ್ತಾರೆ. ಇವರು ದೃಢ ನಿರ್ಧಾರ ಮತ್ತು ಭಾವೋದ್ರಿಕ್ತ ವಿಷಯಗಳಿಂದಲೇ ಹೆಚ್ಚು ಆಕರ್ಷಿತರಾಗಿರುತ್ತಾರೆ. ಬಹುತೇಕ ಸಂದರ್ಭದಲ್ಲಿ ವಿಷಯ ಅಥವಾ ವ್ಯಕ್ತಿಗಳ ಮೇಲೆ ವಿಶ್ವಾಸ ಇಡುವುದಿಲ್ಲ. ಈ ಪ್ರವೃತ್ತಿಯಿಂದಲೇ ಕೆಲವು ಸಂಗತಿಯನ್ನು ಕಳೆದುಕೊಳ್ಳುವ ಸಾಧ್ಯತೆಗಳಿರುತ್ತವೆ.

ಧನು

ಧನು

ಸಾಮರ್ಥ್ಯ ಸಾಹಸ ಪ್ರವೃತ್ತಿ : ದೌರ್ಬಲ್ಯ: ತಾಳ್ಮೆ

ಇವರು ಅತ್ಯಂತ ಸಾಹಸ ಮಯ ವ್ಯಕ್ತಿಗಳಾಗಿರುತ್ತಾರೆ. ಹೊಸ ಮತ್ತು ಉತ್ತೇಜಕ ಸ್ಥಳಗಳನ್ನು ಅನ್ವೇಷಿಸಲು ಇಷ್ಟಪಡುವರು. ಸದಾ ಪ್ರಯಾಣದಲ್ಲಿ ಇರಲು ಬಯಸುವರು. ಜೀವನದಲ್ಲಿ ಅಹಿತಕರ ಘಟನೆಗಳು ನಡೆದಾಗ ಅತಿಯಾದ ತಾಳ್ಮೆಯಿಂದ ಬೇಸರಕ್ಕೆ ಒಳಗಾಗುವಿರಿ. ಮಂದವಾದ ದಿನಗಳ ಬಗ್ಗೆ ಚಿಂತಿಸದೆ ಸಾಧನೆಯನ್ನು ಮಾಡಲು ಅದನ್ನು ಇಂಧನವನ್ನಾಗಿ ಬಳಸಿ.

ಮಕರ

ಮಕರ

ಸಾಮರ್ಥ್ಯ ಮೀಸಲಿಡುವುದು : ದೌರ್ಬಲ್ಯ: ತೀರಾ ಗಂಭೀರವಾಗಿರುವುದು.

ಒಮ್ಮೆ ಇವರು ಏನನ್ನಾದರೂ ನಿಶ್ಚಯಿಸಿದರೆ ಅದರ ಗುರಿ ತಲುಪುವವರೆಗೂ ಸುಮ್ಮನಿರುವುದಿಲ್ಲ. ಎಲ್ಲಾ ಕೆಲಸಗಳನ್ನು ಬಿಟ್ಟು ಗುರಿ ಸಾಧನೆಯೆಡೆಗೆ ಹೆಚ್ಚು ಗಮನವನ್ನು ಕೇಂದ್ರೀಕರಿಸುತ್ತಾರೆ. ಸದಾ ಗಂಭೀರ ಪ್ರವೃತ್ತಿಯಲ್ಲಿಯೇ ದಿನವನ್ನು ಕಳೆಯುವರು. ಇವರು ತಮ್ಮ ಸ್ನೇಹಿತರು ಹಾಗೂ ಕುಟುಂಬದವರೊಂದಿಗೆ ಒಂದಿಷ್ಟು ಸಮಯವನ್ನು ಕಳೆಯಲು ಕಲಿಯಬೇಕು. ಆಗ ಸಂಪೂರ್ಣ ಆನಂದವನ್ನು ಪಡೆದುಕೊಳ್ಳುವರು.

ಕುಂಭ

ಕುಂಭ

ಸಾಮರ್ಥ್ಯ ಪ್ರಗತಿಯನ್ನು ಬಯಸುವುದು: ದೌರ್ಬಲ್ಯ: ತುಂಬಾ ಆದರ್ಶವಾದಿ

ಇವರು ಇಲ್ಲಾ ಎನ್ನುವ ಪದವನ್ನು ಅಷ್ಟು ಇಷ್ಟಪಡರು. ಯಾವುದೇ ವಿಚಾರಗಳನ್ನು ಸಾಧಿಸಲು ಸಾಧ್ಯವಿಲ್ಲ ಎಂದು ಹೇಳುವುದಿಲ್ಲ. ಎಲ್ಲವನ್ನು ಸಾಧಿಸಿ ತೋರಿಸುವುದರಲ್ಲಿಯೇ ಇವರು ಹೆಚ್ಚು ಗಮನ ಹರಿಸುವರು. ಕೆಲಸಕಾರ್ಯಗಳು ಹಾಗೂ ಚಿಂತನೆಗಳು ಹೆಚ್ಚು ಆದರ್ಶದಿಂದಲೇ ಕೂಡಿರಬೇಕು ಎಂದು ಬಯಸುವವರು ಇವರು. ಇವರ ಅಭಿಪ್ರಾಯಕ್ಕೆ ಸಮ್ಮತಿಸದ ಜನರನ್ನು ದ್ವೇಷಿಸುವರು.

ಮೀನ

ಮೀನ

ಸಾಮರ್ಥ್ಯ ಉದಾರ: ದೌರ್ಬಲ್ಯ: ನಿಸ್ವಾರ್ಥ

ಈ ರಾಶಿಯವರ ದೊಡ್ಡ ಶಕ್ತಿಯೇ ಇವರ ದೊಡ್ಡ ದೌರ್ಬಲ್ಯ ಎನ್ನಬಹುದು. ಇವರು ಇತರರನ್ನು ಹೆಚ್ಚು ಸಂತೋಷದಲ್ಲಿ ಇಡಲು ಬಯಸುವರು. ದಯೆ ತೋರುವುದು ಹಾಗೂ ಉದಾರ ಗುಣದಿಂದ ಎಲ್ಲವನ್ನೂ ಇತರರಿಗೆ ನೀಡುವುದು ಇವರ ಸಾಮಥ್ರ್ಯ. ಆದರೆ ಈ ಗುಣವನ್ನು ಇತರರು ದುರುಪಯೋಗ ಪಡಿಸಿಕೊಳ್ಳುವ ಸಾಧ್ಯತೆಗಳೇ ಹೆಚ್ಚಾಗಿರುವುದರಿಂದ ಅದು ಅವರಿಗೊಂದು ದೌರ್ಬಲ್ಯವಾಗಿ ಪರಿಣಮಿಸುವುದು. ಹಾಗಾಗಿ ಚಿಂತನೆ ನಡೆಸುವಾಗ ಸೂಕ್ತ ಎಚ್ಚರಿಕೆ ಹಾಗೂ ಕ್ರಮವನ್ನು ಕೈಗೊಳ್ಳುವುದನ್ನು ಮರೆಯದಿರಿ.

English summary

Secret Strength Of The Most Powerful Zodiac Signs

Everyone has their own strengths and weaknesses.Although it may be easy to identify traits of others, it can be quite difficult to determine them for ourselves.If you're curious what your biggest strength and weakness is, scroll below and your zodiac sign will reveal all.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more